Sansui 43 ಇಂಚಿನ Ultra HD Smart TV ಮೂಲ ಬೆಲೆ ರೂ. 38,999 ಆಗಿದೆ. ಇದೀಗ ಆಫರ್ ನ ಭಾಗವಾಗಿ ಕೇವಲ ರೂ. 25,999 ಕ್ಕೆ ಲಭ್ಯವಾಗುತ್ತಿದೆ. ಹೆಚ್ಚುವರಿಯಾಗಿ, ಅನೇಕ ಬ್ಯಾಂಕುಗಳು ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್ ಗಳೊಂದಿಗೆ ಖರೀದಿ ಮಾಡಿದರೆ ಹೆಚ್ಚುವರಿ ರಿಯಾಯಿತಿಗಳನ್ನು ಪಡೆಯಬಹುದು.
May 16, 2022 | 1:00 PM
1 / 5
2 / 5
ಈ ಟಿವಿಗಳು ಡಾಲ್ಬಿ ಆಡಿಯೋ ಬೆಂಬಲದೊಂದಿಗೆ 20 ವ್ಯಾಟ್ ಸೌಂಡ್ ಔಟ್ಪುಟ್ ಸ್ಪೀಕರ್ ಗಳನ್ನು ಒಳಗೊಂಡಿವೆ. ಅಲ್ಟ್ರಾ HD 4K (3840x2160 ಪಿಕ್ಸೆಲ್ಗಳು) ರೆಸಲ್ಯೂಶನ್ ಪ್ರದರ್ಶನವನ್ನು ಒದಗಿಸುತ್ತದೆ. ಈ ಟಿವಿ ಆಂಡ್ರಾಯ್ಡ್ 10 ಆಪರೇಟಿಂಗ್ ಸಿಸ್ಟಂನಲ್ಲಿ ಕಾರ್ಯನಿರ್ವಹಿಸುತ್ತದೆ.
3 / 5
Sansui Smart TV 2GB RAM ಮತ್ತು 8GB ಆಂತರಿಕ ಸಂಗ್ರಹಣೆಯೊಂದಿಗೆ ಬರುತ್ತದೆ. Netflix, Amazon Prime, Disney + Hotstar ನಂತಹ OTT ಅಪ್ಲಿಕೇಶನ್ಗಳನ್ನು ಕೂಡ ಬೆಂಬಲಿಸುತ್ತದೆ.
4 / 5
ಟಿವಿ ಮೂರು HDMI ಪೋರ್ಟ್ಗಳು ಮತ್ತು 2 USB ಪೋರ್ಟ್ಗಳೊಂದಿಗೆ ಬರುತ್ತದೆ. ಇದರ ಜೊತೆಗೆ ಟಿವಿ ಒಂದು ವರ್ಷದ ವಾರಂಟಿ ಮತ್ತು ಡಿಸ್ಪ್ಲೇ ಪ್ಯಾನಲ್ ಎರಡು ವರ್ಷಗಳ ವಾರಂಟಿಯೊಂದಿಗೆ ಬರುತ್ತದೆ.