
ಬೆಂಗಳೂರು (ಆ. 05): ಐಫೋನ್ (iPhone) ಎಂದರೆ ಯಾರಿಗೆ ತಾನೆ ಇಷ್ಟ ಇಲ್ಲ ಹೇಳಿ. ಸಾಲ ಮಾಡಿಯಾದರು ಐಫೋನ್ ಗಳನ್ನು ಇಂದು ಖರೀದಿಸುತ್ತಾರೆ. ಐಫೋನ್ ಗಳಲ್ಲಿ ಉತ್ತಮ ಭದ್ರತಾ ವೈಶಿಷ್ಟ್ಯಗಳು, ಅತ್ಯುತ್ತಮ ಕ್ಯಾಮೆರಾ ಕ್ವಾಲಿಟಿ ಇರುವುದರಿಂದ ಎಲ್ಲರೂ ಐಫೋನ್ ಗಳ ಬಗ್ಗೆ ಆಸಕ್ತಿ ಹೊಂದಿರುತ್ತಾರೆ. ಸಾಮಾನ್ಯವಾಗಿ ಆಂಡ್ರಾಯ್ಡ್ ಫೋನ್ ಬಳಸಿ ಹೊಸ ಐಫೋನ್ ಖರೀದಿಸಿದಾಗ, ಕೆಲವು ತೊಂದರೆಗಳು ಎದುರಾಗುತ್ತವೆ. ಹಳೆಯ ಫೋನ್ ನಿಂದ ಹೊಸ ಫೋನ್ ಗೆ ಡೇಟಾವನ್ನು ಹೇಗೆ ವರ್ಗಾಯಿಸುವುದು ಎಂಬುದು ದೊಡ್ಡ ಸಮಸ್ಯೆಯಾಗುತ್ತದೆ.
ಫೋಟೋಗಳು, ಕಾಂಟೆಕ್ಟ್ಸ್, ಮೆಸೇಜ್, ಅಪ್ಲಿಕೇಶನ್ಸ್, ವಾಟ್ಸ್ಆ್ಯಪ್ ಚಾಟ್ ಗಳನ್ನು ಹೇಗೆ ವರ್ಗಾಯಿಸುವುದು ಎಂದು ಹಲವರಿಗೆ ತಿಳಿದಿಲ್ಲ. ಆದರೆ ಹಳೆಯ ಫೋನ್ ನಿಂದ ಹೊಸ ಐಫೋನ್ ಗೆ ಡೇಟಾವನ್ನು ವರ್ಗಾಯಿಸುವುದು ಕಷ್ಟದ ಕೆಲಸವಲ್ಲ. ಆಂಡ್ರಾಯ್ಡ್ ನಿಂದ ಐಫೋನ್ ಗೆ ಸೆಕೆಂಡುಗಳಲ್ಲಿ ಡೇಟಾವನ್ನು ವರ್ಗಾಯಿಸಲು ಸುಲಭವಾದ ಮಾರ್ಗ ಯಾವುದು ಎಂದು ತಿಳಿದುಕೊಳ್ಳೋಣ.
ಆಪಲ್‌ನ ಹೊಸ ಅಪ್ಲಿಕೇಶನ್
ಆಂಡ್ರಾಯ್ಡ್ ನಿಂದ ಐಫೋನ್ ಗೆ ಡೇಟಾವನ್ನು ವರ್ಗಾಯಿಸಲು ತುಂಬಾ ಸುಲಭವಾಗುವಂತೆ ಆಪಲ್ ಸ್ವತಃ ಒಂದು ಅಪ್ಲಿಕೇಶನ್ ಅನ್ನು ಅಭಿವೃದ್ಧಿಪಡಿಸಿದೆ. ಈ ಅಪ್ಲಿಕೇಶನ್‌ನ ಹೆಸರು ಮೂವ್ ಟು ಐಒಎಸ್. ಇದು ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಉಚಿತವಾಗಿ ಲಭ್ಯವಿದೆ. ಈ ಅಪ್ಲಿಕೇಶನ್‌ನೊಂದಿಗೆ, ನೀವು ಸಂಪರ್ಕಗಳು, ಕ್ಯಾಲೆಂಡರ್, ಫೋಟೋಗಳು, ವಿಡಿಯೋಗಳು, ಮೇಲ್, ಸಂದೇಶಗಳು, ವೆಬ್ ಬುಕ್‌ಮಾರ್ಕ್‌ಗಳು ಮತ್ತು ವಾಟ್ಸ್ಆ್ಯಪ್ ಚಾಟ್‌ಗಳನ್ನು ಸುಲಭವಾಗಿ ಹಂಚಿಕೊಳ್ಳಬಹುದು.
iPhone 16 Offer: ಫ್ಲಿಪ್‌ಕಾರ್ಟ್ vs ಅಮೆಜಾನ್, ಅಗ್ಗದ ಐಫೋನ್ 16 ಇಂದು ಯಾವುದರಲ್ಲಿ ಖರೀದಿಸಬಹುದು?
ಇದನ್ನು ಹೇಗೆ ಮಾಡುವುದು..?
ವಾಟ್ಸ್ಆ್ಯಪ್ ಡೇಟಾ ವರ್ಗಾವಣೆ
ಈಗ ನೀವು ವಾಟ್ಸ್ಆ್ಯಪ್ ನ ಸಂಪೂರ್ಣ ಚಾಟ್ ಬ್ಯಾಕಪ್ ಅನ್ನು ಆಂಡ್ರಾಯ್ಡ್‌ನಿಂದ ಐಫೋನ್‌ಗೆ ವರ್ಗಾಯಿಸಬಹುದು. ಇದಕ್ಕಾಗಿ, ಆಂಡ್ರಾಯ್ಡ್ ಫೋನ್‌ನಲ್ಲಿ ವಾಟ್ಸ್ಆ್ಯಪ್ ಸೆಟ್ಟಿಂಗ್‌ಗಳಿಗೆ ಹೋಗಿ.. ಚಾಟ್ಸ್ ವಿಭಾಗವನ್ನು ಕ್ಲಿಕ್ ಮಾಡಿ ಮತ್ತು ಚಾಟ್‌ಗಳನ್ನು ಐಒಎಸ್‌ಗೆ ವರ್ಗಾಯಿಸಿ ಟ್ಯಾಪ್ ಮಾಡಿ. ಇದರ ನಂತರ, ನೀವು ಡೇಟಾವನ್ನು ಆಯ್ಕೆ ಮಾಡಬೇಕು. ನೀವು ಐಫೋನ್‌ನಲ್ಲಿ ವಾಟ್ಸ್ಆ್ಯಪ್ ಅನ್ನು ಸ್ಥಾಪಿಸಿ ಅದೇ ಸಂಖ್ಯೆಯನ್ನು ನಮೂದಿಸಿದರೆ, ಹಳೆಯ ಡೇಟಾ ಬರುತ್ತದೆ.
ತಂತ್ರಜ್ಞಾನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ