Vande Bharat Express: ವಂದೇ ಭಾರತ್ ಎಕ್ಸ್​ಪ್ರೆಸ್, ಆನ್​ಲೈನ್​ ಟಿಕೆಟ್ ಬುಕಿಂಗ್ ವಿಧಾನ ಇಲ್ಲಿದೆ ನೋಡಿ

| Updated By: Ganapathi Sharma

Updated on: Nov 12, 2022 | 3:01 PM

ವಂದೇ ಭಾರತ್ ಎಕ್ಸ್​ಪ್ರೆಸ್ ರೈಲಿಗೆ ಐಆರ್​ಸಿಟಿ ಇ-ಟಿಕೆಟ್ ಕಾಯ್ದಿರಿಸುವ ವೆಬ್​ಸೈಟ್ ಹಾಗೂ ರೈಲ್​ ಕನೆಕ್ಟ್ ಆ್ಯಪ್ ಮೂಲಕ ಟಿಕೆಟ್ ಕಾಯ್ದಿರಿಸುವುದು ಹೇಗೆ? ವಿವರವಾದ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.

Vande Bharat Express: ವಂದೇ ಭಾರತ್ ಎಕ್ಸ್​ಪ್ರೆಸ್, ಆನ್​ಲೈನ್​ ಟಿಕೆಟ್ ಬುಕಿಂಗ್ ವಿಧಾನ ಇಲ್ಲಿದೆ ನೋಡಿ
ವಂದೇ ಭಾರತ್ ಎಕ್ಸ್‌ಪ್ರೆಸ್ (ಸಂಗ್ರಹ ಚಿತ್ರ)
Image Credit source: India.com
Follow us on

ದೇಶೀಯವಾಗಿ ನಿರ್ಮಾಣಗೊಂಡಿರುವ ವಂದೇ ಭಾರತ್ ಎಕ್ಸ್​ಪ್ರೆಸ್ (Vande Bharat Express) ರೈಲಿಗೆ 2019ರ ಫೆಬ್ರುವರಿ 15ರಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಚಾಲನೆ ನೀಡಿದ್ದರು. ಅನೇಕ ವಿಶೇಷತೆಗಳನ್ನು ಹೊಂದಿರುವ ಈ ರೈಲು ಭಾರತೀಯ ರೈಲ್ವೆ ಇಲಾಖೆಯ (Indian Railway) ಮಹಾತ್ವಾಕಾಂಕ್ಷಿ ಯೋಜನೆಯ ಫಲ. ಈ ಸೆಮಿ ಹೈಸ್ಪೀಡ್ ರೈಲು ಒಂದು ಗಂಟೆಗೆ ಗರಿಷ್ಠ 160 ಕಿ.ಮೀ. ವೇಗದಲ್ಲಿ ಸಂಚರಿಸಬಲ್ಲ ಸಾಮರ್ಥ್ಯ ಹೊಂದಿದೆ. ದೆಹಲಿ-ಕತ್ರಾ, ದೆಹಲಿ-ವಾರಾಣಸಿ, ಗಾಂಧಿನಗರ-ಮುಂಬೈ ಮತ್ತಿತರ ಮಾರ್ಗಗಳಲ್ಲಿ ಚಲಿಸುತ್ತಿದ್ದ ಈ ರೈಲು ಇದೀಗ ಬೆಂಗಳೂರಿಗೂ ಬಂದಿದೆ. ಚೆನ್ನೈ-ಬೆಂಗಳೂರು-ಮೈಸೂರು ಮಾರ್ಗವಾಗಿ ಚಲಿಸುವ ವಂದೇ ಭಾರತ್ ರೈಲಿಗೆ ಶುಕ್ರವಾರ ಪ್ರಧಾನಿ ಮೋದಿ ಚಾಲನೆ ನೀಡಿದ್ದಾರೆ.

ಭಾರತದಲ್ಲೇ ತಯಾರಿಸಿ ಅಥವಾ ಮೇಕ್​ ಇನ್ ಇಂಡಿಯಾ ಯೋಜನೆಯಡಿ ತಯಾರಾದ ಒಟ್ಟು ಹದಿನಾರು ಕೋಚ್​ಗಳನ್ನು ಹೊಂದಿರುವ ಈ ರೈಲು ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣ (ಕೆಎಸ್​ಆರ್)ದಿಂದ ಚೆನ್ನೈಗೆ ಪ್ರಯಾಣಿಸಿದೆ. ಇಂಟಲಿಜೆಂಟ್ ಬ್ರೇಕಿಂಗ್ ಸಿಸ್ಟಮ್, ಸ್ವಯಂಚಾಲಿತ ಬಾಗಿಲುಗಳು, ಜಿಪಿಎಸ್ ಆಧಾರಿತ ಆಡಿಯೋ ವಿಷುಯಲ್ ಪ್ಯಾಸೆಂಜರ್ ಇನ್ಫಾರ್ಮೇಶನ್, ಉಚಿತ ವೈಫೈ, ತಿರುಗುವ ಆಸನಗಳು, ಸಂಪೂರ್ಣ ಹವಾನಿಯಂತ್ರಿತ, 1,128 ಆಸನದ ಸಾಮರ್ಥ್ಯ ಹಾಗೂ ಬಯೋ ವ್ಯಾಕುಮ್ ಟಾಯ್ಲೆಟ್ ಹೊಂದಿರುವ ಈ ವಿಶೇಷ ರೈಲಿನ ಸೇವೆ ಇನ್ನು ಸದಾ ಕರ್ನಾಟಕದ ಜನತೆಗೆ ಲಭ್ಯವಾಗಲಿದೆ. ಹಾಗಿದ್ದರೆ, ಈ ರೈಲಿಗೆ ಆನ್​ಲೈನ್ ಮೂಲಕ ಟಿಕೆಟ್ ಕಾಯ್ದಿರಿಸುವುದು ಹೇಗೆ? ವಿವರವಾದ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.

1. ಐಆರ್​ಸಿಟಿ ಇ-ಟಿಕೆಟ್ ಕಾಯ್ದಿರಿಸುವ ವೆಬ್​ಸೈಟ್​ಗೆ (IRCTC web portal) ಅಥವಾ ಮೊಬೈಲ್​ ಆ್ಯಪ್​ಗೆ (Rail Connect app) ಭೇಟಿ ನೀಡಿ. ಲಾಗಿನ್ ಆಯ್ಕೆಯನ್ನು ಬಳಸಿಕೊಂಡು ಲಾಗಿನ್ ಆಗಿ.

2. ಒಂದು ವೇಳೆ ನೀವು ಈಗಾಗಲೇ ಲಾಗಿನ್ ಕ್ರೆಡೆನ್ಶಿಯಲ್​​ಗಳನ್ನು ಹೊಂದಿಲ್ಲವಾದರೆ, ವೆಬ್​ಸೈಟ್​ನ ಮೇಲ್ಭಾಗದಲ್ಲಿರುವ ರಿಜಿಸ್ಟರ್ ಆಯ್ಕೆಯನ್ನು ಬಳಸಿಕೊಂಡು ನೋಂದಣಿ ಮಾಡಿಕೊಳ್ಳಿ. ಯೂಸರ್​ನೇಮ್, ಪಾಸ್ವರ್ಡ್​ ಕ್ರಿಯೇಷನ್ ಹಾಗೂ ಸೆಕ್ಯೂರಿಟಿ ಪ್ರಶ್ನೆಗಳಿಗೆ ಉತ್ತರಿಸುವ ಮೂಲಕ ಲಾಗಿನ್ ಕ್ರೆಡೆನ್ಶಿಯಲ್​​ಗಳನ್ನು ಹೊಂದಬಹುದು.

3. ಲಾಗಿನ್ ಆದ ಬಳಿಕ, ಬುಕ್ ಯುವರ್ ಟಿಕೆಟ್ಸ್ ಸೆಕ್ಷನ್​ಗೆ ಕ್ಲಿಕ್ ಮಾಡಿ ನೀವು ಹೊರಡುವ ರೈಲು ನಿಲ್ದಾಣ ಮತ್ತು ತಲುಪಬೇಕಿರುವ ಗಮ್ಯದ ನಿಲ್ದಾಣವನ್ನು ಆಯ್ಕೆ ಮಾಡಿಕೊಳ್ಳಿ.

4. ಪ್ರಯಾಣದ ದಿನಾಂಕವನ್ನು ಆಯ್ಕೆ ಮಾಡಿಕೊಳ್ಳಿ.

5. ನಂತರ ‘ವಂದೇ ಭಾರತ್ ಎಕ್ಸ್​ಪ್ರೆಸ್’ ರೈಲನ್ನು ಆಯ್ಕೆ ಮಾಡಿ.

6. ಎಸಿ ಕೋಚ್ ಅಥವಾ ಎಕ್ಸಿಕ್ಯೂಟಿವ್ ಕೋಚ್ ಯಾವುದು ಬೇಕೋ ಅದನ್ನು ಆಯ್ಕೆ ಮಾಡಿ.

7. ಪ್ರಯಾಣಿಕರ ವಿವರಗಳನ್ನು ಭರ್ತಿ ಮಾಡಿ.

8. ನಂತರ ಪಾವತಿ ಆಯ್ಕೆಯನ್ನು ಕ್ಲಿಕ್ ಮಾಡಿ. ಈಗ ಮತ್ತೊಂದು ಪುಟ ತೆರೆದುಕೊಳ್ಳುತ್ತದೆ.

9. ಹೊಸ ಪುಟದಲ್ಲಿ ನಿಮಗೆ ಬೇಕಾದ ಪಾವತಿ ವಿಧಾನ (ಯುಪಿಐ, ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ಇತ್ಯಾದಿ) ಆಯ್ದುಕೊಳ್ಳಿ.

10. ಪಾವತಿ ಮಾಡಲು ಮುಂದುವರಿಯಿರಿ. ಪಾವತಿ ಆದ ಕೂಡಲೇ ಟಿಕೆಟ್ ಕಾಯ್ದಿರಿಸುವಿಕೆ ಪ್ರಕ್ರಿಯೆ ಪೂರ್ಣಗೊಂಡು ನಿಮ್ಮ ಆಸನದ ಸಂಖ್ಯೆ ಸೇರಿದಂತೆ ಇತರ ವಿವರಗಳುಳ್ಳ ಟಿಕೆಟ್ ಕಾಣಿಸುತ್ತದೆ. ವೆಬ್​ಸೈಟ್​​ ಮೂಲಕ ಕಾಯ್ದಿರಿಸುತ್ತಿರುವುದಾದರೆ ಡೌನ್​ಲೋಡ್ ಮಾಡಿಕೊಳ್ಳಿ.

ಇದನ್ನೂ ಓದಿ: ವಂದೇ ಭಾರತ್ ರೈಲಿನ ವೈಶಿಷ್ಟ್ಯಗಳು ಇಲ್ಲಿವೆ