Raksha QR: ಅಪಘಾತಕ್ಕೀಡಾದವರ ತುರ್ತು ನೆರವಿಗಾಗಿ ರಕ್ಷಾ ಕ್ಯೂಆರ್ ಕೋಡ್ ಬಿಡುಗಡೆ, ಇದು ಹೇಗೆ ಕಾರ್ಯ ನಿರ್ವಹಿಸುತ್ತದೆ?

ಅಪಘಾತದ ವೇಳೆ ಗಾಯಾಳುಗಳ ತುರ್ತು ನೆರವಿಗೆ ದಾವಿಸಲು ಮೊಬಿಲಿಟಿ ಸರ್ವೀಸಸ್ ಪ್ಲಾಟ್ ಫಾರ್ಮ್ ಆಗಿರುವ ಹೈವೇ ಡೆಲೈಟ್, ರಕ್ಷಾ ಕ್ಯೂಆರ್ ಕೋಡ್ ಅನ್ನು ಬಿಡುಗಡೆ ಮಾಡಿದೆ. ಅಪಘಾತ ಸಂಭವಿಸಿದ ವೇಳೆ ವಾಹನಕ್ಕೆ ಅಂಟಿಸಿದ ಈ ಕ್ಯೂಆರ್ ಕೋಡ್ ಅನ್ನು ಸ್ಕ್ಯಾನ್ ಮಾಡುವ ಮೂಲಕ ಗಾಯಾಳುಗಳ ಕುಟುಂಬ, ಪೊಲೀಸರಿಗೆ ಹಾಗೂ ಆಸ್ಪತ್ರೆಗೆ ವರದಿ ಮಾಡಲು ಸಹಾಯಕವಾಗಿದೆ.

Raksha QR: ಅಪಘಾತಕ್ಕೀಡಾದವರ ತುರ್ತು ನೆರವಿಗಾಗಿ ರಕ್ಷಾ ಕ್ಯೂಆರ್ ಕೋಡ್ ಬಿಡುಗಡೆ, ಇದು ಹೇಗೆ ಕಾರ್ಯ ನಿರ್ವಹಿಸುತ್ತದೆ?
ಅಪಘಾತಕ್ಕೀಡಾದವರ ತುರ್ತು ನೆರವಿಗಾಗಿ ರಕ್ಷಾ ಕ್ಯೂಆರ್ ಕೋಡ್ ಬಿಡುಗಡೆ (ಸಾಂದರ್ಭಿಕ ಚಿತ್ರ)Image Credit source: pexels
Follow us
Rakesh Nayak Manchi
|

Updated on:Sep 14, 2023 | 12:42 PM

ಬೆಂಗಳೂರು, ಸೆ.14: ಅಪಘಾತದ (Accident) ವೇಳೆ ಗಾಯಾಳುಗಳ ತುರ್ತು ನೆರವಿಗೆ ದಾವಿಸಲು ಮೊಬಿಲಿಟಿ ಸರ್ವೀಸಸ್ ಪ್ಲಾಟ್ ಫಾರ್ಮ್ ಆಗಿರುವ ಹೈವೇ ಡೆಲೈಟ್, ರಕ್ಷಾ ಕ್ಯೂಆರ್ (Raksha QR) ಕೋಡ್ ಅನ್ನು ಬಿಡುಗಡೆ ಮಾಡಿದೆ. ಅಪಘಾತ ಸಂಭವಿಸಿದ ವೇಳೆ ವಾಹನಕ್ಕೆ ಅಂಟಿಸಿದ ಈ ಕ್ಯೂಆರ್ ಕೋಡ್ ಅನ್ನು ಪ್ರತ್ಯಕ್ಷದರ್ಶಿಗಳು ಸ್ಕ್ಯಾನ್ ಮಾಡಿ ಗಾಯಾಳುಗಳ ಕುಟುಂಬದ ಸದಸ್ಯರಿಗೆ, ಪೊಲೀಸರಿಗೆ ಹಾಗೂ ಆಸ್ಪತ್ರೆಗೆ ವರದಿ ಮಾಡಲು ಸಹಾಯಕವಾಗಿದೆ.

ಅಪಘಾತ ವರದಿಯಾದ ನಂತರ, ಹೈವೇ ಡೆಲೈಟ್ ಬ್ಯಾಕ್ ಎಂಡ್ ಕಾಲ್ ಸೆಂಟರ್ ತಂಡವು ಸ್ಥಳದ ಮಾಹಿತಿ ಆಧರಿಸಿ ಸಮೀಪದ ಆಸ್ಪತ್ರೆ ಮತ್ತು ಪೊಲೀಸ್ ಠಾಣೆಗೆ ಮಾಹಿತಿ ನೀಡುತ್ತದೆ. ಸಂತ್ರಸ್ತೆಯ ವೈಯಕ್ತಿಕ ವಿವರಗಳು ಗೌಪ್ಯವಾಗಿರುತ್ತದೆ” ಎಂದು ಹೈವೇ ಡೆಲೈಟ್ ಸಂಸ್ಥಾಪಕ ರಾಜೇಶ್ ಘಟನಟ್ಟಿ ಹೇಳಿದ್ದಾರೆ.

ಇದನ್ನೂ ಓದಿ: ಬಾಗಲಕೋಟೆ: ಅಪಘಾತದಲ್ಲಿ ವೃದ್ಧೆ ಸಾವು ಪ್ರಕರಣಕ್ಕೆ ಬಿಗ್ ಟ್ವಿಸ್ಟ್, ಮೊಮ್ಮಗನ ಕರಾಳ ಮುಖ ಬಯಲು

“ಅಪಘಾತದ ಸಂದರ್ಭದಲ್ಲಿ ಸಮಯೋಚಿತ ರಕ್ಷಣೆ ಹಾಗೂ ಸೂಕ್ತ ಚಿಕಿತ್ಸೆ ನಿರ್ಣಾಯಕವಾಗಿದೆ. ಭಾರತದಲ್ಲಿ ಅಪಘಾತದಿಂದ ಸಾವನ್ನಪ್ಪುತ್ತಿರುವವರ ಪ್ರಸ್ತುತ ಸಂಖ್ಯೆ 1.5 ಲಕ್ಷವಾಗಿದೆ. ಕ್ಷಿಪ್ರ ಕಾರ್ಯಾಚರಣೆ ನಡೆಸಿ ಅಪಘಾತಕ್ಕೀಡಾದವರನ್ನು ಆಸ್ಪತ್ರೆಗೆ ದಾಖಲಿಸಿದರೆ ಅಪಘಾತಕ್ಕೊಳಗಾದವರು ಶೇ 50 ರಷ್ಟು ಜೀವಗಳನ್ನು ಉಳಿಸಬಹುದು” ಎಂದು ಅವರು ಹೇಳಿದರು.

ರಕ್ಷಾಕ್ಯೂಆರ್ ಕೋಡ್ ವಾಹನ ಮಾಲೀಕರಿಗೆ ರಕ್ತದ ಗುಂಪು, ವಾಹನ ವಿಮೆ, ವೈದ್ಯಕೀಯ ವಿಮೆ ಮತ್ತು ಕುಟುಂಬದ ತುರ್ತು ವಿವರಗಳು ಸೇರಿದಂತೆ ತಮ್ಮ ವೈಯಕ್ತಿಕ ಮಾಹಿತಿಯನ್ನು ಸೇರಿಸಲು ಅನುವು ಮಾಡಿಕೊಡುತ್ತದೆ. ಇದರ ಬೆಲೆ ದಿನಕ್ಕೆ 1 ರೂ. ಆಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 12:42 pm, Thu, 14 September 23

Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ