ಟೆಕ್ನೋ ಕ್ಯಾಮನ್ 20 ಆರ್ಟ್ ಎಡಿಷನ್ ಬಿಡುಗಡೆ: ಈ ಫೋನ್ ಡಿಸೈನ್ ನೋಡಿದ್ರೆ ಫಿದಾ ಆಗ್ತೀರ

Tecno Camon 20 Avocado Art Edition Launched: ಟೆಕ್ನೋ ಕ್ಯಾಮನ್ 20 ಆವಕಾಡೊ ಆರ್ಟ್ ಎಡಿಷನ್ ಸ್ಮಾರ್ಟ್‌ಫೋನ್ ಹಸಿರು ಬಣ್ಣದಲ್ಲಿ ಮಾತ್ರ ಲಭ್ಯವಿದೆ. ಜೊತೆಗೆ ಒಂದು ಸ್ಟೋರೇಜ್ ಆಯ್ಕೆಯಲ್ಲಿ ಮಾತ್ರ ಖರೀದಿಗೆ ಸಿಗಲಿದೆ. ಇದರ 8GB RAM + 256GB ಸ್ಟೋರೇಜ್ ಸಾಮರ್ಥ್ಯಕ್ಕೆ 15,999 ರೂ. ನಿಗದಿ ಮಾಡಲಾಗಿದೆ.

ಟೆಕ್ನೋ ಕ್ಯಾಮನ್ 20 ಆರ್ಟ್ ಎಡಿಷನ್ ಬಿಡುಗಡೆ: ಈ ಫೋನ್ ಡಿಸೈನ್ ನೋಡಿದ್ರೆ ಫಿದಾ ಆಗ್ತೀರ
Tecno Camon 20 Avocado Art Edition
Follow us
Vinay Bhat
|

Updated on: Aug 29, 2023 | 12:40 PM

ಪ್ರಸಿದ್ಧ ಟೆಕ್ನೋ ಸಂಸ್ಥೆ ಈಗೀಗ ಭಾರತದಲ್ಲಿ ವಿಶೇಷ ಮಾದರಿಯಲ್ಲಿ ಆಕರ್ಷಕ ಸ್ಮಾರ್ಟ್​ಫೋನ್​ಗಳನ್ನು ಬಿಡುಗಡೆ ಮಾಡುತ್ತಿದೆ. ಈ ವರ್ಷದ ಆರಂಭದಲ್ಲಿ ಕಂಪನಿ ಟೆಕ್ನೋ ಕ್ಯಾಮನ್ 20 ಫೋನನ್ನು ಅನಾವರಣ ಮಾಡಿತ್ತು. ಇದೀಗ ಈ ಫೋನಿನ ಹೊಸ ಅವತಾರ ರಿಲೀಸ್ ಮಾಡಿದೆ. ಭಾರತದಲ್ಲಿ ಇಂದು ಟೆಕ್ನೋ ಕ್ಯಾಮನ್ 20 ಆವಕಾಡೊ ಆರ್ಟ್ ಎಡಿಷನ್ (Tecno Camon 20 Avocado Art Edition) ಸ್ಮಾರ್ಟ್‌ಫೋನ್‌ ಹೊಸ ರೂಪಾಂತರವಾಗಿ ಬಿಡುಗಡೆ ಮಾಡಲಾಗಿದೆ. ಈ ಹ್ಯಾಂಡ್‌ಸೆಟ್ ಹಿಂಭಾಗದ ಪ್ಯಾನಲ್ ಕಲಾಕೃತಿಯೊಂದಿಗೆ ಮಾಡಲಾಗಿದೆ. ಈ ಫೋನಿನ ಬೆಲೆ, ಫೀಚರ್ಸ್ ಕುರಿತ ಮಾಹಿತಿ ಇಲ್ಲಿದೆ.

ಟೆಕ್ನೋ ಕ್ಯಾಮನ್ 20 ಆವಕಾಡೊ ಆರ್ಟ್ ಎಡಿಷನ್ ಬೆಲೆ:

ಟೆಕ್ನೋ ಕ್ಯಾಮನ್ 20 ಆವಕಾಡೊ ಆರ್ಟ್ ಎಡಿಷನ್ ಸ್ಮಾರ್ಟ್‌ಫೋನ್ ಹಸಿರು ಬಣ್ಣದಲ್ಲಿ ಮಾತ್ರ ಲಭ್ಯವಿದೆ. ಜೊತೆಗೆ ಒಂದು ಸ್ಟೋರೇಜ್ ಆಯ್ಕೆಯಲ್ಲಿ ಮಾತ್ರ ಖರೀದಿಗೆ ಸಿಗಲಿದೆ. ಇದರ 8GB RAM + 256GB ಸ್ಟೋರೇಜ್ ಸಾಮರ್ಥ್ಯಕ್ಕೆ 15,999 ರೂ. ನಿಗದಿ ಮಾಡಲಾಗಿದೆ. ಇದು ಪ್ರಸಿದ್ಧ ಇ ಕಾಮರ್ಸ್ ತಾಣವಾದ ಅಮೆಜಾನ್ ಮೂಲಕ ಮಾರಾಟ ಕಾಣಲಿದೆ. ಆದಾಗ್ಯೂ, ಇದು ಇ-ಕಾಮರ್ಸ್ ಸೈಟ್‌ನಲ್ಲಿ ಇನ್ನೂ ಪಟ್ಟಿ ಮಾಡಲಾಗಿಲ್ಲ. ಗ್ರಾಹಕರು ಚಿಲ್ಲರೆ ಅಂಗಡಿಗಳಿಂದ ಹ್ಯಾಂಡ್‌ಸೆಟ್ ಖರೀದಿಸಬಹುದು.

ಟೆಕ್ನೋ ಕ್ಯಾಮನ್ 20 ಆವಕಾಡೊ ಆರ್ಟ್ ಎಡಿಷನ್ ಫೀಚರ್ಸ್:

ಡ್ಯುಯಲ್-ಸಿಮ್ (ನ್ಯಾನೋ) ಟೆಕ್ನೋ ಕ್ಯಾಮನ್ 20 ಆವಕಾಡೊ ಆರ್ಟ್ ಎಡಿಷನ್ ಲೆದರ್ ಬ್ಯಾಕ್ ಅನ್ನು ಹೊಂದಿದೆ. ಇದು ಆಂಡ್ರಾಯ್ಡ್ 13-ಆಧಾರಿತ HiOS 13.0 ಔಟ್-ಆಫ್-ದಿ-ಬಾಕ್ಸ್‌ನಲ್ಲಿ ಕಾರ್ಯನಿರ್ವಹಿಸುತ್ತದೆ. 6.67-ಇಂಚಿನ ಪೂರ್ಣ-HD+ AMOLED ಪರದೆಯನ್ನು ಹೊಂದಿದೆ. ಈ ಫೋನ್ 12nm ಮೀಡಿಯಾಟೆಕ್ ಹಿಲಿಯೊ G85 SoC ಜೊತೆಗೆ 8GB RAM ನೊಂದಿಗೆ ಚಾಲಿತವಾಗಿದೆ.

ಇದನ್ನೂ ಓದಿ
Image
E Aadhaar Card: ಡಿಜಿಟಲ್ ಇ ಆಧಾರ್ ಕಾರ್ಡ್ ಡೌನ್​ಲೋಡ್ ಮಾಡಲು ಸಿಂಪಲ್ ಟಿಪ್ಸ್
Image
ವಿದೇಶದಲ್ಲಿ ಧೂಳೆಬ್ಬಿಸುತ್ತಿರುವ ರೆಡ್ಮಿ K60 ಆಲ್ಟ್ರಾ ಭಾರತದಲ್ಲಿ ಯಾವಾಗ ಬಿಡುಗಡೆ?
Image
Hotel Room: ಹೋಟೆಲ್​ನಲ್ಲಿ ಇರಬಹುದು ಗುಪ್ತ ಕ್ಯಾಮೆರಾ.. ಎಚ್ಚರಿಕೆ!!
Image
ಕೇವಲ 999 ರೂ. ವಿನ ಜಿಯೋ ಭಾರತ್ 4G ಫೋನ್ ಇದೀಗ ಖರೀದಿಗೆ ಲಭ್ಯ

ಕೆಲವೇ ದಿನ ಕಾಯಿರಿ: ಸೆಪ್ಟೆಂಬರ್​ನಲ್ಲಿ ಭಾರತಕ್ಕೆ ಬರುತ್ತಿರುವ ಸ್ಮಾರ್ಟ್​ಫೋನ್​ಗಳ ಪಟ್ಟಿ ನೋಡಿ

ಕ್ಯಾಮೆರಾ ವಿಚಾರಕ್ಕೆ ಬಂದರೆ, 64-ಮೆಗಾಪಿಕ್ಸೆಲ್ RGBW ಪ್ರಾಥಮಿಕ ಕ್ಯಾಮೆರಾ, 2-ಮೆಗಾಪಿಕ್ಸೆಲ್ ಡೆಪ್ತ್ ಸೆನ್ಸಾರ್ ಮತ್ತು QVGA ತೃತೀಯ ಕ್ಯಾಮೆರಾವನ್ನು ಒಳಗೊಂಡಿರುವ ಟ್ರಿಪಲ್ ಕ್ಯಾಮೆರಾ ಸೆಟಪ್‌ ಹೊಂದಿದೆ. ಮುಂಭಾಗದಲ್ಲಿ, ಸೆಲ್ಫಿ ಮತ್ತು ವಿಡಿಯೋ ಚಾಟ್‌ಗಳಿಗಾಗಿ 32-ಮೆಗಾಪಿಕ್ಸೆಲ್ ಕ್ಯಾಮೆರಾವನ್ನು ಅಳವಡಿಸಲಾಗಿದೆ.

33W ವೈರ್ಡ್ ಚಾರ್ಜಿಂಗ್‌ಗೆ ಬೆಂಬಲದೊಂದಿಗೆ 5,000mAh ಬ್ಯಾಟರಿಯನ್ನು ಹೊಂದಿದೆ. ಫೋನ್‌ನಲ್ಲಿನ ಸಂಪರ್ಕ ಆಯ್ಕೆಗಳಲ್ಲಿ 4G, Wi-Fi, ಬ್ಲೂಟೂತ್ 5, GPS ಮತ್ತು USB ಟೈಪ್-C ಪೋರ್ಟ್ ಸೇರಿವೆ. ಬಯೋಮೆಟ್ರಿಕ್ ದೃಢೀಕರಣಕ್ಕಾಗಿ ಇನ್-ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸಂವೇದಕವನ್ನು ಸಹ ಹೊಂದಿದೆ. ಹೆಚ್ಚುವರಿಯಾಗಿ, ಫೋನ್​ನಲ್ಲಿ 256GB ವರೆಗೆ ಆನ್‌ಬೋರ್ಡ್ ಸಂಗ್ರಹಣೆಯನ್ನು ನೀಡಲಾಗಿದೆ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ