ಬಹುನಿರೀಕ್ಷಿತ ಒನ್​ಪ್ಲಸ್ ಏಸ್ 2 ಪ್ರೊ ಬಿಡುಗಡೆಗೆ ದಿನಾಂಕ ಫಿಕ್ಸ್: ಏನಿದೆ ಫೀಚರ್ಸ್ ನೋಡಿ

OnePlus Ace 2 Pro: ಟೀಸರ್ ಚಿತ್ರದ ಪ್ರಕಾರ, ಒನ್​ಪ್ಲಸ್ ಏಸ್ 2 ಪ್ರೊ ಆಗಸ್ಟ್ 16 ರಂದು ಚೀನಾದಲ್ಲಿ ಬಿಡುಗಡೆಯಾಗಲಿದೆ. ಏಸ್ ಸರಣಿಯು ಚೀನಾಕ್ಕೆ ಮಾತ್ರ ಪ್ರತ್ಯೇಕವಾಗಿದೆ. ಇದು ವಿಭಿನ್ನ ಹೆಸರಿನೊಂದಿಗೆ ಜಾಗತಿಕ ಮಾರುಕಟ್ಟೆಗಳಲ್ಲಿ ಬಿಡುಗಡೆ ಆಗಲಿದೆಯಂತೆ.

ಬಹುನಿರೀಕ್ಷಿತ ಒನ್​ಪ್ಲಸ್ ಏಸ್ 2 ಪ್ರೊ ಬಿಡುಗಡೆಗೆ ದಿನಾಂಕ ಫಿಕ್ಸ್: ಏನಿದೆ ಫೀಚರ್ಸ್ ನೋಡಿ
OnePlus Ace 2 Pro
Follow us
Vinay Bhat
|

Updated on: Aug 07, 2023 | 12:20 PM

ಒನ್​ಪ್ಲಸ್ (OnePlus) ಕಂಪನಿಯ ಬಹುನಿರೀಕ್ಷಿತ ಒನ್​ಪ್ಲಸ್ ಏಸ್ 2 ಪ್ರೊ (OnePlus Ace 2 Pro) ಬಿಡುಗಡೆಗೆ ದಿನಗಣನೆ ಶುರುವಾಗಿದೆ. ಮೊದಲಿಗೆ ಚೀನಾದಲ್ಲಿ ಬಿಡುಗಡೆ ಆಗಲಿರುವ ಈ ಫೋನಿನ ದಿನಾಂಕವನ್ನು ಕಂಪನಿ ಅಧಿಕೃತವಾಗಿ ಬಹಿರಂಗಪಡಿಸಿದೆ. ಒನ್​ಪ್ಲಸ್ ಏಸ್ 2 ಪ್ರೊ ಮುಂದಿನ ವಾರ ಅನಾವರಣಗೊಳಿಸಲಾಗುವುದು ಎಂದು ಕಂಪನಿಯು ತನ್ನ ಮೈಕ್ರೋಬ್ಲಾಗಿಂಗ್ ಸೈಟ್ Weibo ಮೂಲಕ ಘೋಷಿಸಿದೆ. ಒನ್​ಪ್ಲಸ್​ನ ಹೊಸ ಫೋನ್‌ನ ಪ್ರಮುಖ ಫೀಚರ್ಸ್​ ಆದ ಪ್ರೊಸೆಸರ್ ಮತ್ತು RAM ಅನ್ನು ಅಧಿಕೃತವಾಗಿ ಬಹಿರಂಗಪಡಿಸಲಾಗಿದೆ. ಇದರ ಪ್ರಮುಖ ಹೈಲೈಟ್ ಎಂದರೆ ಇದು 24GB RAM ವರೆಗೆ ಲಭ್ಯವಿರುತ್ತದೆ.

Weibo ನಲ್ಲಿ ಹಂಚಿಕೊಂಡ ಟೀಸರ್ ಚಿತ್ರದ ಪ್ರಕಾರ, ಒನ್​ಪ್ಲಸ್ ಏಸ್ 2 ಪ್ರೊ ಆಗಸ್ಟ್ 16 ರಂದು ಚೀನಾದಲ್ಲಿ ಬಿಡುಗಡೆಯಾಗಲಿದೆ. ಏಸ್ ಸರಣಿಯು ಚೀನಾಕ್ಕೆ ಮಾತ್ರ ಪ್ರತ್ಯೇಕವಾಗಿದೆ. ಇದು ವಿಭಿನ್ನ ಹೆಸರಿನೊಂದಿಗೆ ಜಾಗತಿಕ ಮಾರುಕಟ್ಟೆಗಳಲ್ಲಿ ಬಿಡುಗಡೆ ಆಗಲಿದೆಯಂತೆ. ಒನ್​ಪ್ಲಸ್ ಏಸ್ 2 ಪ್ರೊ ಭಾರತ ಸೇರಿದಂತೆ ಇತರೆ ದೇಶಗಳಲ್ಲಿ ಒನ್​ಪ್ಲಸ್ 11R ಎಂಬ ಹೆಸರಿನೊಂದಿಗೆ ಅನಾವರಣಗೊಳ್ಳಲಿದೆ.

ಮೊದಲ ದಿನವೇ ದಾಖಲೆಯ ಮಾರಾಟ ಕಂಡ ರೆಡ್ಮಿ 12 ಸರಣಿ: ಸೇಲ್ ಆಗಿದ್ದು ಎಷ್ಟು ಫೋನ್ ಗೊತ್ತೇ?

ಇದನ್ನೂ ಓದಿ
Image
ಎಲಾನ್ ಮಸ್ಕ್ ಮತ್ತು ಮಾರ್ಕ್ ಜುಕರ್‌ಬರ್ಗ್ ಕೇಜ್ ಫೈಟ್: ಎಕ್ಸ್‌ನಲ್ಲಿ ಪ್ರಸಾರ
Image
ಒಂದು ಸಿಮ್​ ಅನ್ನು ಎಷ್ಟು ಬಾರಿ ಪೋರ್ಟ್ ಮಾಡಲು ಸಾಧ್ಯ?; ಈ ಬಗ್ಗೆ ಟ್ರಾಯ್ ನಿಯಮ ಏನು ಹೇಳುತ್ತೆ?
Image
ಅಮೆಜಾನ್ ಸೇಲ್: ಕೇವಲ 10,000 ರೂ. ಒಳಗೆ ಸಿಗುತ್ತಿರುವ ಟಾಪ್ 5 ಸ್ಮಾರ್ಟ್​ಫೋನ್ಸ್ ನೋಡಿ
Image
ರೈಲು ಟಿಕೆಟ್ ಬುಕ್ ಮಾಡುವ ಮುನ್ನ ಸರಿಯಾಗಿ ಪರಿಶೀಲಿಸಿ: ಹರಿದಾಡುತ್ತಿದೆ ಫೇಕ್ ಆ್ಯಪ್​ಗಳು

ಚಿಪ್‌ಸೆಟ್ : ಒನ್​ಪ್ಲಸ್ ಏಸ್ 2 ಪ್ರೊ ಸ್ನಾಪ್‌ಡ್ರಾಗನ್ 8 Gen 2 ಚಿಪ್‌ಸೆಟ್‌ನಿಂದ ಚಾಲಿತವಾಗಿದೆ ಎಂದು ಒನ್​ಪ್ಲಸ್ ದೃಢಪಡಿಸಿದೆ.

RAM ಮತ್ತು ಸಂಗ್ರಹಣೆ : ಕುತೂಹಲಕಾರಿಯಾಗಿ, ಒನ್​ಪ್ಲಸ್ ಏಸ್ 2 ಪ್ರೊ 24GB RAM ಅನ್ನು ಪಡೆದುಕೊಂಡಿದೆ. ಈ ಫೋನ್ 8GB, 12GB ಮತ್ತು 16GB RAM ಆಯ್ಕೆಗಳಲ್ಲಿಯೂ ಲಭ್ಯವಿರುತ್ತದೆ. ನೀವು 1TB ವರೆಗೆ ಆನ್‌ಬೋರ್ಡ್ ಸಂಗ್ರಹಣೆಯನ್ನು ನಿರೀಕ್ಷಿಸಬಹುದು.

ಕ್ಯಾಮೆರಾಗಳು : ಒನ್​ಪ್ಲಸ್ ಏಸ್ 2 ಪ್ರೊ 50MP IMX890 ಮುಖ್ಯ ಕ್ಯಾಮೆರಾದೊಂದಿಗೆ ಬರುತ್ತದೆ ಎಂದು ಹೇಳಲಾಗಿದೆ. ಇತರ ಕ್ಯಾಮೆರಾ ವಿಶೇಷತೆಗಳು ಇನ್ನೂ ಬಹಿರಂಗಗೊಳ್ಳಬೇಕಿದೆ. ಸೆಲ್ಫಿ ಕ್ಯಾಮೆರಾ 32 ಮೆಗಾ ಪಿಕ್ಸೆಲ್​ನಲ್ಲಿ ಇರಬಹುದು.

ಡಿಸ್ ಪ್ಲೇ : ಒನ್​ಪ್ಲಸ್ ಏಸ್ 2 ಪ್ರೊ 120Hz ರಿಫ್ರೆಶ್ ದರದೊಂದಿಗೆ 1.5K AMOLED ಡಿಸ್ ಪ್ಲೇಯನ್ನು ಹೊಂದಿದೆ ಎಂಬ ಮಾತಿದೆ.

ವೇಗದ ಚಾರ್ಜಿಂಗ್ : 5000mAh ಸಾಮರ್ಥ್ಯದ ಬ್ಯಾಟರಿ ಪವರ್ ಇರಲಿದ್ದು, 150W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಉಳಿದಂತೆ ಇದರ ಬೆಲೆ ಹಾಗೂ ಇತರೆ ಫೀಚರ್ಸ್ ಬಗ್ಗೆ ಮಾಹಿತ ತಿಳಿದುಬಂದಿಲ್ಲ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ