Oppo Reno 8 Series: ಒಪ್ಪೋ ರೆನೋ 8 ಸರಣಿಯ ಮೂರೂ ಫೋನ್​ಗೆ ಕ್ಯಾಮೆರಾ ಪ್ರಿಯರು ಕ್ಲೀನ್ ಬೌಲ್ಡ್: ಬೆಲೆ ಎಷ್ಟು?

Oppo Reno 8 Series: ಒಪ್ಪೋ ರೆನೋ 8 ಸರಣಿಯ ಮೂರೂ ಫೋನ್​ಗೆ ಕ್ಯಾಮೆರಾ ಪ್ರಿಯರು ಕ್ಲೀನ್ ಬೌಲ್ಡ್: ಬೆಲೆ ಎಷ್ಟು?
Oppo Reno 8 Series

Oppo Reno 8, the Oppo Reno 8 Pro, Reno 8 Pro+: ಇದರಲ್ಲಿ ಆಕರ್ಷಕ ಕ್ಯಾಮೆರಾ ನೀಡಲಾಗಿದ್ದು ಟೆಕ್ ಪ್ರಿಯರಂತು ಫುಲ್ ಫಿದಾ ಆಗಿದ್ದಾರೆ. ಈ ಸರಣಿ ಅಡಿಯಲ್ಲಿ ಒಟ್ಟು ಮೂರು ಫೋನ್​ಗಳನ್ನು ರಿಲೀಸ್ ಮಾಡಲಾಗಿದೆ. ಅದು ಒಪ್ಪೋ ರೆನೋ 8, ರೆನೋ 8 ಪ್ರೊ, ಮತ್ತು ಒಪ್ಪೋ ರೆನೋ 8 ಪ್ರೊ+ (Oppo Reno 8, the Oppo Reno 8 Pro, Reno 8 Pro+) ಆಗಿದೆ.

TV9kannada Web Team

| Edited By: Vinay Bhat

May 24, 2022 | 3:07 PM

ಬಿಡುಗಡೆಗೂ ಮುನ್ನವೇ ಕ್ಯಾಮೆರಾ ಪ್ರಿಯರ ನಿದ್ದೆ ಕೆಡಿಸಿದ್ದ ಒಪ್ಪೋ ರೆನೋ 8 ಸರಣಿ (Oppo Reno 8 Series) ಇದೀಗ ಅನಾವರಣಗೊಂಡಿದೆ. ಅಂದುಕೊಂಡಂತೆ ಇದರಲ್ಲಿ ಆಕರ್ಷಕ ಕ್ಯಾಮೆರಾ ನೀಡಲಾಗಿದ್ದು ಟೆಕ್ ಪ್ರಿಯರಂತು ಫುಲ್ ಫಿದಾ ಆಗಿದ್ದಾರೆ. ಈ ಸರಣಿ ಅಡಿಯಲ್ಲಿ ಒಟ್ಟು ಮೂರು ಫೋನ್​ಗಳನ್ನು ರಿಲೀಸ್ ಮಾಡಲಾಗಿದೆ. ಅದು ಒಪ್ಪೋ ರೆನೋ 8, ರೆನೋ 8 ಪ್ರೊ, ಮತ್ತು ಒಪ್ಪೋ ರೆನೋ 8 ಪ್ರೊ+ (Oppo Reno 8, the Oppo Reno 8 Pro, Reno 8 Pro+) ಆಗಿದೆ. ಈ ಸ್ಮಾರ್ಟ್​​ಫೋನ್ ಸುಧಾರಿತ ವಿನ್ಯಾಸ, ಅಪ್‌ಡೇಟ್‌ ಚಾರ್ಜಿಂಗ್ ಸೌಲಭ್ಯಗಳೊಂದಿಗೆ ಕಾಣಿಸಿಕೊಂಡಿವೆ. ವಿಶೇಷ ಎಂದರೆ ಒಪ್ಪೋ ರೆನೋ 8 ಪ್ರೊ ಅತ್ಯಂತ ಬಲಿಷ್ಠವಾದ ಸ್ನ್ಯಾಪ್‌ಡ್ರಾಗನ್ 7 ಜೆನ್‌ 1 SoC ಹೊಂದಿರುವ ವಿಶ್ವದ ಮೊದಲ ಫೋನ್ ಆಗಿದೆ. ಇದರ ಬೆಲೆ, ಫೀಚರ್ಸ್ ಬಗ್ಗೆ ಮಾಹಿತಿ ಇಲ್ಲಿದೆ.

ಇದನ್ನೂ ಓದಿ

  1. ಒಪ್ಪೋ ರೆನೋ 8 ಫೋನ್ 6.43 ಇಂಚಿನ ಪೂರ್ಣ HD+ AMOLED ಡಿಸ್ ಪ್ಲೇ ಮತ್ತು 90Hz ಸ್ಕ್ರೀನ್ ರಿಫ್ರೆಶ್ ದರದೊಂದಿಗೆ ಬರುತ್ತದೆ. ಇದು 800 ನಿಟ್‌ಗಳ ಗರಿಷ್ಠ ಬ್ರೈಟ್ನೆಸ್‌ ಹೊಂದಿದೆ ಮತ್ತು ಪರದೆಯು ಗೊರಿಲ್ಲಾ ಗ್ಲಾಸ್ 5 ನಿಂದ ರಕ್ಷಿಸಲ್ಪಟ್ಟಿದೆ.
  2. ಮೀಡಿಯಾ ಟೆಕ್‌ನಿಂದ ಡೈಮೆನ್ಸಿಟಿ 1300 SoC ನಿಂದ ಫೋನ್ ಚಾಲಿತವಾಗಿದೆ. ಹಾಗೆಯೇ ಈ ಫೋನಿನ ಮುಖ್ಯ ಕ್ಯಾಮೆರಾವು 50 ಮೆಗಾ ಪಿಕ್ಸಲ್‌ ಸೆನ್ಸಾರ್ ಹೊಂದಿದ್ದು, 32 ಮೆಗಾ ಪಿಕ್ಸಲ್ ಸೆನ್ಸಾರ್ ಸೆಲ್ಫಿ ಕ್ಯಾಮೆರಾ ಒಳಗೊಂಡಿದೆ.
  3. ಸೂಪರ್ ಫ್ಲ್ಯಾಶ್ ಚಾರ್ಜಿಂಗ್‌ನಿಂದ ಬೆಂಬಲಿತವಾದ 4500mAh ಬ್ಯಾಟರಿ ಸಾಮರ್ಥ್ಯ ಪಡೆದಿದೆ. ಜೊತೆಗೆ ಈ ಫೋನ್ ಇನ್-ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸ್ಕ್ಯಾನರ್, ವೈ-ಫೈ 6, ಬ್ಲೂಟೂತ್ 5.2, ಎನ್‌ಎಫ್‌ಸಿ, ಟೈಪ್-ಸಿ ಪೋರ್ಟ್ ಸೌಲಭ್ಯ ಪಡೆದಿದೆ.
  4. ಇನ್ನು ಒಪ್ಪೋ ರೆನೋ 8 ಪ್ರೊ ಪ್ಲಸ್‌ ಫೋನ್ 2412 × 1080 ಪಿಕ್ಸೆಲ್‌ಗಳೊಂದಿಗೆ 120Hz 6.7 ಇಂಚಿನ ಪೂರ್ಣ HD+ AMOLED ಡಿಸ್ ಪ್ಲೇ, 93.4% ಸ್ಕ್ರೀನ್ ಟು ಬಾಡಿ ಅನುಪಾತ, 360Hz ಸ್ಪರ್ಶ ಮಾದರಿ ದರ, 100% DCI-P3, ಮತ್ತು 950nits ಗರಿಷ್ಠ ಹೊಳಪನ್ನು ಹೊಂದಿದೆ.
  5. ಇದು ಡೈಮೆನ್ಸಿಟಿ 8100 ಮ್ಯಾಕ್ಸ್ SoC ನಿಂದ ಚಾಲಿತವಾಗಿದೆ. ಅಲ್ಲದೇ ಈ ಫೋನ್ 12GB RAM ಮತ್ತು 256GB UFS3.1 ಸಂಗ್ರಹಣೆಯನ್ನು ನೀಡುತ್ತದೆ. ಈ ಫೋನಿನ ಮುಖ್ಯ ಕ್ಯಾಮೆರಾವು 50 ಮೆಗಾ ಪಿಕ್ಸಲ್‌ ಸೆನ್ಸಾರ್ ಹೊಂದಿದ್ದು, 32 ಮೆಗಾ ಪಿಕ್ಸಲ್ ಸೆನ್ಸಾರ್ ಸೆಲ್ಫಿ ಕ್ಯಾಮೆರಾ ಒಳಗೊಂಡಿದೆ. ಇದರೊಂದಿಗೆ ಸೂಪರ್ ಫ್ಲ್ಯಾಶ್ ಚಾರ್ಜಿಂಗ್‌ನಿಂದ ಬೆಂಬಲಿತವಾದ 4500mAh ಬ್ಯಾಟರಿ ಸಾಮರ್ಥ್ಯ ಪಡೆದಿದೆ.
  6. ಒಪ್ಪೋ ರೆನೋ 8 ಪ್ರೊ ಈ ಫೋನ್ 2400 × 1080 ಪಿಕ್ಸೆಲ್‌ಗಳೊಂದಿಗೆ 120Hz 6.62 ಇಂಚಿನ ಪೂರ್ಣ HD+ AMOLED ಡಿಸ್ ಪ್ಲೇ ಮತ್ತು 92% ಸ್ಕ್ರೀನ್ ಟು ಬಾಡಿ ಅನುಪಾತವನ್ನು ಹೊಂದಿದೆ.
  7. ಇದು 2.4GHz ವರೆಗಿನ ಗಡಿಯಾರದ ವೇಗದೊಂದಿಗೆ ಸ್ನ್ಯಾಪ್‌ಡ್ರಾಗನ್ 7 ಜೆನ್‌ 1 SoC ನಿಂದ ಚಾಲಿತವಾಗಿದೆ. ಇದು 12GB RAM ಮತ್ತು 256GB UFS 2.2 ಸಂಗ್ರಹಣೆಯೊಂದಿಗೆ ಬರುತ್ತದೆ.
  8. ಈ ಫೋನಿನ ಮುಖ್ಯ ಕ್ಯಾಮೆರಾವು 50 ಮೆಗಾ ಪಿಕ್ಸಲ್‌ ಸೆನ್ಸಾರ್ ಹೊಂದಿದ್ದು, 32 ಮೆಗಾ ಪಿಕ್ಸಲ್ ಸೆನ್ಸಾರ್ ಸೆಲ್ಫಿ ಕ್ಯಾಮೆರಾ ಒಳಗೊಂಡಿದೆ. ಇದರೊಂದಿಗೆ ಸೂಪರ್ ಫ್ಲ್ಯಾಶ್ ಚಾರ್ಜಿಂಗ್‌ನಿಂದ ಬೆಂಬಲಿತವಾದ 4500mAh ಬ್ಯಾಟರಿ ಸಾಮರ್ಥ್ಯ ಪಡೆದಿದೆ.
  9. ಒಪ್ಪೋ ರೆನೋ 8 ಬೆಲೆ CNY 2499 (ಭಾರತದಲ್ಲಿ ಅಂದಾಜು 29,100ರೂ) ಆಗಿದೆ. ಅಂತೆಯೆ ಒಪ್ಪೋ ರೆನೋ 8 ಪ್ರೊ ಪ್ಲಸ್‌ CNY 3699 (ಭಾರತದಲ್ಲಿ ಅಂದಾಜು 43,100ರೂ), ಒಪ್ಪೋ ರೆನೋ 8 ಪ್ರೊ CNY 2999 (ಭಾರತದಲ್ಲಿ ಅಂದಾಜು 35,000ರೂ). ಈ ಫೋನ್‌ಗಳು ಕೆಲವೇ ತಿಂಗಳುಗಳಲ್ಲಿ ಭಾರತಕ್ಕೂ ಕಾಲಿಡಲಿದೆ.

ತಂತ್ರಜ್ಞಾನ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ, ಪ್ರಮುಖ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow us on

Related Stories

Most Read Stories

Click on your DTH Provider to Add TV9 Kannada