AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Samsung Galaxy Z Fold 5 vs Galaxy Z Flip 5: ಸ್ಯಾಮ್​ಸಂಗ್ ಈವೆಂಟ್​ನಲ್ಲಿ ಗ್ಯಾಲಕ್ಸಿ Z ಫೋಲ್ಡ್ 5 ಮತ್ತು ಗ್ಯಾಲಕ್ಸಿ Z ಫ್ಲಿಪ್ 5 ಬಿಡುಗಡೆ: ಬೆಚ್ಚಿ ಬೀಳಿಸುವ ಫೀಚರ್ಸ್

Samsung Event: ಯುಎಸ್​ನಲ್ಲಿ ಹೊಸ ಸ್ಯಾಮ್​ಸಂಗ್ ಗ್ಯಾಲಕ್ಸಿ Z ಫೋಲ್ಡ್ 5 ಬೆಲೆ $1,799, ಅಂದರೆ ಭಾರತದಲ್ಲಿ ಇದರ ಬೆಲೆ ಸುಮಾರು 1,47,570 ರೂ. ಇರಬಹುದು. ಗ್ಯಾಲಕ್ಸಿ Z ಫ್ಲಿಪ್ 5 ಸ್ಮಾರ್ಟ್‌ಫೋನ್ ಆರಂಭಿಕ ಬೆಲೆ $999 ಭಾರತದಲ್ಲಿ ಸುಮಾರು 81,940 ರೂ. ಎಂದು ಅಂದಾಜಿಸಲಾಗಿದೆ.

Samsung Galaxy Z Fold 5 vs Galaxy Z Flip 5: ಸ್ಯಾಮ್​ಸಂಗ್ ಈವೆಂಟ್​ನಲ್ಲಿ ಗ್ಯಾಲಕ್ಸಿ Z ಫೋಲ್ಡ್ 5 ಮತ್ತು ಗ್ಯಾಲಕ್ಸಿ Z ಫ್ಲಿಪ್ 5 ಬಿಡುಗಡೆ: ಬೆಚ್ಚಿ ಬೀಳಿಸುವ ಫೀಚರ್ಸ್
Samsung Galaxy Z Fold 5 and the Galaxy Z Flip 5
Vinay Bhat
|

Updated on: Jul 27, 2023 | 10:57 AM

Share

ದಕ್ಷಿಣ ಕೊರಿಯಾ ಮೂಲದ ಪ್ರಸಿದ್ಧ ಸ್ಯಾಮ್​ಸಂಗ್ (Samsung) ಕಂಪನಿ ಆಯೋಜಿಸಿದ್ದ ಈವೆಂಟ್​ನಲ್ಲಿ ಬಹುನಿರೀಕ್ಷಿತ ಸ್ಯಾಮ್​ಸಂಗ್ ಗ್ಯಾಲಕ್ಸಿ Z ಫೋಲ್ಡ್ 5 (Samsung Galaxy Z Fold 5) ಮತ್ತು ಸ್ಯಾಮ್​ಸಂಗ್ ಗ್ಯಾಲಕ್ಸಿ Z ಫ್ಲಿಪ್ 5 (Galaxy Z Flip 5) ಸ್ಮಾರ್ಟ್​ಫೋನ್ ಬಿಡುಗಡೆ ಆಗಿದೆ. ಇದು ಗ್ಯಾಲಕ್ಸಿ Z ಫೋಲ್ಡ್ 4 ಮತ್ತು ಸ್ಯಾಮ್​ಸಂಗ್ ಗ್ಯಾಲಕ್ಸಿ Z ಫ್ಲಿಪ್ 4 ನ ಮುಂದಿನ ಆವೃತ್ತಯಾಗಿದೆ. ಈ ಎರಡೂ ಫೋನ್ ಸಾಕಷ್ಟು ಬಲಿಷ್ಠವಾಗಿದ್ದು, ಕ್ವಾಲ್ಕಂ ಸ್ನಾಪ್​ಡ್ರಾಗನ್ ಪ್ರೊಸೆಸರ್, ಆಕರ್ಷಕ ಕ್ಯಾಮೆರಾ, ಬ್ಯಾಟರಿ ನೀಡಲಾಗಿದೆ. ಈ ಫೋನಿನ ಬೆಲೆ, ಫೀಚರ್ಸ್ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.

ಗ್ಯಾಲಕ್ಸಿ Z ಫೋಲ್ಡ್ 5 ಮತ್ತು ಗ್ಯಾಲಕ್ಸಿ Z ಫ್ಲಿಪ್ 5 ಬೆಲೆ ಎಷ್ಟು?:

ಯುಎಸ್​ನಲ್ಲಿ ಹೊಸ ಸ್ಯಾಮ್​ಸಂಗ್ ಗ್ಯಾಲಕ್ಸಿ Z ಫೋಲ್ಡ್ 5 ಬೆಲೆ $1,799, ಅಂದರೆ ಭಾರತದಲ್ಲಿ ಇದರ ಬೆಲೆ ಸುಮಾರು 1,47,570 ರೂ. ಇರಬಹುದು. ಗ್ಯಾಲಕ್ಸಿ Z ಫ್ಲಿಪ್ 5 ಸ್ಮಾರ್ಟ್‌ಫೋನ್ ಆರಂಭಿಕ ಬೆಲೆ $999 ಭಾರತದಲ್ಲಿ ಸುಮಾರು 81,940 ರೂ. ಎಂದು ಅಂದಾಜಿಸಲಾಗಿದೆ. ಈ ಎರಡೂ ಫೋನಿನ ಭಾರತದ ಬೆಲೆಗಳು ಇನ್ನೂ ಬಹಿರಂಗವಾಗಿಲ್ಲ.

Oppo K11 5G: ಗ್ಯಾಜೆಟ್ ಮಾರುಕಟ್ಟೆಗೆ ಕಮಾಲ್ ಮಾಡಲು ಬರುತ್ತಿದೆ ಒಪ್ಪೊ ಫೋನ್

ಇದನ್ನೂ ಓದಿ
Image
Realme C51: ಸ್ಟೈಲಿಶ್ ಮಾತ್ರವಲ್ಲ, ಬೆಲೆಯೂ ಕಡಿಮೆ.. ಮತ್ತೊಂದು ಲೇಟೆಸ್ಟ್ ರಿಯಲ್​ಮಿ ಫೋನ್
Image
Xiaomi Smart TV: ಲೇಟೆಸ್ಟ್ ಟೆಕ್ನಾಲಜಿ ಶಓಮಿ ಸ್ಮಾರ್ಟ್ ಟಿವಿ ಬಿಡುಗಡೆ
Image
Tecno Pova Neo 3: ಹೊಸ ವಿನ್ಯಾಸದಲ್ಲಿ ಸದ್ದಿಲ್ಲದೇ ಮಾರುಕಟ್ಟೆಗೆ ಲಗ್ಗೆ ಇರಿಸಿದ ಟೆಕ್ನೋ ಫೋನ್
Image
Twitter New Logo: ಹಕ್ಕಿ ಹೋಯ್ತು, ಎಕ್ಸ್ ಬಂತು.. ಟ್ವಿಟರ್ ಹೊಸ ಲೋಗೊ ನೋಡಿ!

ಸ್ಯಾಮ್​ಸಂಗ್ ಗ್ಯಾಲಕ್ಸಿ Z ಫೋಲ್ಡ್ 5 ಮತ್ತು ಗ್ಯಾಲಕ್ಸಿ Z ಫ್ಲಿಪ್ 5 ಫೀಚರ್ಸ್:

ಡಿಸ್ ಪ್ಲೇ: Z ಫೋಲ್ಡ್ 5 7.6-ಇಂಚಿನ QXGA+ AMOLED ಒಳಗಿನ ಡಿಸ್ ಪ್ಪೇ ಜೊತೆಗೆ 6.2-ಇಂಚಿನ ಕವರ್ ಡಿಸ್ ಪ್ಲೇಯನ್ನು ಹೊಂದಿದೆ. ಫ್ಲಿಪ್ ಫೋನ್ 6.7-ಇಂಚಿನ ಪೂರ್ಣ-HD+ ಒಳಗಿನ AMOLED 120Hz ಡಿಸ್ ಪ್ಲೇ ಮತ್ತು 3.4-ಇಂಚಿನ AMOLED ಹೊರ 60Hz ಡಿಸ್ ಪ್ಲೇ ನೀಡಲಾಗಿದೆ.

ಚಿಪ್‌ಸೆಟ್: ಈ ಸ್ಮಾರ್ಟ್​ಫೋನ್​ಗಳು ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 8 ಜೆನ್ 2 ಪ್ರೊಸೆಸರ್ ಮೂಲಕ ಕಾರ್ಯನಿರ್ವಹಿಸುತ್ತದೆ. ಈ ಫೋಲ್ಡಬಲ್ ಫೋನ್‌ಗಳು ಇತ್ತೀಚಿನ ಆಂಡ್ರಾಯ್ಡ್ 13 ಆಪರೇಟಿಂಗ್ ಸಿಸ್ಟಮ್‌ನೊಂದಿಗೆ ರನ್ ಆಗುತ್ತದೆ.

ಬ್ಯಾಟರಿ: ಗ್ಯಾಲಕ್ಸಿ Z ಫೋಲ್ಡ್ 5 4,400mAh ಬ್ಯಾಟರಿಯನ್ನು ಪ್ಯಾಕ್ ಮಾಡುತ್ತದೆ ಮತ್ತು ಗ್ಯಾಲಕ್ಸಿ Z ಫ್ಲಿಪ್ 5 ಫೋನ್ 3,700mAh ಬ್ಯಾಟರಿ ಆಯ್ಕೆ ಇದೆ.

ಹಿಂಬದಿಯ ಕ್ಯಾಮೆರಾ: ಗ್ಯಾಲಕ್ಸಿ Z ಫ್ಲಿಪ್ 5 12-ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಪ್ರೈಮರಿ ಸೆನ್ಸಾರ್ ಜೊತೆಗೆ OIS ಬೆಂಬಲದೊಂದಿಗೆ 12-ಮೆಗಾಪಿಕ್ಸೆಲ್ ವೈಡ್-ಆಂಗಲ್ ಕ್ಯಾಮೆರಾವನ್ನು ಒಳಗೊಂಡಿದೆ. ಇದು ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್‌ನೊಂದಿಗೆ ಬರುತ್ತದೆ. ಗ್ಯಾಲಕ್ಸಿ Z Fold 5 ಹಿಂಬದಿ ಟ್ರಿಪಲ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಇದು 50-ಮೆಗಾಪಿಕ್ಸೆಲ್ ವೈಡ್-ಆಂಗಲ್ ಕ್ಯಾಮೆರಾ, 12-ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್-ಆಂಗಲ್ ಕ್ಯಾಮೆರಾ ಮತ್ತು 10-ಮೆಗಾಪಿಕ್ಸೆಲ್ ಟೆಲಿಫೋಟೋ ಕ್ಯಾಮೆರಾವನ್ನು ಒಳಗೊಂಡಿದೆ. ಮುಂಭಾಗದ ಕ್ಯಾಮೆರಾ 10-ಮೆಗಾಪಿಕ್ಸೆಲ್​ನಲ್ಲಿದೆ.

Airtel: ಏರ್‌ಟೆಲ್​ನ ನಾಲ್ಕು ಅಗ್ಗದ ಬೆಸ್ಟ್ ರಿಚಾರ್ಜ್ ಪ್ಲಾನ್‌ಗಳು ಇಲ್ಲಿವೆ ನೋಡಿ: ಭರ್ಜರಿ ಡೇಟಾ, ಅತ್ಯುತ್ತಮ ವ್ಯಾಲಿಡಿಟಿ

ಸ್ಯಾಮ್​ಸಂಗ್ ಗ್ಯಾಲಕ್ಸಿ Z ಫೋಲ್ಡ್ 5 ಮತ್ತು ಗ್ಯಾಲಕ್ಸಿ Z ಫ್ಲಿಪ್ 5 ಪ್ರಮುಖ ವೈಶಿಷ್ಟ್ಯಗಳು:

-ಈ ಎರಡೂ ಹ್ಯಾಂಡ್‌ಸೆಟ್‌ಗಳು ಕ್ವಾಲ್‌ಕಾಮ್‌ನ ಪ್ರಮುಖ ಸ್ನಾಪ್‌ಡ್ರಾಗನ್ 8 ಜನ್ 2 ಚಿಪ್‌ಸೆಟ್‌ನಿಂದ ಚಾಲಿತವಾಗಿವೆ, ಅಂದರೆ ನೀವು ಹೊಸ ಫೋಲ್ಡಬಲ್ ಫೋನ್‌ಗಳೊಂದಿಗೆ ಉನ್ನತ-ಮಟ್ಟದ ಕಾರ್ಯಕ್ಷಮತೆಯನ್ನು ನಿರೀಕ್ಷಿಸಬಹುದು.

-ಸ್ಯಾಮ್​ಸಂಗ್​ನ ಫೋಲ್ಡಬಲ್ ಫೋನ್‌ಗಳಲ್ಲಿ ಕ್ಯಾಮೆರಾ ವೈಶಿಷ್ಟ್ಯವನ್ನು ಸುಧಾರಿಸಲಾಗಿದೆ. ಹಿಂದಿನ Z ಫೋಲ್ಡ್ 4 ಸ್ಮಾರ್ಟ್‌ಫೋನ್ ಕಡಿಮೆ ಬೆಳಕಿನಲ್ಲಿ ಮತ್ತು ಹಗಲು ಬೆಳಕಿನಲ್ಲಿ ಮೋಡಿಮಾಡುವ ಫೋಟೋ ಬರುತ್ತಿತ್ತು. ಹೊಸ ಫೋನಿನಲ್ಲಿ ಇದು ಇನ್ನಷ್ಟು ಉತ್ತಮವಾಗಿದೆ.

-ಎರಡೂ ಫೋನ್‌ಗಳಲ್ಲಿ ಅನಿಮೇಷನ್‌ಗಳು ಸಾಕಷ್ಟು ಮೃದುವಾಗಿರುತ್ತವೆ ಮತ್ತು ಡಿಸ್‌ಪ್ಲೇಗಳು ಸಹ ಅದ್ಭುತವಾಗಿದೆ. ಗ್ಲಾಸ್ ಬ್ಯಾಕ್ ಪ್ಯಾನೆಲ್‌ನೊಂದಿಗೆ ಪ್ರೀಮಿಯಂ ವಿನ್ಯಾಸದಲ್ಲಿದೆ. ಡಿಸ್ ಪ್ಲೇಯನ್ನು ಮಡಿಸಿದಾಗ ಅವುಗಳ ನಡುವೆ ಯಾವುದೇ ಅಂತರವಿಲ್ಲ. ಸ್ಯಾಮ್‌ಸಂಗ್ ಇವೆರಡರಲ್ಲೂ LTPO ಪ್ಯಾನೆಲ್‌ಗಳನ್ನು ನೀಡಿದೆ. ಅಂದರೆ ರಿಫ್ರೆಶ್ ದರವು ಸ್ವಯಂಚಾಲಿತವಾಗಿ 1Hz ನಿಂದ 120Hz ಗೆ ಸರಿಹೊಂದಿಸುತ್ತದೆ.

-ಎರಡೂ ಫೋನ್‌ಗಳಲ್ಲಿನ ಬ್ಯಾಟರಿಗಳು ದೊಡ್ಡದಾಗಿಲ್ಲ, ಆದರೆ ಸ್ಯಾಮ್‌ಸಂಗ್ ಕನಿಷ್ಠ 25W ವೇಗದ ಚಾರ್ಜರ್‌ಗೆ ಬೆಂಬಲವನ್ನು ಒದಗಿಸಿದೆ. ಆದಾಗ್ಯೂ, ನೀವು ಈ ಸ್ಮಾರ್ಟ್​ಫೋನ್​ಗಳಿಗೆ ಚಾರ್ಜರ್ ಅನ್ನು ಖರೀದಿಸಬೇಕಾಗುತ್ತದೆ.

-ಈ ಸ್ಯಾಮ್‌ಸಂಗ್ ಫೋಲ್ಡಬಲ್ ಫೋನ್‌ಗಳು IPX8 ರೇಟಿಂಗ್‌ಗೆ ಬೆಂಬಲವನ್ನು ಹೊಂದಿವೆ, ಅಂದರೆ ಇವು ವಾಟರ್ ಪ್ರೂಫ್ ಆಗಿದೆ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ

ನಾಗರ ಪಂಚಮಿಯ ಆಚರಣೆಯ ಮಹತ್ವ ಹಾಗೂ ಅದರ ಫಲ ತಿಳಿಯಿರಿ
ನಾಗರ ಪಂಚಮಿಯ ಆಚರಣೆಯ ಮಹತ್ವ ಹಾಗೂ ಅದರ ಫಲ ತಿಳಿಯಿರಿ
ನಾಗರ ಪಂಚಮಿ ಹಬ್ಬದಂದು ಯಾವೆಲ್ಲಾ ರಾಶಿಗಳಿಗೆ ಅದೃಷ್ಟ ತಿಳಿಯಿರಿ
ನಾಗರ ಪಂಚಮಿ ಹಬ್ಬದಂದು ಯಾವೆಲ್ಲಾ ರಾಶಿಗಳಿಗೆ ಅದೃಷ್ಟ ತಿಳಿಯಿರಿ
ಬ್ಯಾಡ್ಮಿಂಟನ್ ಆಡುವಾಗಲೇ ಹೃದಯಾಘಾತದಿಂದ 25 ವರ್ಷದ ಯುವಕ ಸಾವು
ಬ್ಯಾಡ್ಮಿಂಟನ್ ಆಡುವಾಗಲೇ ಹೃದಯಾಘಾತದಿಂದ 25 ವರ್ಷದ ಯುವಕ ಸಾವು
ರಕ್ಷಿತಾ, ವಿಜಯಲಕ್ಷ್ಮಿ ದರ್ಶನ್ ಪೋಸ್ಟ್ ಬಗ್ಗೆ ನಟಿ ರಮ್ಯಾ ನೇರಮಾತು
ರಕ್ಷಿತಾ, ವಿಜಯಲಕ್ಷ್ಮಿ ದರ್ಶನ್ ಪೋಸ್ಟ್ ಬಗ್ಗೆ ನಟಿ ರಮ್ಯಾ ನೇರಮಾತು
ನನ್ನ ಹೋರಾಟದಲ್ಲಿ ಕೈಜೋಡಿಸಿದವರಿಗೆಲ್ಲ ಧನ್ಯವಾದಗಳು: ರಮ್ಯಾ, ನಟಿ
ನನ್ನ ಹೋರಾಟದಲ್ಲಿ ಕೈಜೋಡಿಸಿದವರಿಗೆಲ್ಲ ಧನ್ಯವಾದಗಳು: ರಮ್ಯಾ, ನಟಿ
ನಿಮ್ಮ ದೇಶದ ಸಚಿವರ ಮೇಲೆ ನಂಬಿಕೆಯಿಲ್ವಾ?; ಸದನದಲ್ಲಿ ಗುಡುಗಿದ ಅಮಿತ್ ಶಾ
ನಿಮ್ಮ ದೇಶದ ಸಚಿವರ ಮೇಲೆ ನಂಬಿಕೆಯಿಲ್ವಾ?; ಸದನದಲ್ಲಿ ಗುಡುಗಿದ ಅಮಿತ್ ಶಾ
ಮಗನ ಮದುವೆ ಜೊತೆಗೆ 11 ಜೋಡಿಗಳಿಗೆ ವಿವಾಹ ಮಾಡಿಸಿದ ತಂದೆ
ಮಗನ ಮದುವೆ ಜೊತೆಗೆ 11 ಜೋಡಿಗಳಿಗೆ ವಿವಾಹ ಮಾಡಿಸಿದ ತಂದೆ
ಯಶ್, ಸುದೀಪ್ ಪತ್ನಿ-ಮಕ್ಕಳ ಬಗ್ಗೆಯೂ ಕೆಟ್ಟ ಕಮೆಂಟ್; ರಮ್ಯಾ ಬೇಸರ
ಯಶ್, ಸುದೀಪ್ ಪತ್ನಿ-ಮಕ್ಕಳ ಬಗ್ಗೆಯೂ ಕೆಟ್ಟ ಕಮೆಂಟ್; ರಮ್ಯಾ ಬೇಸರ
ರಸಗೊಬ್ಬರ ಅಭಾವ ಮತ್ತು ರೈತರ ಸಮಸ್ಯೆ ಬಗ್ಗೆ ನಡ್ಡಾಗೆ ಪತ್ರ ಬರೆದಿರುವ ಸಿಎಂ
ರಸಗೊಬ್ಬರ ಅಭಾವ ಮತ್ತು ರೈತರ ಸಮಸ್ಯೆ ಬಗ್ಗೆ ನಡ್ಡಾಗೆ ಪತ್ರ ಬರೆದಿರುವ ಸಿಎಂ
ದರ್ಶನ್ ಫ್ಯಾನ್ಸ್ ವಿರುದ್ಧ ರಮ್ಯಾ ದೂರು ಕೊಟ್ಟಿದ್ದಕ್ಕೆ ಇದು ಮುಖ್ಯ ಕಾರಣ
ದರ್ಶನ್ ಫ್ಯಾನ್ಸ್ ವಿರುದ್ಧ ರಮ್ಯಾ ದೂರು ಕೊಟ್ಟಿದ್ದಕ್ಕೆ ಇದು ಮುಖ್ಯ ಕಾರಣ