ಈ ಹಿಂದೆ ಘೋಷಣೆ ಮಾಡಿದಂತೆ ಮೇ 15ನೇ ತಾರೀಕಿನ ಗಡುವಿನಂದೇ ಇನ್ಸ್ಟಂಟ್ ಮೆಸೇಜಿಂಗ್ ಪ್ಲಾಟ್ಫಾರ್ಮ್ ಸಂಪೂರ್ಣವಾಗಿ ಬಳಕೆದಾರರಿಗೆ ದೊರೆಯದಿರುವಂತೆ ಆಗುವುದಿಲ್ಲ ಎಂದು ವಾಟ್ಸಾಪ್ (WhatsApp) ಶುಕ್ರವಾರದಂದು ಸ್ಪಷ್ಟಪಡಿಸಿದೆ. ಖಾಸಗಿತನದ ನೀತಿ ಅಪ್ಡೇಟ್ ಆಗಿಲ್ಲ ಎಂಬ ಕಾರಣಕ್ಕೆ ಯಾವ ಗ್ರಾಹಕರಿಗೂ ವಾಟ್ಸಾಪ್ ಕಾರ್ಯ ನಿರ್ವಹಣೆ ನಿಲ್ಲುವುದಿಲ್ಲ. ಆದರೆ ಅಪ್ಲಿಕೇಷನ್ನಲ್ಲಿ ದೊರೆಯುವ ಸೇವೆಗಳು ಮಿತಿಗೊಳ್ಳಬಹುದು. ಫೇಸ್ಬುಕ್ ಮಾಲೀಕತ್ವದ ಅಪ್ಲಿಕೇಷನ್ ಆದ ವಾಟ್ಸಾಪ್, ಬಳಕೆದಾರರಿಗೆ ಹೊಸ ಖಾಸಗಿತನದ ನೀತಿಗೆ ಸಮ್ಮತಿ ಸೂಚಿಸುವಂತೆ ನೆನಪಿಸುವುದನ್ನು ಮುಂದುವರಿಸುತ್ತದೆ. ವಾಟ್ಸಾಪ್ ಹೇಳುವ ಪ್ರಕಾರ, ಹಲವು ವಾರಗಳ ನಂತರವೂ ನೆನಪು ಮಾಡಿಕೊಡುವುದು ನಿರಂತರವಾಗಿ ಮುಂದುವರಿಯಲಿದೆ.
ಒಂದು ಸಲ ಬಳಕೆದಾರರಿಗೆ ಪದೇಪದೇ ನೆನಪು ಮಾಡಿಸಲು ಆರಂಭವಾದರೆ, ಆ ಗ್ರಾಹಕರು ಅಪ್ಡೇಟ್ಗೆ ಸಮ್ಮತಿ ಸೂಚಿಸುವ ತನಕ ವಾಟ್ಸಾಪ್ನಲ್ಲಿ ಸೀಮಿತ ಕಾರ್ಯನಿರ್ವಹಣೆ ಮಾತ್ರ ಸಾಧ್ಯವಾಗುತ್ತದೆ. ಇದು ಎಲ್ಲ ಬಳಕೆದಾರರಿಗೂ ಒಂದೇ ಸಲಕ್ಕೆ ಆಗುವುದಿಲ್ಲ ಎಂದು ವಾಟ್ಸಾಪ್ ತಿಳಿಸಿದೆ. ವಾಟ್ಸಾಪ್ ಬಳಕೆದಾರರಿಗೆ ಚಾಟ್ ಲಿಸ್ಟ್ ಬಳಕೆ ಸಾಧ್ಯವಾಗದಿರಬಹುದು. ಆದರೆ ಒಳಬರುವ ಕರೆಗಳು ಮತ್ತು ವಿಡಿಯೋ ಕಾಲ್ಗಳಿಗೆ ಉತ್ತರಿಸುವುದಕ್ಕೆ ಸಾಧ್ಯವಿದೆ. ಒಂದು ವೇಳೆ ಬಳಕೆದಾರರು ನೋಟಿಫಿಕೇಷನ್ ಎನೇಬಲ್ ಮಾಡಿದ್ದಲ್ಲಿ ಅದರ ಮೂಲಕ ಸಂದೇಶ ಓದಲು ಅಥವಾ ಪ್ರತಿಕ್ರಿಯಿಸಲು ಸಾಧ್ಯ. ಅಥವಾ ಮಿಸ್ಡ್ ಫೋನ್ ಅಥವಾ ವಿಡಿಯೋ ಕಾಲ್ ಪುನಃ ಕಾಲ್ ಮಾಡಲು ಸಾಧ್ಯ.
ಇನ್ನೂ ಕೆಲ ವಾರಗಳು ಕಳೆದ ಮೇಲೆ ಬಳಕೆದಾರರಿಗೆ ಒಳಬರುವ ಕರೆಗಳು ಅಥವಾ ನೋಟಿಫಿಕೇಷನ್ಗಳು ಸ್ವೀಕರಿಸಲು ಆಗಲ್ಲ. ವಾಟ್ಸಾಪ್ನಿಂದ ಅವರ ಫೋನ್ಗೆ ಸಂದೇಶಗಳು ಮತ್ತು ಕರೆಗಳನ್ನು ಕಳುಹಿಸುವುದು ನಿಲ್ಲಿಸುತ್ತದೆ. ಖಾತೆ ಡಿಲೀಟ್ ಆಗಿಮ ಮೆಸೇಜ್ ಹಿಸ್ಟರಿ ಅಳಸಿಹೋಗುತ್ತದೆ. ಎಲ್ಲ ಇತರ ವಾಟ್ಸಾಪ್ ಗ್ರೂಪ್ನಿಂದ ತೆಗೆಯಲಾಗುತ್ತದೆ. ಜತೆಗೆ ಅವರ ವಾಟ್ಸಾಪ್ ಬ್ಯಾಕ್ಅಪ್ ಕೂಡ ಅಳಿಸಲಾಗುತ್ತದೆ.
ಇದನ್ನೂ ಓದಿ: ವಾಟ್ಸಾಪ್ ಖಾಸಗಿತನ ನಿಯಮಾವಳಿಗಳ ಅಪ್ಡೇಟ್ಗೆ ದೆಹಲಿ ಹೈಕೋರ್ಟ್ನಲ್ಲಿ ತಡೆ ಕೋರಿದ ಸರ್ಕಾರ
(If WhatsApp privacy policy not accepted by users by May 15 deadline, what will happen? Here are the details)