AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

WhatsApp: ಇನ್ನಾದರೂ ಎಚ್ಚೆತ್ತುಕೊಳ್ಳಿ: 16 ಲಕ್ಷಕ್ಕೂ ಅಧಿಕ ಭಾರತೀಯರ ಖಾತೆ ಬ್ಯಾನ್ ಮಾಡಿದ ವಾಟ್ಸ್​ಆ್ಯಪ್

WhatsApp Ban: ಏಪ್ರಿಲ್ ತಿಂಗಳಿನಲ್ಲೂ ಭಾರತದ 16 ಲಕ್ಷಕ್ಕೂ ಅಧಿಕ ಖಾತೆಗಳನ್ನು ಬ್ಯಾನ್‌ ಮಾಡಿರುವುದಾಗಿ ವಾಟ್ಸ್​ಆ್ಯಪ್ ಹೇಳಿದೆ. ವಾಟ್ಸ್​ಆ್ಯಪ್​ ನೀತಿಗಳ ಉಲ್ಲಂಘನೆಯಿಂದಾಗಿ ಹೆಚ್ಚಿನ ಖಾತೆಗಳನ್ನು ನಿಷೇಧಿಸಲಾಗಿದೆಯಾದರೂ, ಭಾರತದಲ್ಲಿನ ಇತರ ಬಳಕೆದಾರರು ವರದಿ ಮಾಡುವ ಕುಂದುಕೊರತೆಗಳ ಮೇಲೆ ಅಕೌಂಟ್‌ ಬ್ಯಾನ್‌ ಮಾಡುವ ಕ್ರಮ ತೆಗೆದುಕೊಳ್ಳುತ್ತದೆ.

WhatsApp: ಇನ್ನಾದರೂ ಎಚ್ಚೆತ್ತುಕೊಳ್ಳಿ: 16 ಲಕ್ಷಕ್ಕೂ ಅಧಿಕ ಭಾರತೀಯರ ಖಾತೆ ಬ್ಯಾನ್ ಮಾಡಿದ ವಾಟ್ಸ್​ಆ್ಯಪ್
WhatsApp
TV9 Web
| Updated By: Vinay Bhat|

Updated on: Jun 02, 2022 | 1:21 PM

Share

ಮೆಟಾ (Meta) ಒಡೆತನದ ಪ್ರಸಿದ್ಧ ಮೆಸೇಜಿಂಗ್ ಅಪ್ಲಿಕೇಷನ್ ವಾಟ್ಸ್​ಆ್ಯಪ್ (WhatsApp) ತನ್ನ ಬಳಕೆದಾರರ ಅನುಕೂಲಕ್ಕೆ ತಕ್ಕಂತೆ ಹೊಸ ಹೊಸ ಆಕರ್ಷಕ ಫೀಚರ್​ಗಳನ್ನು ಪರಚಯಿಸುತ್ತಾ ಬರುತ್ತಿದೆ. ಇದರ ಜೊತೆಗೆ ಕಳೆದ ಕೆಲವು ಸಮಯದಿಂದ ಬಳಕೆದಾರರು ನೀಡುತ್ತಿರುವ ದೂರನ್ನು ಎಚ್ಚರಿಕೆಯಿಂದ ಗಮನಿಸುತ್ತಿದ್ದು ಕಠಿಣ ಕ್ರಮಗಳನ್ನು ಕೂಡ ಕೈಗೊಳ್ಳುತ್ತಿದೆ. ಇದಕ್ಕೆ ಸಾಕ್ಷಿ ಎಂಬಂತೆ ಕಳೆದ ಫೆಬ್ರವರಿಯಲ್ಲಿ 10 ಲಕ್ಷಕ್ಕೂ ಅಧಿಕ ಹಾಗೂ ಮಾರ್ಚ್ ತಿಂಗಳಿನಲ್ಲಿ 18 ಲಕ್ಷಕ್ಕೂ ಹೆಚ್ಚು ಭಾರತೀಯರ ವಾಟ್ಸ್​ಆ್ಯಪ್ ಖಾತೆಗಳನ್ನು ನಿಷೇಧ (WhatsApp Ban) ಮಾಡಿತ್ತು. ಐಟಿ ನಿಯಮಗಳಿಗೆ ಅನುಸಾರವಾಗಿ ಈ ಅಕೌಂಟ್‌ಗಳನ್ನು ಬ್ಯಾನ್‌ ಮಾಡಲಾಗಿದೆ. ಇದೀಗ ಏಪ್ರಿಲ್ ತಿಂಗಳಿನಲ್ಲೂ ಭಾರತದ 16 ಲಕ್ಷಕ್ಕೂ ಅಧಿಕ ಖಾತೆಗಳನ್ನು ಬ್ಯಾನ್‌ ಮಾಡಿರುವುದಾಗಿ ಹೇಳಿದೆ. ವಾಟ್ಸ್​ಆ್ಯಪ್​ ನೀತಿಗಳ ಉಲ್ಲಂಘನೆಯಿಂದಾಗಿ ಹೆಚ್ಚಿನ ಖಾತೆಗಳನ್ನು ನಿಷೇಧಿಸಲಾಗಿದೆಯಾದರೂ, ಭಾರತದಲ್ಲಿನ ಇತರ ಬಳಕೆದಾರರು ವರದಿ ಮಾಡುವ ಕುಂದುಕೊರತೆಗಳ ಮೇಲೆ ಅಕೌಂಟ್‌ ಬ್ಯಾನ್‌ ಮಾಡುವ ಕ್ರಮ ತೆಗೆದುಕೊಳ್ಳುತ್ತದೆ.

ಇತ್ತೀಚಿನ ವರದಿಯ ಪ್ರಕಾರ ಇದುವರೆಗೆ 2,069,000 ಕ್ಕೂ ಅಧಿಕ ಭಾರತೀಯರ ವಾಟ್ಸ್​ಆ್ಯಪ್ ಖಾತೆಗಳನ್ನು ನಿಷೇಧಿಸಲಾಗಿದೆ ಎಂದು ಕಂಪನಿ ಹೇಳಿದೆ. ವಾಟ್ಸ್​ಆ್ಯಪ್​​ ಏಪ್ರಿಲ್ ತಿಂಗಳ ಮಾಸಿಕ ವರದಿಯಲ್ಲಿ, ಸೊಶೀಯಲ್‌ ಮೀಡಿಯಾ ನಿಯಮ ಉಲ್ಲಂಘನೆ ಜೊತೆಗೆ ವಾಟ್ಸ್​ಆ್ಯಪ್​​ನಿಯಮಗಳನ್ನು ಉಲ್ಲಂಘಿಸಿರುವವರ ಖಾತೆಗಳನ್ನು ನಿಷೇದಿಸಲಾಗಿದೆ ಎಂದು ಹೇಳಿದೆ.

Moto E32s: ಬಜೆಟ್ ಪ್ರಿಯರನ್ನು ದಂಗಾಗಿಸಿದ ಮೋಟೋ E32s ಸ್ಮಾರ್ಟ್‌ಫೋನ್‌: ಇದರ ಬೆಲೆ ಕೇವಲ 8,999 ರೂ.

ಇದನ್ನೂ ಓದಿ
Image
Redmi K50 Ultra: ಮಾರುಕಟ್ಟೆಗೆ ಬರುತ್ತಿದೆ 100W ಫಾಸ್ಟ್​ ಚಾರ್ಜಿಂಗ್​ನ ಹೊಸ ಫೋನ್: ಯಾವುದು?, ಬೆಲೆ ಎಷ್ಟು?
Image
WhatsApp: ವಾಟ್ಸ್​ಆ್ಯಪ್​ನಲ್ಲಿ ಲೈವ್ ಲೊಕೇಶನ್ ಶೇರ್ ಮಾಡಲು ಈ ಟ್ರಿಕ್ ಉಪಯೋಗಿಸಿ
Image
iQOO Neo 6: ಭಾರತಕ್ಕೆ ಬಂದೇ ಬಿಡ್ತು ಐಕ್ಯೂ ನಿಯೋ 6 5G: ಇಷ್ಟು ಕಡಿಮೆ ಬೆಲೆಗೆ ಎಂಥಾ ಸ್ಮಾರ್ಟ್​​ಫೋನ್
Image
Airtel vs Jio: ಏರ್ಟೆಲ್​​ನಿಂದ ಹೊಸ ಆಲ್-ಇನ್-ಒನ್ ಬ್ರಾಡ್‌ಬ್ಯಾಂಡ್‌ ಯೋಜನೆ: ಜಿಯೋ-ಏರ್ಟೆಲ್​ ಪ್ಲಾನ್​ನಲ್ಲಿ ಯಾವುದು ಬೆಸ್ಟ್?

ವಾಟ್ಸ್​ಆ್ಯಪ್​​ನಲ್ಲಿ ಬಳಕೆದಾರರು ಮಾಡುವ ರಿಪೋರ್ಟ್‌ ಆಧಾರದ ಮೇಲೆ ಕೂಡ ಅನೇಕ ಅಕೌಂಟ್‌ಗಳನ್ನು ನಿಷೇಧ ಮಾಡಿದೆ. ಭಾರತದಲ್ಲಿ ಹೊಸ ಐಟಿ ನಿಯಮ ಜಾರಿಗೆ ಬಂದ ನಂತರ ಪ್ರತಿ ತಿಂಗಳು ಕೂಡ ಕುಂದುಕೊರತೆಯ ವರದಿ ನೀಡುವುದು ಕಡ್ಡಾಯವಾಗಿದೆ. ಅದರಂತೆ ವಾಟ್ಸ್​ಆ್ಯಪ್​​ ಏಪ್ರಿಲ್ 1 ರಿಂದ 30ರ ವರೆಗೆ ತಾನು ತೆಗೆದುಕೊಂಡ ನಿರ್ಧಾರಗಳ ಬಗ್ಗೆ ವರದಿಯಲ್ಲಿ ತಿಳಿಸಿದೆ.

ಏಪ್ರಿಲ್ 1 ರಿಂದ ಏಪ್ರಿಲ್ 30 2022 ರ ನಡುವಿನ ಮಾಸಿಕ ವರದಿಯಲ್ಲಿ ಭಾರತದ 16 ಲಕ್ಷಕ್ಕೂ ಹೆಚ್ಚು ಖಾತೆಗಳನ್ನು ಬ್ಯಾನ್‌ ಮಾಡಿದೆ ಎಂದು ಬರೆಯಲಾಗಿದೆ. ಇನ್ನು ಈ ಮಾಸಿಕ ಬಳಕೆದಾರ-ಸುರಕ್ಷತಾ ವರದಿಯು ಬಳಕೆದಾರರಿಂದ ಸ್ವೀಕರಿಸಿದ ದೂರುಗಳು ಮತ್ತು ವಾಟ್ಸ್​​ಆ್ಯಪ್​​ ತೆಗೆದುಕೊಂಡ ಕ್ರಮಗಳ ವಿವರಗಳನ್ನು ವರದಿ ಮಾಡಿದೆ. ಬ್ಯಾನ್‌ ಆಗಿರುವ ಖಾತೆಗಳು ಕಿರುಕುಳ, ನಕಲಿ ಮಾಹಿತಿಯನ್ನು ಫಾರ್ವರ್ಡ್ ಮಾಡುವುದು, ಇತರ ಬಳಕೆದಾರರನ್ನು ವಂಚಿಸಿರುವುದು ಕಂಡುಬಂದಿದೆ. ಇದಲ್ಲದೆ ಹಾನಿಕಾರಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಕ್ಕಾಗಿ ಈ ಖಾತೆಗಳನ್ನು ನಿಷೇಧಿಸಲಾಗಿದೆ.

ವಾಟ್ಸ್​ಆ್ಯಪ್ ತನ್ನ ಬಳಕೆದಾರರ ಸುರಕ್ಷತೆಗೆ ಹೆಚ್ಚು ಗಮನ ಹರಿಸುತ್ತಿದೆ. ಆದರೆ ಇದಕ್ಕೆ ವಿರುದ್ಧವಾಗಿ ಕಾರ್ಯನಿರ್ವಹಿಸುವ ಚಂದಾದಾರರ ಮೇಲೆ ವಿಷೇಧ ವಿಧಿಸುತ್ತದೆ. ಈ ಬಗ್ಗೆ ವಕ್ತಾರರೊಬ್ಬರು ಮಾತನಾಡಿ, “ವಾಟ್ಸ್​ಆ್ಯಪ್ ನಿಂದನೆಯನ್ನು ತಡೆಗಟ್ಟುವ ಉದ್ಯಮದ ಮುಂಚೂಣಿಯಲ್ಲಿದೆ, ಎಂಡ್-ಟು-ಎಂಡ್ ಎನ್‌ಕ್ರಿಪ್ಟ್ ಮಾಡಿದ ಸಂದೇಶ ಸೇವೆಗಳ ಬಗ್ಗೆ ಹೆಚಚಿನ ಗಮನ ಹರಿಸುತ್ತಿದೆ. ವರ್ಷಗಳಲ್ಲಿ, ನಮ್ಮ ಬಳಕೆದಾರರನ್ನು ನಮ್ಮ ಪ್ಲಾಟ್‌ಫಾರ್ಮ್‌ನಲ್ಲಿ ಸುರಕ್ಷಿತವಾಗಿರಿಸಲು ನಾವು ಕೃತಕ ಬುದ್ಧಿಮತ್ತೆ ಮತ್ತು ಇತರ ಅತ್ಯಾಧುನಿಕ ತಂತ್ರಜ್ಞಾನ, ಡೇಟಾ ವಿಜ್ಞಾನಿಗಳು, ತಜ್ಞರು ಮತ್ತು ಇನ್ನಿತರ ಪ್ರಕ್ರಿಯೆಗಳಲ್ಲಿ ಸತತವಾಗಿ ಹೂಡಿಕೆ ಮಾಡಿದ್ದೇವೆ” ಎಂದಿದ್ದಾರೆ.

ವಾಟ್ಸ್‌ಆ್ಯಪ್ ನಿಯಮಗಳು ಮತ್ತು ಷರತ್ತುಗಳ ಪ್ರಕಾರ, ಕಾನೂನು ಬಾಹಿರ, ಅಶ್ಲೀಲ, ಮಾನಹಾನಿಕರ, ಬೆದರಿಕೆಯ, ಕಿರುಕುಳದ, ದ್ವೇಷಪೂರಿತ ಸಂದೇಶಗಳನ್ನು ಕಳುಹಿಸಿದರೆ ನಿಮ್ಮನ್ನು ವಾಟ್ಸ್‌ಆ್ಯಪ್ ಬ್ಯಾನ್ ಮಾಡುತ್ತದೆ. ಹಿಂಸಾತ್ಮಕ ಅಪರಾಧಗಳನ್ನು ಪ್ರಚೋದಿಸುವ ಅಥವಾ ಉತ್ತೇಜಿಸುವ ಸಂದೇಶಗಳನ್ನು ಕಳುಹಿಸಿದರೂ ವಾಟ್ಸ್‌ಆ್ಯಪ್ ನಿಮ್ಮನ್ನು ಬ್ಯಾನ್ ಮಾಡಬಹುದು. ಹೀಗಾಗಿ ಎಚ್ಚರದಿಂದಿರಿ.

ತಂತ್ರಜ್ಞಾನ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ, ಪ್ರಮುಖ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮಳೆನೀರು ತುಂಬಿದ್ದ ಗುಂಡಿಗೆ ಬಿದ್ದ ಮೊಬೈಲ್; ಬಿಕ್ಕಿ ಬಿಕ್ಕಿ ಅತ್ತ ಯುವಕ
ಮಳೆನೀರು ತುಂಬಿದ್ದ ಗುಂಡಿಗೆ ಬಿದ್ದ ಮೊಬೈಲ್; ಬಿಕ್ಕಿ ಬಿಕ್ಕಿ ಅತ್ತ ಯುವಕ
ಐಎಎಫ್ ಪೈಲಟ್ ಲೋಕೇಂದ್ರ ಸಿಂಧುಗೆ 1 ತಿಂಗಳ ಮಗನಿಂದ ಅಂತಿಮನಮನ
ಐಎಎಫ್ ಪೈಲಟ್ ಲೋಕೇಂದ್ರ ಸಿಂಧುಗೆ 1 ತಿಂಗಳ ಮಗನಿಂದ ಅಂತಿಮನಮನ
ಶಿವಕುಮಾರ್ ಸಿಎಂ ಆಗುತ್ತಾರೆ, ನಾಯಕತ್ವದ ಗುಣಗಳು ಅವರಲ್ಲಿವೆ: ಮಂಜುನಾಥ್
ಶಿವಕುಮಾರ್ ಸಿಎಂ ಆಗುತ್ತಾರೆ, ನಾಯಕತ್ವದ ಗುಣಗಳು ಅವರಲ್ಲಿವೆ: ಮಂಜುನಾಥ್
ನಟಿ ಶ್ರುತಿಗೆ ಚಾಕು ಇರಿತ; ಘಟನೆ ಬಗ್ಗೆ ವಿವರಿಸಿದ ಪ್ರತ್ಯಕ್ಷದರ್ಶಿ
ನಟಿ ಶ್ರುತಿಗೆ ಚಾಕು ಇರಿತ; ಘಟನೆ ಬಗ್ಗೆ ವಿವರಿಸಿದ ಪ್ರತ್ಯಕ್ಷದರ್ಶಿ
ಚಿಕ್ಕಮಗಳೂರು -ತಿರುಪತಿ ರೈಲಿಗೆ ನಮಸ್ಕರಿಸಿದ ವೃದ್ಧೆ
ಚಿಕ್ಕಮಗಳೂರು -ತಿರುಪತಿ ರೈಲಿಗೆ ನಮಸ್ಕರಿಸಿದ ವೃದ್ಧೆ
ಯಾರದ್ದೋ ತಪ್ಪಿಗೆ ನಮ್ಮನ್ಯಾಕೆ ಹೊಣೆ ಮಾಡಲಾಗುತ್ತಿದೆ? ಸಣ್ಣ ವ್ಯಾಪಾರಿ
ಯಾರದ್ದೋ ತಪ್ಪಿಗೆ ನಮ್ಮನ್ಯಾಕೆ ಹೊಣೆ ಮಾಡಲಾಗುತ್ತಿದೆ? ಸಣ್ಣ ವ್ಯಾಪಾರಿ
ಎಂಬಿ ಪಾಟೀಲ್ ತಮ್ಮನ್ನು ರಾಜ್ಯದ ಮುಖ್ಯಮಂತ್ರಿ ಅಂದುಕೊಂಡಿದ್ದಾರಾ? ಪ್ರಕಾಶ್
ಎಂಬಿ ಪಾಟೀಲ್ ತಮ್ಮನ್ನು ರಾಜ್ಯದ ಮುಖ್ಯಮಂತ್ರಿ ಅಂದುಕೊಂಡಿದ್ದಾರಾ? ಪ್ರಕಾಶ್
ಸಚಿವೆ ಪದೇಪದೆ ಗೃಹಲಕ್ಷ್ಮಿ ಯೋಜನೆ ಹಣದ ಬಗ್ಗೆ ಸಮಜಾಯಿಷಿ ನೀಡುವುದ್ಯಾಕೆ?
ಸಚಿವೆ ಪದೇಪದೆ ಗೃಹಲಕ್ಷ್ಮಿ ಯೋಜನೆ ಹಣದ ಬಗ್ಗೆ ಸಮಜಾಯಿಷಿ ನೀಡುವುದ್ಯಾಕೆ?
ಪತ್ನಿಯ ಹುಡುಕುತ್ತಾ ಕಾರಿನಲ್ಲಿ ರೈಲ್ವೆ ಪ್ಲಾಟ್​ಫಾರ್ಮ್​ಗೆ ಬಂದ ಪತಿ
ಪತ್ನಿಯ ಹುಡುಕುತ್ತಾ ಕಾರಿನಲ್ಲಿ ರೈಲ್ವೆ ಪ್ಲಾಟ್​ಫಾರ್ಮ್​ಗೆ ಬಂದ ಪತಿ
ಶಾಸಕರಿಗೆ ಸ್ಥಾನಮಾನ ನೀಡುವ ಬಗ್ಗೆ ಸುರ್ಜೇವಾಲಾ ಜೊತೆ ಚರ್ಚೆಯಾಗಿದೆ: ಡಿಸಿಎಂ
ಶಾಸಕರಿಗೆ ಸ್ಥಾನಮಾನ ನೀಡುವ ಬಗ್ಗೆ ಸುರ್ಜೇವಾಲಾ ಜೊತೆ ಚರ್ಚೆಯಾಗಿದೆ: ಡಿಸಿಎಂ