Infinix GT 10 Pro: 108MP ಕ್ಯಾಮೆರಾ: ಬಹಿರಂಗವಾಯಿತು ಇನ್ಫಿನಿಕ್ಸ್ GT 10 ಪ್ರೊ ಸ್ಮಾರ್ಟ್ಫೋನ್ ಫೀಚರ್ಸ್
ಹಿಂಭಾಗದ ಡಿಸೈನ್ ಮೂಲಕ ಎಲ್ಲರ ಹುಬ್ಬೇರುವಂತೆ ಮಾಡಿರುವ ಇನ್ಫಿನಿಕ್ಸ್ GT 10 ಪ್ರೊ ಸ್ಮಾರ್ಟ್ಫೋನ್ನ ಒಂದೊಂದೆ ಫೀಚರ್ಸ್ ಸೋರಿಕೆ ಆಗುತ್ತಿದೆ. ಇದರಲ್ಲಿ ಬರೋಬ್ಬರಿ 108 ಮೆಗಾ ಪಿಕ್ಸೆಲ್ ಕ್ಯಾಮೆರಾ ಅಳವಡಿಸಲಾಗಿದೆ.
ಕಳೆದ ಒಂದು ತಿಂಗಳುಗಳಿಂದ ತನ್ನ ಡಿಸೈನ್ ಮೂಲಕವೇ ಭಾರತೀಯ ಮಾರುಕಟ್ಟೆಯಲ್ಲಿ ಭಾರೀ ಸದ್ದು ಮಾಡುತ್ತಿರುವ ಇನ್ಫಿನಿಕ್ಸ್ (Infinix) ಕಂಪನಿಯ ಬಹುನಿರೀಕ್ಷಿತ ಇನ್ಫಿನಿಕ್ಸ್ ಜಿಟಿ 10 ಪ್ರೊ (Infinix GT 10 Pro) ಸ್ಮಾರ್ಟ್ಫೋನ್ ಇನ್ನೇನು ಕೆಲವೇ ದಿನಗಳಲ್ಲಿ ಬಿಡುಗಡೆ ಆಗುತ್ತಿದೆ. ಈ ಫೋನ್ ಮುಂದಿನ ತಿಂಗಳು ಆಗಸ್ಟ್ 3 ರಂದು ದೇಶದಲ್ಲಿ ಅನಾವರಣಗೊಳ್ಳಲಿದೆ. ಹಿಂಭಾಗದ ಡಿಸೈನ್ ಮೂಲಕ ಎಲ್ಲರ ಹುಬ್ಬೇರುವಂತೆ ಮಾಡಿರುವ ಈ ಸ್ಮಾರ್ಟ್ಫೋನ್ನ (Smartphone) ಒಂದೊಂದೆ ಫೀಚರ್ಸ್ ಸೋರಿಕೆ ಆಗುತ್ತಿದೆ. ಇದರಲ್ಲಿ ಬರೋಬ್ಬರಿ 108 ಮೆಗಾ ಪಿಕ್ಸೆಲ್ ಕ್ಯಾಮೆರಾ ಅಳವಡಿಸಲಾಗಿದೆ. ಜೊತೆಗೆ ಬಲಿಷ್ಠವಾದ ಪ್ರೊಸೆಸರ್, ಬ್ಯಾಟರಿ ಆಯ್ಕೆ ಕೂಡ ನೀಡಲಾಗಿದೆ.
ಭಾರತದಲ್ಲಿ ಇನ್ಫಿನಿಕ್ಸ್ GT 10 ಪ್ರೊ ಬೆಲೆ:
ಇನ್ಫಿನಿಕ್ಸ್ ಕಂಪನಿ ತನ್ನ ಹೊಸ ಇನ್ಫಿನಿಕ್ಸ್ GT 10 ಪ್ರೊ ಫೋನಿನ ನಿಖರ ಬೆಲೆ ಬಹಿರಂಗಗೊಳಿಸಿಲ್ಲ. ಆದರೆ, ಮೂಲಗಳ ಪ್ರಕಾರ 20,000 ರೂ. ಇರಬಹುದೆಂದು ಅಂದಾಜಿಸಲಾಗಿದೆ. ಪ್ರಸಿದ್ಧ ಇ ಕಾಮರ್ಸ್ ತಾಣವಾದ ಫ್ಲಿಪ್‌ಕಾರ್ಟ್ ಮೂಲಕ ಆಗಸ್ಟ್ 3 ರಿಂದ ಮುಂಗಡ ಬುಕ್ಕಿಂಗ್ ಮಾಡಬಹುದು.
ಹ್ಯಾಂಡ್‌ಸೆಟ್ ಅನ್ನು ಮುಂಗಡವಾಗಿ ಆರ್ಡರ್ ಮಾಡುವ ಮೊದಲ 5,000 ಗ್ರಾಹಕರಿಗೆ ಇನ್ಫಿನಿಕ್ಸ್ ಪ್ರೊ ಗೇಮಿಂಗ್ ಅನ್ನು ಉಡುಗೊರೆಯಾಗಿ ನೀಡಲಿದೆ. ಜೊತೆಗೆ ಖರೀದಿದಾರರು ಆಯ್ದ ಬ್ಯಾಂಕ್ ಕಾರ್ಡ್ ಮೂಲಕ ಖರೀದಿಸಿದರೆ 2,000 ರೂ. ಗಳ ತ್ವರಿತ ರಿಯಾಯಿತಿಯನ್ನು ಪಡೆಯಬಹುದು. ಕಂಪನಿಯು ಆರು ತಿಂಗಳ ನೋ-ಕಾಸ್ಟ್ EMI ಆಯ್ಕೆಗಳನ್ನು ಸಹ ಒದಗಿಸುತ್ತಿದೆ.
ಇನ್ಫಿನಿಕ್ಸ್ GT 10 ಪ್ರೊ ಫೀಚರ್ಸ್:
ಇನ್ಫಿನಿಕ್ಸ್ GT 10 ಪ್ರೊ ಆಂಡ್ರಾಯ್ಡ್ 13 ನಲ್ಲಿ ಕಾರ್ಯನಿರ್ವಹಿಸುತ್ತದೆ ಮತ್ತು ಕಂಪನಿಯು ಎರಡು ವರ್ಷಗಳ ಭದ್ರತಾ ನವೀಕರಣದ ಜೊತೆಗೆ ಆಂಡ್ರಾಯ್ಡ್ 14 ಗೆ ಅಪ್‌ಗ್ರೇಡ್ ಮಾಡುವ ಭರವಸೆಯನ್ನು ನೀಡಿದೆ. ಇದು 6.67-ಇಂಚಿನ ಪೂರ್ಣ-HD+ 10-ಬಿಟ್ AMOLED ಡಿಸ್ ಪ್ಲೇ ಜೊತೆಗೆ 120Hz ರಿಫ್ರೆಶ್ ರೇಟ್ ಮತ್ತು 360Hz ಟಚ್ ಸ್ಯಾಂಪ್ಲಿಂಗ್ ದರವನ್ನು ಹೊಂದಿದೆ. ಡಿಸ್‌ಪ್ಲೇಯ ಮಧ್ಯದಲ್ಲಿ ಹೋಲ್ ಪಂಚ್ ಕಟೌಟ್ ಅನ್ನು ನೀಡಲಾಗಿದೆ.
ಇದು ಮೀಡಿಯಾ ಟೆಕ್ ಡೈಮೆನ್ಸಿಟಿ 8050 ಪ್ರೊಸೆಸರ್ನಿಂದ ಚಾಲಿತವಾಗಿದೆ. 8GB ಯ LPDDR4X RAM ಮತ್ತು 256GB USF 3.1 ಆನ್‌ಬೋರ್ಡ್ ಸಂಗ್ರಹಣೆಯನ್ನು ಜೋಡಿಸಲಾಗಿದೆ. 16GB ವರೆಗೆ RAM ಅನ್ನು ವಿಸ್ತರಿಸಬಹುದು. ಇದು DTS ಆಡಿಯೋ ತಂತ್ರಜ್ಞಾನ ಮತ್ತು ಹೈ-ರೆಸ್ ಆಡಿಯೋ ಪ್ರಮಾಣೀಕರಣದಿಂದ ಸ್ಟಿರಿಯೊ ಡ್ಯುಯಲ್ ಸ್ಪೀಕರ್‌ಗಳೊಂದಿಗೆ ಬರುತ್ತದೆ. ವಿಶೇಷವಾಗಿ ಈ ಗೇಮಿಂಗ್ ಫೋನ್ ಗೇಮ್ ಎಂಜಿನ್, ಕೂಲಿಂಗ್ ವ್ಯವಸ್ಥೆಯನ್ನು ಒಳಗೊಂಡಿದೆ.
ಕ್ಯಾಮೆರಾ ವಿಚಾರಕ್ಕೆ ಬರುವುದಾದರೆ, ಇನ್ಫಿನಿಕ್ಸ್ GT 10 ಪ್ರೊ ಟ್ರಿಪಲ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿರುತ್ತದೆ. ಇದು 108-ಮೆಗಾಪಿಕ್ಸೆಲ್ ಪ್ರಾಥಮಿಕ ಸಂವೇದಕ ಮತ್ತು ಎರಡು 2-ಮೆಗಾಪಿಕ್ಸೆಲ್ ಕ್ಯಾಮೆರಾ ಸಂವೇದಕಗಳನ್ನು ಒಳಗೊಂಡಿರುತ್ತದೆ. ಸೆಲ್ಫಿ ಮತ್ತು ವಿಡಿಯೋ ಕರೆಗಳಿಗಾಗಿ 32-ಮೆಗಾಪಿಕ್ಸೆಲ್ ಮುಂಭಾಗದ ಕ್ಯಾಮೆರಾ ಅಳವಡಿಸಲಾಗಿದೆ. 45W ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ 5,000mAh ಬ್ಯಾಟರಿಯನ್ನು ಪ್ಯಾಕ್ ಮಾಡುತ್ತದೆ. ಇದು Wi-Fi 6 ಸಂಪರ್ಕವನ್ನು ಹೊಂದಿರುತ್ತದೆ ಮತ್ತು ಇನ್-ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸಂವೇದಕದ ಮೂಲಕ ಅನಾವರಣಗೊಳ್ಳಲಿದೆ.
ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ