ಹೊಸದಾಗಿ ಬಿಡುಗಡೆಯಾದ ಐಫೋನ್ 15 ಸರಣಿಯು (iPhone 15 Series) ಈಗ ಪ್ರೀ-ಬುಕಿಂಗ್‌ಗೆ ಲಭ್ಯವಿದೆ. ಐಫೋನ್ 15, ಐಫೋನ್ 15 ಪ್ಲಸ್, ಐಫೋನ್ 15 ಪ್ರೊ ಅಥವಾ ಐಫೋನ್ 15 ಪ್ರೊ ಮ್ಯಾಕ್ಸ್ ಖರೀದಿಸಲು ಆಸಕ್ತಿ ಹೊಂದಿರುವ ಭಾರತೀಯರು ಇವುಗಳಲ್ಲಿ ಯಾವುದಾದರೂ ಒಂದನ್ನು ಕಡಿಮೆ ಬೆಲೆಗೆ ಲಾಂಚ್ ಆಫರ್‌ಗಳೊಂದಿಗೆ ಪಡೆಯಬಹುದು. ಪ್ರಿ ಬುಕಿಂಗ್ ವಿಂಡೋ ಈಗಾಗಲೇ ತೆರೆದಿದ್ದು, ಕೆಲ ಐಫೋನ್ 15 ಮಾಡೆಲ್ಗಳು ಸೋಲ್ಡ್ ಔಟ್ ಆಗಿದೆ. ಐಫೋನ್ 15 ಸರಣಿಯ ಮಾರಾಟವು ಅಧಿಕೃತವಾಗಿ ಸೆಪ್ಟೆಂಬರ್ 22 ರಿಂದ ದೇಶದಲ್ಲಿ ಶುರುವಾಗಲಿದೆ. ಹೊಸ ಐಫೋನ್‌ಗಳ ಬೆಲೆಗಳು ಮತ್ತು ರಿಯಾಯಿತಿ ಕೊಡುಗೆಗಳ ಸಂಪೂರ್ಣ ಮಾಹಿತಿ ಇಲ್ಲಿದೆ.
128GB ಬೇಸ್ ಹೊಂದಿರುವ ಐಫೋನ್ 15 ಬೆಲೆ 79,900 ರೂ. ಗಳೊಂದಿಗೆ ಬರುತ್ತದೆ ಮತ್ತು 256GB ಮಾದರಿಯು 89,900 ರೂ. ಗಳಿಗೆ ಮಾರಾಟವಾಗಲಿದೆ. 512GB ಆವೃತ್ತಿಯು ಗ್ರಾಹಕರಿಗೆ 1,09,900 ರೂಪಾಯಿಗಳ ಬೆಲೆಯೊಂದಿಗೆ ಲಭ್ಯವಿರುತ್ತದೆ.
128GB ಹೊಂದಿರುವ ಐಫೋನ್ 15 ಪ್ಲಸ್ ನಿಮಗೆ ರೂ. 89,900 ಮತ್ತು 256GB ರೂಪಾಂತರದ ಬೆಲೆ ರೂ. 99,900 ಆಗಿದೆ. ಅಂತೆಯೆ ಇದರ 512GB ಮಾದರಿಯೂ ಇದೆ ಇದು 1,19,900 ರೂ. ಗೆ ಮಾರಾಟವಾಗಲಿದೆ.
128GB ಮಾದರಿಯ ಐಫೋನ್ 15 ಪ್ರೊ 1,34,900 ರೂ. ಬೆಲೆಯೊಂದಿಗೆ ಬರುತ್ತದೆ. 256GB ರೂಪಾಂತರವು ನಿಮಗೆ 1,44,900 ರೂ., ಮತ್ತು 512GB ಮಾದರಿಯನ್ನು ರೂ. 1,64,900 ಅಥವಾ 1TB ರೂಪಾಂತರವನ್ನು ರೂ. 1,84,900 ಕ್ಕೆ ಖರೀದಿಸಬಹುದು.
ಆ್ಯಪಲ್‌ನ ಅತ್ಯಂತ ಪ್ರೀಮಿಯಂ ಐಫೋನ್ ಆಗಿರುವ ಐಫೋನ್ 15 ಪ್ರೊ ಮ್ಯಾಕ್ಸ್ 256GB ಮಾದರಿಗೆ 1,59,900 ರೂ. ಇದೆ. 512GB ರೂಪಾಂತರವು ನಿಮಗೆ ರೂ. 1,79,900 ವೆಚ್ಚವಾಗಲಿದ್ದು, 1TB ಮಾದರಿಯು 1,99,900 ರೂ. ಗೆ ಲಭ್ಯವಿರುತ್ತದೆ.
ಭಾರತದಲ್ಲಿ ಇಂದಿನಿಂದ ನೋಕಿಯಾದ ಈ ಸ್ಟೈಲಿಶ್ ಸ್ಮಾರ್ಟ್ಫೋನ್ ಖರೀದಿಗೆ ಲಭ್ಯ: ಬೆಲೆ ಎಷ್ಟು?
ಐಫೋನ್ 15 ಸರಣಿಯ ಫೋನುಗಳನ್ನು ಆ್ಯಪಲ್‌ನ ಅಧಿಕೃತ ವೆಬ್ಸೈಟ್ ಮತ್ತು ಪ್ರಸಿದ್ಧ ಇ ಕಾಮರ್ಸ್ ತಾಣವಾದ ಫ್ಲಿಪ್ಕಾರ್ಟ್ ಮೂಲಕ ಮುಂಗಡ ಬುಕಿಂಗ್ ಮಾಡಬಹುದು. ಫ್ಲಿಪ್‌ಕಾರ್ಟ್‌ನಲ್ಲಿ, ಐಫೋನ್ 15 ಮತ್ತು ಐಫೋನ್ 15 ಪ್ಲಸ್ HDFC ಬ್ಯಾಂಕ್ ಕ್ರೆಡಿಟ್ ಕಾರ್ಡ್ ವಹಿವಾಟಿನ ಮೇಲೆ 5,000 ರೂಪಾಯಿಗಳ ರಿಯಾಯಿತಿ ಕೊಡುಗೆಯೊಂದಿಗೆ ಲಭ್ಯವಿದೆ. ಎಚ್‌ಡಿಎಫ್‌ಸಿ ಡೆಬಿಟ್ ಕಾರ್ಡ್ ಹೊಂದಿರುವ ಜನರು ಇಎಂಐ ವಹಿವಾಟುಗಳನ್ನು ಆರಿಸಿಕೊಂಡರೆ ಈ ಕೊಡುಗೆಯನ್ನು ಪಡೆದುಕೊಳ್ಳಬಹುದು.
ಆ್ಯಪಲ್‌ನ ಅಧಿಕೃತ ಆನ್‌ಲೈನ್ ಸ್ಟೋರ್‌ನಿಂದ ಕೂಡ ಹೊಸ ಐಫೋನ್ ಖರೀದಿಸಬಹುದು. ಆಪಲ್ ತನ್ನ ಹೊಸ ಐಫೋನ್ 15 ಪ್ರೊ ಮತ್ತು ಐಫೋನ್ 15 ಪ್ರೊ ಮ್ಯಾಕ್ಸ್ ಮಾದರಿಗಳಿಗೆ ರಿಯಾಯಿತಿ ಮತ್ತು ಕ್ಯಾಶ್‌ಬ್ಯಾಕ್ ಅನ್ನು ಘೋಷಿಸಿದೆ. HDFC ಬ್ಯಾಂಕ್ ಕಾರ್ಡ್ ಬಳಕೆದಾರರು ರೂ 6,000 ರಿಯಾಯಿತಿಯನ್ನು ಪಡೆಯಬಹುದು, ಪ್ರೊ ಅಲ್ಲದ ಮಾದರಿಗಳು ರೂ. 5,000 ಕ್ಯಾಶ್‌ಬ್ಯಾಕ್ ಕೊಡುಗೆಯನ್ನು ಹೊಂದಿವೆ. ಕಂಪನಿಯು ಹಳೆಯ ಐಫೋನ್ ಮಾದರಿಗಳಲ್ಲಿ ಕೂಡ ಬ್ಯಾಂಕ್ ರಿಯಾಯಿತಿ ಕೊಡುಗೆಗಳನ್ನು ನೀಡುತ್ತಿದೆ.
ಹೆಚ್ಚುವರಿಯಾಗಿ, ಆಪಲ್ ಟ್ರೇಡ್-ಇನ್ ಆಯ್ಕೆಗಳನ್ನು ನೀಡಲಾಗಿದೆ. ಇಲ್ಲಿ ಖರೀದಿದಾರರು ಹೊಸ ಐಫೋನ್‌ಗಾಗಿ ಅರ್ಹ ಸ್ಮಾರ್ಟ್‌ಫೋನ್‌ಗಳನ್ನು ವಿನಿಮಯ ಮಾಡಿಕೊಳ್ಳುವ ಮೂಲಕ ತ್ವರಿತ ಕ್ರೆಡಿಟ್‌ನಲ್ಲಿ ರೂ. 55,700 ವರೆಗೆ ಪಡೆಯಬಹುದು. ಆದರೆ, ಈ ವಿನಿಮಯದ ಕೊಡುಗೆಯು ನಿಮ್ಮ ಹಳೆಯ ಫೋನ್ ಮತ್ತು ಅದರ ಸ್ಥಿತಿಯ ಆಧಾರದ ಮೇಲೆ ನಿರ್ಧಾರವಾಗುತ್ತದೆ.
ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ