Ballari: ತೆಕ್ಕಲಕೋಟೆ ಬಳಿ ಉತ್ಖನನದ ವೇಳೆ ಸಾವಿರಾರು ವರ್ಷಗಳ ಹಿಂದಿನ ಅಸ್ಥಿಪಂಜರ ಪತ್ತೆ
ಬಳ್ಳಾರಿ ಜಿಲ್ಲೆಯ ತೆಕ್ಕಲಕೋಟೆಯಲ್ಲಿ ನಡೆದ ಉತ್ಖನನದ ವೇಳೆ 3-5 ಸಾವಿರ ವರ್ಷಗಳ ಹಿಂದಿನ ಮಾನವ ಅಸ್ಥಿಪಂಜರ ಪತ್ತೆಯಾಗಿದೆ. ಗೌಡ್ರ ಮೂಲೆ ಬೆಟ್ಟದಲ್ಲಿ ಪುರಾತತ್ವ ಇಲಾಖೆ ತಂಡವು 5.5 ಅಡಿ ಉದ್ದದ ಅಸ್ಥಿಪಂಜರವನ್ನು ಪತ್ತೆ ಮಾಡಿದೆ. ಇದು ನವಶಿಲಾಯುಗ ಅಥವಾ ಲೋಹಯುಗಕ್ಕೆ ಸೇರಿರಬಹುದು ಎಂದು ಅಂದಾಜಿಸಲಾಗಿದ್ದು, ಕಾರ್ಬನ್ ಡೇಟಿಂಗ್‌ಗಾಗಿ ಕಾಯಲಾಗುತ್ತಿದೆ.
ಬಳ್ಳಾರಿ, ಫೆಬ್ರವರಿ 08: ಜಿಲ್ಲೆಯ ತೆಕ್ಕಲಕೋಟೆ ಪಟ್ಟಣದ ಗೌಡ್ರ ಮೂಲೆ ಬೆಟ್ಟದಲ್ಲಿ ನಡೆದ ಉತ್ಖನನದ ವೇಳೆ ಸುಮಾರು 3-5 ಸಾವಿರ ವರ್ಷಗಳ ಹಿಂದಿನ ಮಾನವ ಅಸ್ಥಿಪಂಜರ ಪತ್ತೆಯಾಗಿದೆ. ಕಳೆದ ವಾರ ಉತ್ಖನನ ನಡೆಸುತ್ತಿದ್ದಾಗ ಮಾನವ ಮೂಳೆಗಳು ಕಂಡುಬಂದಿದ್ದು, ನಂತರ ಆಳವಾಗಿ ಅಗೆದಾಗ 5.5 ಅಡಿ ಉದ್ದದ ಸಂಪೂರ್ಣ ಅಸ್ಥಿಪಂಜರವು ಪತ್ತೆಯಾಗಿದೆ. ಕಲ್ಲುಗಳನ್ನು ಇರಿಸಿ ಶವ ಸಂಸ್ಕಾರ ಮಾಡಿದ ಸ್ಥಿತಿಯಲ್ಲಿ ಈ ಅಸ್ಥಿಪಂಜರ ದೊರೆತಿದೆ. ಇದು ನೂತನ ಶಿಲಾಯುಗ ಕಾಲಕ್ಕೆ ಸಂಬಂಧಪಟ್ಟಿರಬಹುದು ಎಂದು ತಜ್ಞರು ಹೇಳಿದ್ದು, ನಿಖರವಾದ ಮಾಹಿತಿ ಪಡೆಯಲು ಕಾರ್ಬನ್ ಡೇಟಿಂಗ್ ಅಧ್ಯಯನ ನಡೆಸಲು ಅಧಿಕಾರಿಗಳು ಮುಂದಾಗಿದ್ದಾರೆ.
ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.
Published on: Feb 08, 2026 06:31 AM
Latest Videos
