iQOO Neo 7 Pro: ಭಾರತದಲ್ಲಿ ಬಿಡುಗಡೆ ಆಯಿತು ಐಕ್ಯೂ ನಿಯೋ 7 ಪ್ರೊ ಸ್ಮಾರ್ಟ್‌ಫೋನ್: ಗೇಮಿಂಗ್ ಪ್ರಿಯರು ಫಿದಾ
ನಿಯೋ 7 ಪ್ರೊ ಕಳೆದ ವರ್ಷ ಬಿಡುಗಡೆ ಆಗಿ ಸದ್ದು ಮಾಡಿದ್ದ ಐಕ್ಯೂ ನಿಯೋ 7 ಸರಣಿಯ (iQOO Neo 7 Series) ಮುಂದುವರೆದ ಭಾಗವಾಗಿದೆ. ಹಾಗಾದರೆ ಈ ಫೋನಿನ ಬೆಲೆ ಎಷ್ಟು?, ಏನೆಲ್ಲ ಪೀಚರ್ಸ್ ಇದೆ? ಎಂಬುದನ್ನು ನೋಡೋಣ.
ಭಾರತದಲ್ಲಿ ಬಿಡುಗಡೆಗು ಮುನ್ನ ಸಾಕಷ್ಟು ಕುತೂಹಲ ಕೆರಳಿಸಿದ್ದ ವಿವೋ ಒಡೆತನದ ಹೊಸ ಐಕ್ಯೂ ನಿಯೋ 7 ಪ್ರೊ (iQOO Neo) ಸ್ಮಾರ್ಟ್‌ಫೋನ್ ಇದೀಗ ದೇಶದಲ್ಲಿ ಬಿಡುಗಡೆ ಆಗಿದೆ. ಗೇಮಿಂಗ್ ಪ್ರಿಯರಿಗೆ ಈ ಫೋನ್ ಹೇಳಿ ಮಾಡಿಸಿದಂತಿದ್ದು, ಸ್ನಾಪ್‌ಡ್ರಾಗನ್ 8+ ಜೆನ್ 1 ಪ್ರೊಸೆಸರ್ ಅಳವಡಿಸಲಾಗಿದೆ. ನಿಯೋ 7 ಪ್ರೊ ಕಳೆದ ವರ್ಷ ಬಿಡುಗಡೆ ಆಗಿ ಸದ್ದು ಮಾಡಿದ್ದ ಐಕ್ಯೂ ನಿಯೋ 7 ಸರಣಿಯ (iQOO Neo 7 Series) ಮುಂದುವರೆದ ಭಾಗವಾಗಿದೆ. ಹಾಗಾದರೆ ಈ ಫೋನಿನ (Phone) ಬೆಲೆ ಎಷ್ಟು?, ಏನೆಲ್ಲ ಪೀಚರ್ಸ್ ಇದೆ? ಎಂಬುದನ್ನು ನೋಡೋಣ.
ಬೆಲೆ ಎಷ್ಟು?:
ಐಕ್ಯೂ ನಿಯೋ 7 ಪ್ರೊ ಭಾರತದಲ್ಲಿ ಒಟ್ಟು ಎರಡು ಸ್ಟೋರೇಜ್ ಆಯ್ಕೆಯಲ್ಲಿ ಬಿಡುಗಡೆ ಆಗಿದೆ. ಇದರ 8GB RAM + 12GB ಸ್ಟೋರೇಜ್ ಆಯ್ಕೆಗೆ 34,999 ರೂ. ನಿಗದಿ ಮಾಡಲಾಗಿದೆ. ಅಂತೆಯೆ 128GB RAM + 256GB ವೇರಿಯೆಂಟ್ಗೆ 37,999 ರೂ. ಇದೆ. ಇದು ಫಿಯರ್ಲೆಸ್ ಫ್ಲೇಮ್ ಮತ್ತು ಡಾರ್ಕ್ ಸ್ಟೋರ್ಮ್ ಎರಡು ಬಣ್ಣಗಳ ಆಯ್ಕೆಯಲ್ಲಿ ಲಭ್ಯವಿದೆ. ಈ ಫೋನ್ ಜುಲೈ 15, 16 ಅಮೆಜಾನ್ ಪ್ರೈಮ್ ಡೇ ಸೇಲ್ನಂದು ಮಾರಾಟ ಕಾಣಲಿದೆ. ಮೊದಲ ಸೇಲ್ ಪ್ರಯುಕ್ತ ಮೂಲಬೆಲೆಯಲ್ಲಿ ರಿಯಾಯಿತಿ, ಬ್ಯಾಂಕ್ ಆಫರ್ಗಳೆಲ್ಲ ಲಭ್ಯವಿರಲಿದೆ.
Tecno Pova 5: ಬಜೆಟ್ ದರಕ್ಕೆ ಬೆಸ್ಟ್ ಹೊಸ ಟೆಕ್ನೋ ಫೋನ್ ಲಾಂಚ್
The #iQOONeo7Pro is finally here! Get this ultimate, power-packed device at an incredible price of just ₹31,999*. ? Hurry up and pre-book now!
Know more: https://t.co/nbrZ3nnvXL#AmazonSpecials #PowerToWin pic.twitter.com/IGahAh5UMc
— iQOO India (@IqooInd) July 4, 2023
ಫೀಚರ್ಸ್ ಏನಿದೆ?:
ಐಕ್ಯೂ ನಿಯೋ 7 ಪ್ರೊ ಸ್ಮಾರ್ಟ್‌ಫೋನ್ 2400×1080 ಪಿಕ್ಸೆಲ್ ರೆಸಲೂಷನ್ ಸಾಮರ್ಥ್ಯದ 6.78 ಇಂಚಿನ ಅಮೋಲೆಡ್ ಡಿಸ್‌ಪ್ಲೇ ನೀಡಲಾಗಿದ್ದು, 120Hz ರಿಫ್ರೆಶ್ ರೇಟ್ ಹೊಂದಿದೆ. ಇದರಿಂದ ಸ್ಮಾರ್ಟ್‌ಫೋನ್ ಡಿಸ್ ಪ್ಲೇ ನಯವಾಗಿ ಇರಲಿದೆ. ಬಲಿಷ್ಠವಾದ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 8+ ಜೆನ್ 1 ಪ್ರೊಸೆಸರ್ ಮೂಲಕ ಕಾರ್ಯನಿರ್ವಹಿಸುತ್ತಿದ್ದು, ಇದು ಗೇಮಿಂಗ್ಗೆ ಹೇಳಿ ಮಾಡಿಸಿದ್ದಾಗಿದೆ. ಆಂಡ್ರಾಯ್ಡ್ 13 ಒಎಸ್ ನೀಡಲಾಗಿದೆ.
ಕ್ಯಾಮೆರಾ ವಿಚಾರಕ್ಕೆ ಬರುವುದಾದರೆ ಈ ಫೋನ್ ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್ (OIS) ಟೆಕ್ನಾಲಜಿ ಜೊತೆಗೆ 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾವನ್ನು ಹೊಂದಿದೆ. 8 ಮೆಗಾ ಪಿಕ್ಸೆಲ್ನ ವೈಡ್-ಆ್ಯಂಗಲ್ ಲೆನ್ಸ್ ಮತ್ತು ಎರಡು ಮೆಗಾ ಪಿಕ್ಸೆಲ್ನ ಮಾಕ್ರೊ ಲೆನ್ಸ್ ಅಳವಡಿಸಲಾಗಿದೆ. ಮುಂಭಾಗ ಸೆಲ್ಫಿ ಮತ್ತು ವಿಡಿಯೋ ಕರೆಗಳಿಗಾಗಿ 16 ಮೆಗಾ ಪಿಕ್ಸೆಲ್ನ ಹೈ-ಕ್ವಾಲಿಟಿ ಲೆನ್ಸ್ ನೀಡಲಾಗಿದೆ. ಕ್ಯಾಮೆರಾದಲ್ಲಿ ಸ್ಪೋರ್ಟ್ಸ್, ನೈಟ್, ಪೋಟ್ರೆಟ್ ಸೇರಿದಂತೆ ಫೋಟೋಗ್ರಫಿಗಾಗಿ ಅನೇಕ ಆಯ್ಕೆ ಸೇರಿಸಲಾಗಿದೆ.
120W ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ 5000mAhಸಾಮರ್ಥ್ಯದ ಬ್ಯಾಟರಿಯಿಂದ ಬೆಂಬಲಿತವಾಗಿದೆ. ಕಂಪನಿ ಹೇಳಿರುವ ಪ್ರಕಾರ ಇದು ಶೇ. 1 ರಿಂದ ಶೇ. 100 ರಷ್ಟು ಚಾರ್ಜ್ ಕೇವಲ 25 ನಿಮಿಷಗಳಲ್ಲಿ ಆಗುತ್ತಂತೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ 5G ಸಪೋರ್ಟ್ ಮಾಡಲಿದೆ. ಉಳಿದಂತೆ 4G LTE, Wi-Fi 6, ಬ್ಲೂಟೂತ್ v5.2 ಮತ್ತು USB ಟೈಪ್-C ಪೋರ್ಟ್ ನೀಡಲಾಗಿದೆ. ಇದರಲ್ಲಿ ಇನ್-ಡಿಸ್‌ಪ್ಲೇ ಫಿಂಗರ್‌ಪ್ರಿಂಟ್ ಸೆನ್ಸಾರ್ ಸೇರಿದಂತೆ ಇತ್ತೀಚೆಗಿನ ಎಲ್ಲ ಆಯ್ಕೆಗಳನ್ನು ಅಳವಡಿಸಲಾಗಿದೆ.
ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ