AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Smartphones: ಈ ತಿಂಗಳು ಭಾರತದಲ್ಲಿ ಬಿಡುಗಡೆ ಆದ ಸ್ಮಾರ್ಟ್​ಫೋನ್​ಗಳು ಯಾವುವು?: ಇಲ್ಲಿದೆ ನೋಡಿ

New Smartphones: ಈ ಜುಲೈ ತಿಂಗಳಲ್ಲಿ ಎಷ್ಟು ಸ್ಮಾರ್ಟ್​ಫೋನ್​ಗಳು ಭಾರತದಲ್ಲಿ ಬಿಡುಗಡೆ ಆಗಿದೆ?, ಅವುಗಳು ಯಾವುವು? ಎಂಬುದನ್ನು ನೋಡೋಣ.

Smartphones: ಈ ತಿಂಗಳು ಭಾರತದಲ್ಲಿ ಬಿಡುಗಡೆ ಆದ ಸ್ಮಾರ್ಟ್​ಫೋನ್​ಗಳು ಯಾವುವು?: ಇಲ್ಲಿದೆ ನೋಡಿ
Smartphones
Vinay Bhat
|

Updated on: Jul 30, 2023 | 11:50 AM

Share

ಭಾರತೀಯ ಮಾರುಕಟ್ಟೆಗೆ 2023 ಜುಲೈ ತಿಂಗಳಲ್ಲಿ ಕೆಲವು ಬಲಿಷ್ಠ ಸ್ಮಾರ್ಟ್​ಫೋನ್​ಗಳು (Smartphones) ಎಂಟ್ರಿ ಕೊಟ್ಟಿದೆ. ಸ್ಯಾಮ್​ಸಂಗ್ (Samsung), ಮೋಟೋರೊಲಾ ದಂತಹ ಪ್ರಸಿದ್ಧ ಕಂಪನಿಗಳು ಈ ತಿಂಗಳು ತನ್ನ ಆಕರ್ಷಕ ಮೊಬೈಲ್​ಗಳನ್ನು ಅನಾವರಣ ಮಾಡಿದೆ. ನಥಿಂಗ್ ಕಂಪನಿ (Nothing Phone 2) ಕೂಡ ತನ್ನ ಎರಡನೇ ಆವೃತ್ತಿಯನ್ನು ಫೋನನ್ನು ಈ ತಿಂಗಳ ಆರಂಭದಲ್ಲಿ ರಿಲೀಸ್ ಮಾಡಿತ್ತು. ಹಾಗಾದರೆ, ಈ ಜುಲೈ ತಿಂಗಳಲ್ಲಿ ಎಷ್ಟು ಸ್ಮಾರ್ಟ್​ಫೋನ್​ಗಳು ಭಾರತದಲ್ಲಿ ಬಿಡುಗಡೆ ಆಗಿದೆ?, ಅವುಗಳು ಯಾವುವು? ಎಂಬುದನ್ನು ನೋಡೋಣ.

ಸ್ಯಾಮ್​ಸಂಗ್ ಗ್ಯಾಲಕ್ಸಿ Z ಫೋಲ್ಡ್ 5 ಮತ್ತು Z ಫ್ಲಿಪ್ 5:

ಸಿಯೋಲ್‌ನಲ್ಲಿ ನಡೆದ ಅನ್​ಪ್ಯಾಕ್ಡ್ ಈವೆಂಟ್‌ನಲ್ಲಿ ಸ್ಯಾಮ್‌ಸಂಗ್ ತನ್ನ ಸ್ಯಾಮ್​ಸಂಗ್ ಗ್ಯಾಲಕ್ಸಿ Z ಫೋಲ್ಡ್ 5 ಮತ್ತು Z ಫ್ಲಿಪ್ 5 ಅನಾವರಣ ಮಾಡಿತು. ಫೋಲ್ಡ್ 5 7.6-ಇಂಚಿನ QXGA+ AMOLED ಒಳಗಿನ ಡಿಸ್ ಪ್ಪೇ ಜೊತೆಗೆ 6.2-ಇಂಚಿನ ಕವರ್ ಡಿಸ್ ಪ್ಲೇಯನ್ನು ಹೊಂದಿದೆ. ಫ್ಲಿಪ್ ಫೋನ್ 6.7-ಇಂಚಿನ ಪೂರ್ಣ-HD+ ಒಳಗಿನ AMOLED 120Hz ಡಿಸ್ ಪ್ಲೇ ಮತ್ತು 3.4-ಇಂಚಿನ AMOLED ಹೊರ 60Hz ಡಿಸ್ ಪ್ಲೇ ನೀಡಲಾಗಿದೆ. ಈ ಸ್ಮಾರ್ಟ್​ಫೋನ್​ಗಳು ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 8 ಜೆನ್ 2 ಪ್ರೊಸೆಸರ್ ಮೂಲಕ ಕಾರ್ಯನಿರ್ವಹಿಸುತ್ತದೆ. ಜೊತೆಗೆ ಆಕರ್ಷಕ ಕ್ಯಾಮೆರಾ ಆಯ್ಕೆ ನೀಡಲಾಗಿದೆ. ಎರಡೂ ಫೋನ್‌ಗಳು IPX8 ರೇಟ್ ಮಾಡಲ್ಪಟ್ಟವು, 12MP ಮುಖ್ಯ ಕ್ಯಾಮೆರಾಗಳನ್ನು ಹೊಂದಿದೆ. ಮತ್ತು 25W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ.

ಮೋಟೋರೊಲಾ 40 ಸರಣಿ:

ಮೋಟೋರೊಲಾ ತನ್ನ ಮುಂದಿನ-ಪೀಳಿಗೆಯ ಫ್ಲಿಪ್ ಫೋನ್‌ಗಳಾದ ರೇಜರ್ 40 ಮತ್ತು ರೇಜರ್ 40 ಆಲ್ಟ್ರಾವನ್ನು ಅನಾವರಣಗೊಳಿಸಿದೆ. ಇದು 6.9-ಇಂಚಿನ ಫೋಲ್ಡಬಲ್ ಡಿಸ್ಪ್ಲೇಗಳೊಂದಿಗೆ 165Hz ವರೆಗೆ ರಿಫ್ರೆಶ್ ದರವನ್ನು ಹೊಂದಿದೆ. ಎರಡೂ ಫೋನ್‌ಗಳು 32MP ಮುಂಭಾಗದ ಕ್ಯಾಮರಾ ಮತ್ತು ಮಾರುಕಟ್ಟೆಯಲ್ಲಿ ಇತರ ಫೋಲ್ಡೆಬಲ್ ಸ್ಮಾರ್ಟ್​ಫೋನ್​ಗಳಿಗೆ ಸ್ಪರ್ಧಿಸಲು ಫ್ಲೆಕ್ಸ್ ಮೋಡ್-ರೀತಿಯ ಹಿಂಜ್ ಅನ್ನು ಒಳಗೊಂಡಿವೆ. Razr 40 ದೊಡ್ಡದಾದ 4,200mAh ಬ್ಯಾಟರಿಯನ್ನು ಪ್ಯಾಕ್ ಮಾಡಿದ್ದರೆ, Razr 40 Ultra 3,800mAh ಬ್ಯಾಟರಿಯೊಂದಿಗೆ ಬಂದಿದೆ. ಎರಡೂ ಸ್ಮಾರ್ಟ್​ಫೋನ್ ವೈರ್‌ಲೆಸ್ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ.

ಇದನ್ನೂ ಓದಿ
Image
Samsung Galaxy Tab S9: ಪ್ರೀಮಿಯಂ ಟ್ಯಾಬ್ ₹1,33,999 ವರೆಗಿನ ಪ್ರೈಸ್ ರೇಂಜ್​​ನಲ್ಲಿದೆ ಸ್ಯಾಮ್​ಸಂಗ್
Image
Jio: ದಿನಕ್ಕೆ 2GB ಡೇಟಾ: ಜಿಯೋ ಬಂಪರ್ ಪ್ಲಾನ್​ನ ಮಾಹಿತಿ ಇಲ್ಲಿದೆ ನೋಡಿ
Image
Tech Tips: ವಾಟ್ಸ್​ಆ್ಯಪ್​ನಲ್ಲಿ ಶಾರ್ಟ್ ವಿಡಿಯೋ ರೆಕಾರ್ಡ್ ಮಾಡಿ ಕಳುಹಿಸುವುದು ಹೇಗೆ?: ಇಲ್ಲಿದೆ ಟಿಪ್ಸ್
Image
Vivo Y100: ಬ್ಯಾಕ್ ಪ್ಯಾನೆಲ್​ನ ಬಣ್ಣ ಬದಲಾಗುವ ಈ ಸ್ಮಾರ್ಟ್​ಫೋನ್ ಬೆಲೆಯಲ್ಲಿ ಭರ್ಜರಿ ಇಳಿಕೆ: ಇಂದೇ ಖರೀದಿಸಿ

Infinix GT 10 Pro: 108MP ಕ್ಯಾಮೆರಾ: ಬಹಿರಂಗವಾಯಿತು ಇನ್ಫಿನಿಕ್ಸ್ GT 10 ಪ್ರೊ ಸ್ಮಾರ್ಟ್​ಫೋನ್ ಫೀಚರ್ಸ್

ಒಪ್ಪೋ ರೆನೋ 10 ಸರಣಿ:

ಒಪ್ಪೋ ಇತ್ತೀಚೆಗಷ್ಟೆ ರೆನೋ 10 ಸರಣಿಯು ಮೂರು ಮಾದರಿಗಳನ್ನು ಪರಿಚಯಿಸಿದೆ. ಇದರಲ್ಲಿ ಒಪ್ಪೋ 10, ಒಪ್ಪೋ 10 Pro ಮತ್ತು ಒಪ್ಪೋ 10 Pro+ ಇದೆ. ಒಪ್ಪೋ 10 Pro+ 64MP ಸಂವೇದಕ ಮತ್ತು OIS ನೊಂದಿಗೆ ಅತ್ಯಧಿಕ-ರೆಸಲ್ಯೂಶನ್​ನ ಟೆಲಿಫೋಟೋ ಕ್ಯಾಮೆರಾವನ್ನು ಹೊಂದಿದೆ. ಇದು ಪ್ರಮುಖ ಸ್ನಾಪ್‌ಡ್ರಾಗನ್ 8+ Gen 1 ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸುತ್ತದೆ ಮತ್ತು 100W ವೇಗದ ಚಾರ್ಜಿಂಗ್‌ನೊಂದಿಗೆ 4,700mAh ಬ್ಯಾಟರಿ ಮತ್ತು 32MP ಮುಂಭಾಗದ ಕ್ಯಾಮೆರಾವನ್ನು ಒಳಗೊಂಡಿದೆ.

ಒಪ್ಪೋ 10 Pro ಸ್ನಾಪ್‌ಡ್ರಾಗನ್ 778G ಚಿಪ್‌ಸೆಟ್‌ನಿಂದ ಚಾಲಿತವಾಗಿದೆ. 4,600mAh ಬ್ಯಾಟರಿ, 50MP ಮುಖ್ಯ ಕ್ಯಾಮೆರಾ ಮತ್ತು 80W ವೇಗದ ಚಾರ್ಜಿಂಗ್ ಇದೆ. ಡೈಮೆನ್ಸಿಟಿ 7050 ಚಿಪ್‌ಸೆಟ್‌ನೊಂದಿಗೆ ರಿಲೀಸ್ ಆದ ಬೇಸ್ ಮಾಡೆಲ್ ರೆನೋ 10 64MP ಮುಖ್ಯ ಕ್ಯಾಮೆರಾ, 5,000mAh ಬ್ಯಾಟರಿ ಮತ್ತು 67W ವೇಗದ ಚಾರ್ಜಿಂಗ್ ಅನ್ನು ಒಳಗೊಂಡಿದೆ.

ನಥಿಂಗ್ ಫೋನ್ (2):

ನಥಿಂಗ್ ತನ್ನ ಎರಡನೇ ಸ್ಮಾರ್ಟ್‌ಫೋನ್‌ ಅನ್ನು ಯುನೈಟೆಡ್ ಸ್ಟೇಟ್ಸ್ ಸೇರಿದಂತೆ ಜಾಗತಿಕ ಮಾರುಕಟ್ಟೆಯಲ್ಲಿ ಈ ತಿಂಗಳು ರಿಲೀಸ್ ಮಾಡಿದೆ. ನಥಿಂಗ್ ಫೋನ್ (2) ಸ್ನಾಪ್‌ಡ್ರಾಗನ್ 8+ Gen 1 ಫ್ಲ್ಯಾಗ್‌ಶಿಪ್ ಚಿಪ್‌ಸೆಟ್, ದೊಡ್ಡದಾದ 4,700mAh ಬ್ಯಾಟರಿ ಮತ್ತು ವೇಗವಾದ 45W ಚಾರ್ಜಿಂಗ್ ಅನ್ನು ಒಳಗೊಂಡಿದೆ. 6.7-ಇಂಚಿನ LTPO AMOLED 120Hz ಡಿಸ್ಪ್ಲೇ ನೀಡಲಾಗಿದೆ. ಕ್ಯಾಮರಾಕ್ಕೆ ಸಂಬಂಧಿಸಿದಂತೆ, ನಥಿಂಗ್ ಫೋನ್ (2) ಹಿಂಭಾಗದಲ್ಲಿ ಡ್ಯುಯಲ್ 50MP ಕ್ಯಾಮೆರಾಗಳು ಮತ್ತು 32MP ಸೆಲ್ಫೀ ಕ್ಯಾಮೆರಾ ಆಯ್ಕೆ ಇದೆ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ

ಮುಂಬೈ-ಅಹಮದಾಬಾದ್ ಬುಲೆಟ್ ರೈಲು ಯೋಜನೆಯ ಸುರಂಗ ನಿರ್ಮಾಣ ಪೂರ್ಣ
ಮುಂಬೈ-ಅಹಮದಾಬಾದ್ ಬುಲೆಟ್ ರೈಲು ಯೋಜನೆಯ ಸುರಂಗ ನಿರ್ಮಾಣ ಪೂರ್ಣ
ಯಾರದ್ದೋ ಜಿದ್ದಿನ ಮೇಲೆ ಸಿನಿಮಾ ನಿರ್ಮಿಸುತ್ತಿದ್ದಾರಾ ಯಶ್ ತಾಯಿ?
ಯಾರದ್ದೋ ಜಿದ್ದಿನ ಮೇಲೆ ಸಿನಿಮಾ ನಿರ್ಮಿಸುತ್ತಿದ್ದಾರಾ ಯಶ್ ತಾಯಿ?
ದೇವೇಗೌಡರನ್ನು ಪಕ್ಷ ಯಾವತ್ತೂ ನಿರ್ಲಕ್ಷಿಸಿಲ್ಲ: ನಿಖಿಲ್ ಕುಮಾರಸ್ವಾಮಿ
ದೇವೇಗೌಡರನ್ನು ಪಕ್ಷ ಯಾವತ್ತೂ ನಿರ್ಲಕ್ಷಿಸಿಲ್ಲ: ನಿಖಿಲ್ ಕುಮಾರಸ್ವಾಮಿ
ಗ್ರಾಹಕರಿಂದ ಆನ್ಲೈನ್ ಪೇಮೆಂಟ್ಸ್ ಸ್ವೀಕರಿಸಿದ್ದು ವ್ಯಾಪಾರಿಗಳ ಅಪರಾಧ!
ಗ್ರಾಹಕರಿಂದ ಆನ್ಲೈನ್ ಪೇಮೆಂಟ್ಸ್ ಸ್ವೀಕರಿಸಿದ್ದು ವ್ಯಾಪಾರಿಗಳ ಅಪರಾಧ!
ದಲೈಲಾಮಾ ಹುಟ್ಟುಹಬ್ಬಕ್ಕೆ ವಿಶೇಷ ಹಾಡು ನಿರ್ಮಿಸಿದ ವಿಐಪಿ ಮೋಷನ್ ಪಿಕ್ಚರ್ಸ್
ದಲೈಲಾಮಾ ಹುಟ್ಟುಹಬ್ಬಕ್ಕೆ ವಿಶೇಷ ಹಾಡು ನಿರ್ಮಿಸಿದ ವಿಐಪಿ ಮೋಷನ್ ಪಿಕ್ಚರ್ಸ್
ಖರ್ಗೆಯವರನ್ನು ಭೇಟಿಯಾಗುವುದು 3-ದಿನ ಹಿಂದೆ ನಿಗದಿಯಾಗಿತ್ತು: ಜಾರಕಿಹೊಳಿ
ಖರ್ಗೆಯವರನ್ನು ಭೇಟಿಯಾಗುವುದು 3-ದಿನ ಹಿಂದೆ ನಿಗದಿಯಾಗಿತ್ತು: ಜಾರಕಿಹೊಳಿ
ಸಿಎಂ ಬದಲಾವಣೆ ವಿಷಯದಲ್ಲಿ ಸುರ್ಜೇವಾಲಾ ಚರ್ಚಿಸಿಲ್ಲ: ರಂಗನಾಥ್
ಸಿಎಂ ಬದಲಾವಣೆ ವಿಷಯದಲ್ಲಿ ಸುರ್ಜೇವಾಲಾ ಚರ್ಚಿಸಿಲ್ಲ: ರಂಗನಾಥ್
ಸುರ್ಜೆವಾಲಾ ಜೊತೆ ಸಿಎಂ ಬದಲಾವಣೆ, ಸಂಪುಟ ವಿಸ್ತರಣೆ ಚರ್ಚೆಯಾಗಿಲ್ಲ: ಸಿಎಂ
ಸುರ್ಜೆವಾಲಾ ಜೊತೆ ಸಿಎಂ ಬದಲಾವಣೆ, ಸಂಪುಟ ವಿಸ್ತರಣೆ ಚರ್ಚೆಯಾಗಿಲ್ಲ: ಸಿಎಂ
ವರಿಷ್ಠರ ಮಟ್ಟದಲ್ಲಿ ನಡೆಯುವ ಚರ್ಚೆ ಬಿಎಸ್​ವೈ ಗೊತ್ತಿಲ್ಲದಿರುತ್ತದೆಯೇ?
ವರಿಷ್ಠರ ಮಟ್ಟದಲ್ಲಿ ನಡೆಯುವ ಚರ್ಚೆ ಬಿಎಸ್​ವೈ ಗೊತ್ತಿಲ್ಲದಿರುತ್ತದೆಯೇ?
ಕೋರ್ಟ್​ ಎದುರು ನೆರೆದ ದರ್ಶನ್ ಫ್ಯಾನ್ಸ್; ನಟನಿಗೆ ಜೈಕಾರ
ಕೋರ್ಟ್​ ಎದುರು ನೆರೆದ ದರ್ಶನ್ ಫ್ಯಾನ್ಸ್; ನಟನಿಗೆ ಜೈಕಾರ