Tech Tips: ಈ ಬೇಸಿಗೆಯಲ್ಲಿ ಕರೆಂಟ್ ಬಿಲ್ ಹೆಚ್ಚಿಸದೆ ಎಸಿ ಬಳಸುವುದು ಹೇಗೆ?: ಇಲ್ಲಿದೆ ಟಿಪ್ಸ್

|

Updated on: Mar 19, 2024 | 1:59 PM

Air Conditioner Tips: ಬೇಸಿಗೆ ಕಾಲ ಆರಂಭವಾಗುತ್ತಿದ್ದಂತೆ ಹವಾನಿಯಂತ್ರಣ (ಎಸಿ) ಬಳಕೆ ಹೆಚ್ಚುತ್ತಿದೆ. ಇದರೊಂದಿಗೆ ನಮ್ಮ ವಿದ್ಯುತ್ ಬಿಲ್‌ಗಳು ಹೆಚ್ಚಾಗುತ್ತಿವೆ. ಮುಂಬರುವ ಅವಧಿಯಲ್ಲಿ ಇದು ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ. ಈ ಕ್ರಮದಲ್ಲಿ ದಿನದ 24 ಗಂಟೆಯೂ ಎಸಿಗಳನ್ನು ಬಳಸಬೇಕಾಗಿ ಬರಬಹುದು. ಹೀಗಾದಾಗ ವಿದ್ಯುತ್ ಬಿಲ್ ಗಳು ಹೆಚ್ಚು ಬರುವುದು ಕಾಮನ್.

Tech Tips: ಈ ಬೇಸಿಗೆಯಲ್ಲಿ ಕರೆಂಟ್ ಬಿಲ್ ಹೆಚ್ಚಿಸದೆ ಎಸಿ ಬಳಸುವುದು ಹೇಗೆ?: ಇಲ್ಲಿದೆ ಟಿಪ್ಸ್
Air Conditioner and Electricity Bills
Follow us on

ಬೇಸಿಗೆ ಕಾಲ ಶುರುವಾಗಿದೆ. ಎಲ್ಲಿ ಹೋದರೂ ಬಿಸಿಯ ವಾತಾವರಣ. ಎಲ್ಲರೂ ಫ್ಯಾನ್, ಕೂಲರ್, ಎಸಿಗಳ (Air Conditioner) ಹಾದಿ ಹಿಡಿಯುತ್ತಿದ್ದಾರೆ. ದಿನದ 24 ಗಂಟೆ ಇವುಗಳು ಆನ್ ಇರುತ್ತವೆ. ಈ ಸಂದರ್ಭ ಕರೆಂಟ್ ಬಿಲ್​ಗಳು ಎಂದಿಗಿಂತಲೂ ಎರಡು ಪಟ್ಟು ಹೆಚ್ಚಾದರೆ ಆಶ್ಚರ್ಯ ಪಡಬೇಕಾಗಿಲ್ಲ. ಆದರೆ ಬೇಸಿಗೆಯಲ್ಲಿ ಕರೆಂಟ್ ಬಳಕೆ ಕಡಿಮೆ ಮಾಡದೇ ಬಿಲ್ ಕಡಿಮೆ ಮಾಡಬಹುದು ಎನ್ನುತ್ತಾರೆ ತಜ್ಞರು. ನೀವು ಈ ಸಲಹೆಗಳನ್ನು ಅನುಸರಿಸಿದರೆ, ನಿಮ್ಮ ಕರೆಂಟ್ ಬಿಲ್ ಅರ್ಧದಷ್ಟು ಕಡಿಮೆಯಾಗುತ್ತದೆ. ಅದನ್ನು ಹೇಗೆ ನೋಡೋಣ..

ಬೇಸಿಗೆ ಕಾಲ ಆರಂಭವಾಗುತ್ತಿದ್ದಂತೆ ಹವಾನಿಯಂತ್ರಣ (ಎಸಿ) ಬಳಕೆ ಹೆಚ್ಚುತ್ತಿದೆ. ಇದರೊಂದಿಗೆ ನಮ್ಮ ವಿದ್ಯುತ್ ಬಿಲ್‌ಗಳು ಹೆಚ್ಚಾಗುತ್ತಿವೆ. ಮುಂಬರುವ ಅವಧಿಯಲ್ಲಿ ಇದು ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ. ಈ ಕ್ರಮದಲ್ಲಿ ದಿನದ 24 ಗಂಟೆಯೂ ಎಸಿಗಳನ್ನು ಬಳಸಬೇಕಾಗಿ ಬರಬಹುದು. ಹೀಗಾದಾಗ ವಿದ್ಯುತ್ ಬಿಲ್ ಗಳು ಹೆಚ್ಚು ಬರುವುದು ಕಾಮನ್. ಆದರೆ, ಕೆಲವರು ವಿದ್ಯುತ್ ಬಿಲ್ ಕಡಿಮೆ ಮಾಡಲು ಎಸಿಯನ್ನು ಮಿತವಾಗಿ ಬಳಸುತ್ತಾರೆ, ಹೆಚ್ಚು ಕೂಲಿಂಗ್ ಅಳವಡಿಸುವುದಿಲ್ಲ. ಈ ಸಮಸ್ಯೆಗೆಲ್ಲ ಇಲ್ಲಿದೆ ನೋಡಿ ಪರಿಹಾರ.

ಭಾರತಕ್ಕೆ ಬರುತ್ತಿದೆ ಮೊಟೊರೊಲಾ ಎಡ್ಜ್ ಸರಣಿಯ ಹೊಸ ಸ್ಮಾರ್ಟ್​ಫೋನ್: ಯಾವುದು ನೋಡಿ

ಸರಿಯಾದ ತಾಪಮಾನ ಹೊಂದಿಸಿ:

ನಿಮ್ಮ ಎಸಿ ಅನ್ನು ಅತಿ ಕಡಿಮೆ ತಾಪಮಾನಕ್ಕೆ ಹೊಂದಿಸುವುದರಿಂದ ಕೊಠಡಿಯು ವೇಗವಾಗಿ ತಂಪಾಗುತ್ತದೆ ಎಂದು ಹೆಚ್ಚಿನವರು ನಂಬಿದ್ದಾರೆ. ಆದಾಗ್ಯೂ, ಇದು ನಿಜವಲ್ಲ. ಬ್ಯೂರೋ ಆಫ್ ಎನರ್ಜಿ ಎಫಿಷಿಯನ್ಸಿ, ಎಸಿಯನ್ನು 24 ಡಿಗ್ರಿಗಳಲ್ಲಿ ಕಾರ್ಯನಿರ್ವಹಿಸುವಂತೆ ಶಿಫಾರಸು ಮಾಡುತ್ತದೆ. ಇದು ಮಾನವ ದೇಹಕ್ಕೆ ಸೂಕ್ತವೆಂದು ಪರಿಗಣಿಸಲಾಗಿದೆ. ಹವಾನಿಯಂತ್ರಣವನ್ನು ನೀವು ಹೊಂದಿಸುವ ತಾಪಮಾನವು ನಿಮ್ಮ ವಿದ್ಯುತ್ ಬಳಕೆಯ ಮೇಲೆ ಪರಿಣಾಮ ಬೀರುತ್ತದೆ. ಒಂದು ಘಟಕದಿಂದ ತಾಪಮಾನವನ್ನು ಕಡಿಮೆ ಮಾಡುವುದರಿಂದ ವಿದ್ಯುತ್ ಬಳಕೆ 6 ಪ್ರತಿಶತದಷ್ಟು ಹೆಚ್ಚಾಗುತ್ತದಂತೆ. ಆದ್ದರಿಂದ ನಿಮ್ಮ ರೂಮ್ ಅನ್ನು ತಂಪು ಮಾಡಲು ಎಸಿಯನ್ನು 20-24 ಡಿಗ್ರಿಗಳ ನಡುವೆ ಇರಿಸಲು ಪ್ರಯತ್ನಿಸಿ. ಈ ತಾಪಮಾನವು ಆರಾಮದಾಯಕ ವಾತಾವರಣವನ್ನು ಸೃಷ್ಟಿಸುವುದಲ್ಲದೆ ಎಸಿ ಮೇಲಿನ ಒತ್ತಡವನ್ನು ಕಡಿಮೆ ಮಾಡುತ್ತದೆ. ಇದು ಕಡಿಮೆ ವಿದ್ಯುತ್ ಬಳಕೆಗೆ ಕಾರಣವಾಗುತ್ತದೆ.

ಟೈಮರ್ ಬಳಸಿ:

ನಿಮ್ಮ ವಿದ್ಯುತ್ ಬಿಲ್ ಕಡಿಮೆ ಮಾಡಲು ಒಂದು ಸ್ಮಾರ್ಟ್ ಮಾರ್ಗವೆಂದರೆ ನಿಮ್ಮ ಎಸಿಯಲ್ಲಿ ಟೈಮರ್ ಹೊಂದಿಸುವುದು. ಅದನ್ನು ಇಡೀ ದಿನ ಬಳಸುವ ಬದಲು ನಿಮಗೆ ಅಗತ್ಯವಿದ್ದಾಗ ಬಳಸಿ. ಟೈಮರ್ ಅನ್ನು 2-3 ಗಂಟೆಗಳ ಕಾಲ ಹೊಂದಿಸುವುದು ಯಾವಾಗಲೂ ಒಳ್ಳೆಯದು. ಇದು ಹವಾನಿಯಂತ್ರಣವನ್ನು ಅತಿಯಾಗಿ ಬಳಸುವುದನ್ನು ಕಡಿಮೆ ಮಾಡುತ್ತದೆ ಮತ್ತು ವಿದ್ಯುತ್ ಬಿಲ್ ಕಡಿತಗೊಳಿಸುತ್ತದೆ. ನೀವು ಮಲಗುವ ಮುನ್ನ, ರೂಮ್ ತಣ್ಣಗಾದ ನಂತರ 1 ಅಥವಾ 2 ಗಂಟೆಗಳ ನಂತರ ಸ್ವಯಂಚಾಲಿತವಾಗಿ ಎಸಿ ಅನ್ನು ಆಫ್ ಮಾಡಲು ಟೈಮರ್ ಅನ್ನು ಹೊಂದಿಸಿದರೆ ಉತ್ತಮ.

108MP ಕ್ಯಾಮೆರಾದ ಪೋಕೋ X6 ನಿಯೋ 5G ಫೋನ್ ಮಾರಾಟ ಆರಂಭ: ಬೆಲೆ ಕೇವಲ 15,999 ರೂ.

ಪವರ್ ಬಟನ್ ಆಫ್ ಮಾಡಿ:

ಎಸಿ ಸೇರಿದಂತೆ ಎಲೆಕ್ಟ್ರಿಕ್ ಉಪಕರಣವು ಬಳಕೆಯಲ್ಲಿಲ್ಲದಿದ್ದಾಗ ಯಾವಾಗಲೂ ಪವರ್ ಸ್ವಿಚ್ ಆಫ್ ಮಾಡಬೇಕು. ಹೆಚ್ಚಿನ ಜನರು ರಿಮೋಟ್‌ನಲ್ಲಿ ಮಾತ್ರ AC ಅನ್ನು ಸ್ವಿಚ್ ಆಫ್ ಮಾಡುತ್ತಾರೆ. ಆದರೆ ಈ ರೀತಿಯಾಗ ಕಂಪ್ರೆಸರ್ ಅನ್ನು ‘ಐಡಲ್ ಲೋಡ್’ ಗೆ ಹೊಂದಿಸಿದಾಗ ಬಹಳಷ್ಟು ವಿದ್ಯುತ್ ವ್ಯರ್ಥವಾಗುತ್ತದೆ.

ಬಾಗಿಲು-ಕಿಟಕಿಯನ್ನು ಸರಿಯಾಗಿ ಲಾಕ್ ಮಾಡಿ:

ಎಸಿ ಬಳಸುವಾಗ ಯಾವುದೇ ಕಿಟಕಿಯ ಬಾಗಿಲು ಓಪನ್ ಇಲ್ಲದಂತೆ ಎಚ್ಚರ ವಹಿಸಿ. ನೀವು ಏರ್ ಕಂಡಿಷನರ್ ಅನ್ನು ಆನ್ ಮಾಡುವ ಮೊದಲು, ಕೋಣೆಯ ಪ್ರತಿಯೊಂದು ಕಿಟಕಿ, ಬಾಗಿಲು ಮುಚ್ಚಲು ಮರೆಯಬೇಡಿ. ಇದು ಕೋಣೆಯನ್ನು ತ್ವರಿತವಾಗಿ ತಂಪಾಗಿಸಲು ಸಹಾಯ ಮಾಡುತ್ತದೆ ಮತ್ತು ತಿಂಗಳ ಕೊನೆಯಲ್ಲಿ ನಿಮ್ಮ ವಿದ್ಯುತ್ ಬಿಲ್ ಅನ್ನು ಸಹ ಉಳಿಸುತ್ತದೆ.

ಸರ್ವಿಸ್ ಮಾಡಿಸಿ:

ನಿಮ್ಮ ಎಸಿ ಸರ್ವಿಸ್ ಮಾಡಿಸುತ್ತಿರುವುದು ಯಾವಾಗಲೂ ಒಳ್ಳೆಯದು. ಏಕೆಂದರೆ ಅದು ತಿಂಗಳುಗಳವರೆಗೆ ಬಳಕೆಯಲ್ಲಿಲ್ಲವೆಂದರೆ ಧೂಳು ಅಥವಾ ಇತರ ಕಣಗಳು ಯಂತ್ರಕ್ಕೆ ಹಾನಿಯಾಗುವ ಸಾಧ್ಯತೆ ಇರುತ್ತದೆ.