iPhone SE 2022: ಐಫೋನ್ ಖರೀದಿಗೆ ಕ್ಯೂ ನಿಂತ ಜನರು: ಕೇವಲ 18,599 ರೂ. ಗೆ ಸಿಗುತ್ತಿದೆ ಆ್ಯಪಲ್ ಫೋನ್
iPhone SE 2022 Offer: ಕಡಿಮೆ ಮೊತ್ತಕ್ಕೆ ಆ್ಯಪಲ್ ಐಫೋನ್ ಎಸ್ಇ (iPhone SE) ಮಾರಾಟ ಆಗುತ್ತಿದೆ. ಹೌದು, ಪ್ರಸಿದ್ಧ ಇ ಕಾಮರ್ಸ್ ತಾಣವಾದ ಫ್ಲಿಪ್ಕಾರ್ಟ್ (Flipkart) ಇದೇ ಮೊದಲ ಬಾರಿಗೆ ಅತ್ಯಂತ ಕಡಿಮೆ ಬೆಲೆಗೆ ಐಫೋನ್ ಖರೀದಿಸುವ ಅವಕಾಶ ಮಾಡಿಕೊಟ್ಟಿದೆ.
ನಾನೊಂದು ಐಫೋನ್ ಖರೀದಿಸಬೇಕು ಎಂಬುದು ಪ್ರತಿಯೊಬ್ಬ ಸ್ಮಾರ್ಟ್ಫೋನ್ (Smartphone) ಪ್ರಿಯರ ಕನಸು. ಆದರೆ, ಅದರ ಬೆಲೆ ಗಗನದೆತ್ತರಕ್ಕೆ ಇರುತ್ತದೆ. ಪ್ರಸಿದ್ಧ ಇ ಕಾಮರ್ಸ್ ತಾಣಗಳಲ್ಲಿ ಆ ಸೇಲ್, ಈ ಸೇಲ್ ಎಂಬುದು ಬಂದು ಆಫರ್ನಲ್ಲಿ ಖರೀದಿಸೋಣ ಎಂದರೂ ಅಷ್ಟೊಂದು ಹಣ ಇರುವುದಿಲ್ಲ. ಆದರೆ, ಇದೇ ಮೊದಲ ಬಾರಿಗೆ ಎಂಬಂತೆ ಐಫೋನ್ ಖರೀದಿಸಲು ಜನ ಕ್ಯೂ ನಿಂತುಕೊಂಡಿದ್ದಾರೆ. ಯಾಕಂದ್ರೆ ಈಗ ಅಷ್ಟೊಂದು ಕಡಿಮೆ ಮೊತ್ತಕ್ಕೆ ಆ್ಯಪಲ್ ಐಫೋನ್ ಎಸ್ಇ (iPhone SE) ಮಾರಾಟ ಆಗುತ್ತಿದೆ. ಹೌದು, ಪ್ರಸಿದ್ಧ ಇ ಕಾಮರ್ಸ್ ತಾಣವಾದ ಫ್ಲಿಪ್ಕಾರ್ಟ್ (Flipkart) ಇದೇ ಮೊದಲ ಬಾರಿಗೆ ಅತ್ಯಂತ ಕಡಿಮೆ ಬೆಲೆಗೆ ಐಫೋನ್ ಖರೀದಿಸುವ ಅವಕಾಶ ಮಾಡಿಕೊಟ್ಟಿದೆ. ಇದನ್ನು ನೀವು ಕೇವಲ ಅನೇಕ ಆಫರ್ ಮೂಲಕ ಪಡೆದುಕೊಳ್ಳಬಹುದು. ಹಾಗಾದ್ರೆ ಐಫೋನ್ SE ಅನ್ನು ಆಫರ್ನಲ್ಲಿ ಖರೀದಿ ಮಾಡುವುದು ಹೇಗೆ? ಎಂಬುದನ್ನು ನೋಡೋಣ. ಇದಕ್ಕೂ ಮುನ್ನ ಈ ಫೋನಿನಲ್ಲಿರುವ ವಿಶೇಷತೆ ಏನು ಎಂದು ಹೇಳುತ್ತೇವೆ ನೋಡಿ.
ಫ್ಲಿಪ್ಕಾರ್ಟ್ ತಾಣವು ಆ್ಯಪಲ್ ಐಫೋನ್ SE ಫೋನ್ ಮೇಲೆ ಬಂಪರ್ ರಿಯಾಯಿತಿ ನೀಡಿದೆ. 64GB ಸ್ಟೋರೇಜ್ ವೇರಿಯಂಟ್ನ ಐಫೋನ್ SE ಮೂಲಬೆಲೆ 43,900 ರೂ.. ಇದರಲ್ಲಿ 2,000 ರೂ. ಕಡಿತ ಮಾಡಲಾಗಿದೆ. ಜೊತೆಗೆ ಹೆಚ್ಡಿಎಫ್ಸಿ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಮೂಲಕ ಖರೀದಿಸಿದರೆ 1,000 ರೂ. ಡಿಸ್ಕೌಂಟ್ ಸಿಗಲಿದೆ. ಇನ್ನು 16,000 ರೂ. ಗಳ ವರೆಗೂ ಎಕ್ಸ್‌ಚೇಂಜ್ ಕೊಡುಗೆ ಕೂಡ ನೀಡಿದೆ. ಹೀಗಾದಾಗ ಐಫೋನ್ SE ಅನ್ನು ಅತ್ಯಂತ ಕಡಿಮೆ ಬೆಲೆಗೆ ನಿಮ್ಮದಾಗಿಸಬಹುದು.
ಏನು ವಿಶೇಷತೆ?:
ಆ್ಯಪಲ್ ಐಫೋನ್ SE (2022) 4.7 ಇಂಚಿನ ರೆಟಿನಾ ಎಚ್‌ಡಿ ಮಾದರಿಯ ಐಪಿಎಸ್ ಎಲ್‌ಸಿಡಿ ಡಿಸ್‌ಪ್ಲೇಯನ್ನು ಹೊಂದಿದೆ. ಇನ್ನು ಈ ಡಿಸ್‌ಪ್ಲೇಯು 750 x 1334 ಪಿಕ್ಸೆಲ್ ರೆಸಲ್ಯೂಶನ್ ಸಾಮರ್ಥ್ಯವನ್ನು ಹೊಂದಿದೆ. ಜೊತೆಗೆ ಈ ಡಿಸ್‌ಪ್ಲೇಯ ಪ್ರತಿ ಇಂಚಿನ ಪಿಕ್ಸಲ್ ಸಾಂದ್ರೆತೆಯು 326ppi ಆಗಿದ್ದು, 625 nits ವರೆಗೆ ಗರಿಷ್ಠ ಹೊಳಪನ್ನು ಹೊಂದಿದೆ
ಈ ಫೋನ್ A 15 ಬಯೋನಿಕ್ SoC ಪ್ರೊಸೆಸರ್ ಸಾಮರ್ಥ್ಯದಲ್ಲಿ ಕಾರ್ಯ ನಿರ್ವಹಿಸಲಿದೆ. ಪ್ರೊಸೆಸರ್‌ಗೆ ಪೂರಕವಾಗಿ ಐಒಎಸ್ 15 ಬೆಂಬಲ ನೀಡಲಿದೆ. ಈ A 15 ಬಯೋನಿಕ್ ಚಿಪ್ ಅನ್ನು ನೀವು ಐಫೋನ್ 13 ಸೀರೀಸ್ ಸ್ಮಾರ್ಟ್‌ಫೋನುಗಳಲ್ಲಿ ಕಾಣಬಹುದು. ಐಫೋನ್ 8ನಲ್ಲಿ ಬಳಕೆಯಾಗಿದ್ದ ಪ್ರೊಸೆಸರ್‌ಗಿಂತಲೂ ಎ15 ಬಯೋನಿಕ್ ಚಿಪ್ ಬಳಕೆಯಾಗಿರುವ ಐಫೋನ್ ಎಸ್ಇ 2022 ಫೋನಿನ ಸಿಪಿಯು 1.8 ಪಟ್ಟು ಹೆಚ್ಚು ವೇಗವಾಗಿದೆ ಎಂದು ಕಂಪನಿ ಹೇಳಿಕೊಂಡಿದೆ. ಇದರಲ್ಲಿ ನೀವು ಲೈವ್ ಟೆಕ್ಸ್ಟ್ ಫೀಚರ್ ಕೂಡ ಕಾಣಬಹುದು.
ಇನ್ನು ಐಫೋನ್ SE (2022) ರಿಯರ್ ಸೆಟ್‌ಅಪ್‌ನಲ್ಲಿ ಸಿಂಗಲ್ ಕ್ಯಾಮೆರಾ ಹೊಂದಿದೆ. ಪ್ರಾಥಮಿಕ ಕ್ಯಾಮರಾವು 12 ಮೆಗಾ ಪಿಕ್ಸೆಲ್ ಸೆನ್ಸಾರ್ ಇದ್ದು, f/ 1.8 ಲೆನ್ಸ್ + ಒಐಎಸ್ ಹೊಂದಿದೆ. ಇದು ಡೀಪ್ ಫ್ಯೂಷನ್, ಸ್ಮಾರ್ಟ್ HDR 4 ಮತ್ತು ಫೋಟೋಗ್ರಾಫಿಕ್ ಸ್ಟೈಲ್ಸ್ ಸೇರಿದಂತೆ ವೈಶಿಷ್ಟ್ಯಗಳನ್ನು ಬೆಂಬಲಿಸುತ್ತದೆ. ಇದು 60fps ವರೆಗೆ 4K ವೀಡಿಯೊ ರೆಕಾರ್ಡಿಂಗ್ ಅನ್ನು ಸಹ ಬೆಂಬಲಿಸುತ್ತದೆ. ಸೆಲ್ಫಿಗಾಗಿ ಮುಂಬಾಗದಲ್ಲಿ 7 ಮೆಗಾ ಪಿಕ್ಸಲ್ ಸೆನ್ಸಾರ್ ಕ್ಯಾಮೆರಾ ಒದಗಿಸಲಾಗಿದೆ. ಸೆಲ್ಫಿ ಕ್ಯಾಮೆರಾವು ನ್ಯಾಚುರಲ್, ಸ್ಟುಡಿಯೋ, ಬಾಹ್ಯರೇಖೆ, ಹಂತ, ಸ್ಟೇಜ್ ಮೊನೊ ಮತ್ತು ಹೈ-ಕೀ ಮೊನೊ ಎಂಬ ಆರು ಪರಿಣಾಮಗಳೊಂದಿಗೆ ಪೋರ್ಟ್ರೇಟ್ ಲೈಟಿಂಗ್ ಅನ್ನು ಬೆಂಬಲಿಸುತ್ತದೆ.
ಈ ಫೋನಿನ ಬ್ಯಾಟರಿ ಸಾಮರ್ಥ್ಯದ ಬಗ್ಗೆ ಯಾವುದೇ ಮಾಹಿತಿಯನ್ನ ಹಂಚಿಕೊಂಡಿಲ್ಲ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ ಈ ಫೋಈನ್ 5G, 4G VoLTE, Wi-Fi 5, ಬ್ಲೂಟೂತ್ v5, GPS/ A-GPS, NFC ಮತ್ತು ಲೈಟ್ನಿಂಗ್ ಪೋರ್ಟ್ ಸೇರಿದಂತೆ ಸಂಪರ್ಕ ಆಯ್ಕೆಗಳೊಂದಿಗೆ ಬರುತ್ತದೆ. ಹಾಗೆಯೇ ಅಕ್ಸೆಲೆರೊಮೀಟರ್, ಆಂಬಿಯೆಂಟ್ ಲೈಟ್ ಸೆನ್ಸರ್, ಬ್ಯಾರೋಮೀಟರ್, ಮೂರು-ಆಕ್ಸಿಸ್ ಗೈರೊಸ್ಕೋಪ್ ಮತ್ತು ಸಾಮೀಪ್ಯ ಸಂವೇದಕ ಸೇರಿವೆ. ಗೈರೊಸ್ಕೋಪ್ ಮತ್ತು ಸಾಮೀಪ್ಯ ಸಂವೇದಕ ಸೇರಿವೆ.
ತಂತ್ರಜ್ಞಾನ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ, ಪ್ರಮುಖ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ