ಇಂದು ರಾತ್ರಿ ಐಫೋನ್ 15 ಸರಣಿ ರಿಲೀಸ್: ಭಾರತದಲ್ಲಿ ಬೆಲೆ ಎಷ್ಟು ಗೊತ್ತೇ?

Apple iPhone 15 Series expected India price: ಇಂದು ರಾತ್ರಿ ಐಫೋನ್ 15 ಸರಣಿ ರಿಲೀಸ್ ಆಗಲಿದೆ. ಐಫೋನ್ 15 ಸರಣಿಯಲ್ಲಿ ಐಫೋನ್ 15, 15 ಪ್ಲಸ್, 15 ಪ್ರೊ ಮತ್ತು 15 ಪ್ರೊ ಮ್ಯಾಕ್ಸ್ ಎಂಬ ನಾಲ್ಕು ಫೋನುಗಳು ಇರಲಿದೆ. ಇಂದು ಇವುಗಳ ಬೆಲೆ ಅಧಿಕೃತವಾಗಿ ಬಹಿರಂಗವಾಗಲಿದೆ. ಆದರೆ, ಇದಕ್ಕೂ ಮುನ್ನ ಸೋರಿಕೆಯಾದ ಬೆಲೆಗಳನ್ನು ನೋಡೋಣ.

ಇಂದು ರಾತ್ರಿ ಐಫೋನ್ 15 ಸರಣಿ ರಿಲೀಸ್: ಭಾರತದಲ್ಲಿ ಬೆಲೆ ಎಷ್ಟು ಗೊತ್ತೇ?
apple iphone 15 series
Follow us
Vinay Bhat
|

Updated on: Sep 12, 2023 | 12:28 PM

ಭಾರತದಲ್ಲಿ ಇಂದು (ಸೆ. 12) ರಾತ್ರಿ 10:30ಕ್ಕೆ ಪ್ರಾರಂಭವಾಗಲಿರುವ ಆ್ಯಪಲ್​ನ ವಂಡರ್‌ಲಸ್ಟ್ ಸಮಾರಂಭದಲ್ಲಿ ಬಹುನಿರೀಕ್ಷಿತ ಐಫೋನ್ 15 ಸರಣಿ (iPhone 15 Series) ಬಿಡುಗಡೆ ಆಗಲಿದೆ. ಈ ಬಾರಿಯ ಐಫೋನ್​ನಲ್ಲಿ ಏನು ವಿಶೇಷತೆ ಇರಲಿದೆ ಎಂದು ಅನೇಕರು ಕಾಯುತ್ತಿದ್ದಾರೆ. ಹೀಗಿರುವಾಗ ಈ ಫೋನುಗಳ ಬೆಲೆಯ ಬಗ್ಗೆ ಆಶ್ಚರ್ಯ ಪಡುವಂತಾಗಿದೆ. ಸೆಪ್ಟೆಂಬರ್ 12 ರಂದು ಆ್ಯಪಲ್‌ನ ಈವೆಂಟ್‌ನಲ್ಲಿ ಐಫೋನ್ 15, 15 ಪ್ಲಸ್, 15 ಪ್ರೊ ಮತ್ತು 15 ಪ್ರೊ ಮ್ಯಾಕ್ಸ್ ಬೆಲೆ ಅಧಿಕೃತವಾಗಿ ಬಹಿರಂಗವಾಗಲಿದೆ. ಆದರೆ, ಇದಕ್ಕೂ ಮುನ್ನ ಸೋರಿಕೆಯಾದ ಬೆಲೆಗಳನ್ನು ನೋಡೋಣ.

ಸ್ಟ್ಯಾಂಡರ್ಡ್ ಆವೃತ್ತಿ ಐಫೋನ್ 15 ಮತ್ತು ಅದರ ಪ್ಲಸ್ ರೂಪಾಂತರವು ಹಿಂದಿನ ಆವೃತ್ತಿಗೆ ಹೋಲಿಸಿದರೆ ಬೆಲೆಯಲ್ಲಿ ಸ್ವಲ್ಪ ಹೆಚ್ಚಳವನ್ನು ಕಾಣಬಹುದು. ಅಥವಾ ಐಫೋನ್ 14 ಬೆಲೆಗೆ ಸಿಗಬಹುದು. ಐಫೋನ್ 15 ಮೊಬೈಲ್ 79,900 ರೂ. ಯಿಂದ ಪ್ರಾರಂಭವಾಗಲಿದೆ ಎಂಬ ಮಾತಿದೆ. ಐಫೋನ್ 15 ಪ್ಲಸ್ 89,900 ರೂ. ಬೆಲೆಯನ್ನು ಹೊಂದಿರುಬಹುದು. ಆದರೆ ಇದು ಅಧಿಕೃತ ಬೆಲೆಯಲ್ಲ.

ಇದು ಸ್ವದೇಶಿ ಸ್ಮಾರ್ಟ್​ಫೋನ್: ಭಾರತದಲ್ಲಿ ಬಜೆಟ್ ಬೆಲೆಗೆ ಲಾವಾ ಬ್ಲೇಜ್ 2 ಪ್ರೊ ಬಿಡುಗಡೆ

ಇದನ್ನೂ ಓದಿ
Image
ಇಂದು ಬಹುನಿರೀಕ್ಷಿತ ಐಫೋನ್ 15 ಸರಣಿ ಬಿಡುಗಡೆ: ಭಾರತದಲ್ಲಿ ಎಷ್ಟು ಗಂಟೆಗೆ?
Image
ದಿನದಿಂದ ದಿನಕ್ಕೆ ರೋಚಕತೆ ಸೃಷ್ಟಿಸುತ್ತಿದೆ ಗೂಗಲ್ ಪಿಕ್ಸೆಲ್ 8 ಸರಣಿ
Image
ಭಾರತದಲ್ಲಿ ಹೊಸ ಸ್ಟೈಲಿಶ್ ಫೋನ್ ನೋಕಿಯಾ G42 5G ಬಿಡುಗಡೆ
Image
ಭಾರತದಲ್ಲಿ ಬಜೆಟ್ ಬೆಲೆಗೆ ಲಾವಾ ಬ್ಲೇಜ್ 2 ಪ್ರೊ ಬಿಡುಗಡೆ

ಅಂತೆಯೇ, ಐಫೋನ್ 15 ಪ್ರೊ ಭಾರಿ ಬೆಲೆ ಏರಿಕೆಯನ್ನು ಪಡೆಯುವ ಸಾಧ್ಯತೆಯಿದೆ. ಪ್ರೊ ಮಾದರಿಯು $ 100 ಬೆಲೆ ಏರಿಕೆಯನ್ನು ಕಂಡರೆ, ಪ್ರೊ ಮ್ಯಾಕ್ಸ್ $ 200 ಹೆಚ್ಚಳವನ್ನು ಪಡೆಯಬಹುದು ಎಂದು ಹೇಳಲಾಗುತ್ತದೆ. ಹಾಗಾಗಿ, ಸೋರಿಕೆಯ ಪ್ರಕಾರ, ಐಫೋನ್ 15 ಪ್ರೊ ಆವೃತ್ತಿಯ ಬೆಲೆಯನ್ನು $999 (ಸುಮಾರು 82,900 ರೂ.) ನಿಂದ $1,099 (ಸುಮಾರು ರೂ. 91,200) ಗೆ ಹೆಚ್ಚಿಸಬಹುದು. ಆದರೆ, ಆ್ಯಪಲ್ ಭಾರತದಲ್ಲಿ ಇದೇ ಬೆಲೆಗೆ ಪ್ರೊ ಮಾದರಿಯನ್ನು ಪರಿಚಯಿಸುತ್ತದೆ ಎಂದು ಇದರ ಅರ್ಥವಲ್ಲ. ಏಕೆಂದರೆ ಯುಎಸ್ ಮತ್ತು ಭಾರತೀಯ ಮಾರುಕಟ್ಟೆಗಳ ನಡುವೆ ಯಾವಾಗಲೂ ದೊಡ್ಡ ಬೆಲೆ ವ್ಯತ್ಯಾಸವಿರುತ್ತದೆ.

ಉದಾಹರಣೆಗೆ, ಐಫೋನ್ 14 ಪ್ರೊಗೆ US ನಲ್ಲಿ $999 (ಅಂದಾಜು ರೂ. 82,900) ಗೆ ಬಿಡುಗಡೆ ಆಗಿತ್ತು. ಇದರ ಬೆಲೆ ಭಾರತದಲ್ಲಿ 1,29,900 ರೂ. ಗೆ ಆಗಿದೆ. ಆ್ಯಪಲ್ ಪ್ರತಿ ಡಾಲರ್‌ಗೆ 100 ರೂ. ಎಂದು ಎಣಿಕೆ ಮಾಡುತ್ತದೆ. ಆದಾಗ್ಯೂ, ಕಸ್ಟಮ್ಸ್ ಶುಲ್ಕಗಳು ಮತ್ತು ಬಳಕೆದಾರರು ಪಡೆಯುವ ಬ್ರಾಂಡ್ ಮೌಲ್ಯ ಸೇರಿದಂತೆ ಹಲವಾರು ಇತರ ಅಂಶಗಳಿಂದಾಗಿ, ಆ್ಯಪಲ್ ಭಾರತದಲ್ಲಿ ಐಫೋನ್ 14 ಪ್ರೊ ಅನ್ನು ಗಮನಾರ್ಹವಾಗಿ ಹೆಚ್ಚಿನ ಬೆಲೆಗೆ ಬಿಡುಗಡೆ ಮಾಡಿತ್ತು. ಭಾರತದಲ್ಲಿ ಹೊಸ ಐಫೋನ್ 15 ಪ್ರೊ ಬೆಲೆಯನ್ನು 1,39,900 ರೂ. ಗೆ ಹೆಚ್ಚಿಸಬಹುದು ಎಂದು ಹೇಳಲಾಗಿದೆ.

ಐಫೋನ್ 15 ಪ್ರೊ ಮ್ಯಾಕ್ಸ್ ಕಳೆದ ವರ್ಷದ $1,099 ರಿಂದ $1,299 ಬೆಲೆಯನ್ನು ಹೊಂದಿರಬಹುದು ಎಂದು ಹೇಳಲಾಗಿತ್ತು. ಆ್ಯಪಲ್ ಈ ಬೆಲೆಯನ್ನೆ ಅನುಸರಿಸಿದರೆ, ಹೊಸ ಪ್ರೊ ಮ್ಯಾಕ್ಸ್ ಮಾದರಿಯನ್ನು ಭಾರತದಲ್ಲಿ 1,59,900 ರೂ. ಗಳಲ್ಲಿ ಅನಾವರಣಗೊಳಿಸಬಹುದು. ಈ ಯಾವುದೇ ಫೋನುಗಳ ಖಚಿತ ಬೆಲೆ ಇನ್ನಷ್ಟೆ ಬಹಿರಂಗವಾಗಬೇಕಿದೆ. ಆದರೆ, ಐ ಫೋನ್ 15 ಸರಣಿಯ ಬೆಲೆ ಕಳೆದ ವರ್ಷದಂತೆಯೇ ಅಥವಾ ಅದಕ್ಕಿಂತ ಹೆಚ್ಚಿನದಾಗಿರುತ್ತವೆ ಎಂದು ಹೇಳಲಾಗಿದೆ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ