
ಬೆಂಗಳೂರು (ಏ. 29): ಭಾರತದಲ್ಲಿ ಸದ್ಯ 4 ಟೆಲಿಕಾಂ ಕಂಪನಿಗಳು (Telecom Company) ತನ್ನ ಪ್ರಾಬಲ್ಯ ಹೊಂದಿವೆ. ಇದರಲ್ಲಿ ಜಿಯೋ, ಏರ್‌ಟೆಲ್, ವಿ ಮತ್ತು ಬಿಎಸ್ಎನ್ಎಲ್ ಸೇರಿವೆ. ಈ ಜಾಲಗಳ ಮೂಲಕ ಭಾರತದ ಜನರು ಪರಸ್ಪರ ಸಂಪರ್ಕ ಸಾಧಿಸಲು ಸಾಧ್ಯವಾಗುತ್ತದೆ. ಆದರೆ ನೆರೆಯ ದೇಶಗಳ ಜನರು ಯಾವ ನೆಟ್‌ವರ್ಕ್ ಬಳಸುತ್ತಾರೆ ಎಂದು ನೀವು ಎಂದಾದರೂ ಯೋಚಿಸಿದ್ದೀರಾ?. ಅವರು ಪರಸ್ಪರ ಹೇಗೆ ಸಂಪರ್ಕ ಸಾಧಿಸುತ್ತಾರೆ. ಪಾಕಿಸ್ತಾನದಲ್ಲಿ ಯಾವ ಟೆಲಿಕಾಂ ಕಂಪನಿ ಹೆಚ್ಚು ಬಳಕೆದಾರರನ್ನು ಹೊಂದಿದೆ? ಅಲ್ಲಿ ರೀಚಾರ್ಜ್ ಮಾಡುವ ಪ್ರಕ್ರಿಯೆ ಏನು ಮತ್ತು ಯಾವ ಅಪ್ಲಿಕೇಶನ್‌ಗಳು ರೀಚಾರ್ಜ್ ಸೌಲಭ್ಯವನ್ನು ಒದಗಿಸುತ್ತವೆ. ಈ ಕುರಿತ ಮಾಹಿತಿ ಇಲ್ಲಿದೆ.
ಜಾಝ್, ಟೆಲಿನಾರ್, ಝೋಂಗ್, ಯುಫೋನ್ ಮತ್ತು ಎಸ್‌ಸಿಒಎಂನಂತಹ ಕಂಪನಿಗಳ ನೆಟ್‌ವರ್ಕ್‌ಗಳು ಪಾಕಿಸ್ತಾನದಲ್ಲಿ ಕಾರ್ಯನಿರ್ವಹಿಸುತ್ತವೆ. ಪಾಕಿಸ್ತಾನದಲ್ಲಿ ಜಾಝ್ ಸಿಮ್ ಅನ್ನು ಹೆಚ್ಚು ಬಳಸಲಾಗುತ್ತದೆ. ಸುಮಾರು 7.3 ಕೋಟಿ ಬಳಕೆದಾರರು ಜಾಝ್ ಕಂಪನಿಯ ನೆಟ್‌ವರ್ಕ್ ಬಳಸುತ್ತಾರೆ. ಟೆಲಿನಾರ್ 4.8 ಕೋಟಿ ಬಳಕೆದಾರರನ್ನು ಹೊಂದಿದೆ. ಝೋಂಗ್ 45 ಮಿಲಿಯನ್ ಬಳಕೆದಾರರನ್ನು ಹೊಂದಿದೆ, ಎಸ್ಕಾಮ್ 16.8 ಮಿಲಿಯನ್ ಬಳಕೆದಾರರನ್ನು ಹೊಂದಿದೆ ಮತ್ತು ಯುಫೋನ್ 23 ಮಿಲಿಯನ್ ಬಳಕೆದಾರರನ್ನು ಹೊಂದಿದೆ. 2023 ರ ಅಂದಾಜಿನ ಪ್ರಕಾರ, ಪಾಕಿಸ್ತಾನದ ಒಟ್ಟು ಜನಸಂಖ್ಯೆ ಸುಮಾರು 217.5 ಮಿಲಿಯನ್.
ಪಾಕಿಸ್ತಾನ ಮೊಬೈಲ್ ಕಮ್ಯುನಿಕೇಷನ್ ಲಿಮಿಟೆಡ್ (PMCL) ಜಾಝ್ ನೆರೆಯ ದೇಶದಲ್ಲಿ ಅತಿ ಹೆಚ್ಚು ಬಳಕೆದಾರರನ್ನು ಹೊಂದಿದೆ. ಪಿಎಂಸಿಎಲ್ ಅನ್ನು ಪಾಕಿಸ್ತಾನದಲ್ಲಿ ಜಾಝ್ ಎಂದು ಕರೆಯಲಾಗುತ್ತದೆ. ಮೊಬಿಲಿಂಕ್ ಮತ್ತು ವಾರಿದ್ ಪಾಕಿಸ್ತಾನ್ ವಿಲೀನದ ಪರಿಣಾಮವಾಗಿ ಪಿಎಂಸಿಎಲ್ ಪಾಕಿಸ್ತಾನಕ್ಕೆ ಬಂದಿತು.
46 ಕೋಟಿ ಜಿಯೋ ಬಳಕೆದಾರರಿಗೆ ಬಂಪರ್ ಆಫರ್: 200 ದಿನಗಳ ವ್ಯಾಲಿಡಿಟಿಯ ಪ್ಲ್ಯಾನ್ ಬಿಡುಗಡೆ
ಪಾಕಿಸ್ತಾನದಲ್ಲಿ, ಮೊಬೈಲ್ ರೀಚಾರ್ಜ್ ಮಾಡಲು ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳು ಅಥವಾ ಮೊಬೈಲ್ ಅಪ್ಲಿಕೇಶನ್‌ಗಳನ್ನು ಬಳಸಲಾಗುತ್ತದೆ. ಇದರಲ್ಲಿ ನೀವು ಸ್ವೀಕರಿಸುವವರ ಸಂಖ್ಯೆ, ಮೊತ್ತ ಮತ್ತು ಕ್ರೆಡಿಟ್/ಡೆಬಿಟ್ ಕಾರ್ಡ್ ಅಥವಾ ಪೇಪಾಲ್ ನಂತಹ ಪಾವತಿ ವಿಧಾನವನ್ನು ಆಯ್ಕೆ ಮಾಡಬೇಕು. ರೀಚಾರ್ಜ್ ಸೌಲಭ್ಯವನ್ನು ಒದಗಿಸುವ ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳು ಮತ್ತು ಅಪ್ಲಿಕೇಶನ್‌ಗಳು – MobileRecharge, Ding, doctorSIM, BOSS Revolution, TelephonePakistan, ಮತ್ತು Recharge.com – ಮೊಬೈಲ್ ರೀಚಾರ್ಜ್ ಸೌಲಭ್ಯವನ್ನು ಒದಗಿಸುತ್ತವೆ.
ರಿಲಯನ್ಸ್ ಜಿಯೋ ಭಾರತದ ಅತ್ಯಂತ ಜನಪ್ರಿಯ ಮೊಬೈಲ್ ಅಪ್ಲಿಕೇಶನ್ ಆಗಿದೆ. ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರದ (ಡಿಸೆಂಬರ್ 2024) ವರದಿಯ ಪ್ರಕಾರ, ಜಿಯೋ ಭಾರತದಲ್ಲಿ ಸುಮಾರು 42 ಕೋಟಿ ಬಳಕೆದಾರರನ್ನು ಹೊಂದಿದೆ.
ತಂತ್ರಜ್ಞಾನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:15 pm, Tue, 29 April 25