ಮಳೆಗಾಲದಲ್ಲಿ (Rainy Season) ಹೊರಗೆ ಹೋದಾಗ ಸ್ಮಾರ್ಟ್ಫೋನ್ಗಳನ್ನು ಎಚ್ಚರಿಕೆಯಿಂದ ಇಟ್ಟುಕೊಳ್ಳುವುದು ಒಂದು ದೊಡ್ಡ ಸವಾಲು. ಮೊಬೈಲ್ ಎಲ್ಲಿ ಒದ್ದೆ ಆಗಿ ಬಿಡುತ್ತೆ ಎಂಬ ಭಯ ಕಾಡುತ್ತಲೇ ಇರುತ್ತದೆ. ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಫೋನ್‌ಗಳು ವಾಟರ್ ಪ್ರೂಫ್ (Waterproof) ಆಗಿದ್ದರೂ, ನೀರು ತಾಗಿದರೆ ಹಲವಾರು ಸಮಸ್ಯೆಗಳು ಕಾಡುತ್ತದೆ. ಮಳೆ ನೀರನ್ನು ಬಟ್ಟೆಯಿಂದ ಒರೆಸಿದರೂ ಕೆಲವು ಬಾರಿ ಕೆಲಸ ಮಾಡುವುದಿಲ್ಲ. ನಿಮ್ಮ ಫೋನ್ ವಾಟರ್ಪ್ರೂಫ್ ಆಗಿದ್ದರೆ ದೊಡ್ಡ ಸಮಸ್ಯೆ ಇಲ್ಲ, ಆದರೆ ವಾಟರ್ಪ್ರೂಫ್ ಅಲ್ಲದ ಮೊಬೈಲ್ ಆಗಿದ್ದರೆ ತೊಂದರೆ ಆಗುತ್ತದೆ. ನಿಮ್ಮದು ವಾಟರ್ಪ್ರೂಫ್ ಅಲ್ಲದ ಮೊಬೈಲ್ ಮಳೆಗೆ ಒದ್ದೆ ಆದರೂ ಸರಿಯಾಗಿ ಕೆಲಸ ಮಾಡಬೇಕು ಎಂದರೆ ಇದಕ್ಕೆ ನೀವು ಕೇವಲ 99 ರೂಪಾಯಿ ಖರ್ಚು ಮಾಡಿದರೆ ಸಾಕು. ನಿಮ್ಮ ಸ್ಮಾರ್ಟ್ಫೋನ್ (Smartphone) ವಾಟರ್ಪ್ರೂಫ್ ಆಗುತ್ತದೆ.
ಆದರೆ ಇದಕ್ಕೂ ಮುನ್ನ ನಿಮ್ಮ ಸ್ಮಾರ್ಟ್ಫೋನ್ ವಾಟರ್ಪ್ರೂಫ್ ಹೌದೋ ಅಲ್ಲವೋ ಎಂಬುದನ್ನು ತಿಳಿದುಕೊಳ್ಳಬೇಕು. ಅದಕ್ಕಾಗಿ ನೀವು ಫೋನ್‌ನ ಐಪಿ ರೇಟಿಂಗ್ ಅನ್ನು ಪರಿಶೀಲಿಸಬೇಕು. ಫೋನ್ ಖರೀದಿಸುವಾಗ ನೀವು IP67, IP68, IPX8 ಸೇರಿದಂತೆ ವಿವಿಧ ರೇಟಿಂಗ್‌ಗಳನ್ನು ಕೇಳಿರುತ್ತೀರಿ. ಆದರೆ ಈ ರೇಟಿಂಗ್‌ಗಳ ಅರ್ಥವೇನೆಂದು ಅನೇಕರಿಗೆ ತಿಳಿದಿಲ್ಲ. IP68 ರೇಟಿಂಗ್ ಹೊಂದಿರುವ ಸಾಧನವು 30 ನಿಮಿಷಗಳ ಕಾಲ ನೀರಿನ ಅಡಿಯಲ್ಲಿ ಮುಳುಗಿದ ನಂತರವೂ ಯಾವುದೇ ಹಾನಿ ಆಗುವುದಿಲ್ಲ. ಇದು ವಾಟರ್ಪ್ರೂಫ್ ಮೊಬೈಲ್ ಆಗಿದೆ.
Power Bank: ಪವರ್ ಬ್ಯಾಂಕ್ ಮೂಲಕ ಪದೇ ಪದೇ ಮೊಬೈಲ್ ಚಾರ್ಜ್ ಮಾಡುವುದು ಎಷ್ಟು ಸುರಕ್ಷಿತ?: ಬಂದಿದೆ ಹೊಸ ಮಾಹಿತಿ
ನಿಮ್ಮ ಫೋನ್ ಜಲನಿರೋಧಕವಾಗಿದೆಯೇ ಅಥವಾ ಇಲ್ಲವೇ ಎಂಬುದನ್ನು ಪರಿಶೀಲಿಸಲು, ಫೋನ್ IP68 ರೇಟಿಂಗ್ ಅನ್ನು ಹೊಂದಿದೆಯೇ ಅಥವಾ ಇಲ್ಲವೇ ಎಂಬುದನ್ನು ನೋಡಬೇಕು. ಫೋನ್ IP68 ರೇಟಿಂಗ್ ಹೊಂದಿಲ್ಲದಿದ್ದರೆ, ಅದನ್ನು ಒದ್ದೆಯಾಗಲು ಬಿಡಬೇಡಿ. ಇದರಿಂದ ಫೋನ್ ಹಾಳಾಗಬಹುದು. ಈ ತೊಂದರೆಯಿಂದ ಪಾರಾಗಲು 99 ರೂ. ಖರ್ಚು ಮಾಡಿ ಸಾಕು.
ನೀವು ಹೊರಗಡೆ ಇದ್ದ ಸಂದರ್ಭ ಮಳೆ ಬಂತು ಎಂದಾದರೆ ಅಥವಾ ನಿಮ್ಮ ಫೋನ್ ಮಳೆಗೆ ಒದ್ದೆ ಆಗುತ್ತದೆ ಎಂದಾದಲ್ಲಿ ಇದರ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ಇದಕ್ಕಾಗಿ ನೀವು ವಾಟರ್ಪ್ರೂಫ್ ಪೌಚ್ ಅನ್ನು ಖರೀದಿಸಬಹುದು. ಜಲನಿರೋಧಕ ಪೌಚ್ ಯಾವುದು ಎಂದರೆ, ಇದು ವಿಶೇಷವಾದ ಪ್ಲಾಸ್ಟಿಕ್ ಕವರ್ ಆಗಿದೆ. ನಿಮ್ಮ ಫೋನ್ ಅನ್ನು ಅದರೊಳಗೆ ಇಟ್ಟರೆ, ಎಷ್ಟು ಬಾರಿ ನೀರು ತಾಗಿದರೂ ಏನೂ ಆಗುವುದಿಲ್ಲ. ಕವರ್ ಮೇಲಿಂದಲೇ ನೀವು ಫೋನ್ ಅನ್ನು ಬಳಸಬಹುದು. ಏಕೆಂದರೆ ವಾಟರ್ಪ್ರೂಫ್ ಪೌಚ್ಗಳು ಟ್ರಾನ್ಪರೆಂಟ್ ಆಗಿರುತ್ತದೆ.
ನೀವು ಯಾವುದೇ ಇ-ಕಾಮರ್ಸ್ ವೆಬ್‌ಸೈಟ್‌ಗಳಿಂದ ವಾಟರ್ಪ್ರೂಫ್ ಪೌಚ್ ಖರೀದಿಸಬಹುದು. ಫ್ಲಿಪ್‌ಕಾರ್ಟ್, ಅಮೆಜಾನ್‌ನಂತಹ ಜನಪ್ರಿಯ ಇ-ಕಾಮರ್ಸ್ ವೆಬ್‌ಸೈಟ್‌ಗಳಲ್ಲಿ ಇದು ಮಾರಾಟ ಆಗುತ್ತಿದೆ. ಅವುಗಳ ಬೆಲೆ ರೂ. 99 ರಿಂದ ಆರಂಭವಾಗುತ್ತದೆ. ನೀವು 300 ರೂ. ಖರ್ಚು ಮಾಡಿದರೆ ನಿಮ್ಮ ಫೋನ್ ಅನ್ನು ನೀರಿನಿಂದ ಮಾತ್ರವಲ್ಲದೆ ಧೂಳು, ಮರಳಿನಿಂದ ಕೂಡ ರಕ್ಷಿಸಬಹುದು.
ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ