ಇಂದಿನ ದಿನಗಳಲ್ಲಿ ಇನ್‌ಸ್ಟಾಗ್ರಾಮ್ (Instagram) ರೀಲ್ಸ್ ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿದೆ. ಇದಕ್ಕೆ ಪ್ರಮುಖ ಕಾರಣ ಟಿಕ್‌ಟಾಕ್ ನಿಷೇಧವಾಗಿರುವುದು. ಭಾರತದಲ್ಲಿ ಟಿಕ್‌ಟಾಕ್ ಅಪ್ಲಿಕೇಶನ್ ಅನ್ನು ಬ್ಯಾನ್ ಮಾಡಿದ ನಂತರ ಹೆಚ್ಚಿನ ಜನರು ಇನ್‌ಸ್ಟಾಗ್ರಾಮ್ ರೀಲ್ಸ್‌ಗೆ ಅಂಟಿಕೊಂಡು ಬಿಟ್ಟಿದ್ದಾರೆ. ಇದೇ ಕಾರಣಕ್ಕೆ ಇನ್‌ಸ್ಟಾಗ್ರಾಮ್ ತನ್ನ ರೀಲ್ಸ್‌ನಲ್ಲಿ (Instagram Reels) ಹಲವು ಆಕರ್ಷಕ ಫೀಚರ್ಗಳನ್ನು ಪರಿಚಯಿಸುತ್ತಾ ಬಂದಿದೆ. ಇದಲ್ಲದೆ ಇನ್‌ಸ್ಟಾಗ್ರಾಮ್ ತನ್ನ ಶಾರ್ಟ್ ವೀಡಿಯೊ ಸ್ವರೂಪವನ್ನು ಬದಲಾಯಿಸುವುದಕ್ಕಾಗಿ ಹಲವಾರು ಫೀಚರ್ಸ್‌ಗಳನ್ನು ರೀಲ್ಸ್‌ಗೆ ಸೇರಿಸಿದೆ. ಈಗಂತು ರೀಲ್ಸ್ ಮಾಡಿ ಪೋಸ್ಟ್ ಮಾಡುವವರ ಸಂಖ್ಯೆ ಹೆಚ್ಚಿನ ಪ್ರಮಾಣದಲ್ಲಿದೆ. ಇದನ್ನೆ ಗಮನದಲ್ಲಿಟ್ಟುಕೊಂಡು ಇದೀಗ ಇನ್ಸ್ಟಾ ಹೊಸ ಫೀಚರ್ (Feature) ಒಂದನ್ನು ತಂದಿದೆ.
ಹೌದು, ಈ ವಾರ ಇನ್‌ಸ್ಟಾಗ್ರಾಮ್ ತನ್ನ ರೀಲ್ಸ್ ವಿಡಿಯೋದಲ್ಲಿ ದೊಡ್ಡ ಬದಲಾವಣೆ ತರಲು ಮುಂದಾಗಿದೆ. ಅದೇನೆಂದರೆ ಇನ್ನುಮುಂದೆ 90 ಸೆಕೆಂಡ್‌ಗಳ ಕಾಲ ರೀಲ್‌ಗಳನ್ನು ನೀವು ರೆಕಾರ್ಡ್ ಮಾಡಬಹುದು. ಸದ್ಯಕ್ಕೆ ಲಭ್ಯವಿರುವ 60 ಸೆಕೆಂಡ್‌ಗಳ ಸಮಯದ ಬದಲಿಗೆ 90 ಸೆಕೆಂಡುಗಳ ಕಾಲ ರೀಲ್‌ಗಳನ್ನು ರೆಕಾರ್ಡ್ ಮಾಡಲು ಕಂಪನಿಯು ಬಳಕೆದಾರರಿಗೆ ಅವಕಾಶ ನೀಡುತ್ತಿದೆ.
ಇನ್‌ಸ್ಟಾಗ್ರಾಮ್ ರೀಲ್ಸ್ ಡೌನ್‌ಲೋಡ್ ಹೇಗೆ?:
ಇನ್‌ಸ್ಟಾಗ್ರಾಮ್ ಬಳಕೆದಾರರು ತಮ್ಮ ರೀಲ್ಸ್‌ಗಳನ್ನು ಐಫೋನ್‌ನಲ್ಲಿ ಡೌನ್‌ಲೋಡ್ ಮಾಡಬೇಕಾದರೆ ಆ್ಯಪ್ ಸ್ಟೋರ್‌ನಿಂದ Instadp ಅಥವಾ Igram.io ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಬೇಕಾಗುತ್ತದೆ. ಅಂತೆಯೆ ಆಂಡ್ರಾಯ್ಡ್ ಬಳಕೆದಾರರು ಗೂಗಲ್ ಪ್ಲೇ ಸ್ಟೋರ್‌ನಿಂದ ರೀಲ್ಸ್ ಡೌನ್‌ಲೋಡರ್ ಅನ್ನು ಡೌನ್‌ಲೋಡ್ ಮಾಡಬೇಕಾಗುತ್ತದೆ.
ತಂತ್ರಜ್ಞಾನ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ, ಪ್ರಮುಖ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 2:41 pm, Fri, 3 June 22