WhatsApp: ನಿಮ್ಮ ಸ್ನೇಹಿತರಿಗೆ ತಿಳಿಯದಂತೆ ಅವರ ವಾಟ್ಸ್ಆ್ಯಪ್ ಸ್ಟೇಟಸ್ ನೋಡುವ ಟ್ರಿಕ್ ಗೊತ್ತೇ?
WhatsApp Tips and Tricks: ವಾಟ್ಸ್ಆ್ಯಪ್ನಲ್ಲಿ ಬೇರೆ ಅವರು ಹಂಚಿಕೊಂಡ ಸ್ಟೇಟಸ್ ಅನ್ನು ಅವರಿಗೆ ತಿಳಿಯದಂತೆ ನೋಡಬಹುದು. ಇದಕ್ಕೂ ಟ್ರಿಕ್ಗಳಿವೆ. ಇದಕ್ಕಾಗಿ ನೀವು ಥರ್ಡ್ ಪಾರ್ಟಿ ಆ್ಯಪ್ (Third Party App) ಮೊರೆ ಹೋಗಬೇಕು ಅಂತಿಲ್ಲ.
ಮೆಟಾ (Meta) ಒಡೆತನದ ವಾಟ್ಸ್ಆ್ಯಪ್ ಮೆಸೇಜಿಂಗ್ ಅಪ್ಲಿಕೇಶನ್ ಇಂದು ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿದೆ. ಹೊಸ ಹೊಸ ಅಪ್ಡೇಟ್ಗಳುಳ್ಳ ನೂತನ ಫೀಚರ್ಗಳನ್ನೂ ನೀಡುತ್ತಿದೆ. ವಿಶ್ವದಲ್ಲಿ 200 ಕೋಟಿಗೂ ಅಧಿಕ ಮಂದಿ ಉಪಯೋಗಿಸುತ್ತಿರುವ ವಾಟ್ಸ್ಆ್ಯಪ್ನಲ್ಲಿ (WhatsApp) ಅನೇಕ ಮಂದಿಗೆ ತಿಳಿದಿರದ ಅದೆಷ್ಟೊ ಟ್ರಿಕ್ಗಳಿವೆ. ಅದು ಡಿಲೀಟ್ ಆದ ಮೆಸೇಜ್ ಅನ್ನು ನೋಡುವುದು ಇರಬಹುದು ಅಥವಾ ನಮ್ಮ ಡಿಪಿಯನ್ನು ಯಾರೆಲ್ಲ ನೋಡಿದ್ದಾರೆಂದು ತಿಳಿಯುವುದು ಇರಬಹುದು. ಅಂತೆಯೆ ವಾಟ್ಸ್ಆ್ಯಪ್ನಲ್ಲಿ ಬೇರೆ ಅವರು ಹಂಚಿಕೊಂಡ ಸ್ಟೇಟಸ್ ಅನ್ನು ಅವರಿಗೆ ತಿಳಿಯದಂತೆ ನೋಡಬಹುದು. ಇದಕ್ಕೂ ಟ್ರಿಕ್ಗಳಿವೆ. ಇದಕ್ಕಾಗಿ ನೀವು ಥರ್ಡ್ ಪಾರ್ಟಿ ಆ್ಯಪ್ (Third Party App) ಮೊರೆ ಹೋಗಬೇಕು ಅಂತಿಲ್ಲ. ಬದಲಾಗಿ ವಾಟ್ಸ್ಆ್ಯಪ್ ಸೆಟ್ಟಿಂಗ್ನಲ್ಲಿ ಕೊಂಚ ಬದಲಾವಣೆ ಮಾಡುವ ಮೂಲಕ ಈ ಟ್ರಿಕ್ ಉಪಯೋಗಿಸಬಹುದು.
ವಾಟ್ಸ್ಆ್ಯಪ್ ಸ್ಟೇಟಸ್ ಇಂದು ಸಿಕ್ಕಾಪಟ್ಟೆ ಫೇಮಸ್ ಆಗಿದ್ದು, ಬಹುತೇಕ ಬಳಕೆದಾರರು ಈ ಆಯ್ಕೆಯನ್ನು ಮಿಸ್ ಮಾಡದೇ ಬಳಸುತ್ತಾರೆ. ವಾಟ್ಸ್ಆ್ಯಪ್ ಸ್ಟೇಟಸ್ 24 ಗಂಟೆಗಳ ಅವಧಿ ಕಾಲಮಿತಿ ಹೊಂದಿದ್ದು, ಆ ನಂತರ ಆಟೋಮ್ಯಾಟಿಕ್ ಆಗಿ ಸ್ಟೇಟಸ್ ಡಿಲೀಟ್ ಆಗಿಬಿಡುತ್ತದೆ. ಇತ್ತೀಚೆಗಷ್ಟೆ ವಾಟ್ಸ್ಆ್ಯಪ್ ಸ್ಟೇಟಸ್ನಲ್ಲೇ ಫೋಟೋ ಎಡಿಟಿಂಗ್ ಆಯ್ಕೆ ನೀಡಿದೆ. ವಾಟ್ಸ್ಆ್ಯಪ್ ಯಾರೆಲ್ಲಾ ಸ್ಟೇಟಸ್ ವೀಕ್ಷಿಸಿದ್ದಾರೇ ಎನ್ನುವ ಮಾಹಿತಿ ಬಳಕೆದಾರರಿಗೆ ಸಾಮಾನ್ಯವಾಗಿ ಸಿಗುತ್ತದೆ. ಆದರೆ ನೀವು ಅವರ ಸ್ಟೇಟಸ್ ನೋಡಿದರೂ ಅದು ಅವರಿಗೆ ತಿಳಿಯದಂತೆ ಸೆಟ್ ಮಾಡಬಹುದಾಗಿದೆ. ಅದಕ್ಕೆ ಇಲ್ಲಿದೆ ನೋಡಿ ಟ್ರಿಕ್.
Oppo A16K: ಬಜೆಟ್ ಬೆಲೆಯ ಒಪ್ಪೋ A16K ಸ್ಮಾರ್ಟ್‌ಫೋನ್ ಬೆಲೆಯಲ್ಲಿ ಮತ್ತಷ್ಟು ಕಡಿತ: ನೂತನ ದರ ಇಲ್ಲಿದೆ
- ಮೊದಲು ನಿಮ್ಮ ಫೋನ್‌ನಲ್ಲಿನ ವಾಟ್ಸ್ಆ್ಯಪ್ ಅಪ್ಲಿಕೇಶನ್‌ಗೆ ಹೋಗಿ.
- ನಂತರ ಮುಂದುವರಿಯಿರಿ ಮತ್ತು ಸೆಟ್ಟಿಂಗ್‌ಗಳ ಮೆನು ತೆರೆಯಿರಿ.
- ಆನಂತರ ಪ್ರೈವಸಿ ಸೆಟ್ಟಿಂಗ್‌ಗೆ ಕೆಳಗೆ ಸ್ಕ್ರಾಲ್ ಮಾಡಿ.
- ನೀವು ಅಲ್ಲಿ ಕೆಲವು ಆಯ್ಕೆಗಳನ್ನು ನೋಡಲು ಸಾಧ್ಯವಾಗುತ್ತದೆ. ಸ್ಕ್ರೀನ್ ಕೆಳಭಾಗದಲ್ಲಿರುವ Read receipts ಆಯ್ಕೆಯನ್ನು ನಿಷ್ಕ್ರಿಯಗೊಳಿಸಿ.
- ಅದನ್ನು ಸಕ್ರಿಯಗೊಳಿಸಿದ ನಂತರ, ನೀವು ಬಳಕೆದಾರರ(ನಿಮ್ಮ ಕಾಂಟ್ಯಾಕ್ಟ್) ವಾಟ್ಸ್ಆ್ಯಪ್ ಸ್ಟೇಟಸ್ ವೀಕ್ಷಿಸಿದ್ದಿರಾ ಅಥವಾ ಇಲ್ಲವೇ ಎಂಬುದನ್ನು ಅವರ ಸಂಪರ್ಕಕ್ಕೆ ತಿಳಿಯಲು ಸಾಧ್ಯವಾಗುವುದಿಲ್ಲ.
ವಾಟ್ಸ್ಆ್ಯಪ್ನಲ್ಲಿ ಡಿಜಿಲಾಕರ್ ಸೇವೆ:
ಭಾರತದಲ್ಲಿ ವಾಟ್ಸ್ಆ್ಯಪ್ ಮೂಲಕ ಬಳಕೆದಾರರು ಪ್ಯಾನ್ ಕಾರ್ಡ್, ಡ್ರೈವಿಂಗ್ ಲೈಸೆನ್ಸ್ ಮತ್ತು ವಿಮಾ ಪಾಲಿಸಿಯಂತಹ ದಾಖಲೆಗಳನ್ನು ಡೌನ್‌ಲೋಡ್ ಮಾಡಲು ಅನುವು ಮಾಡಿಕೊಡಲು ಸರ್ಕಾರ ಮುಂದಾಗಿದೆ. MyGov ಹೆಲ್ಫ ಡೆಸ್ಕ್ ವಾಟ್ಸ್ಆ್ಯಪ್ ಜೊತೆಗೆ ಪಾಲುದಾರಿಕೆಯನ್ನು ಮಾಡಿಕೊಂಡಿದ್ದು, ಇನ್ಮುಂದೆ ಡಿಜಿಲಾಕರ್ ಸೇವೆಗಳು ವಾಟ್ಸ್ಆ್ಯಪ್ನಲ್ಲಿ ಕೂಡ ಲಭ್ಯವಾಗಲಿದೆ. ಅದರಂತೆ ವಾಟ್ಸ್ಆ್ಯಪ್ ಬಳಕೆದಾರರು ಡಿಜಿಲಾಕರ್ ಖಾತೆಯನ್ನು ರಚಿಸುವುದು ಮತ್ತು ದೃಢೀಕರಿಸುವುದು ಮತ್ತು ಪ್ಯಾನ್ ಕಾರ್ಡ್, ಡ್ರೈವಿಂಗ್ ಲೈಸೆನ್ಸ್, ವಾಹನ ನೋಂದಣಿ ಪ್ರಮಾಣಪತ್ರ ಮುಂತಾದ ದಾಖಲೆಗಳನ್ನು ಡೌನ್‌ಲೋಡ್ ಮಾಡುವುದಕ್ಕೆ ಅವಕಾಶ ಮಾಡಿಕೊಡಲಾಗಿದೆ.
ವಾಟ್ಸ್ಆ್ಯಪ್ನಲ್ಲಿ MyGov ಹೆಲ್ಪ್‌ಡೆಸ್ಕ್ ಆಡಳಿತ ಮತ್ತು ಸರ್ಕಾರಿ ಸೇವೆಗಳು ನಾಗರಿಕರ ಬೆರಳ ತುದಿಯಲ್ಲಿ ಸಿಗುವಂತೆ ಮಾಡಲು ವಾಟ್ಸ್ಆ್ಯಪ್ ಸಹಾಯವಾಣಿ ಸಂಖ್ಯೆಯನ್ನು ತೆರೆಯಲಾಗಿದೆ. ಈ ಸಹಾಯವಾಣಿ ಸಂಖ್ಯೆಯ ಸಹಾಯದಿಂದ ಡಿಜಿಲಾಕರ್ ಖಾತೆಗೆ ಸೈನ್ ಅಪ್ ಆಗುವ ಮೂಲಕ ವಾಟ್ಸ್ಆ್ಯಪ್ನಲ್ಲಿ ದಾಖಲೆಗಳನ್ನು ಪಡೆಯಬಹುದು. ಈಗಾಗಲೇ ಡಿಜಿಲಾಕರ್ ಅಕೌಂಟ್ ಅನ್ನು ನೀವು ಈಗಾಗಲೇ ಒಂದನ್ನು ಹೊಂದಿದ್ದರೆ, ದಾಖಲೆಗಳನ್ನು ಪಡೆಯುವುದು ಸುಲಭವಾಗುತ್ತದೆ.
ತಂತ್ರಜ್ಞಾನ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ, ಪ್ರಮುಖ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ