Instagram Down: ಇನ್​ಸ್ಟಾಗ್ರಾಂ ಸರ್ವರ್ ಡೌನ್; ನಿಮಗೂ ಮೆಸೇಜ್, ವಿಡಿಯೋ ಅಪ್​ಲೋಡ್ ಆಗುತ್ತಿಲ್ಲವೇ?

ಇಂದು ಸಂಜೆಯಿಂದ ಇನ್​ಸ್ಟಾಗ್ರಾಂನಲ್ಲಿ ವಿಡಿಯೋ ಅಪ್​ಲೋಡ್ ಮಾಡಲು, ಮೆಸೇಜ್ ಕಳುಹಿಸಲು ಸಾಧ್ಯವಾಗದೆ ಲಕ್ಷಾಂತರ ಬಳಕೆದಾರರು ಪರದಾಡುತ್ತಿದ್ದಾರೆ. ಇನ್​ಸ್ಟಾಗ್ರಾಂ ಸ್ಥಗಿತಗೊಂಡ ನಂತರ, ಇಲ್ಲಿಯವರೆಗೆ 2,000ಕ್ಕೂ ಹೆಚ್ಚು ರಿಪೋರ್ಟ್​ಗಳನ್ನು ಸಲ್ಲಿಸಲಾಗಿದೆ. ಎಕ್ಸ್​ನಲ್ಲಿ ಇನ್​ಸ್ಟಾಗ್ರಾಂ ಡೌನ್ ಹ್ಯಾಶ್​ಟ್ಯಾಗ್ ಟ್ರೆಂಡಿಂಗ್​ನಲ್ಲಿದೆ.

Instagram Down: ಇನ್​ಸ್ಟಾಗ್ರಾಂ ಸರ್ವರ್ ಡೌನ್; ನಿಮಗೂ ಮೆಸೇಜ್, ವಿಡಿಯೋ ಅಪ್​ಲೋಡ್ ಆಗುತ್ತಿಲ್ಲವೇ?
ಇನ್‌ಸ್ಟಾಗ್ರಾಮ್

Updated on: Oct 29, 2024 | 8:26 PM

ಬಹಳ ಪ್ರಸಿದ್ಧ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ಆಗಿರುವ ಇನ್​ಸ್ಟಾಗ್ರಾಂ ಸರ್ವರ್ ಡೌನ್ ಆಗಿದೆ. ಇದರಿಂದ ಇನ್​ಸ್ಟಾಗ್ರಾಂ ಬಳಕೆದಾರರು ಮೆಸೇಜ್ ಕಳುಹಿಸಲು, ವಿಡಿಯೋ ಹಾಗೂ ಫೋಟೋಗಳನ್ನು ಅಪ್​ಲೋಡ್ ಮಾಡಲಾಗದೆ ಪರದಾಡುತ್ತಿದ್ದಾರೆ. ಇನ್ನು ಕೆಲವರ ಇನ್​ಸ್ಟಾಗ್ರಾಂ ಖಾತೆ ಇದ್ದಕ್ಕಿದ್ದಂತೆ ಲಾಗೌಟ್ ಆಗಿದೆ. ಇದಕ್ಕೆ ತಾಂತ್ರಿಕ ಸಮಸ್ಯೆಯೇ ಕಾರಣ ಎನ್ನಲಾಗಿದ್ದು, ಜಗತ್ತಿನಾದ್ಯಂತ ಹಲವು ಇನ್​ಸ್ಟಾಗ್ರಾಂ ಬಳಕೆದಾರರು ಇಂದು ಸಂಜೆಯಿಂದ ಈ ಸಮಸ್ಯೆ ಎದುರಿಸುತ್ತಿದ್ದಾರೆ. ಹಾಗಾಗಿ, ನೀವು ಆತಂಕಪಡಬೇಕಾದ ಅಗತ್ಯವಿಲ್ಲ.

ಇಂದು ಸಂಜೆ ಸುಮಾರು 5.14ಕ್ಕೆ ಇನ್​ಸ್ಟಾಗ್ರಾಂ ಸರ್ವರ್ ಡೌನ್ ಆಯಿತು. ಇಲ್ಲಿಯವರೆಗೆ 2,000ಕ್ಕೂ ಹೆಚ್ಚು ರಿಪೋರ್ಟ್ ಸಲ್ಲಿಸಲಾಗಿದೆ. ಇದು ಸಂಜೆಯ ವೇಳೆಗೆ ಇನ್​ಸ್ಟಾಗ್ರಾಂ ಸ್ಥಗಿತಗೊಂಡ ನಂತರ ಫೋಟೋ, ವಿಡಿಯೋ, ಸ್ಟೋರಿ ಅಪ್​ಲೋಡ್ ಮಾಡಲಾಗದೆ ನೆಟ್ಟಿಗರು ಪರದಾಡಿದ್ದರು. ಎಲ್ಲರಿಗೂ ಇದೇ ರೀತಿಯ ಸಮಸ್ಯೆಯಾಗಿದೆಯೇ ಎಂದು ತಿಳಿದುಕೊಳ್ಳಲು ನೆಟ್ಟಿಗರು ಎಕ್ಸ್ ಮೂಲಕ ಪ್ರತಿಕ್ರಿಯೆ ಕೇಳಿದ್ದರು.


ಇದನ್ನೂ ಓದಿ: ಸಾಮಾಜಿಕ ಜಾಲತಾಣದಲ್ಲಿ ದುರ್ಗಾ ಪೂಜೆಯ ಪೋಸ್ಟ್; ಹೆಂಡತಿ, ಅತ್ತೆಯನ್ನು ಕಡಿದು ಕೊಂದ ಪತಿ

ಹೀಗಾಗಿ, ಎಕ್ಸ್​ನಲ್ಲಿ ಇನ್​ಸ್ಟಾಗ್ರಾಂ ಡೌನ್ ಎಂಬ ಪದ ಟ್ರೆಂಡಿಂಗ್​ನಲ್ಲಿದೆ. ಸದ್ಯಕ್ಕೆ ಇನ್​ಸ್ಟಾಗ್ರಾಂ ತಾಂತ್ರಿಕ ಸಮಸ್ಯೆ ಬಗೆಹರಿದಿದೆ ಎನ್ನಲಾಗುತ್ತಿದೆ. ಆದರೆ, ಇನ್‌ಸ್ಟಾಗ್ರಾಮ್ ಅಥವಾ ಅದರ ಮೂಲ ಕಂಪನಿಯಾದ ಮೆಟಾದಿಂದ ಈ ಬಗ್ಗೆ ಇನ್ನೂ ಯಾವುದೇ ಅಧಿಕೃತ ಹೇಳಿಕೆ ಬಂದಿಲ್ಲ. ತಾಂತ್ರಿಕ ತೊಂದರೆಗಳಿಗೆ ಕಾರಣ ತಿಳಿದಿಲ್ಲ.


ಇನ್‌ಸ್ಟಾಗ್ರಾಮ್ ಸ್ಟೇಟಸ್ ಪೇಜ್ ಮತ್ತು ಡೌನ್‌ಡೆಕ್ಟರ್ ಅನ್ನು ಔಟ್‌ಟೇಜ್‌ನ ಅಪ್‌ಡೇಟ್‌ಗಳಿಗಾಗಿ ಪರಿಶೀಲಿಸಲು ಬಳಕೆದಾರರಿಗೆ ಸೂಚಿಸಲಾಗಿದೆ. ಈ ಮಧ್ಯೆ, ಅನೇಕರು ಸಂಪರ್ಕದಲ್ಲಿರಲು ಪರ್ಯಾಯ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಿಗೆ ತಿರುಗುತ್ತಿದ್ದಾರೆ.

ಇನ್ನಷ್ಟು ಟೆಕ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ