iPhone 15 Pro: ಮುಂಬರುವ ಐಫೋನ್ 15 ಪ್ರೊ ಮಾಡೆಲ್‌ಗಳು ಬೆಲೆ ಕೇಳಿ ಶಾಕ್ ಆದ ಜನತೆ: ಎಷ್ಟು ಗೊತ್ತೇ?

|

Updated on: Jul 30, 2023 | 12:34 PM

iPhone 15 Series: ವರದಿಯ ಪ್ರಕಾರ, ಐಫೋನ್ 14 ಪ್ರೊ ಮಾದರಿಗಳಿಗೆ ಹೋಲಿಸಿದರೆ ಐಫೋನ್ 15 ಪ್ರೊ ಮಾದರಿಗಳು ಹೆಚ್ಚಿನ ಬೆಲೆಯೊಂದಿಗೆ ಬರುವ ನಿರೀಕ್ಷೆಯಿದೆ. ಐಫೋನ್ 15 ಪ್ರೊ, ಐಫೋನ್ 14 ಪ್ರೊ ಗಿಂತ ಸುಮಾರು $100 (ಅಂದಾಜು ರೂ. 9,000) ಅಧಿಕ ಬೆಲೆ ಹೊಂದಿದೆ.

iPhone 15 Pro: ಮುಂಬರುವ ಐಫೋನ್ 15 ಪ್ರೊ ಮಾಡೆಲ್‌ಗಳು ಬೆಲೆ ಕೇಳಿ ಶಾಕ್ ಆದ ಜನತೆ: ಎಷ್ಟು ಗೊತ್ತೇ?
Apple iPhone 15 Pro
Follow us on

ಆ್ಯಪಲ್ (Apple) ಕಂಪನಿಯ ಬಹುನಿರೀಕ್ಷಿತ ಐಫೋನ್ 15 ಸರಣಿಯ ಬಿಡುಗಡೆಗೆ ಇನ್ನೇನು ಎರಡು ತಿಂಗಳುಗಳಷ್ಟೆ ಬಾಕಿಯಿದೆ. ಆದರೆ ಇದಕ್ಕೂ ಮೊದಲು ಈ ಫೋನಿನ ನಿರೀಕ್ಷಿತ ಬೆಲೆ, ಫೀಚರ್ಸ್, ವಿನ್ಯಾಸ ಮತ್ತು ಹೆಚ್ಚಿನ ಆಸಕ್ತಿದಾಯಕ ವಿಚಾರಗಳಲ್ಲಿ ಸೋರಿಕೆ ಆಗುತ್ತಿದೆ. ಇದೀಗ ಐಫೋನ್ 14 ಸರಣಿಗಿಂತ (iPhone 14 Series) ಐಫೋನ್ 15 ಸರಣಿಯು ತುಂಬಾ ದುಬಾರಿಯಾಗಿದೆ ಎಂದು ವರದಿಯಾಗಿದೆ. ಐಫೋನ್ 15, ಐಫೋನ್ 15 ಪ್ಲಸ್, ಐಫೋನ್ 15 ಪ್ರೊ ಮತ್ತು ಐಫೋನ್ 15 ಪ್ರೊ ಮ್ಯಾಕ್ಸ್ (iPhone 15 Pro Max) ಅನ್ನು ಒಳಗೊಂಡಿರುವ ಐಫೋನ್ 15 ಸರಣಿ ಸೆಪ್ಟೆಂಬರ್‌ನಲ್ಲಿ ಅನಾವರಣಗೊಳ್ಳಲಿದೆ. ಬಾರ್ಕ್ಲೇಸ್ ವಿಶ್ಲೇಷಕರ ಪ್ರಕಾರ, ಈ ವರ್ಷದ ಐಫೋನ್ 15 ಪ್ರೊ ಮತ್ತು ಪ್ರೊ ಮ್ಯಾಕ್ಸ್ ಮಾದರಿಗಳು ಹಿಂದಿನ ಪ್ರೊ ಮಾದರಿಗಳಿಗಿಂತ ಹೆಚ್ಚು ಬೆಲೆ ಹೊಂದಿದೆಯಂತೆ.

MacRumors ನ ವರದಿಯ ಪ್ರಕಾರ, ಐಫೋನ್ 14 ಪ್ರೊ ಮಾದರಿಗಳಿಗೆ ಹೋಲಿಸಿದರೆ ಐಫೋನ್ 15 ಪ್ರೊ ಮಾದರಿಗಳು ಹೆಚ್ಚಿನ ಬೆಲೆಯೊಂದಿಗೆ ಬರುವ ನಿರೀಕ್ಷೆಯಿದೆ. ಐಫೋನ್ 15 ಪ್ರೊ, ಐಫೋನ್ 14 ಪ್ರೊ ಗಿಂತ ಸುಮಾರು $100 (ಅಂದಾಜು ರೂ. 9,000) ಅಧಿಕ ಬೆಲೆ ಹೊಂದಿದೆ. ಅಂತೆಯೆ ಐಫೋನ್ 15 ಪ್ರೊ ಮ್ಯಾಕ್ಸ್ ಬೆಲೆಯು ಐಫೋನ್ 14 ಪ್ರೊ ಮ್ಯಾಕ್ಸ್​ಗೆ ಹೋಲಿಸಿದರೆ $100 ರಿಂದ $200 (ಸರಿಸುಮಾರು ರೂ. 17,000) ಹೆಚ್ಚಿರಬಹುದು ಎನ್ನಲಾಗಿದೆ. ಆದಾಗ್ಯೂ, ಬೇಸ್ ಮಾಡೆಲ್ ಐಫೋನ್ 15 ಮತ್ತು ಐಫೋನ್ 15 ಪ್ಲಸ್ ಮಾಡೆಲ್‌ಗಳು ತಮ್ಮ ಹಿಂದಿನ ಆವೃತ್ತಿಯ ಬೆಲೆಯ ಆಸುಪಾಸಿನಲ್ಲೇ ಇರಲದೆ.

Vivo Y100: ಬ್ಯಾಕ್ ಪ್ಯಾನೆಲ್​ನ ಬಣ್ಣ ಬದಲಾಗುವ ಈ ಸ್ಮಾರ್ಟ್​ಫೋನ್ ಬೆಲೆಯಲ್ಲಿ ಭರ್ಜರಿ ಇಳಿಕೆ: ಇಂದೇ ಖರೀದಿಸಿ

ಇದನ್ನೂ ಓದಿ
Smartphones: ಈ ತಿಂಗಳು ಭಾರತದಲ್ಲಿ ಬಿಡುಗಡೆ ಆದ ಸ್ಮಾರ್ಟ್​ಫೋನ್​ಗಳು ಯಾವುವು?: ಇಲ್ಲಿದೆ ನೋಡಿ
Samsung Galaxy Tab S9: ಪ್ರೀಮಿಯಂ ಟ್ಯಾಬ್ ₹1,33,999 ವರೆಗಿನ ಪ್ರೈಸ್ ರೇಂಜ್​​ನಲ್ಲಿದೆ ಸ್ಯಾಮ್​ಸಂಗ್
Jio: ದಿನಕ್ಕೆ 2GB ಡೇಟಾ: ಜಿಯೋ ಬಂಪರ್ ಪ್ಲಾನ್​ನ ಮಾಹಿತಿ ಇಲ್ಲಿದೆ ನೋಡಿ
Tech Tips: ವಾಟ್ಸ್​ಆ್ಯಪ್​ನಲ್ಲಿ ಶಾರ್ಟ್ ವಿಡಿಯೋ ರೆಕಾರ್ಡ್ ಮಾಡಿ ಕಳುಹಿಸುವುದು ಹೇಗೆ?: ಇಲ್ಲಿದೆ ಟಿಪ್ಸ್

US ನಲ್ಲಿ, ಐಫೋನ್ 14 ಪ್ರೊ ಅನ್ನು $999 ನಲ್ಲಿ ಬಿಡುಗಡೆ ಮಾಡಲಾಗಿತ್ತು. ಪ್ರಸ್ತುತ ಅತ್ಯಂತ ದುಬಾರಿ ಐಫೋನ್ ಮಾದರಿಯಾದ ಐಫೋನ್ 14 ಪ್ರೊ ಮ್ಯಾಕ್ಸ್ ಬೆಲೆ $1,099 ಆಗಿದೆ. ವಿಶ್ಲೇಷಕರ ಅಂದಾಜಿನ ಆಧಾರದ ಮೇಲೆ, ಐಫೋನ್ 15 ಪ್ರೊ $1,099 ರಿಂದ ಪ್ರಾರಂಭವಾಗಬಹುದು ಎನ್ನಲಾಗಿದೆ. ಇತ್ತ ಐಫೋನ್ 15 ಪ್ರೊ ಮ್ಯಾಕ್ಸ್ ಆರಂಭಿಕ ಬೆಲೆ $1,199 ಅಥವಾ $1,299 ಆಗಿರಬಹುದು.

ಐಫೋನ್ 15 ಪ್ರೊ ಮ್ಯಾಕ್ಸ್ ಹೊಸ ಪೆರಿಸ್ಕೋಪ್ ಲೆನ್ಸ್, ಟೈಟಾನಿಯಂ ಫ್ರೇಮ್‌ಗಳು, ಹ್ಯಾಪ್ಟಿಕ್ ಫೀಡ್‌ಬ್ಯಾಕ್‌ನೊಂದಿಗೆ ಬರಲಿದೆಯಂತೆ. USB ಟೈಪ್-ಸಿ ಚಾರ್ಜಿಂಗ್ ಪೋರ್ಟ್‌ಗಳು, ಹೊಚ್ಚಹೊಸ A17 ಬಯೋನಿಕ್ ಚಿಪ್ ಮತ್ತು ಹೆಚ್ಚಿನ RAM ಆಯ್ಕೆ ಸೇರಿದಂತೆ ವಿವಿಧ ಹಾರ್ಡ್‌ವೇರ್ ಅಪ್‌ಗ್ರೇಡ್‌ಗಳಿಂದಾಗಿ ವೆಚ್ಚದಲ್ಲಿ ಈ ಹೆಚ್ಚಳ ಮಾಡಲಾಗಿದೆ ಎಂದು ವರದಿ ಆಗಿದೆ. ಆದಾಯವನ್ನು ಹೆಚ್ಚಿಸಲು ಆ್ಯಪಲ್ 2023 ರ ಐಫೋನ್ ಮಾದರಿಗಳ ಬೆಲೆಗಳನ್ನು ಹೆಚ್ಚಿಸಲು ಯೋಜಿಸುತ್ತಿದೆ ಎಂದು ಕೂಡ ವರದಿಯಾಗಿದೆ. ಕಂಪನಿಯು ಈ ವರ್ಷ ಸರಿಸುಮಾರು 85 ಮಿಲಿಯನ್ ಐಫೋನ್ 15 ಯುನಿಟ್‌ಗಳನ್ನು ಉತ್ಪಾದಿಸುವ ಗುರಿಯನ್ನು ಹೊಂದಿದೆ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ