Tech Tips: ಇಂಟರ್ನೆಟ್ ಇಲ್ಲದೇ ಟ್ರೈನ್ ಲೈವ್ ಲೊಕೇಶನ್ ತಿಳಿಯುವುದು ಹೇಗೆ?: ಇಲ್ಲಿದೆ ಟ್ರಿಕ್
Train Live Location Track: ನಾವು ರೈಲಿನಲ್ಲಿ ಪ್ರಯಾಣಿಸುವಾಗ ಅದು ಯಾವ ಪ್ರದೇಶದಲ್ಲಿ ಹೋಗುತ್ತಿದೆ ಎಂಬುದು ತಿಳಿದಿರುವುದಿಲ್ಲ. ಸ್ಮಾರ್ಟ್‌ಫೋನ್ ಮೂಲಕ ಗೂಗಲ್ ಮ್ಯಾಪ್ನಲ್ಲಿ ನೋಡೋಣ ಎಂದರೆ ಇಂಟರ್ನೆಟ್ ಕೂಡ ಇರುವುದಿಲ್ಲ. ಇಂಥ ಸಂದರ್ಭದಲ್ಲಿ ಕೂಡ ನೀವು ಟ್ರೈನ್ ಲೈವ್ ಲೊಕೇಶನ್ ಟ್ರ್ಯಾಕ್ ಮಾಡಬಹುದು. ಇದಕ್ಕೆ ಒಂದು ಟ್ರಿಕ್ ಇದೆ.
ರೈಲಿನಲ್ಲಿ (Train) ಪ್ರಯಾಣಿಸುವಾಗ ಕೆಲವು ಬಾರಿ ಯಾವುದೇ ನಿಲ್ದಾಣ ಅಥವಾ ಸೈನ್ ಬೋರ್ಡ್ ಇಲ್ಲದ ಸ್ಥಳಗಳಲ್ಲಿ ಟ್ರೈನ್ ನಿಲ್ಲುತ್ತದೆ. ರೈಲು ಆಗ ಎಲ್ಲಿದೆ ಎಂಬುದು ತಿಳಿದಿರುವುಲ್ಲ. ಇದಲ್ಲದೆ, ಹಲವಾರು ಬಾರಿ ರೈಲು ಗ್ರಾಮೀಣ ಪ್ರದೇಶಗಳಲ್ಲಿ ಹಾದುಹೋಗುತ್ತದೆ. ಈ ಸಮಯದಲ್ಲಿ ಫೋನ್‌ನಲ್ಲಿ ಇಂಟರ್ನೆಟ್ ಸೇವೆಗಳು ಹೆಚ್ಚಿನ ಬಾರಿ ಇರುವುದಿಲ್ಲ. ಅಂತಹ ಪರಿಸ್ಥಿತಿಯಲ್ಲಿ ನಿಮ್ಮ ರೈಲು ಎಲ್ಲಿದೆ ಎಂದು ಕಂಡುಹಿಡಿಯುವುದು ಕಷ್ಟವಾಗುತ್ತದೆ. ಆದರೆ ಈಗ ಆ ಸಮಸ್ಯೆ ಇರುವುದಿಲ್ಲ. ಈ ಅಪ್ಲಿಕೇಶನ್‌ನ ಸಹಾಯದಿಂದ ನೀವು ಇಂಟರ್ನೆಟ್ ಇಲ್ಲದೆಯೂ ನಿಮ್ಮ ರೈಲಿನ ಲೈವ್ ಸ್ಥಳವನ್ನು ಕಂಡುಹಿಡಿಯಬಹುದು.
ನಿಮ್ಮ ಬಳಿ ಸ್ಮಾರ್ಟ್‌ಫೋನ್ ಇದ್ದರೆ ನಿಮ್ಮ ಫೋನ್‌ನಲ್ಲಿನ ಆ್ಯಪ್ ಸ್ಟೋರ್/ಪ್ಲೇ ಸ್ಟೋರ್‌ಗೆ ಹೋಗಿ ಅಪ್ಲಿಕೇಶನ್ ಒಂದನ್ನು ಡೌನ್‌ಲೋಡ್ ಮಾಡಬೇಕು. ಈ ಆ್ಯಪ್‌ನ ಹೆಸರು ವೇರ್ ಈಸ್ ಮೈ ಟ್ರೈನ್. ನಿಮ್ಮ ಫೋನ್‌ನಲ್ಲಿ ಇಂಟರ್ನೆಟ್ ಇಲ್ಲದಿರುವಾಗಲೂ ನಿಮ್ಮ ರೈಲಿನ ನಿಖರವಾದ ಸ್ಥಳವನ್ನು ಈ ಅಪ್ಲಿಕೇಶನ್ ನಿಮಗೆ ತಿಳಿಸುತ್ತದೆ. ಇದಕ್ಕಾಗಿ ನೀವು ಅಪ್ಲಿಕೇಶನ್‌ನಲ್ಲಿ ಸಣ್ಣ ಬದಲಾವಣೆಯನ್ನು ಮಾಡಬೇಕಾಗುತ್ತದೆ.
ಭಾರತದಲ್ಲಿ ಬಿಡುಗಡೆ ಆಯಿತು ಬಹುನಿರೀಕ್ಷಿತ ವಿವೋ Y200e 5G ಸ್ಮಾರ್ಟ್‌ಫೋನ್: ಬೆಲೆ ಎಷ್ಟು?
ಈ ಅಪ್ಲಿಕೇಶನ್‌ನಲ್ಲಿ ಸ್ಥಳವನ್ನು ಪತ್ತೆ ಮಾಡಲು 3 ವಿಧಾನಗಳನ್ನು ಹೊಂದಿದೆ. ಇಂಟರ್ನೆಟ್ ಸೆಲ್ ಟವರ್ಸ್, ಜಿಪಿಎಸ್. ಈ ಎರಡು ಆಯ್ಕೆಗಳನ್ನು ರೈಲಿನಲ್ಲಿ ಪ್ರಯಾಣಿಸುವಾಗ ಮಾತ್ರ ಬಳಸಬಹುದು. ಇವುಗಳಲ್ಲಿ ಸೆಲ್ ಟವರ್ ಆಯ್ಕೆಯು ಇಂಟರ್ನೆಟ್ ಇಲ್ಲದೆ ರೈಲಿನ ಲೈವ್ ಸ್ಥಳವನ್ನು ನಿಮಗೆ ತಿಳಿಸುತ್ತದೆ.
ವಾಸ್ತವವಾಗಿ ಸೆಲ್ ಟವರ್ ಮೋಡ್‌ನಲ್ಲಿ ಈ ಅಪ್ಲಿಕೇಶನ್ ಆ ಸಮಯದಲ್ಲಿ ರೈಲು ಹಾದುಹೋಗುವ ಪ್ರದೇಶದ ಮೊಬೈಲ್ ಟವರ್ ಸಿಗ್ನಲ್ ಅನ್ನು ಹಿಡಿಯುತ್ತದೆ. ಹತ್ತಿರದ ಟವರ್ ಎಲ್ಲಿದ್ದರೂ, ಈ ಅಪ್ಲಿಕೇಶನ್‌ನಲ್ಲಿ ನೀವು ಅದರ ಸ್ಥಳವನ್ನು ತಿಳಿಯಬಹುದು. ಆದರೆ, ಫೋನ್ ಯಾವುದೇ ನೆಟ್‌ವರ್ಕ್ ಹೊಂದಿಲ್ಲದಿದ್ದರೆ ಈ ಮೋಡ್ ಕಾರ್ಯನಿರ್ವಹಿಸುವುದಿಲ್ಲ ಎಂಬುದನ್ನು ಗಮನಿಸಿ.
ಕೇವಲ 9,999 ರೂ. ಬೆಲೆಯ ಇನ್ಫಿನಿಕ್ಸ್ ಹಾಟ್ 40i ಇಂದಿನಿಂದ ಖರೀದಿಗೆ ಲಭ್ಯ
ಇಂಟರ್ನೆಟ್ ಮೋಡ್‌ನಲ್ಲಿ ರೈಲಿನ ಲೈವ್ ಲೊಕೇಷನ್ NTES ಸರ್ವರ್‌ನಿಂದ ತಿಳಿಯುತ್ತದೆ. ಇದು ರೈಲ್ವೇಯಿಂದ ನಿರಂತರವಾಗಿ ನವೀಕರಿಸಲಾಗುತ್ತದೆ. ಖಾಸಗಿ ಕಂಪನಿಗಳ ಅಪ್ಲಿಕೇಶನ್‌ಗಳು ತಮ್ಮ ಡೇಟಾವನ್ನು ಇಲ್ಲಿಂದ ಸಂಗ್ರಹಿಸುತ್ತವೆ. ಆದರೆ. ಜಿಪಿಎಸ್ ಮೋಡ್ ಬಗ್ಗೆ ಹೇಳುವುದಾದರೆ.. ಇದು ಉಪಗ್ರಹದೊಂದಿಗೆ ನೇರ ಸಂಪರ್ಕವನ್ನು ಹೊಂದಿದೆ. ಉಪಗ್ರಹದ ಸಹಾಯದಿಂದ ಮಾತ್ರ ರೈಲಿನ ಸ್ಥಳವನ್ನು ತಿಳಿಸುತ್ತದೆ. ಹಾಗೆಯೆ ಈ ಮೋಡ್ ರೈಲಿನೊಳಗೆ ಕುಳಿತಾಗ ಮಾತ್ರ ಸ್ಪಷ್ಟವಾದ ಮಾಹಿತಿಯನ್ನು ಒದಗಿಸುತ್ತದೆ.
ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:12 pm, Thu, 22 February 24