- Kannada News Photo gallery 108 and 200 mega pixel camera phones here are the top camera smartphones in India
Best Camera Phones: ಈ ಸ್ಮಾರ್ಟ್ಫೋನ್ಗಳ ಬೆಲೆ ಕೊಂಚ ದುಬಾರಿ, ಆದರೆ ಕ್ಯಾಮೆರಾ ಮಾತ್ರ ಅದ್ಭುತ
ಈಗೀಗ 200 ಮೆಗಾ ಪಿಕ್ಸೆಲ್ ಕ್ಯಾಮೆರಾ ಇರುವ ಫೋನ್ಗಳು ಕೂಡ ಬಿಡುಗಡೆ ಆಗುತ್ತಿದೆ. ಹಾಗಾದ್ರೆ ನೀವು ಕೊಂಚ ಹೆಚ್ಚು ಹಣ ಕೊಟ್ಟು ಖರೀದಿಸಬಹುದಾದ ಉತ್ತಮ ಕ್ಯಾಮೆರಾದ ಅತ್ಯುತ್ತಮ ಸ್ಮಾರ್ಟ್ಫೋನ್ಗಳು ಯಾವುವು ಎಂಬುದನ್ನು ನೋಡೋಣ.
Updated on:Jul 01, 2023 | 4:36 PM

ಭಾರತೀಯ ಸ್ಮಾರ್ಟ್ಫೋನ್ ಮಾರುಕಟ್ಟೆಯಲ್ಲಿ ಆಕರ್ಷಕ ಕ್ಯಾಮೆರಾ, ಉತ್ತಮ ಬ್ಯಾಟರಿ ಇರುವ ಫೋನ್ ರಿಲೀಸ್ ಆಯಿತು ಎಂದಾದರೆ ಎಗ್ಗಿಲ್ಲದೆ ಸೇಲ್ ಆಗುತ್ತದೆ. ಭಾರತದ ಮಾರ್ಕೆಟ್ನಲ್ಲಿ 108 ಮೆಗಾಫಿಕ್ಸೆಲ್ ಸ್ಮಾರ್ಟ್ಫೋನ್ಗೆ ಭರ್ಜರಿ ಬೇಡಿಕೆ ಇದೆ.

ಈಗೀಗ 200 ಮೆಗಾ ಪಿಕ್ಸೆಲ್ ಕ್ಯಾಮೆರಾ ಇರುವ ಫೋನ್ಗಳು ಕೂಡ ಬಿಡುಗಡೆ ಆಗುತ್ತಿದೆ. ಹಾಗಾದ್ರೆ ನೀವು ಕೊಂಚ ಹೆಚ್ಚು ಹಣ ಕೊಟ್ಟು ಖರೀದಿಸಬಹುದಾದ ಉತ್ತಮ ಕ್ಯಾಮೆರಾದ ಅತ್ಯುತ್ತಮ ಸ್ಮಾರ್ಟ್ಫೋನ್ಗಳು ಯಾವುವು ಎಂಬುದನ್ನು ನೋಡೋಣ.

ಗೂಗಲ್ ಪಿಕ್ಸೆಲ್ 7 5G: ಈ ಸ್ಮಾರ್ಟ್ಫೋನ್ನ 8GB RAM ಮತ್ತು 256GB ಇಂಟರ್ ಸ್ಟೋರೇಜ್ ಸಾಮರ್ಥ್ಯವನ್ನು 46,900 ರೂ. ಆಸುಪಾಸಿನಲ್ಲಿ ಖರೀದಿಸಬಹುದು. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್ ಸೆನ್ಸಾರ್, 10.8 ಮೆಗಾಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾ ನೀಡಲಾಗಿದೆ.

ಸ್ಯಾಮ್ಸಂಗ್ ಗ್ಯಾಲಕ್ಸಿ S22 ಆಲ್ಟ್ರಾ: 1,09,999 ರೂ. ಬೆಲೆ ಹೊಂದಿರುವ ಈ ಫೋನಿನ ಕ್ಯಾಮೆರಾ ಮಾತ್ರ ಅದ್ಭುತವಾಗಿದೆ. ಇದರಲ್ಲಿ 108MP+ 12MP+ 10MP+ 10MP ಸ್ಪೋರ್ಟ್ಸ್ ಕ್ವಾಡ್ ಕ್ಯಾಮೆರಾ ಸೆಟಪ್ ನೀಡಲಾಗಿದೆ. 40 ಮೆಗಾಫಿಕ್ಸೆಲ್ನ ಸೆಲ್ಫೀ ಕ್ಯಾಮೆರಾ ಕೂಡ ಇದೆ. 100X ಜೂಮ್ ಫೀಚರ್ ಇದರ ಹೈಲೇಟ್ ಆಗಿದೆ.

ಮೋಟೋ ಎಡ್ಜ್ 20 ಫ್ಯೂಶನ್: ಈ ಸ್ಮಾರ್ಟ್ಫೋನ್ನಲ್ಲಿ 108 ಮೆಗಾಫಿಕ್ಸೆಲ್ನ ಕ್ಯಾಮೆರಾ ನೀಡಲಾಗಿದೆ. ಇದರ ಜೊತೆಗೆ 8 ಮೆಗಾಫಿಕ್ಸೆಲ್ ಮತ್ತು 2 ಮೆಗಾಫಿಕ್ಸೆಲ್ ಕ್ಯಾಮೆರಾ ಕೂಡ ಇದೆ. ಸೆಲ್ಫೀಗಾಗಿ 32 ಮೆಗಾಫಿಕ್ಸೆಲ್ ಕ್ಯಾಮೆರಾ ನೀಡಲಾಗಿದೆ. ಇದರ ಬೆಲೆ 18,999 ರೂ.

ಐಫೋನ್ 13: 128GB ಸ್ಟೋರೇಜ್ ಆಯ್ಕೆಯ ಆ್ಯಪಲ್ ಐಫೋನ್ 13 ಸದ್ಯ ಫ್ಲಿಪ್ಕಾರ್ಟ್ನಲ್ಲಿ ಕೇವಲ 60,999 ರೂ. ಗೆ ಮಾರಾಟ ಆಗುತ್ತಿದೆ. ಇದರಲ್ಲಿರುವ ಡ್ಯುಯೆಲ್ ರಿಯರ್ ಕ್ಯಾಮೆರಾ 12 ಮೆಗಾಫಿಕ್ಸೆಲ್ನಲ್ಲಿದೆ. ಸೆಲ್ಫೀ ಕ್ಯಾಮೆರಾ ಕೂಡ 12 ಮೆಗಾಫಿಕ್ಸೆಲ್ನಿಂದ ಕೂಡಿದೆ. ನೀವು ಕ್ಯಾಮೆರಾ ಫೋನ್ ಹುಡುಕುತ್ತಿದ್ದರೆ ಇದೊಂದು ಅತ್ಯುತ್ತಮ ಆಯ್ಕೆಯಾಗಿದೆ.

ರಿಯಲ್ ಮಿ 11 ಪ್ರೊ+ 5G: ಈ ಫೋನ್ ಬರೋಬ್ಬರಿ 200 ಮೆಗಾ ಪಿಕ್ಸೆಲ್ನ ಸ್ಯಾಮ್ಸಂಗ್ ISOCELL HP3 ಸೆನ್ಸಾರ್ನಿಂದ ಕೂಡಿದೆ. ಇದರಿಂದ ದೂರದ ವರೆಗೆ ಸುಲಭವಾಗಿ ಝೂಮ್ ಮಾಡಬಹುದಂತೆ. ಇದು ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್ (OIS) ಟೆಕ್ನಾಲಜಿಯನ್ನು ಹೊಂದಿದೆ. ಇದರ 8GB RAM ಮತ್ತು 256GB ಸ್ಟೋರೇಜ್ ವೇರಿಯಂಟ್ ದರವು 27,999 ರೂ. ಆಗಿದೆ.
Published On - 4:30 pm, Sat, 1 July 23



















