Best Smartphones: 35,000 ರೂ. ಒಳಗೆ ಫ್ಲಿಪ್​ಕಾರ್ಟ್​ನಲ್ಲಿ ಲಭ್ಯವಿರುವ ಪ್ರೀಮಿಯಂ ಕ್ಯಾಮೆರಾದ ಟಾಪ್ 5 ಸ್ಮಾರ್ಟ್​ಫೋನ್ಸ್ ಇಲ್ಲಿದೆ

Best Camera Phones: ಫ್ಲಿಪ್​ಕಾರ್ಟ್​ನಲ್ಲಿ (Flipkart) 35,000 ರೂಪಾಯಿಗಿಂತಲೂ ಕಡಿಮೆ ಬೆಲೆಯಲ್ಲಿ ಲಭ್ಯವಿರುವ ಅತ್ಯುತ್ಕೃಷ್ಟವಾದ ಕ್ಯಾಮೆರಾ ತಂತ್ರಜ್ಞಾನವನ್ನು ಹೊಂದಿರುವ ಐದು ಸ್ಮಾರ್ಟ್​ಫೋನ್​ಗಳ ಪಟ್ಟಿ ಇಲ್ಲಿದೆ.

Best Smartphones: 35,000 ರೂ. ಒಳಗೆ ಫ್ಲಿಪ್​ಕಾರ್ಟ್​ನಲ್ಲಿ ಲಭ್ಯವಿರುವ ಪ್ರೀಮಿಯಂ ಕ್ಯಾಮೆರಾದ ಟಾಪ್ 5 ಸ್ಮಾರ್ಟ್​ಫೋನ್ಸ್ ಇಲ್ಲಿದೆ
Camera Phones
Follow us
|

Updated on:Jul 04, 2023 | 3:49 PM

ನೀವು ಉತ್ಸಾಹಿ ಛಾಯಾಗ್ರಾಹಕರು ಅಂದರೆ ಫೋಟೋಗ್ರಾಫರ್ (Photographer) ಆಗಿದ್ದರೆ ಅಥವಾ ಸುಂದರವಾದ ಕ್ಷಣಗಳನ್ನು ಸೆರೆಹಿಡಿಯಲು ಇಚ್ಛಿಸುತ್ತಿದ್ದರೆ ಅಸಾಧಾರಣವಾದ ಕ್ಯಾಮೆರಾ (Camera) ತಂತ್ರಜ್ಞಾನದೊಂದ ಸ್ಮಾರ್ಟ್​ಫೋನ್​ಗಳಿಗೆ ಹೆಚ್ಚು ಖರ್ಚು ಮಾಡಬೇಕಿಲ್ಲ. ನಾವು ನಿಮಗೆ ಕೈಗೆಟುಕುವ ದರದಲ್ಲಿರುವ ಸ್ಮಾರ್ಟ್​ಫೋನ್​ಗಳನ್ನು ನಿಮ್ಮ ಮುಂದಿಡುತ್ತಿದ್ದೇವೆ. ಫ್ಲಿಪ್​ಕಾರ್ಟ್​ನಲ್ಲಿ (Flipkart) 35,000 ರೂಪಾಯಿಗಿಂತಲೂ ಕಡಿಮೆ ಬೆಲೆಯಲ್ಲಿ ಲಭ್ಯವಿರುವ ಅತ್ಯುತ್ಕೃಷ್ಟವಾದ ಕ್ಯಾಮೆರಾ ತಂತ್ರಜ್ಞಾನವನ್ನು ಹೊಂದಿರುವ ಐದು ಸ್ಮಾರ್ಟ್​ಫೋನ್​ಗಳ ಪಟ್ಟಿ ಇಲ್ಲಿದೆ.

ಸ್ಯಾಮ್​ಸಂಗ್ ಗ್ಯಾಲಕ್ಸಿ F54 5G:

ಗ್ಯಾಲಕ್ಸಿ F54 5G ವಿಶೇಷತೆಯೆಂದರೆ ಆಸ್ಟ್ರೋಲ್ಯಾಪ್ಸ್ ವೈಶಿಷ್ಟ್ಯತೆ. ಅಂದರೆ, ಈ ಹಿಂದೆಂದೂ ಫೋಟೋಗಳನ್ನು ತೆಗೆಯದ ರೀತಿಯಲ್ಲಿ ರಾತ್ರಿ ವೇಳೆಯಲ್ಲಿ ಆಗಸದ ಸೌಂದರ್ಯವನ್ನು ಮತ್ತು ರಾತ್ರಿಯ ಸುಂದರವಾದ ವಾತಾವರಣವನ್ನು ಇದರಲ್ಲಿ ಸೆರೆ ಹಿಡಿಯಬಹುದಾಗಿದೆ. ಕಡಿಮೆ ಬೆಳಕಿನಲ್ಲಿಯೂ ಪ್ರಖರವಾದ ರೀತಿಯಲ್ಲಿ ಫೋಟೋಗಳನ್ನು ಕ್ಲಿಕ್ಕಿಸಬಹುದಾದ ನೈಟೋಗ್ರಫಿ ವೈಶಿಷ್ಟ್ಯತೆ ಇದರಲ್ಲಿದೆ. ಇದಲ್ಲದೇ, 108MP (OIS)ನೊಂದಿಗೆ ನೋ ಶೇಕ್ ಕ್ಯಾಮೆರಾ ಸೆಟ್ಟಿಂಗ್ ನೊಂದಿಗೆ ಹೈ ರೆಸಲೂಶನ್​ನಲ್ಲಿ ಫೋಟೋ ಸೆರೆ ಹಿಡಿಯಬಹುದು. ಸಿಂಗಲ್ ಟೇಕ್ ವೈಶಿಷ್ಟ್ಯತೆಯನ್ನು ಒಳಗೊಂಡಿದ್ದು, ಕ್ಯಾಮೆರಾ ಹಿಂದೆ ಎಐ ಇಂಜಿನ್​ಗಳಿಗೆ ಶಕ್ತಿಯನ್ನು ತುಂಬುತ್ತದೆ. ಇದರಿಂದ ಗ್ರಾಹಕರು ಒಂದೇ ಶಾಟ್​ನಲ್ಲಿ 4 ವಿಡಿಯೋಗಳು ಮತ್ತು 4 ಫೋಟೋಗಳನ್ನು ಸೆರೆಹಿಡಿಯಲು ಸಾಧ್ಯವಾಗುತ್ತದೆ.

ಗೂಗಲ್ ಪಿಕ್ಸೆಲ್ 6a:

Google Pixel 6aಯಲ್ಲಿ ಫೇಸ್ ಅನ್ ಬ್ಲರ್ ಎಂಬ ಫೀಚರ್ ಲಭ್ಯವಿದ್ದು, ಇದು ಬ್ಲರ್ ಆಗಿರುವ ಮುಖಗಳನ್ನು ಶಾರ್ಪರ್ ಆಗಿ ಕಾಣುವಂತೆ ಮಾಡುತ್ತದೆ. ಇದಲ್ಲದೇ, ರಿಯಲ್ ಟೋನ್ ಇದರಲ್ಲಿದ್ದು, ವಿವಿಧ ಚರ್ಮದ ಬಣ್ಣದವರ ನಿಖರವಾದ ಸುಂದರ ಫೋಟೋಗಳನ್ನು ತೆಗೆಯಲು ಸಹಕಾರಿಯಾಗಿದೆ. ಕ್ಯಾಮೆರಾದಲ್ಲಿರುವ ಮ್ಯಾಜಿಕ್ ಎರೇಸರ್ ಸಾಧನವು ನಿಮ್ಮನ್ನು ಬೆರಗಾಗಿಸುತ್ತದೆ.

ಇದನ್ನೂ ಓದಿ
Image
iQOO Neo 7 Pro: ಭಾರತದಲ್ಲಿ ಬಿಡುಗಡೆ ಆಯಿತು ಐಕ್ಯೂ ನಿಯೋ 7 ಪ್ರೊ ಸ್ಮಾರ್ಟ್​ಫೋನ್: ಗೇಮಿಂಗ್ ಪ್ರಿಯರು ಫಿದಾ
Image
Jio Bharat 4G: ಯಾವುದೇ ಸೂಚನೆಯಿಲ್ಲದೆ ಕೇವಲ 999 ರೂ. ಗೆ ಜಿಯೋ ಭಾರತ್ 4G ಫೋನ್ ಬಿಡುಗಡೆ ಮಾಡಿದ ಜಿಯೋ
Image
Driving Licence: ಭಾರತದಲ್ಲಿ ಡ್ರೈವಿಂಗ್ ಲೈಸೆನ್ಸ್‌ಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವುದು ಹೇಗೆ?
Image
Threads App: ಸಮಸ್ಯೆಗಳ ತೊಟ್ಟಿಯಾದ ಟ್ವಿಟ್ಟರ್: ಗುರುವಾರ ಮೆಟಾದಿಂದ ಟ್ವಿಟ್ಟರ್ ಮಾದರಿಯ ಥ್ರೆಡ್ಸ್‌ ಆ್ಯಪ್ ಬಿಡುಗಡೆ

Nothing Phone 2: ಬಿಡುಗಡೆಗೂ ಮುನ್ನ ಬುಕಿಂಗ್ ಮಾಡಿದರೆ ₹2,000 ಸ್ಪೆಶಲ್ ಡಿಸ್ಕೌಂಟ್

ರಿಯಲ್ ಮಿ 11 ಪ್ರೊ + 5G:

ಇತ್ತೀಚೆಗಷ್ಟೆ ಬಿಡುಗಡೆ ಆದ ಈ ಸ್ಮಾರ್ಟ್​ಫೋನ್ 200 ಮೆಗಾ ಪಿಕ್ಸೆಲ್ ಸೂಪರ್ ಝೂಂ ಕ್ಯಾಮೆರಾ ಹೊಂದಿದೆ. ಮೊಟ್ಟ ಮೊದಲ 4X ಲಾಸ್ ಲೆಸ್ ಝೂಂ, 2X ಪೋಟ್ರೇಟ್ ಮೋಡ್ ಮತ್ತು ಆಟೋ ಝೂಂ ತಂತ್ರಜ್ಞಾನದಂತಹ ಅತ್ಯುತ್ಕೃಷ್ಠವಾದ ವೈಶಿಷ್ಟ್ಯತೆಗಳನ್ನು ಹೊಂದಿದೆ. ಇದಲ್ಲದೇ, ಸೂಪರ್ OIS, ಸ್ಟ್ರೀಟ್ ಫೋಟೋಗ್ರಾಫಿ ಮೋಡ್, ನೈಟ್ ಮೋಡ್ ನಂತಹ ವೈಶಿಷ್ಟ್ಯತೆಗಳನ್ನು ಹೊಂದಿದ್ದು, ನೈಟ್ ಮೋಡ್​ನಲ್ಲಿರುವ ಮೂನ್ ಮೋಡ್, ಸ್ಟಾರ್ರಿ ಸ್ಕೈ ಮೋಡ್ ಹಾಗೂ ಸೂಪರ್ ನೈಟ್ ಸ್ಕೇಪ್ ವೈಶಿಷ್ಟ್ಯತೆಗಳು ಅದ್ಭುತವಾಗಿದೆ.

ವಿವೋ V27 5G:

ವಿವೋ V27 5G ಸ್ಮಾರ್ಟ್​ಫೋನ್ ರಾತ್ರಿ ವೇಳೆಯಲ್ಲಿ ಫೋಟೋಗಳನ್ನು ಉನ್ನತ ಗುಣಮಟ್ಟದಲ್ಲಿ ತೆಗೆದುಕೊಳ್ಳುವಂತಹ ವೈಶಿಷ್ಟ್ಯತೆಗಳನ್ನು ಹೊಂದಿದೆ. ಔರಾ ಲೈಟ್ ನಿಂದ ಮೇಲ್ದರ್ಜೆಗೇರಿಸಲ್ಪಟ್ಟಿರುವ ನೈಟ್ ಪೋಟ್ರೇಟ್ ವೈಶಿಷ್ಟ್ಯತೆಯೊಂದಿಗೆ ನಿಮ್ಮ ಫೋಟೋಗಳನ್ನು ಹಗಲಿನ ವೇಳೆಯಲ್ಲಿ ತೆಗೆದ ರೀತಿಯಲ್ಲಿಯೇ ಪ್ರಖರವಾಗಿ ಮತ್ತು ಸ್ಪಷ್ಟವಾಗಿ ಕಾಣಿಸುವಂತೆ ಮಾಡುತ್ತದೆ. ಸೋನಿ ಐಎಂಎಕ್ಸ್766ವಿ ಸೆನ್ಸಾರ್ ಅಳವಡಿಸಲಾಗಿದೆ. ಇದಲ್ಲದೇ, ವೆಡ್ಡಿಂಗ್ ಸ್ಟೈಲ್ ಪೋಟ್ರೇಟ್ ವೈಶಿಷ್ಟ್ಯತೆಯು ವಾರ್ಮ್, ಪಾಸ್ಟೆಲ್ ಟೋನ್ಸ್ ಅನ್ನು ಒಳಗೊಂಡಿದ್ದು, ಇದರಲ್ಲಿ ಸಾಫ್ಟ್ ಕಾಂಟ್ರಾಸ್ಟ್ ಗೋಲ್ಡ್ ಮತ್ತು ಪಿಂಕ್ ಟೋನ್​ಗಳು ಇದೆ.

ಒಪ್ಪೊ ರೆನೋ 8T 5G:

ತನ್ನ ಅತ್ಯಾಧುನಿಕ 108ಎಂಪಿ ಪೋಟ್ರೇಟ್ ಕ್ಯಾಮೆರಾ, ಪ್ರೀಮಿಯಂ ಮೈಕ್ರೋಲೆನ್ಸ್, 2ಎಂಪಿ ಡೆಪ್ತ್ ಕ್ಯಾಮೆರಾ ಮತ್ತು 32 ಎಂಪಿ ಸೆಲ್ಫಿ ಕ್ಯಾಮೆರಾದೊಂದಿಗೆ \ಈ ಮೊಬೈಲ್ ಬರುತ್ತದೆ. 108 ಎಂಪಿ ಅಲ್ಟ್ರಾ-ಹೈ ರೆಸಲೂಶನ್ ಮತ್ತು ನೊನಾಪಿಕ್ಸೆಲ್ ಪ್ಲಸ್ ತಂತ್ರಜ್ಞಾನವು ಫೋಟೋವನ್ನು ಪ್ರತಿ ಕ್ಷಣವನ್ನು ಸರಿಸಾಟಿಯಿಲ್ಲದ ರೀತಿಯಲ್ಲಿ ಸೆರೆಹಿಡಿಯುತ್ತದೆ. ಬೆರಗಾಗುವಂತಹ ಫೋಟೋಗಳ ಗುಣಮಟ್ಟವನ್ನು ನೀಡುತ್ತದೆ. ಇದಿಷ್ಟೇ ಅಲ್ಲದೇ, ಬೊಕ್ಹೆ ಫ್ಲೇರ್ ಪೋಟ್ರೇಟ್ ವೈಶಿಷ್ಟ್ಯತೆಯು ಡಿಎಸ್ಎಲ್ಆರ್ ರೀತಿಯ ಬ್ಯಾಕ್ ಗ್ರೌಂಡ್ ಬ್ಲರ್ ಅನ್ನು ಒದಗಿಸುವ ಮೂಲಕ ನಿಮ್ಮನ್ನು ಫೋಟೋಗಳಲ್ಲಿ ಅತ್ಯುತ್ತಮವಾಗಿ ಕಾಣುವಂತೆ ಮಾಡುತ್ತದೆ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:47 pm, Tue, 4 July 23

ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ