- Kannada News Photo gallery Novak Djokovic beat Daniil Medvedev in US Open 2023 final Won his record 24th Grand slam
ಮೆಡ್ವೆಡೆವ್ರನ್ನು ಮಣಿಸಿ ದಾಖಲೆಯ 24ನೇ ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿ ಗೆದ್ದ ನೊವಾಕ್ ಜೊಕೊವಿಚ್..!
US Open 2023: ಭಾನುವಾರ ನಡೆದ ಯುಎಸ್ ಓಪನ್ 2023ರ ಸಿಂಗಲ್ಸ್ ವಿಭಾಗದಲ್ಲಿ ಡೇನಿಯಲ್ ಮೆಡ್ವೆಡೆವ್ ಅವರನ್ನು 6-3 7-6(5) 6-3 ನೇರ ಸೆಟ್‌ಗಳಿಂದ ಸೋಲಿಸಿದ 36 ವರ್ಷದ ನೊವಾಕ್ ಜೊಕೊವಿಚ್ ತಮ್ಮ 24 ನೇ ಮೇಜರ್ ಗ್ರ್ಯಾಂಡ್ ಸ್ಲಾಮ್ ಸಿಂಗಲ್ಸ್ ಪ್ರಶಸ್ತಿಗೆ ಮುತ್ತಿಟ್ಟಿದ್ದಾರೆ.
Updated on: Sep 11, 2023 | 8:18 AM

ಭಾನುವಾರ ನಡೆದ ಯುಎಸ್ ಓಪನ್ 2023ರ ಸಿಂಗಲ್ಸ್ ವಿಭಾಗದಲ್ಲಿ ಡೇನಿಯಲ್ ಮೆಡ್ವೆಡೆವ್ ಅವರನ್ನು 6-3 7-6(5) 6-3 ನೇರ ಸೆಟ್‌ಗಳಿಂದ ಸೋಲಿಸಿದ 36 ವರ್ಷದ ನೊವಾಕ್ ಜೊಕೊವಿಚ್ ತಮ್ಮ 24 ನೇ ಮೇಜರ್ ಗ್ರ್ಯಾಂಡ್ ಸ್ಲಾಮ್ ಸಿಂಗಲ್ಸ್ ಪ್ರಶಸ್ತಿಗೆ ಮುತ್ತಿಟ್ಟಿದ್ದಾರೆ.

ಇದು ಜೊಕೊವಿಚ್ ಅವರ ನಾಲ್ಕನೇ ಯುಎಸ್ ಓಪನ್ ಪ್ರಶಸ್ತಿಯಾಗಿದ್ದು, ಈ ಗೆಲುವಿನೊಂದಿಗೆ ಅವರು ಟೆನಿಸ್ ಇತಿಹಾಸದಲ್ಲಿ ಅತಿ ಹೆಚ್ಚು ಗ್ರ್ಯಾಂಡ್ ಸ್ಲಾಮ್ ಸಿಂಗಲ್ಸ್ ಪ್ರಶಸ್ತಿಗಳನ್ನು ಗೆದ್ದ ದಾಖಲೆಯನ್ನು ಸರಿಗಟ್ಟಿದರು. ಈ ಹಿಂದೆ ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ಆಸ್ಟ್ರೇಲಿಯಾದ ದಂತಕಥೆ ಮಾರ್ಗರೆಟ್ ಕೋರ್ಟ್ ಅವರು 24 ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿಗಳನ್ನು ಗೆದ್ದು ದಾಖಲೆ ಬರೆದಿದ್ದರು.

ಮೆಡ್ವೆಡೆವ್ ಅವರನ್ನು ಮಣಿಸಿ ಯುಎಸ್ ಓಪನ್ ಕಿರೀಟ ತೊಟ್ಟ ಜೊಕೊವಿಚ್, ಇದರೊಂದಿಗೆ ಎರಡು ವರ್ಷಗಳ ಹಿಂದಿನ ಸೋಲಿಗೆ ಸೇಡು ತೀರಿಸಿಕೊಂಡರು. ವಾಸ್ತವವಾಗಿ, 2 ವರ್ಷಗಳ ಹಿಂದೆ ಇದೇ ಯುಎಸ್ ಓಪನ್ ಫೈನಲ್ ಪಂದ್ಯದಲ್ಲಿ ಇಬ್ಬರು ಆಟಗಾರರ ನಡುವೆ ಫೈನಲ್ ಪಂದ್ಯ ನಡೆದಿತ್ತು.

ಆ ಫೈನಲ್ ಪಂದ್ಯದಲ್ಲಿ ಜೊಕೊವಿಚ್ ಅವರನ್ನು 6-4,6-4, 6-4 ಸೆಟ್‌ಗಳಿಂದ ಸೋಲಿಸಿದ ಮೆಡ್ವೆಡೆವ್ 2021 ರ ಯುಎಸ್ ಓಪನ್ ಚಾಂಪಿಯನ್ ಆಗಿ ಹೊರಹೊಮ್ಮಿದ್ದರು.

ಈ ಪ್ರಶಸ್ತಿ ಗೆಲುವಿನೊಂದಿಗೆ ಇದೀಗ ಜೊಕೊವಿಚ್ ಅವರ ಖಾತೆಯಲ್ಲಿ 10 ಆಸ್ಟ್ರೇಲಿಯನ್ ಓಪನ್, 7 ವಿಂಬಲ್ಡನ್, 4 ಯುಎಸ್ ಓಪನ್ ಮತ್ತು 3 ಫ್ರೆಂಚ್ ಓಪನ್ ಪ್ರಶಸ್ತಿಗಳು ಸೇರಿದಂತ್ತಾಗಿದೆ. ಈ ಮೂಲಕ ರಾಫೆಲ್ ನಡಾಲ್‌ಗಿಂತ 2 ಗ್ರಾಂಡ್ ಸ್ಲಾಮ್ ಪ್ರಶಸ್ತಿಗಳನ್ನು ಹೆಚ್ಚಿಗೆ ಗೆದ್ದ ಶ್ರೇಯ ಜೊಕೊವಿಚ್ ಪಾಲಾಗಿದೆ.

36ರ ಹರೆಯದಲ್ಲಿ 24ನೇ ಗ್ರ್ಯಾನ್ ಸ್ಲಾಮ್ ಪ್ರಶಸ್ತಿ ಗೆದ್ದಿರುವುದನ್ನು ನೋಡಿದರೆ ನೊವಾಕ್ ಜೊಕೊವಿಚ್ಗೆ ವಯಸ್ಸು ಕೇವಲ ಅಂಕೆಯಂತೆ ಕಾಣುತ್ತದೆ. ಇದೀಗ ಜೊಕೊವಿಚ್ ಯುಎಸ್ ಓಪನ್ ಗೆದ್ದ ಅತ್ಯಂತ ಹಿರಿಯ ಪುರುಷ ಆಟಗಾರನೆನಿಸಿಕೊಂಡಿದ್ದಾರೆ.

ಇನ್ನು ಪ್ರಶಸ್ತಿ ಗೆದ್ದ ಬಳಿಕ ಮಾತನಾಡಿದ ಜೊಕೊವಿಚ್, 24 ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿಗಳನ್ನು ಗೆಲ್ಲುವ ಬಗ್ಗೆ ಯೋಚಿಸಿರಲಿಲ್ಲ.ಈ ಕ್ರೀಡೆಯಲ್ಲಿ ಇತಿಹಾಸವನ್ನು ನಿರ್ಮಿಸುವುದು ನಿಜವಾಗಿಯೂ ಗಮನಾರ್ಹ ಮತ್ತು ವಿಶೇಷವಾದ ಸಂಗತಿಯಾಗಿದೆ. ನಾನು ಇಲ್ಲಿ 24 ಸ್ಲಾಮ್‌ಗಳ ಬಗ್ಗೆ ಮಾತನಾಡುತ್ತೇನೆ ಎಂದು ನಾನು ಎಂದಿಗೂ ಊಹಿಸಿರಲಿಲ್ಲ. ಅದು ನಿಜವಾಗಲಿದೆ ಎಂದು ನಾನು ಎಂದಿಗೂ ಯೋಚಿಸಿರಲಿಲ್ಲ ಎಂದು ಹೇಳಿದರು.



















