- Kannada News Photo gallery children and parents creates clay ganapathi in halasuru lake over ganesha festival
Ganesha Festival: ಪುಟಾಣಿಗಳ ಕೈಯಿಂದ ಮಣ್ಣಿನ ಗಣಪ ತಯಾರಿ, ಚಂದ್ರಯಾನ-3ರ ಕಾನ್ಸೆಪ್ಟ್ ನಲ್ಲಿ ಗಣೇಶ
ಪರಿಸರ ಸ್ನೇಹಿ ಗಣಪನನ್ನ ಸ್ವತಃ ತಾವೇ ತಯ್ಯಾರಿಸಿ ಮನೆಯಲ್ಲಿ ಪೂಜೆ ಮಾಡೋ ಪರಿಕಲ್ಪನೆಹಲ್ಲಿ ಬಿ. ಪ್ಯಾಕ್ ಹಾಗೂ ಬಿ. ಕ್ಲಿಪ್ ಅಲ್ಯೂಮ್ನಿ ಅಸೋಸಿಯೇಷನ್ ವತಿಯಿಂದ ಕಳೆದ ಏಳು ವರ್ಷಗಳಿಂದ ಜನರಲ್ಲಿ ಜಾಗೃತಿ ಮೂಡಿಸುತ್ತ ಬರುತ್ತಿದೆ. ಈ ವರ್ಷ ಬೆಂಗಳೂರಿನ ಹಲಸೂರಿನ ಕೆರೆ ಬಳಿ ಪರಿಸರ ಸ್ನೇಹಿ ಮಣ್ಣಿನ ಗಣಪ ಮಾಡುವ ಕಾರ್ಯಾಗಾರ ಹಮ್ಮಿಕೊಂಡಿದ್ದರು.
Updated on: Sep 11, 2023 | 10:04 AM

ಗಣೇಶೋತ್ಸವ ಎಂದರೆ ಎಲ್ಲರಿಗೂ ಎಲ್ಲಿಲ್ಲದ ಸಂಭ್ರಮ ಸಡಗರ ಮನೆಯಲ್ಲಿ ನಾವೇ ಕೈಯಿಂದ ಮಾಡಿರೋ ಪ್ರಕೃತಿ ಸ್ನೇಹಿ ಗಣಪ ಕೂಡಿಸೋದು ಒಂದೆಡೆಯಾದರೆ, ಪ್ರತಿ ವರ್ಷವೂ ಗಣೇಶೋತ್ಸವದಲ್ಲಿ ಹೊಸ ಹೊಸ ಕಾನ್ಸೆಪ್ಟ್ ನಲ್ಲಿ ಗಣೇಶ ಮೂರ್ತಿಗಳು ನಿರ್ಮಾಣವಾಗುತ್ತವೆ. ಹಲಸೂರಿನಲ್ಲಿ ಪುಟ್ಟ ಪುಟ್ಟ ಮಕ್ಕಳ ಕೈಯಲ್ಲಿ ಗಣೇಶ ರೂಪತಾಳಿದ್ದಾನೆ.

ಹೀಗೆ ಸಾಲಾಗಿ ಕುಳಿತ ಮಕ್ಕಳು ಹಾಗೂ ಪೋಷಕರು ಕೈಯಲ್ಲಿ ಮಣ್ಣನ್ನ ಹಿಡಿದುಕೊಂಡು ಗಣಪತಿಯನ್ನ ತಯಾರಿ ಮಾಡುತ್ತಿರೋ ದೃಶ್ಯ ಒಂದಡೆಯಾದರೆ ಇನ್ನೊಂದೆಡೆ ಗಣೇಶ ಹೇಗೆ ತಯಾರು ಮಾಡಬೇಕು ಎಂದು ಹೇಳುತ್ತಿರೋ ಶಿಕ್ಷಕರು. ಈ ದೃಶ್ಯಗಳೆಲ್ಲ ಕಂಡು ಬಂದದ್ದು ಬೆಂಗಳೂರಿನ ಹಲಸೂರು ಕೆರೆ ಬಳಿಯಲ್ಲಿ.

ಪರಿಸರ ಸ್ನೇಹಿ ಗಣಪನನ್ನ ಸ್ವತಃ ತಾವೇ ತಯ್ಯಾರಿಸಿ ಮನೆಯಲ್ಲಿ ಪೂಜೆ ಮಾಡೋ ಪರಿಕಲ್ಪನೆಹಲ್ಲಿ ಬಿ. ಪ್ಯಾಕ್ ಹಾಗೂ ಬಿ. ಕ್ಲಿಪ್ ಅಲ್ಯೂಮ್ನಿ ಅಸೋಸಿಯೇಷನ್ ವತಿಯಿಂದ ಕಳೆದ ಏಳು ವರ್ಷಗಳಿಂದ ಜನರಲ್ಲಿ ಜಾಗೃತಿ ಮೂಡಿಸುತ್ತ ಬರುತ್ತಿದೆ.

ಈ ವರ್ಷ ಬೆಂಗಳೂರಿನ ಹಲಸೂರಿನ ಕೆರೆ ಬಳಿ ಪರಿಸರ ಸ್ನೇಹಿ ಮಣ್ಣಿನ ಗಣಪ ಮಾಡುವ ಕಾರ್ಯಾಗಾರ ಹಮ್ಮಿಕೊಂಡಿದ್ದರು. ಈ ಕಾರ್ಯಾಗಾರದಲ್ಲಿ 700ಕ್ಕೂ ಅಧಿಕ ಮಕ್ಕಳು ಹಾಗೂ ಪೋಷಕರು ಭಾಗಿಯಾಗಿದ್ದಾರೆ. ಸ್ವತಃ ಮಣ್ಣಿನಿಂದ ತಾವೇ ಗಣೇಶ ಮೂರ್ತಿ ತಯಾರು ಮಾಡಿದ್ದಾರೆ.

ಕಳೆದ ಏಳು ವರ್ಷಗಳಲ್ಲಿ 25 ಸಾವಿರಕ್ಕೂ ಅಧಿಕ ಜನರಿಗೆ ಪರಿಸರ ಸ್ನೇಹಿ ಗಣಪ ತಯಾರಿ ಹೇಳಿಕೊಡುತ್ತ ಬಂದಿರುವ ಈ ಸಂಸ್ಥೆ. ಮುಂದಿನ ವರ್ಷ ಒಂದೇ ಬಾರಿಗೆ 10 ಸಾವಿರಕ್ಕೂ ಅಧಿಕ ಜನರಿಂದ ಗಣೇಶ ತಯಾರಿಸಿ ಗಿನ್ನಿಸ್ ದಾಖಲೆ ಮಾಡೋದಕ್ಕೆ ಮುಂದಾಗಿದೆ.

ಮತ್ತೊಂದೆಡೆ ಗೌರಿ ಹಬ್ಬದಲ್ಲಿ ಹೆಣ್ಣು ಮಕ್ಕಳು ಮಿಂಚಿದ್ರೆ, ಗಣೇಶ ಹಬ್ಬ ಬಂತೇದ್ರೆ ಗಂಡು ಮಕ್ಕಳ ಖುಷಿಯೇ ಬೇರೆ. ಪ್ರತಿ ವರ್ಷ ನಮ್ಮ ಏರಿಯಾದಲ್ಲಿ ಹೊಸ ಕಾನ್ಸೆಪ್ಟ್ ನಲ್ಲಿ ಗಣೇಶ ಕೂರಿಸಬೇಕು ಅಂತ ಅಂದುಕೊಳ್ಳುವವರಿಗೆ ಈ ವರ್ಷ ಚಂದ್ರಯಾನ-3ರ ವಿಶೇಷ ಗಣೇಶ ಕೈಬೀಸಿ ಕರೆಯುತ್ತಿದೆ.

ಹೌದು ಚಂದ್ರಯಾನ-3 ಯಶಸ್ವಿ ಉಡಾವಣೆ ಹಿನ್ನೆಲೆ ಭಾರತದ ಕೀರ್ತಿಗೆ ಮತ್ತೊಂದು ಕಿರೀಟ ಬಂದಂತಾಗಿದೆ. ಹೀಗಾಗಿ ಈ ಬಾರಿ ಗಣೇಶೋತ್ಸವದಲ್ಲೂ ಕೂಡ ಚಂದ್ರಯಾನ-3ರ ಪರಿಕಲ್ಪನೆಯಲ್ಲಿ ಗಣೇಶ ಮೂರ್ತಿಗಳು ಮಾರ್ಕೆಟ್ನಲ್ಲಿ ಸದ್ದು ಮಾಡುತ್ತಿವೆ.

ಇನ್ನು ಯಶವಂತಪುರದ ಅಂಗಡಿಯೊಂದರಲ್ಲಿ ಚಂದ್ರಯಾನ-3 ಹಾಗೂ ನಮ್ಮ ಭಾರತದ ಹೆಮ್ಮೆ ಅಬ್ದುಲ್ ಕಲಾಂ ಅವರ ಕಾನ್ಸೆಪ್ಟ್ ನಲ್ಲಿ ಗಣೇಶನ ಪ್ರತಿಮೆ ತಯಾರಾಗಿದೆ. ಇನ್ನು ಚಂದ್ರಯಾನ ಗಣಪನಿಗೆ ಈಗಾಗಲೇ ಬಹಳಷ್ಟು ಬೇಡಿಕೆ ಹೆಚ್ಚಾಗಿದ್ದು, ಎಲ್ಲೆಡೆ ಭಾರೀ ಸದ್ದು ಮಾಡುತ್ತಿದೆ.

ಕೇವಲ ಚಂದ್ರಯಾನ ಕಾನ್ಸೆಪ್ಟ್ ಅಷ್ಟೇ ಅಲ್ಲದೇ ರೈತನಾಗಿ ಗಣಪ ಎತ್ತಿನ ಗಾಡಿ ಮೇಲೆ ಕುಳಿತು ರೈತನಂತೆ ಧಾನ್ಯಗಳನ್ನ ಕೊಂಡೋಯುತ್ತಿರುವುದು. ನವಿಲಿನ ಜೊತೆ ಆಟ, ವಿಶೇಷವಾಗಿ ಎಲ್ಲಾ ದೇವರುಗಳ ಸ್ವರೂಪದಲ್ಲಿ ಗಣೇಶ ಕಂಗೊಳಿಸುತ್ತಿದ್ದಾನೆ. ಅಂಗಡಿ ವತಿಯಿಂದ ಗಣೇಶನನ್ನ ಕೊಳ್ಳುವವರಿಗೆ ಒಂದು ಗಿಡವನ್ನ ನೀಡಲು ಅಂಗಡಿ ಮಾಲೀಕರು ನಿರ್ಧರಿಸಿದ್ದಾರೆ.

ಸಂಸ್ಥೆಯೊಂದು ಜನರಲ್ಲಿ ಸ್ವತಃ ಮಣ್ಣಿನಿಂದ ಗಣಪ ತಯಾರಿಸಿ ಮನೆಯಲ್ಲಿ ಕೂಡಿಸಿ ಪರಿಸರ ಸ್ನೇಹ ಮೆರೆಯೋಕೆ ಮುಂದಾದರೆ ಮತ್ತೊಂದೆಡೆ ಚಂದ್ರಯಾನ 3 ಪರಿಕಲ್ಪನೆಯಲ್ಲಿ ಮೂಡಿದಂತಹ ಗಣೇಶ ಖುಷಿ ಕೊಟ್ತಿದೆ.
























