Airtel vs Jio: ಏರ್ಟೆಲ್​​ನಿಂದ ಹೊಸ ಆಲ್-ಇನ್-ಒನ್ ಬ್ರಾಡ್‌ಬ್ಯಾಂಡ್‌ ಯೋಜನೆ: ಜಿಯೋ-ಏರ್ಟೆಲ್​ ಪ್ಲಾನ್​ನಲ್ಲಿ ಯಾವುದು ಬೆಸ್ಟ್?

Airtel Xstream vs Reliance JioFiber: ಏರ್ಟೆಲ್​ ಕಂಪನಿ ತನ್ನ ಬ್ರಾಡ್‌ಬ್ಯಾಂಡ್‌ ಬಳಕೆದಾರರಿಗೆ "ಆಲ್-ಇನ್-ಒನ್" ಹೊಸ ಯೋಜನೆಗಳನ್ನು ಪರಿಚಯಿಸಿದೆ. ಈ ಪ್ಲಾನ್‌ಗಳು 699 ರೂ. ಗಳಿಂದ ಪ್ರಾರಂಭವಾಗಲಿದ್ದು 1,599 ರೂ. ವರೆಗಿನ ಬೆಲೆಯಲ್ಲಿ ಲಭ್ಯವಾಗಲಿವೆ. ತ್ತ ರಿಲಯನ್ಸ್ ಜಿಯೋದಲ್ಲಿ ಕೂಡ ಇದೇ ಮಾದರಿಯ ಬ್ರಾಡ್‌ಬ್ಯಾಂಡ್‌ ಪ್ಲಾನ್​ಗಳಿವೆ.

Airtel vs Jio: ಏರ್ಟೆಲ್​​ನಿಂದ ಹೊಸ ಆಲ್-ಇನ್-ಒನ್ ಬ್ರಾಡ್‌ಬ್ಯಾಂಡ್‌ ಯೋಜನೆ: ಜಿಯೋ-ಏರ್ಟೆಲ್​ ಪ್ಲಾನ್​ನಲ್ಲಿ ಯಾವುದು ಬೆಸ್ಟ್?
Airtel Xstream vs Reliance JioFiber
Follow us
TV9 Web
| Updated By: Vinay Bhat

Updated on: May 31, 2022 | 12:47 PM

ಟೆಲಿಕಾಂ ಮಾರುಕಟ್ಟೆಯಲ್ಲಿ ಎರಡನೇ ಸ್ಥಾನದಲ್ಲಿರುವ ಪ್ರಸಿದ್ಧ ಏರ್ಟೆಲ್​ (Airtel) ಕಂಪನಿ ತನ್ನ ಬ್ರಾಡ್‌ಬ್ಯಾಂಡ್‌ ಬಳಕೆದಾರರಿಗೆ “ಆಲ್-ಇನ್-ಒನ್” ಹೊಸ ಯೋಜನೆಗಳನ್ನು ಪರಿಚಯಿಸಿದೆ. ಈ ಪ್ಲಾನ್‌ಗಳು 699 ರೂ. ಗಳಿಂದ ಪ್ರಾರಂಭವಾಗಲಿದ್ದು 1,599 ರೂ. ವರೆಗಿನ ಬೆಲೆಯಲ್ಲಿ ಲಭ್ಯವಾಗಲಿವೆ. ಈ ಪ್ಲಾನ್‌ಗಳಲ್ಲಿ 14 ಒಟಿಟಿ (OTT) ಪ್ಲಾಟ್‌ಫಾರ್ಮ್‌ಗಳಿಗೆ ಪ್ರವೇಶವನ್ನು ಪಡೆಯಬಹುದಾಗಿದೆ. ಇದಲ್ಲದೆ 350 ಚಾನಲ್‌ಗಳನ್ನು ಸ್ಟ್ರೀಮ್‌ ಮಾಡುವುದಕ್ಕೆ ಅವಕಾಶವಿದೆ. ಅನಿಯಮಿತವಾದ ಇಂಟರ್‌ನೆಟ್‌ ಸಂಪರ್ಕ್‌ ಕೂಡ ಲಭ್ಯವಾಗಲಿದೆ. ಇತ್ತ ರಿಲಯನ್ಸ್ ಜಿಯೋದಲ್ಲಿ (Reliance JIO) ಕೂಡ ಇದೇ ಮಾದರಿಯ ಬ್ರಾಡ್‌ಬ್ಯಾಂಡ್‌ ಪ್ಲಾನ್​ಗಳಿವೆ. ಹಾಗಾದ್ರೆ ಏರ್ಟೆಲ್-ಜಿಯೋ ಪ್ಲಾನ್​ಗಳನ್ನು ಯಾವುವು ಎಂಬುದನ್ನು ನೋಡೋಣ.

ಏರ್ಟೆಲ್​ನ 699 ರೂ. ಬ್ರಾಡ್‌ಬ್ಯಾಂಡ್‌ ಪ್ಲಾನ್‌ ನಿಮಗೆ ಡಿಸ್ನಿ+ ಹಾಟ್‌ಸ್ಟಾರ್ ಚಂದಾದಾರಿಕೆಯೊಂದಿಗೆ 40 Mbps ಅನಿಯಮಿತ ಇಂಟರ್ನೆಟ್ ಪ್ರಯೋಜನ ನೀಡುತ್ತದೆ. ಜೊತೆಗೆ ಏರ್ಟೆಲ್​​​ ಎಕ್ಸ್‌ಟ್ರೀಮ್‌ ಪ್ರೀಮಿಯಂ ಸಿಂಗಲ್ ಲಾಗಿನ್ ಮೂಲಕ 14 ಪ್ಲಾಟ್‌ಫಾರ್ಮ್‌ಗಳಿಗೆ ಪ್ರವೇಶವನ್ನು ಪಡೆಯಬಹುದು. ಇನ್ನು ಸೋನಿಲೈವ್‌, ಇರೋಸ್‌ನೌ, ಲಯನ್ಸ್‌ಗೇಟ್‌ ಪ್ಲೇ, ಹೂಯ್‌ಚಾಯ್‌, ಮನೋರಮಾ ಮ್ಯಾಕ್ಸ್‌, ಶೇಮರೂ, ಅಲ್ಟ್ರಾ, ಹಂಗಾಮಾ ಪ್ಲೇ, ಎಪಿಕಾನ್‌, ಡಿವೋ ಟಿವಿ, ಕ್ಲಿಕ್‌, ನಮ್ಮಫ್ಲಿಕ್ಸ್‌, ಡಾಲಿವುಡ್‌ ಮತ್ತು ಶಾರ್ಟ್ಸ್‌ ಟಿವಿಗೆ ಪ್ರವೇಶವಿದೆ. ಏರ್ಟೆಲ್​​​4K ಎಕ್ಸ್‌ಸ್ಟ್ರೀಮ್ ಬಾಕ್ಸ್‌ನಲ್ಲಿ 350 ಚಾನಲ್‌ಗಳನ್ನು ಸಹ ಪಡೆಯಬಹುದು.

Jio Game Controller: ಜಿಯೋ ಗೇಮ್ ಕಂಟ್ರೋಲರ್ ಬಿಡುಗಡೆ: ಗೇಮಿಂಗ್ ಪ್ರಿಯರು ಫುಲ್ ಫಿದಾ

ಇದನ್ನೂ ಓದಿ
Image
Vivo Y33e 5G: ಸದ್ದಿಲ್ಲದೆ ಬಜೆಟ್ ಬೆಲೆಗೆ ಬಿಡುಗಡೆ ಆಗಿದೆ ವಿವೋ Y33e 5G ಸ್ಮಾರ್ಟ್‌ಫೋನ್‌: ಏನು ವಿಶೇಷತೆ?
Image
ಫ್ಲಿಪ್‌ಕಾರ್ಟ್‌ನ ನವೀಕರಿಸಿದ ಸ್ಮಾರ್ಟ್‌ಫೋನ್ ಮಾರಾಟ ಪುನರಾರಂಭ, ಇಲ್ಲಿವೆ ಕೆಲವು ಕೈಗೆಟಕುವ ದರದಲ್ಲಿ ಲಭ್ಯವಾಗುವ ಐಫೋನ್​ಗಳು
Image
iQoo Neo 6: ಒಂದೇ ದಿನ ಬಾಕಿ: ನಾಳೆ ಭಾರತಕ್ಕೆ ಅಪ್ಪಳಿಸಲಿದೆ ಐಕ್ಯೂ ನಿಯೋ 6 5G
Image
Oneplus Nord CE 2 Lite 5G: 20 ಸಾವಿರ ರೂ. ಒಳಗಡೆ ಬೊಂಬಾಟ್ ಫೋನ್ ಹುಡುಕುತ್ತಿದ್ದರೆ ಇದುವೇ ಬೆಸ್ಟ್ ಆಯ್ಕೆ

1,099 ರೂ. ಪ್ಲಾನ್‌ನಲ್ಲಿ ಅಮೆಜಾನ್‌ ಪ್ರೈಮ್‌ ಮತ್ತು ಡಿಸ್ನಿ+ ಹಾಟ್‌ಸ್ಟಾರ್‌ ಚಂದಾದಾರಿಕೆ ಲಭ್ಯವಾಗಲಿದೆ. ಜೊತೆಗೆ 200 Mbps ಅನಿಯಮಿತ ಇಂಟರ್‌ನೆಟ್‌ ವೇಗವನ್ನು ಕೂಡ ಪಡೆದುಕೊಳ್ಳಬಹುದಾಗಿದೆ. ಇದಲ್ಲದೆ ಈ ಪ್ಲಾನ್‌ನಲ್ಲಿ 14 OTT ಗಳಿಗೆ ಏರ್‌ಟೆಲ್ ಎಕ್ಸ್‌ಸ್ಟ್ರೀಮ್ ಪ್ರೀಮಿಯಂ ಲಾಗಿನ್ ಮತ್ತು ಏರ್‌ಟೆಲ್ 4K ಎಕ್ಸ್‌ಸ್ಟ್ರೀಮ್ ಬಾಕ್ಸ್‌ನಲ್ಲಿ 350 ಚಾನಲ್‌ಗಳನ್ನು ವೀಕ್ಷಿಸಬಹುದಾಗಿದೆ. 1,599 ರೂ. ಬ್ರಾಡ್‌ಬ್ಯಾಂಡ್‌ ಪ್ಲಾನ್‌ನಲ್ಲಿ ನೀವು ನೆಟ್‌ಫ್ಲಿಕ್ಸ್‌, ಅಮೆಜಾನ್‌ ಪ್ರೈಮ್‌, ಡಿಸ್ನಿ ಪ್ಲಸ್‌ ಹಾಟ್‌ಸ್ಟಾರ್‌ ಚಂದಾದಾರಿಕೆಗಳೊಂದಿಗೆ 300 Mbps ಅನಿಯಮಿತ ಇಂಟರ್‌ನೆಟ್ ಪ್ರಯೋಜನ ಸಿಗಲಿದೆ. 350 ಟಿವಿ ಚಾನಲ್‌ಗಳ ಜೊತೆಗೆ ಮೇಲಿನ ಎರಡು ಪ್ಲಾನ್‌ಗಳ ಮಾದರಿಯಲ್ಲಿಯೇ ಇದು ಕೂಡ 14 OTT ಗಳಿಗೆ ಏರ್ಟೆಲ್​​​ ಎಕ್ಸ್‌ಸ್ಟ್ರೀಮ್ ಪ್ರೀಮಿಯಂ ಲಾಗಿನ್ ನೀಡಲಿದೆ.

ಇದೇ ಮಾದರಿಯಲ್ಲಿ ಜಿಯೋದಲ್ಲಿ ಕೂಡ ಆಕರ್ಷಕ ಬ್ರಾಡ್‌ಬ್ಯಾಂಡ್‌ ಪ್ಲಾನ್​ಗಳಿವೆ. ಜಿಯೋದ ಹೊಸ ಪ್ಲಾನ್‌ಗಳು 399 ರೂ. ಮತ್ತು ತಿಂಗಳಿಗೆ 3,999 ರೂ. ವರೆಗಿನ ಬೆಲೆಯಲ್ಲಿ ಲಭ್ಯವಾಗಲಿವೆ. ಈ ಎಲ್ಲಾ ಹೊಸ ಪ್ಲಾನ್‌ಗಳು ಅನಿಯಮಿತ ಇಂಟರ್ನೆಟ್ ಪ್ರವೇಶವನ್ನು ನೀಡುತ್ತವೆ. ಆದರೆ ಈ ಎಲ್ಲಾ ಪ್ಲಾನ್‌ಗಳು ವಿಭಿನ್ನ ಇಂಟರ್‌ನೆಟ್‌ ವೇಗವನ್ನು ಹೊಂದಿವೆ. 399 ರೂ. ಮತ್ತು 699 ರೂ. ಜಿಯೋ ಫೈಬರ್ ಯೋಜನೆಗಳು ಯಾವುದೇ OTT ಪ್ಲಾಟ್‌ಫಾರ್ಮ್‌ಗಳಿಗೆ ಪ್ರವೇಶವನ್ನು ಒಳಗೊಂಡಿರುವುದಿಲ್ಲ. ಆದರೆ ಬಳಕೆದಾರರು ಹೆಚ್ಚುವರಿ ಹಣ ಪಾವತಿಸುವ ಮೂಲಕ ಆರು ಸ್ಟ್ರೀಮಿಂಗ್ ಅಪ್ಲಿಕೇಶನ್‌ಗಳಿಗೆ ಪ್ರವೇಶವನ್ನು ಪಡೆಯಬಹುದು.

ಜಿಯೋ ಫೈಬರ್‌ 399 ರೂ. ಪ್ಲಾನ್‌ 30mbps ವೇಗದ ಅನಿಯಮಿತ ಇಂಟರ್‌ನೆಟ್ ಪ್ರಯೋಜನವನ್ನು ನೀಡಲಿದೆ. ಇದಲ್ಲದೆ ಹೆಚ್ಚುವರಿಯಾಗಿ, ಬಳಕೆದಾರರು ತಿಂಗಳಿಗೆ 100 ರೂ. ಹೆಚ್ಚುವರಿ ಪಾವತಿಸುವ ಮೂಲಕ 6 ಮನರಂಜನಾ ಅಪ್ಲಿಕೇಶನ್‌ಗಳಿಗೆ ಪ್ರವೇಶವನ್ನು ಪಡೆಯಬಹುದಾಗಿದೆ. 699 ರೂ. ಪ್ಲಾನ್‌ ನಿಮಗೆ 100mbps ವೇಗದ ಅನಿಯಮಿತ ಇಂಟರ್ನೆಟ್ ಪ್ರಯೋಜನ ನೀಡಲಿದೆ. ಈ ಪ್ಲಾನ್‌ನಲ್ಲಿ ಹೆಚ್ಚುವರಿಯಾಗಿ, ಬಳಕೆದಾರರು ತಿಂಗಳಿಗೆ 100 ರೂ. ಪಾವತಿಸುವ ಮೂಲಕ 6 ಮನರಂಜನಾ ಅಪ್ಲಿಕೇಶನ್‌ಗಳಿಗೆ ಮತ್ತು ಪ್ರತಿ ತಿಂಗಳು 200ರೂ. ಹೆಚ್ಚುವರಿ ಪಾವತಿಸುವ ಮೂಲಕ 14 ಅಪ್ಲಿಕೇಶನ್‌ಗಳಿಗೆ ಪ್ರವೇಶವನ್ನು ಪಡೆಯಬಹುದಾಗಿದೆ. 999 ರೂ. ಪ್ಲಾನ್‌ನಲ್ಲಿ ನೀವು 150mbps ವೇಗದ ಅನಿಯಮಿತ ಇಂಟರ್‌ನೆಟ್‌ ಪ್ರಯೋಜನವನ್ನು ಪಡೆದುಕೊಳ್ಳಬಹುದಾಗಿದೆ. ಜಿಯೋ ಫೈಬರ್‌ 1499 ರೂ. ಪ್ಲಾನ್‌ 300mbps ವೇಗದೊಂದಿಗೆ ಅನಿಯಮಿತ ಇಂಟರ್ನೆಟ್ ಅನ್ನು ನೀಡುತ್ತದೆ. ಈ ಯೋಜನೆಯು ಅಮೆಜಾನ್ ಪ್ರೈಮ್ ವಿಡಿಯೋ ಮತ್ತು ನೆಟ್‌ಫ್ಲಿಕ್ಸ್ ಬೇಸಿಕ್‌ಗೆ ಪ್ರವೇಶವನ್ನು ನೀಡುತ್ತದೆ.

ತಂತ್ರಜ್ಞಾನ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ, ಪ್ರಮುಖ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ