Kiara Advani: ‘ಬಾರ್ಬಿ’ ಲುಕ್ನಲ್ಲಿ ಬಂದ ಬಾಲಿವುಡ್ ನಟಿ ಕಿಯಾರಾ ಅಡ್ವಾಣಿ
‘ಬಾರ್ಬಿ’ ಸಿನಿಮಾ ನೋಡೋಕೆ ಅನೇಕರು ಪಿಂಕ್ ಬಣ್ಣದ ಬಟ್ಟೆ ಧರಿಸಿ ಬಂದಿದ್ದರು. ಈಗ ಕಿಯಾರಾ ಕೂಡ ಪಿಂಕ್ ಬಣ್ಣದ ಬಟ್ಟೆ ಧರಿಸಿ ಕಾಣಿಸಿಕೊಂಡಿದ್ದಾರೆ.
Updated on: Jul 26, 2023 | 9:30 AM

ಇತ್ತೀಚೆಗೆ ಹಾಲಿವುಡ್ನ ‘ಬಾರ್ಬಿ’ ಸಿನಿಮಾ ರಿಲೀಸ್ ಆಗಿದೆ. ಈ ಚಿತ್ರ ವಿಶ್ವಾದ್ಯಂತ ಮೆಚ್ಚುಗೆ ಪಡೆದಿದೆ. ಭಾರತದಲ್ಲಿ ಈ ಸಿನಿಮಾ ಸಾಧಾರಣ ಗಳಿಕೆ ಮಾಡುತ್ತಿದೆ. ಹೊಸ ಫೋಟೋಶೂಟ್ನಲ್ಲಿ ಅವರು ಬಾರ್ಬಿ ಲುಕ್ನಲ್ಲಿ ಕಿಯಾರಾ ಅಡ್ವಾಣಿ ಕಾಣಿಸಿಕೊಂಡಿದ್ದಾರೆ.

‘ಬಾರ್ಬಿ’ ಸಿನಿಮಾ ನೋಡೋಕೆ ಅನೇಕರು ಪಿಂಕ್ ಬಣ್ಣದ ಬಟ್ಟೆ ಧರಿಸಿ ಬಂದಿದ್ದರು. ಇದೇ ಸಂದರ್ಭದಲ್ಲಿ ನಟಿ ಕಿಯಾರಾ ಅವರು ಪಿಂಕ್ ಬಣ್ಣದ ಬಟ್ಟೆ ಧರಿಸಿ ಕಾಣಿಸಿಕೊಂಡಿದ್ದಾರೆ.

ಕಿಯಾರಾ ಅವರ ಈ ಫೋಟೋಸ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಅನೇಕರು ಕಿಯಾರಾ ಅವರನ್ನು ಬಾರ್ಬಿಗೆ ಹೋಲಿಕೆ ಮಾಡಿದ್ದಾರೆ.

ಕಿಯಾರಾ ಅವರು ಸಾಲು ಸಾಲು ಗೆಲುವು ಕಾಣುತ್ತಿದ್ದಾರೆ. ಚಿತ್ರರಂಗದಲ್ಲಿ ಅವರಿಗೆ ಇರುವ ಬೇಡಿಕೆ ಹೆಚ್ಚುತ್ತಿದೆ.

ಕಿಯಾರಾ ಹಾಗೂ ಸಿದ್ದಾರ್ಥ್ ಮಲ್ಹೋತ್ರಾ ಪರಸ್ಪರ ಪ್ರೀತಿಸುತ್ತಿದ್ದರು. ಇತ್ತೀಚೆಗೆ ಇಬ್ಬರೂ ವಿವಾಹ ಆದರು. ಈ ಫೋಟೋಗಳನ್ನು ಕಿಯಾರಾ ಹಂಚಿಕೊಂಡಿದ್ದರು.

ಕಿಯಾರಾಗೆ ಸೋಶಿಯಲ್ ಮೀಡಿಯಾದಲ್ಲಿ ದೊಡ್ಡ ಅಭಿಮಾನಿ ಬಳಗ ಇದೆ. ಕೋಟ್ಯಂತರ ಮಂದಿ ಅವರನ್ನು ಫಾಲೋ ಮಾಡುತ್ತಾರೆ.

ಹೊಸ ಫೋಟೋಸ್ನಲ್ಲಿ ಮಿಂಚಿದ ಕಿಯಾರಾ




