Group Privacy: ನಿಮ್ಮ ಅನುಮತಿ ಇಲ್ಲದೆ ಸಿಕ್ಕ ಸಿಕ್ಕ ವಾಟ್ಸಾಪ್ ಗ್ರೂಪ್‌ಗಳಿಗೆ ಸೇರಿಸುತ್ತಿದ್ದಾರಾ? ತಡೆಯುವುದು ಹೇಗೆ ಗೊತ್ತಾ?

|

Updated on: Aug 02, 2024 | 4:04 PM

ಬಳಕೆದಾರರ ಗೌಪ್ಯತೆ (Privacy)ಗಾಗಿ, ವಾಟ್ಸಾಪ್ ತನ್ನ ಬಳಕೆದಾರರಿಗೆ ಅವರನ್ನು ಗುಂಪುಗಳಿಗೆ ಯಾರು ಸೇರಿಸಬಹುದು ಎಂಬುದನ್ನು ಆಯ್ಕೆ ಮಾಡಲು ಅವಕಾಶವೊಂದನ್ನು ನೀಡಿದೆ. ನಿಮ್ಮನ್ನು ಹೊಸ ಹೊಸ ಗುಂಪುಗಳಿಗೆ ಯಾರು ಸೇರಿಸಬಹುದು? ಅನಗತ್ಯವಾದ ಗುಂಪಿಗೆ ಸೇರಿಸದಂತೆ ಇತರರನ್ನು ನೀವು ಹೇಗೆ ನಿರ್ಬಂಧಿಸಬಹುದು ಎಂಬುದರ ಕುರಿತಾದ ಪೂರ್ಣ ಮಾಹಿತಿ ಇಲ್ಲಿದೆ ನೋಡಿ.

Group Privacy: ನಿಮ್ಮ ಅನುಮತಿ ಇಲ್ಲದೆ ಸಿಕ್ಕ ಸಿಕ್ಕ ವಾಟ್ಸಾಪ್ ಗ್ರೂಪ್‌ಗಳಿಗೆ ಸೇರಿಸುತ್ತಿದ್ದಾರಾ? ತಡೆಯುವುದು ಹೇಗೆ ಗೊತ್ತಾ?
Follow us on

ವಾಟ್ಸಾಪ್ ವಿಶ್ವದಾದ್ಯಂತ ಶತಕೋಟಿ ಜನರು ಬಳಸುವ ಅತ್ಯಂತ ಜನಪ್ರಿಯ ತ್ವರಿತ ಮೆಸೇಜಿಂಗ್ ಪ್ಲಾಟ್‌ಫಾರ್ಮ್ ಆಗಿದೆ. ಚಾಟ್ ಮಾಡುವುದರ ಜೊತೆಗೆ, ಬಳಕೆದಾರರು ಫೋಟೋಗಳು, ವೀಡಿಯೊಗಳು, ಸ್ಟೇಟಸ್‌ಗಳು ಮತ್ತು ಹೆಚ್ಚಿನದನ್ನು ಹಂಚಿಕೊಳ್ಳಬಹುದು. ಇತ್ತೀಚಿನ ದಿನಗಳಲ್ಲಿ ವಾಟ್ಸಾಪ್ ಅನ್ನು ಕೇವಲ ವೈಯಕ್ತಿಕ ಬಳಕೆಗಾಗಿ ಅಲದ್ಲೇ ಬಿಸಿನೆಸ್​​​ ಮತ್ತು ಪ್ರಚಾರಗಳಂತಹ ವ್ಯವಹಾರಗಳಿಗಾಗಿಯೂ ಬಳಸಲಾಗುತ್ತಿದೆ. ಏಕಕಾಲದಲ್ಲಿ ಅನೇಕ ಬಳಕೆದಾರರಿಗೆ ಸಂದೇಶಗಳನ್ನು ಪ್ರಸಾರ ಮಾಡುವ ಸಲುವಾಗಿ ಗುಂಪುಗಳನ್ನು ರಚಿಸಲು ವಾಟ್ಸಾಪ್ ಬಳಕೆದಾರರಿಗೆ ಅನುಮತಿಸುತ್ತದೆ.

ಇದರಿಂದ ಮೊಬೈಲ್ ಸಂಖ್ಯೆಗಳ ಸುಲಭ ಲಭ್ಯತೆಯಿಂದಾಗಿ, ಅನೇಕರು ಇದನ್ನು ದುರುಪಯೋಗಪಡಿಸಿಕೊಂಡು ಜನರನ್ನು ಮೋಸಗೊಳಿಸಲು ವಾಟ್ಸಾಪ್ ಗುಂಪುಗಳನ್ನು ರಚಿಸುತ್ತಾರೆ. ಇಂತಹ ವಂಚನೆಗಳಿಂದ ಬಳಕೆದಾರರನ್ನು ರಕ್ಷಿಸಲು ಅವರನ್ನು ಗುಂಪುಗಳಿಗೆ ಯಾರು ಸೇರಿಸಬಹುದು ಎಂಬುದನ್ನು ಆಯ್ಕೆ ವಾಟ್ಸಾಪ್ ಆಯ್ಕೆಗಳನ್ನು ತಂದಿದೆ. ಈ ಮೂಲಕ ನಿಮ್ಮನ್ನು ಯಾರು ವಿವಿಧ ಗ್ರೂಪ್​​ಗಳಿಗೆ ಸೇರಿಸಬಹುದು ಎಂಬ ಆಯ್ಕೆಯನ್ನು ನೀಡಿದೆ. ಇದರಲ್ಲಿ 3 ಆಯ್ಕೆಗಳನ್ನು ನೀಡಲಾಗಿದೆ.

  • ಎಲ್ಲರೂ(Everyone)
  • ನನ್ನ ಸಂಪರ್ಕದಲ್ಲಿ ಇರುವವರು (MY Contacts)
  • ನನ್ನ ಸಂಪರ್ಕದಲ್ಲಿರುವ ಕೆಲವನ್ನು ಹೊರೆತುಪಡಿಸಿ (MY Contacts except)

ಈ ಮೂಲಕ ಬಳಕೆದಾರು ಸ್ವತಃ ತಮ್ಮನ್ನು ಯಾರು ಗುಂಪುಗಳಿಗೆ ಸೇರಿಸಬಹುದು ಎಂಬುದನ್ನು ಆರಿಸಿಕೊಳ್ಳಬಹುದಾಗಿದೆ.

ಇದನ್ನೂ ಓದಿ: ಸಿಮ್ ಬದಲಾಯಿಸಲು, ನಂಬರ್ ಪೋರ್ಟ್ ಮಾಡಲು ಜುಲೈ 1ರಿಂದ ಹೊಸ ನಿಯಮ

ಇತರರು ನಿಮ್ಮನ್ನು ವಾಟ್ಸಾಪ್ ಗುಂಪುಗಳಿಗೆ ಸೇರಿಸುವುದನ್ನು ಹೇಗೆ ತಡೆಯುವುದು ಎಂಬುದರ ಕುರಿತು ಈ ಹಂತ-ಹಂತವಾಗಿ ಇಲ್ಲಿ ತಿಳಿದುಕೊಳ್ಳಿ.

  • ಹಂತ 1: ವಾಟ್ಸಾಪ್ ಮುಖಪುಟಕ್ಕೆ ಹೋಗಿ ಮತ್ತು ಮೇಲಿನ ಬಲ ಮೂಲೆಯಲ್ಲಿರುವ ಮೂರು-ಚುಕ್ಕೆಯ ಮೇಲೆ ಕ್ಲಿಕ್ ಮಾಡಿ
  • ಹಂತ 2: ಡ್ರಾಪ್-ಡೌನ್ ಮೆನುನಿಂದ ‘ಸೆಟ್ಟಿಂಗ್ಸ್’ ಆಯ್ಕೆ ಮಾಡಿ ಮತ್ತು ಮುಂದಿನ ಪರದೆಯಲ್ಲಿ ‘ಗೌಪ್ಯತೆ'(Privacy) ಅನ್ನು ಟ್ಯಾಪ್ ಮಾಡಿ.
  • ಹಂತ 3: ‘ಗುಂಪುಗಳು’ (Groups)ಗೆ ಕೆಳಗೆ ಸ್ಕ್ರಾಲ್ ಮಾಡಿ ಮತ್ತು ‘ಯಾರು ನನ್ನನ್ನು ಗುಂಪುಗಳಿಗೆ ಸೇರಿಸಬಹುದು’ ನಲ್ಲಿ, ನಿಮ್ಮ ಆದ್ಯತೆಯನ್ನು ಆಯ್ಕೆ ಮಾಡಿ.

ಇನ್ನಷ್ಟು ತಂತ್ರಜ್ಞಾನ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ