ಸೈಬರ್ ಸ್ಕ್ಯಾಮ್ ಬಗ್ಗೆ ದೂರು ನೀಡುವುದು ಹೇಗೆ?: 24 ಗಂಟೆಗಳ ಕಾಲ ತೆರೆದಿರುತ್ತೆ ಈ ಪೋರ್ಟಲ್

|

Updated on: Feb 11, 2024 | 11:23 AM

Cyber Crime Helpline Number: ಈಗ ನೀವು ಸೈಬರ್ ದಾಳಿಗೆ ಒಳಗಾಗಿದ್ದೀರಿ ಎಂದು ತಿಳಿದ ತಕ್ಷಣ ಅಲ್ಲಿಯೇ ಕುಳಿತು ನಿಮ್ಮ ದೂರನ್ನು ದಾಖಲಿಸಬಹುದು. ಅಲ್ಲದೆ, ನೀವು 24 ಗಂಟೆಗಳಲ್ಲಿ ಬೆಳಿಗ್ಗೆ, ಸಂಜೆ ಅಥವಾ ರಾತ್ರಿ ಯಾವುದೇ ಸಮಯದಲ್ಲಿ ಈ ದೂರನ್ನು ಸಲ್ಲಿಸಬಹುದು.

ಸೈಬರ್ ಸ್ಕ್ಯಾಮ್ ಬಗ್ಗೆ ದೂರು ನೀಡುವುದು ಹೇಗೆ?: 24 ಗಂಟೆಗಳ ಕಾಲ ತೆರೆದಿರುತ್ತೆ ಈ ಪೋರ್ಟಲ್
Cyber Crime
Follow us on

ಇಂದಿನ ಕಾಲದಲ್ಲಿ ಸೈಬರ್ ಹಗರಣ (Cyber Scam) ಜನರ ಕೊರಳಿಗೆ ಕಂಟಕವಾಗಿ ಪರಿಣಮಿಸಿದೆ. ಸೈಬರ್ ಅಪರಾಧಿಗಳು ಈಗ ಯಾವಾಗ ಬೇಕಾದರೂ ನಿಮ್ಮನ್ನು ಗುರಿಯಾಗಿಸಿ ಮೋಸ ಮಾಡಬಹುದು. ಅಂತಹ ಪರಿಸ್ಥಿತಿಯಲ್ಲಿ ತಕ್ಷಣವೇ ದೂರು ನೀಡಲು ನಿಮಗೆ ಸಾಧ್ಯವಾಗುವುದಿಲ್ಲ, ಅದರ ಲಾಭವನ್ನು ಪಡೆದುಕೊಂಡು ಸೈಬರ್ ಅಪರಾಧಿಗಳು ಕಾನೂನಿನ ವ್ಯಾಪ್ತಿಯನ್ನು ಮೀರಿ ಹಣ ಎಗರಿಸುತ್ತಾರೆ. ಈ ಎಲ್ಲಾ ವಿಷಯಗಳನ್ನು ಗಮನದಲ್ಲಿಟ್ಟುಕೊಂಡು, ಸೈಬರ್ ಸ್ಕ್ಯಾಮ್ ಬಗ್ಗೆ ದೂರು ನೀಡಲು ಸುಲಭವಾದ ಮಾರ್ಗವೊಂದಿದೆ.

ಈಗ ನೀವು ಸೈಬರ್ ದಾಳಿಗೆ ಒಳಗಾಗಿದ್ದೀರಿ ಎಂದು ತಿಳಿದ ತಕ್ಷಣ ಅಲ್ಲಿಯೇ ಕುಳಿತು ನಿಮ್ಮ ದೂರನ್ನು ದಾಖಲಿಸಬಹುದು. ಅಲ್ಲದೆ, ನೀವು 24 ಗಂಟೆಗಳಲ್ಲಿ ಬೆಳಿಗ್ಗೆ, ಸಂಜೆ ಅಥವಾ ರಾತ್ರಿ ಯಾವುದೇ ಸಮಯದಲ್ಲಿ ಈ ದೂರನ್ನು ಸಲ್ಲಿಸಬಹುದು.

ಐಫೋನ್ 16 ನಲ್ಲಿ ಅಚ್ಚರಿ ವೈಶಿಷ್ಟ್ಯ: ಹೇಗಿರಲಿದೆ ಅಂಡರ್​ವಾಟರ್ ಮೋಡ್ ಫೀಚರ್?

ಆನ್‌ಲೈನ್ ಪೋರ್ಟಲ್‌ನಲ್ಲಿ ದೂರು ನೀಡಿ

ಸೈಬರ್ ಅಪರಾಧವನ್ನು ತಡೆಯಲು ಮತ್ತು ಈ ಬಗ್ಗೆ ದೂರು ನೀಡಲು ಸರ್ಕಾರ ಪೋರ್ಟಲ್ ಅನ್ನು ಪ್ರಾರಂಭಿಸಿದೆ. ಇವು ದಿನದ 24 ಗಂಟೆಗಳು ಮತ್ತು ವಾರದ 7 ದಿನಗಳಲ್ಲಿಯೂ ಕಾರ್ಯನಿರ್ವಹಿಸುತ್ತದೆ. ಇದಕ್ಕಾಗಿ ನೀವು www.cybercrime.gov.in ಗೆ ಲಾಗಿನ್ ಆಗಬೇಕು. ಇಲ್ಲಿ ದೂರನ್ನು ನೋಂದಾಯಿಸಿದ ನಂತರ, ಟ್ರ್ಯಾಕ್ ಮಾಡಲು ಒಂದು ಸಂಖ್ಯೆಯನ್ನು ನೀಡಲಾಗುತ್ತದೆ. ಅದರ ಮೂಲಕ ನಿಮ್ಮ ದೂರನ್ನು ನೀವು ಟ್ರ್ಯಾಕ್ ಮಾಡಬಹುದು.

ಸೈಬರ್ ಅಪರಾಧ ತಡೆಗಟ್ಟಲು ಸಹಾಯವಾಣಿ ಸಂಖ್ಯೆ

ನೀವು 155260 ಗೆ ಕರೆ ಮಾಡುವ ಮೂಲಕ ಕೂಡ ಸೈಬರ್ ಅಪರಾಧ ಸಹಾಯವಾಣಿಯನ್ನು ಸಂಪರ್ಕಿಸಬಹುದು. ಈ ಸಹಾಯವಾಣಿಯು 24×7 ಲಭ್ಯವಿದೆ ಮತ್ತು ಸೈಬರ್ ಅಪರಾಧದ ದೂರನ್ನು ದಾಖಲಿಸಲು ನಿಮಗೆ ಸಹಾಯ ಮಾಡುತ್ತದೆ. ಇದರೊಂದಿಗೆ ನಿಮ್ಮ ಜಿಲ್ಲೆಯ ಸೈಬರ್ ಪೊಲೀಸ್ ಠಾಣೆಗೂ ತೆರಳಿ ದೂರು ಸಲ್ಲಿಸಬಹುದು.

ನಿಮ್ಮ ಲವ್ವರ್ ಫೋನ್ ದಿನವಿಡೀ ಬ್ಯುಸಿ ಬರುತ್ತಾ?: ಕಾಲ್ ಹಿಸ್ಟರಿ ತೆಗೆಯುವ ಟ್ರಿಕ್ ಇಲ್ಲಿದೆ ನೋಡಿ

ಸೈಬರ್ ವಂಚನೆಗಳನ್ನು ತಪ್ಪಿಸಲು ಎಚ್ಚರಿಕೆ ವಹಿಸುವುದು ಮತ್ತು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವುದು ಮುಖ್ಯ. ನೀವು ಜಾಗರೂಕರಾಗಿದ್ದರೆ ಸೈಬರ್ ಅಪರಾಧಿಗಳಿಗೆ ಬಲಿಯಾಗುವುದನ್ನು ತಪ್ಪಿಸಬಹುದು. ಮುಖ್ಯವಾಗಿ ನೀವು ಯಾವುದೇ ಅಪರಿಚಿತ ವ್ಯಕ್ತಿಯನ್ನು ತಕ್ಷಣವೇ ನಂಬಬಾರದು ಮತ್ತು ಯಾರೇ ಅಪರಿಚಿತರು QR ಕೋಡ್ ಅನ್ನು ಸ್ಕ್ಯಾನ್ ಮಾಡಿ ಎಂದರೆ ಅಥವಾ ಓಟಿಟಿ ಹಂಚಿಕೊಳ್ಳಿ ಎಂದು ಕರೆಬಂದರೆ ಶೇರ್ ಮಾಡಬಾರದು.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ