Jio Game Controller: ಜಿಯೋ ಗೇಮ್ ಕಂಟ್ರೋಲರ್ ಬಿಡುಗಡೆ: ಗೇಮಿಂಗ್ ಪ್ರಿಯರು ಫುಲ್ ಫಿದಾ

ಜಿಯೋ ಇದೀಗ ಭಾರತದಲ್ಲಿ ಹೊಸ ಗೇಮ್ ಕಂಟ್ರೋಲರ್ (Jio Game Controller) ಅನ್ನು ಅನಾವರಣ ಮಾಡಿದೆ. ಈ ಸಾಧನವು Android ಟ್ಯಾಬ್ಲೆಟ್‌ಗಳು ಮತ್ತು ಆಂಡ್ರಾಯ್ಡ್ ಟಿವಿ (Android TV) ಗಳಿಗೆ ಹೊಂದಿಕೊಳ್ಳುವ ವೈರ್‌ಲೆಸ್ ಗೇಮಿಂಗ್ ಕಂಟ್ರೋಲರ್ ಆಗಿದೆ.

Jio Game Controller: ಜಿಯೋ ಗೇಮ್ ಕಂಟ್ರೋಲರ್ ಬಿಡುಗಡೆ: ಗೇಮಿಂಗ್ ಪ್ರಿಯರು ಫುಲ್ ಫಿದಾ
Jio Game Controller
Follow us
TV9 Web
| Updated By: Vinay Bhat

Updated on:May 31, 2022 | 11:30 AM

ದೇಶದ ಟೆಲಿಕಾಂ ಮಾರುಕಟ್ಟೆಯಲ್ಲಿ ನಂಬರ್ ಒನ್ ಸ್ಥಾನದಲ್ಲಿರುವ ರಿಲಯನ್ಸ್ (Reliance) ಒಡೆತನದ ಜಿಯೋ ಇದೀಗ ಭಾರತದಲ್ಲಿ ಹೊಸ ಗೇಮ್ ಕಂಟ್ರೋಲರ್ (Jio Game Controller) ಅನ್ನು ಅನಾವರಣ ಮಾಡಿದೆ. ಈ ಸಾಧನವು Android ಟ್ಯಾಬ್ಲೆಟ್‌ಗಳು ಮತ್ತು ಆಂಡ್ರಾಯ್ಡ್ ಟಿವಿ (Android TV) ಗಳಿಗೆ ಹೊಂದಿಕೊಳ್ಳುವ ವೈರ್‌ಲೆಸ್ ಗೇಮಿಂಗ್ ಕಂಟ್ರೋಲರ್ ಆಗಿದೆ. ಈ ಗೇಮ್‌ ಕಂಟ್ರೋಲರ್‌ ಪರಿಚಿತ ಬಟನ್‌ದೊಂದಿಗೆ ಕ್ಲಾಸಿಕ್ ಮತ್ತು ಹಗುರವಾದ ವಿನ್ಯಾಸವನ್ನು ಹೊಂದಿದೆ. ಇದು ತಲ್ಲೀನಗೊಳಿಸುವ ಗೇಮಿಂಗ್ ಅನುಭವಕ್ಕಾಗಿ ಎರಡು ಕಂಪನ ಮೋಟಾರ್‌ಗಳು ಮತ್ತು ಎರಡು ಪ್ರೆಸರ್‌-ಪಾಯಿಂಟ್ ಟ್ರಿಗ್ಗರ್‌ಗಳನ್ನು ಹೊಂದಿದೆ ಎಂದು ಕಂಪನಿ ತಿಳಿಸಿದೆ. ಹಾಗಾದ್ರೆ ಈ ನೂತನ ಜಿಯೋ ಗೇಮ್ ಕಂಟ್ರೋಲರ್ ಸಾಧನವು ಹೇಗಿದೆ? ಇದರ ಬೆಲೆ ಎಷ್ಟು ಎಂಬುದನ್ನು ನೋಡೋಣ.

ಈ ಕಂಟ್ರೋಲರ್‌ ಅನ್ನು ವೈಡ್‌ ರೇಂಜ್‌ ಬ್ಲೂಟೂತ್ ಆಕ್ಟಿವ್‌ ಮಾಡಿದ ಆಂಡ್ರಾಯ್ಡ್‌ ಡಿವೈಸ್‌ಗಳೊಂದಿಗೆ ಸೆಟ್‌ ಮಾಡಬಹುದಾಗಿದೆ. 10 ಮೀಟರ್ ದೂರದ ವರೆಗೆ ವಾಯರ್‌ಲೆಸ್ ರೇಂಜ್‌ ಅನ್ನು ಹೊಂದಿದೆ ಎಂದು ಕಂಪನಿ ಹೇಳಿಕೊಂಡಿದೆ. ಅತ್ಯುತ್ತಮ ಗೇಮಿಂಗ್ ಅನುಭವಕ್ಕಾಗಿ, ಗ್ರಾಹಕರು ಜಿಯೋ ಸೆಟ್-ಟಾಪ್-ಬಾಕ್ಸ್‌ನೊಂದಿಗೆ ಈ ಸಾಧನವನ್ನು ಬಳಸಬೇಕು ಎಂದು ಕಂಪನಿಯು ಸೂಚಿಸಿದೆ. ಗೇಮ್ ಕಂಟ್ರೋಲರ್ ಸಾಧನವು ಚಾರ್ಜ್ ಮಾಡಬಹುದಾದ Li-ion ಬ್ಯಾಟರಿಯನ್ನು ಹೊಂದಿದ್ದು, ಇದು 8 ಗಂಟೆಗಳವರೆಗೆ ಬ್ಯಾಕಪ್ ನೀಡುತ್ತದೆ. ಇದನ್ನು ಚಾರ್ಜ್ ಮಾಡಲು ಮೈಕ್ರೋ-ಯುಎಸ್‌ಬಿ ಪೋರ್ಟ್ ಅನ್ನು ನೀಡಲಾಗಿದೆ.

Vivo Y33e 5G: ಸದ್ದಿಲ್ಲದೆ ಬಜೆಟ್ ಬೆಲೆಗೆ ಬಿಡುಗಡೆ ಆಗಿದೆ ವಿವೋ Y33e 5G ಸ್ಮಾರ್ಟ್‌ಫೋನ್‌: ಏನು ವಿಶೇಷತೆ?

ಇದನ್ನೂ ಓದಿ
Image
ಫ್ಲಿಪ್‌ಕಾರ್ಟ್‌ನ ನವೀಕರಿಸಿದ ಸ್ಮಾರ್ಟ್‌ಫೋನ್ ಮಾರಾಟ ಪುನರಾರಂಭ, ಇಲ್ಲಿವೆ ಕೆಲವು ಕೈಗೆಟಕುವ ದರದಲ್ಲಿ ಲಭ್ಯವಾಗುವ ಐಫೋನ್​ಗಳು
Image
iQoo Neo 6: ಒಂದೇ ದಿನ ಬಾಕಿ: ನಾಳೆ ಭಾರತಕ್ಕೆ ಅಪ್ಪಳಿಸಲಿದೆ ಐಕ್ಯೂ ನಿಯೋ 6 5G
Image
Oneplus Nord CE 2 Lite 5G: 20 ಸಾವಿರ ರೂ. ಒಳಗಡೆ ಬೊಂಬಾಟ್ ಫೋನ್ ಹುಡುಕುತ್ತಿದ್ದರೆ ಇದುವೇ ಬೆಸ್ಟ್ ಆಯ್ಕೆ
Image
WhatsApp: ನಿಮ್ಮ ಸ್ನೇಹಿತರಿಗೆ ತಿಳಿಯದಂತೆ ಅವರ ವಾಟ್ಸ್​ಆ್ಯಪ್ ಸ್ಟೇಟಸ್ ನೋಡುವ ಟ್ರಿಕ್ ಗೊತ್ತೇ?

ಇದು ಎರಡು ಪ್ರೆಸರ್‌ ಪಾಯಿಂಟ್‌ ಮತ್ತು 8 ಡೈರೆಕ್ಷನ್‌ ಆರೋ ಬಟನ್ ಸೇರಿದಂತೆ 20 ಬಟನ್ ವಿನ್ಯಾಸವನ್ನು ಜೊತೆಗೆ ಎರಡು ಜಾಯ್‌ ಸ್ಟಿಕ್‌ ಅನ್ನು ಕೂಡ ಹೊಂದಿದೆ. ಇನ್ನು ಈ ಕಂಟ್ರೋಲರ್‌ ವೈಬ್ರೇಶನ್‌ ಫಿಡ್‌ಬ್ಯಾಕ್‌ ಮೋಟಾರ್‌ ಮತ್ತು ಹ್ಯಾಪ್ಟಿಕ್ ಕಂಟ್ರೋಲರ್‌ ಅನ್ನು ಬೆಂಬಲಿಸಲಿದೆ. 153x58x110mm ಆಯಾಮಗಳನ್ನು ಹೊಂದಿರುವ ಈ ಸಾಧನವು ಸುಮಾರು 200g ನಷ್ಟು ತೂಗುತ್ತದೆ ಎಂದು ತಿಳಿದುಬಂದಿದೆ.

ಇದು ಜಿಯೋವಿನ ಮೊಟ್ಟ ಮೊದಲ ವೈರ್‌ಲೆಸ್ ಗೇಮಿಂಗ್ ಕಂಟ್ರೋಲರ್ ಸಾಧನವಾಗಿದೆ. ಇದು ಪ್ರಸ್ತುತ ಅಧಿಕೃತ ಜಿಯೋ ಸೈಟ್‌ನಲ್ಲಿ ಖರೀದಿಗೆ ಲಭ್ಯವಿದೆ. ಈ ಸಾಧನವ ಬೆಲೆ 3,499 ರೂ.ಗಳಾಗಿದೆ.

ತಂತ್ರಜ್ಞಾನ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ, ಪ್ರಮುಖ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 11:30 am, Tue, 31 May 22

‘ನನಗೂ ಹೊಟ್ಟೆ ಉರಿಯುತ್ತಿದೆ’; ಕಳಪೆ ಪಡೆದ ರಜತ್​ನಿಂದ ಮನೆಯವರಿಗೆ ಕಿರಿಕಿರಿ
‘ನನಗೂ ಹೊಟ್ಟೆ ಉರಿಯುತ್ತಿದೆ’; ಕಳಪೆ ಪಡೆದ ರಜತ್​ನಿಂದ ಮನೆಯವರಿಗೆ ಕಿರಿಕಿರಿ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ