ಪ್ರಸಿದ್ಧ ಇನ್ಫಿನಿಕ್ಸ್ ಕಂಪನಿ ತನ್ನ ನೋಟ್ ಹಾಗೂ ಹಾಟ್ ಸರಣಿಯಲ್ಲಿ ಆಕರ್ಷಕ ಸ್ಮಾರ್ಟ್ಫೋನ್ಗಳನ್ನು (Smartphone) ಒಂದರ ಹಿಂದೆ ಒಂದರಂತೆ ಬಲೆಟ್ ಬೆಲೆಗೆ ಪರಿಚಯಿಸುತ್ತಲೇ ಇದೆ. ಇತ್ತೀಚೆಗಷ್ಟೆ ಹೊಸ ಇನ್ಫಿನಿಕ್ಸ್ ನೋಟ್ 12 ಸರಣಿ (Infinix Note 12 series) ಅಡಿಯಲ್ಲಿ ಇನ್ಫಿನಿಕ್ಸ್ ನೋಟ್ 12 ಮತ್ತು ಇನ್ಫಿನಿಕ್ಸ್ ನೋಟ್ 12 ಟರ್ಬೋ ಫೋನನ್ನು ಲಾಂಚ್ ಮಾಡಿತ್ತು. ಇದರ ಬೆನ್ನಲ್ಲೇ ಇದೀಗ ಭಾರತದಲ್ಲಿ ಹೊಸ ಇನ್ಫಿನಿಕ್ಸ್ ಹಾಟ್ 12 ಪ್ಲೇ (Infinix Hot 12 Play) ಸ್ಮಾರ್ಟ್ಫೋನನ್ನು ಅನಾವರಣ ಮಾಡಿದೆ. ಅಚ್ಚರಿ ಎಂದರೆ ಈ ಸ್ಮಾರ್ಟ್‌ಫೋನ್ ಬರೋಬ್ಬರಿ 6,000mAh ಸಾಮರ್ಥ್ಯದ ಬಿಗ್ ಬ್ಯಾಟರಿಯನ್ನು ಒಳಗೊಂಡಿದೆ. ಇದು 10W ಪ್ರಮಾಣಿತ ಚಾರ್ಜಿಂಗ್ ಅನ್ನು ಬೆಂಬಲಿಸುತ್ತಿದ್ದು, 90Hz ರಿಫ್ರೆಶ್ ರೇಟ್ ಹೊಂದಿರುವ ಆಕರ್ಷಕ ಡಿಸ್‌ಪ್ಲೇ ಯನ್ನು ಕೂಡ ನೀಡಲಾಗಿದೆ. ಹಾಗಾದ್ರೆ ಇದರ ಬೆಲೆ ಎಷ್ಟು?, ಏನೆಲ್ಲ ಫೀಚರ್ಸ್ ಇದೆ ಎಂಬುದನ್ನು ನೋಡೋಣ.
- ಇನ್ಫಿನಿಕ್ಸ್ ಹಾಟ್ 12 ಪ್ಲೇ ಭಾರತದಲ್ಲಿ ಸದ್ಯಕ್ಕೆ ಒಂದು ಸ್ಟೋರೆಜ್ ಆಯ್ಕೆಯಲ್ಲಿ ಬಿಡುಗಡೆ ಆಗಿದೆಯಷ್ಟೆ. ಇದರ 4GB + 64GB ಸ್ಟೋರೇಜ್ ರೂಪಾಂತರಕ್ಕೆ 8,499 ರೂ. ನಿಗದಿ ಮಾಡಲಾಗಿದೆ. ಈ ಸ್ಮಾರ್ಟ್‌ಫೋನ್ ಷಾಂಪೇನ್ ಗೋಲ್ಡ್, ಡೇಲೈಟ್ ಗ್ರೀನ್, ಹಾರಿಜಾನ್ ಬ್ಲೂ ಮತ್ತು ರೇಸಿಂಗ್ ಬ್ಲ್ಯಾಕ್ ಬಣ್ಣದ ಆಯ್ಕೆಗಳಲ್ಲಿ ಬರುತ್ತದೆ.
- ಇದೇದು ಮೇ 30 ರಿಂದ ಪ್ರಸಿದ್ಧ ಇ ಕಾಮರ್ಸ್ ತಾಣವಾದ ಫ್ಲಿಪ್‌ಕಾರ್ಟ್ ಮೂಲಕ ಮಾರಾಟವಾಗಲಿದೆ. ಇನ್ನು ಈ ಸ್ಮಾರ್ಟ್‌ಫೋನಿನ ಪ್ರಸ್ತುತ ಬೆಲೆ ಲಾಂಚ್ ಆಫರ್ ಬೆಲೆಯಾಗಿದೆ. ಆದರೆ ಈ ಲಾಂಚ್ ಆಫರ್ ಬೆಲೆ ಎಷ್ಟು ಕಾಲ ಉಳಿಯುತ್ತದೆ ಎಂಬುದರ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ.
- ಇನ್ಫಿನಿಕ್ಸ್ ಹಾಟ್ 12 ಪ್ಲೇ 1,640×720 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯದ 6.82-ಇಂಚಿನ ಫುಲ್ HD+ ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇ 90Hz ರಿಫ್ರೆಶ್ ರೇಟ್ ಮತ್ತು 180Hz ಟಚ್ ಸ್ಯಾಂಪ್ಲಿಂಗ್ ರೇಟ್ ಅನ್ನು ಒಳಗೊಂಡಿದೆ.
- ಆಕ್ಟಾ-ಕೋರ್ ಯೂನಿಸೋಕ್ T610 SoC ಪ್ರೊಸೆಸರ್ ಬಲವನ್ನು ಹೊಂದಿದೆ. ಇದು ಆಂಡ್ರಾಯ್ಡ್ 11 ನಲ್ಲಿ XOS 10 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಹಾಗೆಯೇ 4GB RAM ಮತ್ತು 64GB ಇಂಟರ್ ಸ್ಟೋರೇಜ್ ಹೊಂದಿದೆ. ಇದಲ್ಲದೆ ಹೆಚ್ಚುವರಿ ಅಂತರ್ಗತ ಸಂಗ್ರಹಣೆಯನ್ನು ಬಳಸಿಕೊಂಡು RAM ಅನ್ನು 3GB ವರೆಗೆ ವಿಸ್ತರಿಸಬಹುದು.
- ಕ್ವಾಡ್-LED ಫ್ಲ್ಯಾಷ್ ಜೊತೆಗೆ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಒಳಗೊಂಡಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 13-ಮೆಗಾಪಿಕ್ಸೆಲ್ ಸೆನ್ಸಾರ್ ಅನ್ನು ಹೊಂದಿದೆ. ಇದಲ್ಲದೆ ಡ್ಯುಯಲ್ LED ಫ್ಲ್ಯಾಷ್‌ನೊಂದಿಗೆ 8 ಮೆಗಾಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ.
- ಇನ್ಫಿನಿಕ್ಸ್ ಹಾಟ್ 12 ಪ್ಲೇ ಸ್ಮಾರ್ಟ್‌ಫೋನ್ 6,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದು 10W ಪ್ರಮಾಣಿತ ಚಾರ್ಜಿಂಗ್ ಬೆಂಬಲಿಸಲಿದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ 4G LTE, WCDMA, ಬ್ಲೂಟೂತ್ v5ಯನ್ನು ಹೊಂದಿದೆ.
ತಂತ್ರಜ್ಞಾನ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ, ಪ್ರಮುಖ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ