ನೋಕಿಯಾ ಕಮ್​ಬ್ಯಾಕ್: ಭಾರತದಲ್ಲಿ ಹೊಸ ಸ್ಟೈಲಿಶ್ ಫೋನ್ ನೋಕಿಯಾ G42 5G ಬಿಡುಗಡೆ

Nokia G42 5G Launched in India: ಭಾರತದಲ್ಲಿ ನೋಕಿಯಾ G42 5G ಸ್ಮಾರ್ಟ್​ಫೋನ್ ಸದ್ಯಕ್ಕೆ ಒಂದು ಸ್ಟೋರೇಜ್ ಮಾದರಿಯಲ್ಲಿ ಬಿಡುಗಡೆ ಆಗಿದೆ. ಇದರ ಬೆಲೆ 6GB RAM + 128GB ಕಾನ್ಫಿಗರೇಶನ್ ಆಯ್ಕೆಗೆ ಕೇವಲ 12,599 ರೂ. ನಿಗದಿ ಮಾಡಲಾಗಿದೆ. ಕಡಿಮೆ ಬೆಲೆ ಆಗಿದ್ದರೂ ಈ ಫೋನಿನಲ್ಲಿ ಆಕರ್ಷಕ ಡಿಸ್ ಪ್ಲೇ, ಕ್ಯಾಮೆರಾ, ಬ್ಯಾಟರಿ ಆಯ್ಕೆ ನೀಡಲಾಗಿದೆ.

ನೋಕಿಯಾ ಕಮ್​ಬ್ಯಾಕ್: ಭಾರತದಲ್ಲಿ ಹೊಸ ಸ್ಟೈಲಿಶ್ ಫೋನ್ ನೋಕಿಯಾ G42 5G ಬಿಡುಗಡೆ
Nokia G42 5G
Follow us
Vinay Bhat
|

Updated on: Sep 11, 2023 | 1:16 PM

ಬಹುದಿನಗಳ ಬಳಿಕ ಪ್ರಸಿದ್ಧ ನೋಕಿಯಾ ಕಂಪನಿ ಭಾರತದಲ್ಲಿ ಸ್ಟೈಲಿಶ್ ಸ್ಮಾರ್ಟ್​ಫೋನ್ ಒಂದನ್ನು ಅನಾವರಣ ಮಾಡಿದೆ. ಇದರ ಹೆಸರು ನೋಕಿಯಾ ಜಿ42 5ಜಿ (Nokia G42 5G). ವಿಶೇಷ ಎಂದರೆ G-ಸರಣಿಯ ಈ ಫೋನ್ ಬಜೆಟ್ ಬೆಲೆಗೆ ಲಭ್ಯವಿದ್ದು, ಬೊಂಬಾಟ್ ಸೇಲ್ ಆಗುವುದು ಖಚಿತ ಎನ್ನಲಾಗಿದೆ. ಇದರ ಮೂಲಕ ನೋಕಿಯಾ ಕಮ್​ಬ್ಯಾಕ್ ಮಾಡಲಿದೆ ಎಂದು ಹೇಳಲಾಗುತ್ತಿದೆ. ಕಡಿಮೆ ಬೆಲೆ ಆಗಿದ್ದರೂ ಈ ಫೋನಿನಲ್ಲಿ ಆಕರ್ಷಕ ಡಿಸ್ ಪ್ಲೇ, ಕ್ಯಾಮೆರಾ, ಬ್ಯಾಟರಿ ಆಯ್ಕೆ ನೀಡಲಾಗಿದೆ. ನೋಕಿಯಾ G42 5G ಫೋನಿನ ಬೆಲೆ, ಫೀಚರ್ಸ್ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.

ನೋಕಿಯಾ G42 5G ಬೆಲೆ ಮತ್ತು ಲಭ್ಯತೆ:

ಭಾರತದಲ್ಲಿ ನೋಕಿಯಾ G42 5G ಸ್ಮಾರ್ಟ್​ಫೋನ್ ಸದ್ಯಕ್ಕೆ ಒಂದು ಸ್ಟೋರೇಜ್ ಮಾದರಿಯಲ್ಲಿ ಬಿಡುಗಡೆ ಆಗಿದೆ. ಇದರ ಬೆಲೆ 6GB RAM + 128GB ಕಾನ್ಫಿಗರೇಶನ್ ಆಯ್ಕೆಗೆ ಕೇವಲ 12,599 ರೂ. ನಿಗದಿ ಮಾಡಲಾಗಿದೆ. ಈ ಫೋನ್ ಪ್ರಸಿದ್ಧ ಇ ಕಾಮರ್ಸ್ ತಾಣವಾದ ಅಮೆಜಾನ್ ಮತ್ತು ನೋಕಿಯಾ ವೆಬ್‌ಸೈಟ್ ಮೂಲಕ ಸೆಪ್ಟೆಂಬರ್ 15 ರಿಂದ ಖರೀದಿಗೆ ಲಭ್ಯವಿರುತ್ತದೆ. ಪಿಂಕ್, ನೇರಳೆ ಮತ್ತು ಬೂದು ಬಣ್ಣಗಳಲ್ಲಿ ಈ ಫೋನ್ ಸ್ಟೈಲಿಶ್ ಆಗಿದೆ.

ನೋಕಿಯಾ G42 5G ಫೀಚರ್ಸ್:

ನೋಕಿಯಾದ ಈ ಹೊಸ ಸ್ಮಾರ್ಟ್‌ಫೋನ್ 720 × 1612 ಪಿಕ್ಸೆಲ್ ರೆಸಲ್ಯೂಶನ್ ಸಾಮರ್ಥ್ಯದ 6.56-ಇಂಚಿನ HD+ LCD ಡಿಸ್ ಪ್ಲೇ ಹೊಂದಿದೆ. 90Hz ರಿಫ್ರೆಶ್ ದರ, 560 nits ಬೈಟ್​ನೆಸ್, 20: 9 ಅನುಪಾತ, ಮತ್ತು ಗೊರಿಲ್ಲಾ ಗ್ಲಾಸ್ 3 ರಕ್ಷಣೆಯೊಂದಿಗೆ ವಾಟರ್‌ಡ್ರಾಪ್ ನಾಚ್ ಅನ್ನು ಒಳಗೊಂಡಿದೆ.

ಇದನ್ನೂ ಓದಿ
Image
ಭಾರತದಲ್ಲಿ ಬಜೆಟ್ ಬೆಲೆಗೆ ಲಾವಾ ಬ್ಲೇಜ್ 2 ಪ್ರೊ ಬಿಡುಗಡೆ
Image
ರೆಡ್ಮಿ ಪ್ರಿಯರಿಗಾಗಿ ಬರುತ್ತಿದೆ 200MP ಕ್ಯಾಮೆರಾದ ಹೊಸ ಸ್ಮಾರ್ಟ್​ಫೋನ್
Image
ಭಾರತಕ್ಕಿಂದು ಅಪ್ಪಳಿಸುತ್ತಿದೆ ನೋಕಿಯಾ G42 5G ಸ್ಮಾರ್ಟ್​ಫೋನ್
Image
ಧೂಳೆಬ್ಬಿಸಲು ಬರುತ್ತಿದೆ ಟೆಕ್ನೋ ಕಂಪನಿ ಮೊಟ್ಟ ಮೊದಲ ಫ್ಲಿಪ್ ​ಫೋನ್

ನೀವು ಸ್ಮಾರ್ಟ್‌ಫೋನ್ ಅನ್ನು 100 ಪ್ರತಿಶತದಷ್ಟು ಚಾರ್ಜ್ ಮಾಡುತ್ತೀರಾ? ಈಗಲೇ ನಿಲ್ಲಿಸಿ

ನೋಕಿಯಾ G42 5G ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 480+ ಪ್ರೊಸೆಸರ್‌ನಿಂದ ಚಾಲಿತವಾಗಿದ್ದು ಅದರೊಂದಿಗೆ Adreno 619 GPU ಅನ್ನು ನೀಡಲಾಗಿದೆ. ಈ ಸ್ಮಾರ್ಟ್‌ಫೋನ್ ಆಂಡ್ರಾಯ್ಡ್ 13 ನೊಂದಿಗೆ ಲೋಡ್ ಆಗಿದೆ. ನೋಕಿಯಾ ಆಂಡ್ರಾಯ್ಡ್ 14 ಮತ್ತು ಆಂಡ್ರಾಯ್ಡ್ 15 ಎರಡು ಆವೃತ್ತಿಯ ನವೀಕರಣಗಳ ಭರವಸೆ ನೀಡಿದೆ.

ನೋಕಿಯಾದ ಈ ಹೊಸ ಸ್ಮಾರ್ಟ್​ಫೋನ್ ಟ್ರಿಪಲ್-ರಿಯರ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಇದರಲ್ಲಿ 50 ಮೆಗಾ ಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ, 2 ಮೆಗಾ ಪಿಕ್ಸೆಲ್ ಡೆಪ್ತ್ ಕ್ಯಾಮೆರಾ, 2 ಮೆಗಾ ಪಿಕ್ಸೆಲ್ ಮ್ಯಾಕ್ರೋ ಲೆನ್ಸ್ ಮತ್ತು LED ಫ್ಲಾಶ್ ಒಳಗೊಂಡಿದೆ. ಮುಂಭಾಗ ಸೆಲ್ಫಿ ಮತ್ತು ವಿಡಿಯೋ ಕರೆಗಳಿಗಾಗಿ 8 ಮೆಗಾ ಪಿಕ್ಸೆಲ್ ಕ್ಯಾಮೆರಾ ಆಯ್ಕೆ ನೀಡಲಾಗಿದೆ.

ನೋಕಿಯಾ G42 5G ಫೋನ್ 5000mAh ಬ್ಯಾಟರಿಯನ್ನು ಹೊಂದಿದೆ ಮತ್ತು 20W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಭದ್ರತೆಗಾಗಿ ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಅನ್ನು ಒಳಗೊಂಡಿದೆ. ಡ್ಯುಯಲ್-ಸಿಮ್, 5G, ವೈಫೈ 802.11 a/b/g/n/ac/ax, ಬ್ಲೂಟೂತ್ 5.1, NFC, GPS, USB ಟೈಪ್-C ಪೋರ್ಟ್, 3.5mm ಆಡಿಯೋ ಜ್ಯಾಕ್ ಬೆಂಬಲ ಪಡೆದುಕೊಂಡಿದೆ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ