ಐಫೋನ್ 15 ಸರಣಿ ಬಿಡುಗಡೆಯ ದಿನಾಂಕ ಬಹಿರಂಗ: ಈ ಬಾರಿ ಏನೆಲ್ಲ ವಿಶೇಷತೆ ಇದೆ ನೋಡಿ
Apple iPhone 15 Series: ಎಲ್ಲಾ 2023 ಐಫೋನ್‌ಗಳಲ್ಲಿ ಪಂಚ್-ಹೋಲ್ ಆಯ್ಕೆಯನ್ನು ನಿರೀಕ್ಷಿಸಬಹುದು. ಪ್ರೊ ಮತ್ತು ಪ್ರೊ ಮ್ಯಾಕ್ಸ್ ಡಿಸ್ ಪ್ಲೇಗಳನ್ನು ಹೊಸ ತಂತ್ರಜ್ಞಾನದೊಂದಿಗೆ ತಯಾರಿಸಲಾಗಿದೆ ಎಂದು ವರದಿಯಾಗಿದೆ.
ಆ್ಯಪಲ್ (Apple) ಕಂಪನಿಯ ನೂತನ ಐಫೋನ್ 15 ಸರಣಿಯ (iPhone 15 Series) ಸ್ಮಾರ್ಟ್ಫೋನ್ಗಳು ಯಾವಾಗ ಬಿಡುಗಡೆ ಆಗಲಿದೆ ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಮುಂದಿನ ತಿಂಗಳು ಸೆಪ್ಟೆಂಬರ್ 13 ರಂದು ಬಹುನಿರೀಕ್ಷಿತ ಐಫೋನ್ 15 ಸರಣಿಯ ಫೋನುಗಳು ಅನಾವರಣಗೊಳ್ಳಲಿದೆ. ಐಫೋನ್ 15 ಸರಣಿಯಲ್ಲಿ ಐಫೋನ್ 15, ಐಫೋನ್ 15 ಪ್ಲಸ್ (iPhone 15 Plus), ಐಫೋನ್ 15 ಪ್ರೊ ಮತ್ತು ಐಫೋನ್ 15 ಪ್ರೊ ಮ್ಯಾಕ್ಸ್ ಎಂಬ ಒಟ್ಟು ನಾಲ್ಕು ಫೋನುಗಳು ಇರಲಿದೆ. ಸೆ. 13 ರಂದು ಆ್ಯಪಲ್ನ ಬಹುದೊಡ್ಡ ಕಾರ್ಯಕ್ರಮದಲ್ಲಿ ಈ ಫೋನುಗಳು ಅನಾವರಣಗೊಳ್ಳಲಿದೆ.
ಎಲ್ಲಾ ಐಫೋನ್ 15 ರೂಪಾಂತರಗಳು ಡೈನಾಮಿಕ್ ಐಲ್ಯಾಂಡ್ ವೈಶಿಷ್ಟ್ಯದೊಂದಿಗೆ ಬರುತ್ತವೆ ಎಂದು ಹೇಳಲಾಗುತ್ತದೆ, ಅಂದರೆ ಎಲ್ಲಾ 2023 ಐಫೋನ್‌ಗಳಲ್ಲಿ ಪಂಚ್-ಹೋಲ್ ಆಯ್ಕೆಯನ್ನು ನಿರೀಕ್ಷಿಸಬಹುದು. ಪ್ರೊ ಮತ್ತು ಪ್ರೊ ಮ್ಯಾಕ್ಸ್ ಡಿಸ್ ಪ್ಲೇಗಳನ್ನು ಹೊಸ ತಂತ್ರಜ್ಞಾನದೊಂದಿಗೆ ತಯಾರಿಸಲಾಗಿದೆ ಎಂದು ವರದಿಯಾಗಿದೆ. 2012 ರಿಂದ, ಐಫೋನ್‌ಗಳು ಲೈಟ್ನಿಂಗ್ ಚಾರ್ಜರ್ ಅನ್ನು ಅವಲಂಬಿಸಿವೆ. ಆದರೆ ಮುಂಬರುವ ಐಫೋನ್ 15 ಮತ್ತು ಐಫೋನ್ 15 ಪ್ಲಸ್ ಬ್ಲೂಮ್‌ಬರ್ಗ್ ಪ್ರಕಾರ USB-C ಚಾರ್ಜಿಂಗ್ ಮೂಲಕ ಕಾರ್ಯನಿರ್ವಹಿಸುತ್ತದೆ. ಈ ಬದಲಾವಣೆಯು ಸಾರ್ವತ್ರಿಕ ಚಾರ್ಜರ್ ಅನ್ನು ಅನುಮತಿಸುತ್ತದೆ, ಇದು ಚಾರ್ಜಿಂಗ್ ಅನ್ನು ಸುಗಮಗೊಳಿಸುತ್ತದೆ.
ಅಮೆಜಾನ್ ಸೇಲ್: ಕೇವಲ 10,000 ರೂ. ಒಳಗೆ ಸಿಗುತ್ತಿರುವ ಟಾಪ್ 5 ಸ್ಮಾರ್ಟ್ಫೋನ್ಸ್ ನೋಡಿ
ಐಫೋನ್ 15 ಮತ್ತು 15 ಪ್ಲಸ್ ಒಂದೇ ರೀತಿಯ ನೋಟವನ್ನು ಹೊಂದಿರಬಹುದು. ಐಫೋನ್ 14 ಪ್ರೊ A16 ಚಿಪ್ ಮೂಲಕ ಕೆಲಸ ಮಾಡುತ್ತದಂತೆ. ಸ್ಟ್ಯಾಂಡರ್ಡ್ ಐಫೋನ್ 15 ರೂಪಾಂತರಗಳು ಐಫೋನ್ 14 ಪ್ರೊ ಸರಣಿಯಂತೆಯೇ 48 ಮೆಗಾಪಿಕ್ಸೆಲ್ ಹಿಂಬದಿಯ ಕ್ಯಾಮೆರಾಗಳನ್ನು ಹೊಂದಿವೆ ಎಂದು ವದಂತಿಗಳಿವೆ. ಆದರೆ, ಹಿಂದಿನ ಸರಣಿಗಳಿಗೆ ಹೋಲಿಸಿದರೆ ಕ್ಯಾಮೆರಾದ ಕ್ವಾಲಿಟಿಯಲ್ಲಿ ಬದಲಾವಣೆ ಆಗಲಿದೆ. 5-6x ಆಪ್ಟಿಕಲ್ ಜೂಮ್ ಸಾಮರ್ಥ್ಯಗಳನ್ನು ಹೆಚ್ಚಿಸಲಾಗಿದೆಯಂತೆ.
ಐಫೋನ್ 15 ಸರಣಿಯ ಬೆಲೆಗಳು ಸೋರಿಕೆಯಾಗಿದೆ:
MacRumors ನ ವರದಿಯ ಪ್ರಕಾರ, ಐಫೋನ್ 14 ಪ್ರೊ ಮಾದರಿಗಳಿಗೆ ಹೋಲಿಸಿದರೆ ಐಫೋನ್ 15 ಪ್ರೊ ಮಾದರಿಗಳು ಹೆಚ್ಚಿನ ಬೆಲೆಯೊಂದಿಗೆ ಬರುವ ನಿರೀಕ್ಷೆಯಿದೆ. ಐಫೋನ್ 15 ಪ್ರೊ, ಐಫೋನ್ 14 ಪ್ರೊ ಗಿಂತ ಸುಮಾರು $100 (ಅಂದಾಜು ರೂ. 9,000) ಅಧಿಕ ಬೆಲೆ ಹೊಂದಿದೆ. ಅಂತೆಯೆ ಐಫೋನ್ 15 ಪ್ರೊ ಮ್ಯಾಕ್ಸ್ ಬೆಲೆಯು ಐಫೋನ್ 14 ಪ್ರೊ ಮ್ಯಾಕ್ಸ್ಗೆ ಹೋಲಿಸಿದರೆ $100 ರಿಂದ $200 (ಸರಿಸುಮಾರು ರೂ. 17,000) ಹೆಚ್ಚಿರಬಹುದು ಎನ್ನಲಾಗಿದೆ. ಆದಾಗ್ಯೂ, ಬೇಸ್ ಮಾಡೆಲ್ ಐಫೋನ್ 15 ಮತ್ತು ಐಫೋನ್ 15 ಪ್ಲಸ್ ಮಾಡೆಲ್‌ಗಳು ತಮ್ಮ ಹಿಂದಿನ ಆವೃತ್ತಿಯ ಬೆಲೆಯ ಆಸುಪಾಸಿನಲ್ಲೇ ಇರಲದೆ.
US ನಲ್ಲಿ, ಐಫೋನ್ 14 ಪ್ರೊ ಅನ್ನು $999 ನಲ್ಲಿ ಬಿಡುಗಡೆ ಮಾಡಲಾಗಿತ್ತು. ಪ್ರಸ್ತುತ ಅತ್ಯಂತ ದುಬಾರಿ ಐಫೋನ್ ಮಾದರಿಯಾದ ಐಫೋನ್ 14 ಪ್ರೊ ಮ್ಯಾಕ್ಸ್ ಬೆಲೆ $1,099 ಆಗಿದೆ. ವಿಶ್ಲೇಷಕರ ಅಂದಾಜಿನ ಆಧಾರದ ಮೇಲೆ, ಐಫೋನ್ 15 ಪ್ರೊ $1,099 ರಿಂದ ಪ್ರಾರಂಭವಾಗಬಹುದು ಎನ್ನಲಾಗಿದೆ. ಇತ್ತ ಐಫೋನ್ 15 ಪ್ರೊ ಮ್ಯಾಕ್ಸ್ ಆರಂಭಿಕ ಬೆಲೆ $1,199 ಅಥವಾ $1,299 ಆಗಿರಬಹುದು.
ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ