ಭಾರತಕ್ಕಿಂದು ಅಪ್ಪಳಿಸುತ್ತಿದೆ ಬಹುನಿರೀಕ್ಷಿತ ನೋಕಿಯಾ G42 5G ಸ್ಮಾರ್ಟ್ಫೋನ್: ಬೆಲೆ ಎಷ್ಟು?
Nokia G42 5G Launch Today in India: ಇದೀಗ ನೋಕಿಯಾ ಕಂಪನಿ ಭಾರತದಲ್ಲಿ ಹೊಸ ಸ್ಮಾರ್ಟ್ಫೋನೊಂದನ್ನು ಬಿಡುಗಡೆ ಮಾಡಲು ತಯಾರಾಗಿ ನಿಂತಿದೆ. ಇಂದು ದೇಶೀಯ ಮಾರುಕಟ್ಟೆಗೆ ಹೊಸ ನೋಕಿಯಾ ಜಿ42 5ಜಿ (Nokia G42 5G) ಸ್ಮಾರ್ಟ್ಫೋನ್ ಲಗ್ಗೆಯಿಡಲಿದೆ. ಈ ಸ್ಮಾರ್ಟ್ಫೋನ್ ಕುರಿತ ಟೀಸರ್ ಕೂಡ ಬಿಡುಗಡೆ ಆಗಿದ್ದು ಆಕರ್ಷಕವಾಗಿದೆ.
Updated on: Sep 11, 2023 | 6:55 AM

ನೋಕಿಯಾ ಕಂಪನಿಯ ಫೋನುಗಳಿಗೆ ಭಾರತದಲ್ಲಿ ಈಗ ಹಿಂದಿನಂತೆ ಬೇಡಿಕೆ ಇಲ್ಲ. ಶವೋಮಿ, ಒನ್ಪ್ಲಸ್, ಸ್ಯಾಮ್ಸಂಗ್, ಒಪ್ಪೋದಂತಹ ಬ್ರ್ಯಾಂಡ್ಗಳು ಆಕರ್ಷಕ ಸ್ಮಾರ್ಟ್ಫೋನ್ಗಳನ್ನು ಪರಿಚಯಿಸಿದ ನಂತರ ನೋಕಿಯಾ ಫೋನುಗಳ ಬೇಡಿಕೆ ಗಣನೀಯವಾಗಿ ಕಡಿಮೆ ಆಯಿತು. ಹೀಗಿದ್ದರೂ ಆಗಾಗ ದೇಶದಲ್ಲಿ ಉತ್ತಮ ಮೊಬೈಲ್ಗಳನ್ನು ಪರಿಚಯಿಸುತ್ತಿರುತ್ತದೆ.

ಇದೀಗ ನೋಕಿಯಾ ಕಂಪನಿ ಭಾರತದಲ್ಲಿ ಹೊಸ ಸ್ಮಾರ್ಟ್ಫೋನೊಂದನ್ನು ಬಿಡುಗಡೆ ಮಾಡಲು ತಯಾರಾಗಿ ನಿಂತಿದೆ. ಇಂದು ದೇಶೀಯ ಮಾರುಕಟ್ಟೆಗೆ ಹೊಸ ನೋಕಿಯಾ ಜಿ42 5ಜಿ (Nokia G42 5G) ಸ್ಮಾರ್ಟ್ಫೋನ್ ಲಗ್ಗೆಯಿಡಲಿದೆ. ಈ ಸ್ಮಾರ್ಟ್ಫೋನ್ ಕುರಿತ ಟೀಸರ್ ಕೂಡ ಬಿಡುಗಡೆ ಆಗಿದ್ದು ಆಕರ್ಷಕವಾಗಿದೆ. ಇದು ಅನ್ನು ನೇರಳೆ ಮತ್ತು ಪಿಂಕ್ ಬಣ್ಣಗಳ ವಿನ್ಯಾಸವನ್ನು ಒಳಗೊಂಡಿದೆ. ಸೆಲ್ಫಿ ಸ್ನ್ಯಾಪರ್ ಮತ್ತು ಸ್ಲಿಮ್ ಬೆಜೆಲ್‌ಗಳಿಗಾಗಿ ವಾಟರ್‌ಡ್ರಾಪ್ ನಾಚ್ ಅನ್ನು ನೀಡಲಾಗಿದೆ.

ನೋಕಿಯಾ G42 5G ಸ್ಮಾರ್ಟ್ಫೋನ್ನಲ್ಲಿ ವಾಲ್ಯೂಮ್ ರಾಕರ್ ಮತ್ತು ಪವರ್ ಬಟನ್ ಜೊತೆಗೆ ಫಿಂಗರ್‌ಪ್ರಿಂಟ್ ಸೆನ್ಸಾರ್ ಇರುವಂತೆ ಕಾಣಿಸುತ್ತಿದೆ. ಟ್ರಿಪಲ್ ಕ್ಯಾಮೆರಾ ಆಯ್ಕೆ ನೀಡಲಾಗಿದ್ದು, ಎಲ್ಇಡಿ ಫ್ಲ್ಯಾಷ್ ಇರುವುದು ಟೀಸರ್ನಲ್ಲಿ ಸೆರೆಯಾಗಿದೆ.

ಡಿಸ್‌ಪ್ಲೇ-ಚಿಪ್‌ಸೆಟ್: ನೋಕಿಯಾ G42 5G ಸ್ಮಾರ್ಟ್ಫೋನ್ 90Hz ರಿಫ್ರೆಶ್ ರೇಟ್‌ನೊಂದಿಗೆ 6.56-ಇಂಚಿನ IPS LCD HD+ ಡಿಸ್ ಪ್ಲೇ, ಗೊರಿಲ್ಲಾ ಗ್ಲಾಸ್ 3 ಪ್ರೊಟೆಕ್ಷನ್ ಮತ್ತು ಸೆಲ್ಫಿ ಶೂಟರ್‌ಗಾಗಿ ವಾಟರ್‌ಡ್ರಾಪ್ ನಾಚ್ ಅನ್ನು ಹೊಂದಿದೆ. ಈ ಹ್ಯಾಂಡ್‌ಸೆಟ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 480+ SoC ಯಿಂದ ಚಾಲಿತವಾಗಲಿದ್ದು, ಗ್ರಾಫಿಕ್ಸ್‌ಗಾಗಿ Adreno GPU ಜೊತೆ ಜೋಡಿಸಲಾಗಿದೆ.

RAM - OS: ನೋಕಿಯಾ G42 ಸ್ಮಾರ್ಟ್ಫೋನ್ 4GB/6GB RAM ಮತ್ತು 128GB ಸ್ಟೋರೇಜ್‌ನೊಂದಿಗೆ ಬರಲಿದೆ. ಇದನ್ನು ಮೈಕ್ರೋ SD ಕಾರ್ಡ್ ಸ್ಲಾಟ್ ಮೂಲಕ ಮತ್ತಷ್ಟು ವಿಸ್ತರಿಸಬಹುದಾಗಿದೆ. 5GB ವರ್ಚುವಲ್ RAM ಬೆಂಬಲವಿದೆ. ಆಂಡ್ರಾಯ್ಡ್ 13 OS ನಲ್ಲಿ ರನ್ ಆಗುತ್ತದೆ.

ಕ್ಯಾಮೆರಾ-ಬ್ಯಾಟರಿ: 50MP ಮುಖ್ಯ ಕ್ಯಾಮೆರಾ, 2MP ಮ್ಯಾಕ್ರೋ ಲೆನ್ಸ್ ಮತ್ತು 2MP ಡೆಪ್ತ್ ಮಾಡ್ಯೂಲ್ ಇದೆ. ಸೆಲ್ಫಿ ಮತ್ತು ವಿಡಿಯೋ ಚಾಟ್‌ಗಳಿಗಾಗಿ ಮುಂಭಾಗದಲ್ಲಿ 8 ಮೆಗಾ ಪಿಕ್ಸೆಲ್ ಕ್ಯಾಮೆರಾ ಆಯ್ಕೆ ನೀಡಲಾಗಿದೆ. ಈ ಫೋನ್ 5,000mAh ಬ್ಯಾಟರಿಯನ್ನು 20W ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ ಪ್ಯಾಕ್ ಮಾಡುತ್ತದೆ.

ಕನೆಕ್ಟಿವಿಟಿ: ಕನೆಕ್ಟಿವಿಟಿ ಆಯ್ಕೆಗಳಲ್ಲಿ 5G, 4G LTE, Wi-Fi, ಬ್ಲೂಟೂತ್, GPS, ಮತ್ತು USB ಟೈಪ್-C ಪೋರ್ಟ್ ಸೇರಿವೆ. ಭದ್ರತೆಗಾಗಿ ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸಂವೇದಕ, ನೀರು ಮತ್ತು ಧೂಳಿನ ಪ್ರತಿರೋಧಕ್ಕಾಗಿ IP52 ರೇಟಿಂಗ್ ಮತ್ತು 3.5mm ಆಡಿಯೊ ಜಾಕ್ ನೀಡಲಾಗಿದೆ.
























