ಭಾರತದಲ್ಲಿ ಐಫೋನ್ 15 ಪ್ರೊ, 15 ಪ್ರೊ ಮ್ಯಾಕ್ಸ್ ಬೆಲೆ ಎಷ್ಟು?, ಫೀಚರ್ಸ್ ಏನಿದೆ?
iPhone 15 Pro, iPhone 15 Pro Max Price and Specs: ಹೊಸ ಐಫೋನ್ 15 ಸರಣಿ ಯುಎಸ್‌ಬಿ ಟೈಪ್-ಸಿ ಪೋರ್ಟ್‌ನೊಂದಿಗೆ ಬಂದಿವೆ. ಐಫೋನ್ 15 ಪ್ರೊ, ಐಫೋನ್ 15 ಪ್ರೊ ಮ್ಯಾಕ್ಸ್ ಮಾಡೆಲ್‌ಗಳು ಹೊಸ 3nm A17 Pro ಚಿಪ್‌ಸೆಟ್ ಅನ್ನು ಪಡೆಯುತ್ತವೆ, ಇದು A16 Bionic SoC ಗೆ ಹೋಲಿಸಿದರೆ ಉತ್ತಮ ಕಾರ್ಯಕ್ಷಮತೆ ಮತ್ತು ವೇಗವನ್ನು ಹೊಂದಿದೆ.
ಪ್ರಸಿದ್ಧ ಆ್ಯಪಲ್ ಕಂಪನಿ ಭಾರತ ಸೇರಿದಂತೆ ಜಾಗತಿಕ ಮಾರುಕಟ್ಟೆಯಲ್ಲಿ ತನ್ನ ನೂತನ ಐಫೋನ್ 15 ಸರಣಿಯಲ್ಲಿ ಲಾಂಚ್ ಮಾಡಿದೆ. ಇದರಲ್ಲಿ ಐಫೋನ್ 15, ಐಫೋನ್ 15 ಪ್ಲಸ್, ಐಫೋನ್ 15 ಪ್ರೊ ಮತ್ತು ಐಫೋನ್ 15 ಪ್ರೊ ಮ್ಯಾಕ್ಸ್ ಸ್ಮಾರ್ಟ್ಫೋನ್ಗಳಿದೆ. ಐಫೋನ್ 15 ಪ್ರೊ ಮತ್ತು ಐಫೋನ್ 15 ಪ್ರೊ ಮ್ಯಾಕ್ಸ್ (iPhone 15 Pro Max) ಬೆಲೆಗಳು, ವಿಶೇಷತೆಗಳು ಮತ್ತು ಸೇಲ್ ದಿನಾಂಕಗಳ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.
ಹೊಸ ಐಫೋನ್‌ಗಳು ಯುಎಸ್‌ಬಿ ಟೈಪ್-ಸಿ ಪೋರ್ಟ್‌ನೊಂದಿಗೆ ಬಂದಿವೆ. ಐಫೋನ್ 15 ಪ್ರೊ, ಐಫೋನ್ 15 ಪ್ರೊ ಮ್ಯಾಕ್ಸ್ ಮಾಡೆಲ್‌ಗಳು ಹೊಸ 3nm A17 Pro ಚಿಪ್‌ಸೆಟ್ ಅನ್ನು ಪಡೆಯುತ್ತವೆ, ಇದು A16 Bionic SoC ಗೆ ಹೋಲಿಸಿದರೆ ಉತ್ತಮ ಕಾರ್ಯಕ್ಷಮತೆ ಮತ್ತು ವೇಗವನ್ನು ಹೊಂದಿದೆ. ಕ್ಯಾಮೆರಾ ವಿಚಾರದಲ್ಲಿ ದೊಡ್ಡ ಅಪ್‌ಗ್ರೇಡ್‌ಗಳನ್ನು ನೀಡಿದ್ದು, ಪೋರ್ಟ್ರೇಟ್ ಮೋಡ್, ಸ್ಮಾರ್ಟ್ HDR, ಸ್ಟೆಬಿಲೈಸೇಶನ್ ಸೇರಿದಂತೆ ಹೆಚ್ಚಿನ ಆಯ್ಕೆ ಸೇರಿಸಲಾಗಿದೆ.
ಭಾರತದಲ್ಲಿ ಐಫೋನ್ 15 ಪ್ರೊ, ಐಫೋನ್ 15 ಪ್ರೊ ಮ್ಯಾಕ್ಸ್ ಬೆಲೆ:
- ಐಫೋನ್ 15 ಪ್ರೊ 128GB ಸ್ಟೋರೇಜ್ ಮಾಡೆಲ್‌ಗೆ 1,34,900 ರೂ., 256GB ಗೆ 1,44,900 ರೂ., 512GB ಗೆ 164,900 ರೂ. ಮತ್ತು 1TB ಮಾದರಿಗೆ 1,84,900 ರೂ. ಇದೆ.
- ಐಫೋನ್ 15 ಪ್ರೊ ಮ್ಯಾಕ್ಸ್ ಬೇಸ್ 256GB ಸ್ಟೋರೇಜ್ ಮಾಡೆಲ್‌ಗೆ 1,59,900 ರೂ., 512GB ಗೆ 1,79,900 ರೂ. ಮತ್ತು 1TB ಆವೃತ್ತಿಗೆ 1,99,900 ರೂ. ನಿಗದಿ ಮಾಡಲಾಗಿದೆ.
- ಈ ಹೊಸ ಐಫೋನ್‌ಗಳು ಬ್ಲ್ಯಾಕ್ ಟೈಟಾನಿಯಂ, ವೈಟ್ ಟೈಟಾನಿಯಂ, ಬ್ಲೂ ಟೈಟಾನಿಯಂ ಮತ್ತು ನ್ಯಾಚುರಲ್ ಟೈಟಾನಿಯಂ ಬಣ್ಣ ಆಯ್ಕೆಗಳಲ್ಲಿ ಬರುತ್ತವೆ.
ಐಫೋನ್ 15 ಪ್ರೊ, ಐಫೋನ್ 15 ಪ್ರೊ ಮ್ಯಾಕ್ಸ್ ಫೀಚರ್ಸ್:
ಐಫೋನ್ 15 ಪ್ರೊ ಡಿಸ್‌ಪ್ಲೇ: ಐಫೋನ್ 15 ಪ್ರೊ 2,556 × 1,179 ಪಿಕ್ಸೆಲ್‌ಗಳ ರೆಸಲ್ಯೂಶನ್, 120Hz ಪ್ರೊಮೋಷನ್, HDR, ಟ್ರೂ ಟೋನ್, ಡೈನಾಮಿಕ್ ಐಲ್ಯಾಂಡ್, ಯಾವಾಗಲೂ ಆನ್ ಡಿಸ್ ಪ್ಲೇ ಮತ್ತು ಸೆರಾಮಿಕ್ ಶೀಲ್ಡ್ ರಕ್ಷಣೆಯೊಂದಿಗೆ 6.1-ಇಂಚಿನ OLED ಸೂಪರ್ ರೆಟಿನಾ XDR ಡಿಸ್ ಪ್ಲೇಯನ್ನು ಹೊಂದಿದೆ.
ಇದು ಸ್ವದೇಶಿ ಸ್ಮಾರ್ಟ್ಫೋನ್: ಭಾರತದಲ್ಲಿ ಬಜೆಟ್ ಬೆಲೆಗೆ ಲಾವಾ ಬ್ಲೇಜ್ 2 ಪ್ರೊ ಬಿಡುಗಡೆ
ಐಫೋನ್ 15 ಪ್ರೊ ಮ್ಯಾಕ್ಸ್: ಈ ಆವೃತ್ತಿಯು 6.7-ಇಂಚಿನ OLED ಸೂಪರ್ ರೆಟಿನಾ XDR ಡಿಸ್ ಪ್ಲೇಯನ್ನು 2,796 × 1,290 ಪಿಕ್ಸೆಲ್‌ಗಳು, HDR, ಟ್ರೂ ಟೋನ್, ಡೈನಾಮಿಕ್ ಐಲ್ಯಾಂಡ್, ಆಲ್ವೇಸ್-ಆನ್ ಡಿಸ್ ಪ್ಲೇ, 120Hz ಪ್ರೊಮೋಷನ್ ತಂತ್ರಜ್ಞಾನ ಮತ್ತು ಸೆರಾಮಿಕ್ ಶೀಲ್ಡ್ ರಕ್ಷಣೆಯನ್ನು ಹೊಂದಿದೆ.
ಪ್ರೊಸೆಸರ್: ಆ್ಯಪಲ್ A17 Pro 3nm ಚಿಪ್ಸೆಟ್, 6-ಕೋರ್ GPU.
ಓಎಸ್: ಐಒಎಸ್ 17.
ಇತರೆ: IP68 ನೀರು ಮತ್ತು ಧೂಳಿನ ಪ್ರತಿರೋಧ, ಸ್ಟೀರಿಯೋ ಸ್ಪೀಕರ್‌ಗಳು ಮತ್ತು FaceID ಸಂವೇದಕ
ಕ್ಯಾಮೆರಾಗಳು: ಈ ಐಫೋನ್‌ಗಳು ಹಿಂಭಾಗದಲ್ಲಿ ಟ್ರಿಪಲ್ ಕ್ಯಾಮೆರಾ ಸಂವೇದಕಗಳೊಂದಿಗೆ ಬರುತ್ತವೆ, OIS ಜೊತೆಗೆ 48MP ವೈಡ್-ಆಂಗಲ್ ಪ್ರಾಥಮಿಕ ಸಂವೇದಕ, 12MP ಅಲ್ಟ್ರಾ-ವೈಡ್-ಆಂಗಲ್ ಲೆನ್ಸ್ ಮತ್ತು 12MP ಟೆಲಿಫೋಟೋ ಲೆನ್ಸ್, ಪ್ರೊನಲ್ಲಿ 3X, ಪ್ರೊ ಮ್ಯಾಕ್ಸ್ನಲ್ಲಿ 5X ಆಪ್ಟಿಕಲ್ ಜೂಮ್ ಆಯ್ಕೆ ಇದೆ.
ಮುಂಭಾಗದ ಕ್ಯಾಮೆರಾ: 12MP ಟ್ರೂ ಡೆಪ್ತ್ ಮುಂಭಾಗದ ಕ್ಯಾಮೆರಾ ಇದೆ.
ಸಂಪರ್ಕ: 5G, ಗಿಗಾಬಿಟ್-ಕ್ಲಾಸ್ LTE, Wi-Fi 6, ಬ್ಲೂಟೂತ್ 5.3, NFC, GPS ಜೊತೆಗೆ GLONASS.
ಬ್ಯಾಟರಿ: ವೇಗದ ಚಾರ್ಜಿಂಗ್‌ನೊಂದಿಗೆ ಬರುತ್ತವೆ ಮತ್ತು 15W ಮ್ಯಾಗ್‌ಸೇಫ್ ವೈರ್‌ಲೆಸ್ ಚಾರ್ಜಿಂಗ್ ಬೆಂಬಲವಿದೆ. ಇವುಗಳಲ್ಲಿ ವಾಚ್ ಮತ್ತು ಏರ್‌ಪಾಡ್‌ಗಳಂತಹ ಇತರ ಆ್ಯಪಲ್ ಸಾಧನಗಳನ್ನು ಟೈಪ್ ಸಿ ಮೂಲಕ ಚಾರ್ಜ್ ಮಾಡಬಹುದು.
ಐಫೋನ್ 15 ಪ್ರೊ, ಐಫೋನ್ 15 ಪ್ರೊ ಮ್ಯಾಕ್ಸ್ ಅನ್ನು ಸೆಪ್ಟೆಂಬರ್ 15 ರಿಂದ ಮುಂಗಡವಾಗಿ ಆರ್ಡರ್ ಮಾಡಬಹುದು, ಸೆಪ್ಟೆಂಬರ್ 22 ರಿಂದ ಖರೀದಿಗೆ ಲಭ್ಯವಿರುತ್ತದೆ.
ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ