AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರು-ಮಂಗಳೂರು ರೈಲು ಪ್ರಯಾಣಿಕರು ಬಳಸಿಕೊಳ್ಳುತ್ತಿದ್ದಾರೆ ‘ಎಮರ್ಜೆನ್ಸಿ ಕೋಟಾ’: ಅರ್ಜಿ ಸಲ್ಲಿಸುವುದು ಹೇಗೆ?

ಭಾರತೀಯ ರೈಲ್ವೆಯು ಅತೀ ತುರ್ತು ಸಂದರ್ಭಗಳಿಗಾಗಿ 'ಎಮರ್ಜೆನ್ಸಿ ಕೋಟಾ' (EQ) ಸೀಟುಗಳನ್ನು ಮೀಸಲಿಟ್ಟಿದೆ. ಗಣ್ಯ ವ್ಯಕ್ತಿಗಳು, ಕುಟುಂಬದಲ್ಲಿ ಸಾವು, ವೈದ್ಯಕೀಯ ತುರ್ತು ಅಥವಾ ಉದ್ಯೋಗ ಸಂದರ್ಶನದಂತಹ ನಿರ್ಣಾಯಕ ಸಂದರ್ಭಗಳಲ್ಲಿ ಸಾಮಾನ್ಯ ಪ್ರಯಾಣಿಕರು ಇದನ್ನು ಬಳಸಬಹುದು. ವೈಟಿಂಗ್ ಲಿಸ್ಟ್ ಟಿಕೆಟ್ ಹೊಂದಿರುವವರು, ಸಂಬಂಧಪಟ್ಟ ರೈಲ್ವೆ ಅಧಿಕಾರಿಗೆ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬೇಕು. ಸೀಟು ಲಭ್ಯತೆ ಮತ್ತು ವಿವೇಚನೆಗೆ ಒಳಪಟ್ಟಿರುತ್ತದೆ, ಯಾವುದೇ ಗ್ಯಾರಂಟಿ ಇರುವುದಿಲ್ಲ.

ಬೆಂಗಳೂರು-ಮಂಗಳೂರು ರೈಲು ಪ್ರಯಾಣಿಕರು ಬಳಸಿಕೊಳ್ಳುತ್ತಿದ್ದಾರೆ 'ಎಮರ್ಜೆನ್ಸಿ ಕೋಟಾ': ಅರ್ಜಿ ಸಲ್ಲಿಸುವುದು ಹೇಗೆ?
ಸಾಂದರ್ಭಿಕ ಚಿತ್ರ
ಅಕ್ಷಯ್​ ಪಲ್ಲಮಜಲು​​
|

Updated on: Feb 06, 2026 | 1:07 PM

Share

ಭಾರತೀಯ ರೈಲ್ವೆಯಲ್ಲಿನ ತುರ್ತು ಕೋಟಾ (EQ) ಸೇರಿದಂತೆ ಹಲವಾರು ಬುಕಿಂಗ್ ಕೋಟಾಗಳನ್ನು ಪರಿಚಯಿಸಿದೆ. ಇದರಿಂದ ಯಾರಿಗೆಲ್ಲ ಲಾಭವಾಗಲಿದೆ. ಇದನ್ನು ಪಡೆಯುವುದು ಹೇಗೆ ಎಂಬಲ್ಲ ಬಗ್ಗೆ ಇಲ್ಲಿ ತಿಳಿಸಲಾಗಿದೆ. ಸಾಮಾನ್ಯವಾಗಿ ರೈಲುಗಳಲ್ಲಿ ಸೀಟುಗಳು ಭರ್ತಿಯಾದಾಗ ‘ವೈಟಿಂಗ್ ಲಿಸ್ಟ್’ (Waiting List) ಇರುತ್ತದೆ. ಆದರೆ, ಅತೀ ತುರ್ತು ಸಂದರ್ಭಗಳಲ್ಲಿ ಪ್ರಯಾಣಿಸಬೇಕಾದವರಿಗಾಗಿ ರೈಲ್ವೆ ಇಲಾಖೆಯು ಕೆಲವು ಸೀಟುಗಳನ್ನು ಮೀಸಲಿಟ್ಟಿರುತ್ತದೆ. ಇದು ಎಲ್ಲರಿಗೂ ಮುಕ್ತವಾಗಿಲ್ಲ ಮತ್ತು ಕೆಲವು ವರ್ಗದ ಪ್ರಯಾಣಿಕರಿಗೆ ಮಾತ್ರ ಮೀಸಲಾಗಿರುತ್ತದೆ. ಈ ಕೋಟಾವನ್ನು ಬೆಂಗಳೂರು ಮತ್ತು ಮಂಗಳೂರು ಪ್ರಯಾಣಿಕರು ಇದನ್ನು ಬಳಸಿಕೊಳ್ಳುತ್ತಿದ್ದಾರೆ. ಈ ಬಗ್ಗೆ ಇಲ್ಲಿದೆ ನೋಡಿ ಮಾಹಿತಿ.

ಯಾರಿಗೆ ಈ ಕೋಟಾ ಅನ್ವಯವಾಗುತ್ತದೆ?

ಗಣ್ಯ ವ್ಯಕ್ತಿಗಳು: ಕೇಂದ್ರ ಮತ್ತು ರಾಜ್ಯ ಸಚಿವರು, ಸಂಸದರು (MP), ಶಾಸಕರು (MLA), ಸಾಂವಿಧಾನಿಕ ಹುದ್ದೆಯಲ್ಲಿರುವವರು ಮತ್ತು ಹಿರಿಯ ಸರ್ಕಾರಿ ಅಧಿಕಾರಿಗಳು ಈ ಕೋಟಾವನ್ನು ಬಳಸಿಕೊಳ್ಳಬಹುದು.

ತುರ್ತು ಅಗತ್ಯವಿರುವ ಸಾಮಾನ್ಯ ಪ್ರಯಾಣಿಕರು: ಕುಟುಂಬದಲ್ಲಿ ಸಾವು ಸಂಭವಿಸಿದಾಗ, ವೈದ್ಯಕೀಯ ತುರ್ತು ಪರಿಸ್ಥಿತಿ (Serious Medical Cases), ಅಥವಾ ಉದ್ಯೋಗದ ಸಂದರ್ಶನಕ್ಕೆ ಹೋಗುವವರು ಈ ಕೋಟಾದಡಿ ಅರ್ಜಿ ಸಲ್ಲಿಸಬಹುದು.

ಇದು ಹೇಗೆ ಕೆಲಸ ಮಾಡುತ್ತದೆ?:

ರೈಲ್ವೆಯ ಪ್ರತಿಯೊಂದು ವಿಭಾಗದಲ್ಲೂ ಈ ಸೀಟುಗಳನ್ನು ಹಂಚಿಕೆ ಮಾಡಲು ಅಧಿಕಾರಿಗಳಿರುತ್ತಾರೆ. ಪ್ರಯಾಣಿಕರು ಮೊದಲು ವೈಟಿಂಗ್ ಲಿಸ್ಟ್ ಟಿಕೆಟ್ ಹೊಂದಿರಬೇಕು. ನಂತರ ಸಂಬಂಧಪಟ್ಟ ವಲಯದ ಹಿರಿಯ ಅಧಿಕಾರಿಗಳಿಗೆ ಅಥವಾ ‘ವಿಭಾಗೀಯ ರೈಲ್ವೆ ಮ್ಯಾನೇಜರ್’ (DRM) ಕಚೇರಿಗೆ ಅರ್ಜಿಯನ್ನು ಸಲ್ಲಿಸಬೇಕು. ಅರ್ಜಿಯ ಜೊತೆಗೆ ತುರ್ತು ಪರಿಸ್ಥಿತಿಯ ದಾಖಲೆಗಳನ್ನು (ವೈದ್ಯಕೀಯ ವರದಿ ಅಥವಾ ಇನ್ಯಾವುದೇ ಪುರಾವೆ) ಲಗತ್ತಿಸುವುದು ಕಡ್ಡಾಯ.

ಇದನ್ನೂ ಓದಿ: ಕರ್ನಾಟಕ ರೈಲ್ವೆಗೆ ಭರಪೂರ ಕೊಡುಗೆ: ಬಜೆಟ್​ನಲ್ಲಿ ಏನೂ ಸಿಕ್ಕಿಲ್ಲ ಎಂದವರಿಗೆ ಅಂಕಿಅಂಶ ಸಮೇತ ಅಶ್ವಿನಿ ವೈಷ್ಣವ್ ತಿರುಗೇಟು

ಸೀಟು ಹಂಚಿಕೆ ಯಾವಾಗ ನಡೆಯುತ್ತದೆ?

ಚಾರ್ಟ್ ತಯಾರಾಗುವ ಮುನ್ನ (ಸಾಮಾನ್ಯವಾಗಿ ರೈಲು ಹೊರಡುವ 4 ಗಂಟೆಗಳ ಮೊದಲು) ಈ ಕೋಟಾವನ್ನು ಪರಿಶೀಲಿಸಲಾಗುತ್ತದೆ. ಆದ್ಯತೆಯ ಮೇರೆಗೆ ಯಾರಿಗೆ ಸೀಟು ನೀಡಬೇಕು ಎಂದು ಅಧಿಕಾರಿಗಳು ನಿರ್ಧರಿಸುತ್ತಾರೆ. ಒಂದು ವೇಳೆ ಯಾವುದೇ ಗಣ್ಯ ವ್ಯಕ್ತಿಗಳ ಬೇಡಿಕೆ ಇಲ್ಲದಿದ್ದರೆ, ಆ ಸೀಟುಗಳನ್ನು ತುರ್ತು ಪರಿಸ್ಥಿತಿಯಲ್ಲಿರುವ ಸಾಮಾನ್ಯ ಜನರಿಗೆ ನೀಡಲಾಗುತ್ತದೆ. ಈ ಕೋಟಾದಡಿ ಸೀಟು ಸಿಗುವುದು ಗ್ಯಾರಂಟಿ ಇರುವುದಿಲ್ಲ. ಇದರ ಲಭ್ಯತೆ ಮತ್ತು ಅಧಿಕಾರಿಯ ವಿವೇಚನೆಗೆ ಬಿಟ್ಟಿರುತ್ತದೆ. ಬೆಂಗಳೂರಿನಂತಹ ನಗರಗಳಲ್ಲಿ ಈ ಕೋಟಾಗೆ ಅತೀ ಹೆಚ್ಚು ಬೇಡಿಕೆ ಇರುತ್ತದೆ.

ಬೆಂಗಳೂರು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ