ಟೆಕ್ನೋ ಫ್ಯಾಂಟಮ್ ವಿ ಫ್ಲಿಪ್: ಧೂಳೆಬ್ಬಿಸಲು ಬರುತ್ತಿದೆ ಟೆಕ್ನೋ ಕಂಪನಿ ಮೊಟ್ಟ ಮೊದಲ ಫ್ಲಿಪ್ ಸ್ಮಾರ್ಟ್​ಫೋನ್

Tecno Phantom V Flip set to launch: ಈ ಹಿಂದೆ ಬಿಡುಗಡೆ ಆದ ಫ್ಲಿಪ್ ಫೋನ್‌ಗಳಿಗಿಂತ ಭಿನ್ನವಾಗಿ, ಟೆಕ್ನೋ ಫ್ಯಾಂಟಮ್ ವಿ ಫ್ಲಿಪ್ ಫೋನಿದ್ದು, ಇದರ ಹೊರಗಿನ ಕವರ್‌ನಲ್ಲಿ ರೌಂಡ್ ಡಿಸ್ ಪ್ಲೇಯನ್ನು ಹೊಂದಿರುವಂತೆ ಕಾಣಿಸುತ್ತಿದೆ. ಸೆಪ್ಟೆಂಬರ್ 22 ರಂದು ಸಿಂಗಾಪುರದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಟೆಕ್ನೋ ಕಂಪನಿಯ ಈ ಮೊಟ್ಟ ಮೊದಲ ಫ್ಲಿಪ್ ಸ್ಮಾರ್ಟ್​ಫೋನ್ ರಿಲೀಸ್ ಆಗಲಿದೆ.

ಟೆಕ್ನೋ ಫ್ಯಾಂಟಮ್ ವಿ ಫ್ಲಿಪ್: ಧೂಳೆಬ್ಬಿಸಲು ಬರುತ್ತಿದೆ ಟೆಕ್ನೋ ಕಂಪನಿ ಮೊಟ್ಟ ಮೊದಲ ಫ್ಲಿಪ್ ಸ್ಮಾರ್ಟ್​ಫೋನ್
tecno phantom v flip
Follow us
|

Updated on: Sep 10, 2023 | 2:50 PM

ಚೀನೀ ಸ್ಮಾರ್ಟ್‌ಫೋನ್ ತಯಾರಕ ಕಂಪನಿ ಟೆಕ್ನೋ ತನ್ನ ಮೊದಲ ಫ್ಲಿಪ್ ಸ್ಮಾರ್ಟ್‌ಫೋನ್, ಟೆಕ್ನೋ ಫ್ಯಾಂಟಮ್ ವಿ ಫ್ಲಿಪ್ (Tecno Phantom V Flip) ಅನ್ನು ಬಿಡುಗಡೆ ಮಾಡಲು ಸಿದ್ಧವಾಗಿದೆ. ಈ ಆಕರ್ಷಕ ಫೋನ್ ಸೆಪ್ಟೆಂಬರ್ 22 ರಂದು ಸಿಂಗಾಪುರದಲ್ಲಿ ನಡೆಯಲಿರುವ ಫ್ಲಿಪ್ ಇನ್ ಸ್ಟೈಲ್ ಟೆಕ್ನೋ ಫ್ಲ್ಯಾಗ್‌ಶಿಪ್ ಪ್ರಾಡಕ್ಟ್ ಲಾಂಚ್ 2023 ಈವೆಂಟ್‌ನಲ್ಲಿ ಅನಾವರಣಗೊಳ್ಳಲಿದೆ. ಈ ಬಗ್ಗೆ ಸ್ವತಃ ಕಂಪನಿ ಖಚಿತಪಡಿಸಿದೆ. ಅಧಿಕೃತ ಬಿಡುಗಡೆ ಆಗುವುದಕ್ಕೂ ಮುನ್ನ ಈ ಫೋನಿನ ಕೆಲವು ವಿವರಗಳು ಸೋರಿಕೆ ಆಗಿದೆ.

Alibaba.com ಎಂಬ ಚೀನೀ ಶಾಪಿಂಗ್ ವೆಬ್‌ಸೈಟ್‌ನಲ್ಲಿ ಟೆಕ್ನೋ ಫ್ಯಾಂಟಮ್ ವಿ ಫ್ಲಿಪ್ ಫೋನಿನ ಕವರ್ ಮಾರಾಟ ಕಾಣುತ್ತಿದೆ. ಈ ಕವರ್ ಮೂಲಕ ಫೋನ್‌ನ ವಿನ್ಯಾಸ ತಿಳಿದುಬಂದಿದೆ. ಈ ಹಿಂದೆ ಬಿಡುಗಡೆ ಆದ ಫ್ಲಿಪ್ ಫೋನ್‌ಗಳಿಗಿಂತ ಭಿನ್ನವಾಗಿ, ಟೆಕ್ನೋ ಫ್ಯಾಂಟಮ್ ವಿ ಫ್ಲಿಪ್ ಹೊರಗಿನ ಕವರ್‌ನಲ್ಲಿ ರೌಂಡ್ ಡಿಸ್ ಪ್ಲೇಯನ್ನು ಹೊಂದಿರುವಂತೆ ಕಾಣಿಸುತ್ತಿದೆ.

ಸಖತ್ ಸೈಲಿಶ್ ಆಗಿರುವ ನಥಿಂಗ್ ಫೋನ್ 2 ಸ್ಮಾರ್ಟ್​ಫೋನ್ ಮೇಲೆ ಬಂಪರ್ ಡಿಸ್ಕೌಂಟ್

ಇದನ್ನೂ ಓದಿ
Image
ನೀವು ಸ್ಮಾರ್ಟ್‌ಫೋನ್ ಅನ್ನು 100 ಪ್ರತಿಶತದಷ್ಟು ಚಾರ್ಜ್ ಮಾಡುತ್ತೀರಾ?
Image
ಜಿಯೋ 7ನೇ ವಾರ್ಷಿಕೋತ್ಸವ: ಪ್ರಿಪೇಯ್ಡ್ ಬಳಕೆದಾರರಿಗೆ ಧಮಾಕ ಆಫರ್
Image
ಬಿಡುಗಡೆಗೂ ಮುನ್ನ ಧೂಳೆಬ್ಬಿಸುತ್ತಿದೆ ನೋಕಿಯಾ G42 5G ಸ್ಮಾರ್ಟ್​ಫೋನ್
Image
ಒಂದು ವಾಟ್ಸ್​ಆ್ಯಪ್ ಖಾತೆಯನ್ನು ಎಷ್ಟು ​ಫೋನ್​ಗಳಲ್ಲಿ ಉಪಯೋಗಿಸಬಹುದು?

ವೃತ್ತಾಕಾರದ ಡಿಸ್ ಪ್ಲೇ ಜೊತೆಗೆ ಸುತ್ತಲೂ ಎರಡು ಹಿಂಬದಿಯ ಕ್ಯಾಮೆರಾಗಳು ಮತ್ತು LED ಫ್ಲ್ಯಾಶ್ ಅನ್ನು ನೀಡಲಾಗಿದೆ. ಫ್ಲಿಪ್ ತೆರೆದರೆ, ಮುಂಭಾಗದಲ್ಲಿ ಪಂಚ್ ಹೋಲ್ ಡಿಸ್ ಪ್ಲೇ ಇದೆ. ಈ ಫೋನ್ ಗೂಗಲ್ ಪ್ಲೇ ಕನ್ಸೋಲ್ ವೆಬ್‌ಸೈಟ್‌ನಲ್ಲಿ ಮಾದರಿ ಸಂಖ್ಯೆ AD11 ನೊಂದಿಗೆ ಕಾಣಿಸಿಕೊಂಡಿದೆ. ಈ ಪಟ್ಟಿಯ ಪ್ರಕಾರ, ಇದು 8GB RAM ಅನ್ನು ಹೊಂದಿರಬಹುದು ಮತ್ತು ಆಂಡ್ರಾಯ್ಡ್ 13 ನೊಂದಿಗೆ ಬರಬಹುದು ಎನ್ನಲಾಗಿದೆ. ಮೀಡಿಯಾ ಟೆಕ್ ಡೈಮೆನ್ಸಿಟಿ 1300 ಚಿಪ್‌ನಲ್ಲಿ ಕಾರ್ಯನಿರ್ವಹಿಸುತ್ತದೆ. ಇದನ್ನು ARM Mali G77 GPU ನೊಂದಿಗೆ ಸೇರಿಸಲಾಗಿದೆ.

ಡಿಸ್ ಪ್ಲೇ ವಿಷಯಕ್ಕೆ ಬಂದರೆ, 1,080 x 2,640 ಪಿಕ್ಸೆಲ್‌ಗಳ ರೆಸಲ್ಯೂಶನ್ ಮತ್ತು 480ppi ಪಿಕ್ಸೆಲ್ ಸಾಂದ್ರತೆಯೊಂದಿಗೆ ಪೂರ್ಣ-HD+ ಡಿಸ್ ಪ್ಲೇಯನ್ನು ನಿರೀಕ್ಷಿಸಲಾಗಿದೆ. ಇದರ ಹಿಂಭಾಗದಲ್ಲಿ 64-ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ, 13-ಮೆಗಾಪಿಕ್ಸೆಲ್ ಸೆಕೆಂಡರಿ ಕ್ಯಾಮೆರಾ ಮತ್ತು ಸೆಲ್ಫಿಗಾಗಿ 32-ಮೆಗಾಪಿಕ್ಸೆಲ್ ಮುಂಭಾಗದ ಕ್ಯಾಮೆರಾವನ್ನು ಅಳವಡಿಸಲಾಗಿದೆ. 4,000mAh ಬ್ಯಾಟರಿ ಇರುವ ಸಾಧ್ಯತೆಯಿದ್ದು, ಇದು 45W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ
ಮುಂಗಾರು ಮಳೆಗೆ ಚಾರ್ಮಾಡಿ ಘಾಟ್​ನಲ್ಲಿ ಜಲವೈಭವ; ನೂರಾರು ಜಲಪಾತಗಳ ಸೃಷ್ಟಿ
ಮುಂಗಾರು ಮಳೆಗೆ ಚಾರ್ಮಾಡಿ ಘಾಟ್​ನಲ್ಲಿ ಜಲವೈಭವ; ನೂರಾರು ಜಲಪಾತಗಳ ಸೃಷ್ಟಿ
ಸತತ ಮಳೆ; ಜಿಗಣೆ ಕಾಟಕ್ಕೆ ಹೈರಾಣಾದ ಪ್ರವಾಹ ತಂಡದ ಅಧಿಕಾರಿಗಳು
ಸತತ ಮಳೆ; ಜಿಗಣೆ ಕಾಟಕ್ಕೆ ಹೈರಾಣಾದ ಪ್ರವಾಹ ತಂಡದ ಅಧಿಕಾರಿಗಳು
ಸುಧಾಕರ್ ಅಭಿನಂದನಾ ಕಾರ್ಯಕ್ರಮದಲ್ಲಿ ಬಾಡೂಟ: ಡ್ರಿಂಕ್ಸ್​​ಗೆ ಮುಗಿಬಿದ್ದ ಜನ
ಸುಧಾಕರ್ ಅಭಿನಂದನಾ ಕಾರ್ಯಕ್ರಮದಲ್ಲಿ ಬಾಡೂಟ: ಡ್ರಿಂಕ್ಸ್​​ಗೆ ಮುಗಿಬಿದ್ದ ಜನ
ಜಲಾವೃತವಾದ ಸೇತುವೆ ಮೇಲೆ ಸಂಚಾರ;ನೀರು ರಭಸವಾಗಿ ಹರಿಯುತ್ತಿದ್ದರೂ ಡೋಂಟ್​ಕೇರ
ಜಲಾವೃತವಾದ ಸೇತುವೆ ಮೇಲೆ ಸಂಚಾರ;ನೀರು ರಭಸವಾಗಿ ಹರಿಯುತ್ತಿದ್ದರೂ ಡೋಂಟ್​ಕೇರ
ಗೋಕಾಕ್ ಜಲಪಾತದಲ್ಲಿ ಪ್ರವಾಸಿಗರ ಹುಚ್ಚಾಟ; ಸ್ವಲ್ಪ ಯಾಮಾರಿದ್ರು ಅಪಾಯ ಖಚಿತ
ಗೋಕಾಕ್ ಜಲಪಾತದಲ್ಲಿ ಪ್ರವಾಸಿಗರ ಹುಚ್ಚಾಟ; ಸ್ವಲ್ಪ ಯಾಮಾರಿದ್ರು ಅಪಾಯ ಖಚಿತ
ಸಂಸದ ಡಾ.ಕೆ ಸುಧಾಕರ್​ ಕಾರ್ಯಕ್ರಮದಲ್ಲಿ ಭರ್ಜರಿ ಬಾಡೂಟ ಜೊತೆ ಮದ್ಯ ಆಯೋಜನೆ
ಸಂಸದ ಡಾ.ಕೆ ಸುಧಾಕರ್​ ಕಾರ್ಯಕ್ರಮದಲ್ಲಿ ಭರ್ಜರಿ ಬಾಡೂಟ ಜೊತೆ ಮದ್ಯ ಆಯೋಜನೆ
‘ಯಜಮಾನ’ ತಂದುಕೊಟ್ಟ ಭರ್ಜರಿ ಲಾಭದ ಬಗ್ಗೆ ನಿರ್ಮಾಪಕರ ಮಾತು
‘ಯಜಮಾನ’ ತಂದುಕೊಟ್ಟ ಭರ್ಜರಿ ಲಾಭದ ಬಗ್ಗೆ ನಿರ್ಮಾಪಕರ ಮಾತು
ಕಿರಿದಾದ ಸೇತುವೆ ಮೇಲೆ ಹೆಣ ಹೊತ್ತು ಸಾಗಿದ ಗ್ರಾಮಸ್ಥರು, ವಿಡಿಯೋ ವೈರಲ್
ಕಿರಿದಾದ ಸೇತುವೆ ಮೇಲೆ ಹೆಣ ಹೊತ್ತು ಸಾಗಿದ ಗ್ರಾಮಸ್ಥರು, ವಿಡಿಯೋ ವೈರಲ್
ಧೋನಿ ಹುಟ್ದಬ್ಬ... ಬರೋಬ್ಬರಿ 100 ಅಡಿ ಕಟೌಟ್ ನಿಲ್ಲಿಸಿದ ಫ್ಯಾನ್ಸ್
ಧೋನಿ ಹುಟ್ದಬ್ಬ... ಬರೋಬ್ಬರಿ 100 ಅಡಿ ಕಟೌಟ್ ನಿಲ್ಲಿಸಿದ ಫ್ಯಾನ್ಸ್
ಅಕ್ಕಿ ಮೂಟೆ ಹೊತ್ತು ಗಂಗಾವತಿಯಿಂದ ಮಂತ್ರಾಲಯದವರೆಗೆ ಭಕ್ತನ ಪಾದಯಾತ್ರೆ
ಅಕ್ಕಿ ಮೂಟೆ ಹೊತ್ತು ಗಂಗಾವತಿಯಿಂದ ಮಂತ್ರಾಲಯದವರೆಗೆ ಭಕ್ತನ ಪಾದಯಾತ್ರೆ