- TV9 Kannada Kannada News Photos Reliance new Phone Jio Bharat 4G sale Started now in India via Amazon
ಕೇವಲ 999 ರೂ. ವಿನ ಜಿಯೋ ಭಾರತ್ 4G ಫೋನ್ ಇದೀಗ ಖರೀದಿಗೆ ಲಭ್ಯ
Jio Bharat 4G Phone sale Started: ಇಂದು ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಸಂಸ್ಥೆಯ ವಾರ್ಷಿಕ ಮಹಾ ಸಭೆ ನಡೆಯುತ್ತಿದೆ. ಇದರ ಜೊತೆಗೆ ಜಿಯೋ ಭಾರತ್ 4ಜಿ ಫೋನ್ ಇದೀಗ ಖರೀದಿಗೆ ಸಿಗುತ್ತಿದೆ. ಈ ಫೋನ್ನ ಬೆಲೆ ಕೇವಲ 999 ರೂ.. ಇ ಕಾಮರ್ಸ್ ತಾಣವಾದ ಅಮೆಜಾನ್ನಲ್ಲಿ ಈ ಫೋನ್ ಮಾರಾಟ ಕಾಣುತ್ತಿದೆ.
Updated on: Aug 28, 2023 | 2:54 PM

ರಿಲಯನ್ಸ್ ಜಿಯೋ ಇತ್ತೀಚೆಗಷ್ಟೆ ಭಾರತದಲ್ಲಿ ಜಿಯೋ ಭಾರತ್ ಹೆಸರಿನ ನೂತನ ಫೋನನ್ನು ಲಾಂಚ್ ಮಾಡಿತ್ತು. ವಿಶೇಷ ಎಂದರೆ ಈ ಫೋನ್ 4ಜಿ ಬೆಂಬಲ ಪಡೆದುಕೊಂಡಿದ್ದು, ಬೆಲೆ ಮಾತ್ರ ಕೇವಲ 999 ರೂ.. ಇದೀಗ ಅಮೆಜಾನ್ ಈ ಫೋನಿನ ಮಾರಾಟ ಆರಂಭವಾಗಿದೆ. ಇಂದು ಆಗಸ್ಟ್ 28 ಮಧ್ಯಾಹ್ನ 12 ಗಂಟೆಯಿಂದ ಜಿಯೋ ಭಾರತ್ 4ಜಿ ಫೋನ್ ಖರೀದಿಗೆ ಲಭ್ಯವಾಗುತ್ತಿದೆ.

ಭಾರತವನ್ನು ‘2G-ಮುಕ್ತ್ ಭಾರತ್’ ಮಾಡುವ ನಿಟ್ಟಿನಲ್ಲಿ ಜಿಯೋ ಈ ಮಹತ್ವದ ಫೋನನ್ನು ಬಿಡುಗಡೆ ಮಾಡಿದ್ದು, ಅತಿ ಕಡಿಮೆ ಬೆಲೆಗೆ ಜಿಯೋ ಭಾರತ್ 4ಜಿ ಫೋನ್ ಮಾರಾಟ ಕಾಣುತ್ತಿದೆ. ಗ್ರಾಹಕರು ಇದನ್ನು ರಿಲಯನ್ಸ್ ಡಿಜಿಟಲ್ ಸ್ಟೋರ್, ಜಿಯೋ ಮಾರ್ಟ್ ಸೇರಿದಂತೆ ರಿಟೇಲ್ ಸ್ಟೋರ್ಗಳನ್ನು ಖರೀದಿಸಬಹುದು.

ಜಿಯೋ ಭಾರತ್ ಫೋನ್ ನೋಡಲು ಇತರೆ ಫೀಚರ್ ಫೋನುಗಳ ರೀತಿಯಲ್ಲಿದೆ. ಕೀ-ಪೇಡ್ ಆಯ್ಕೆ ಇದ್ದು ಹಿಂಭಾಗ ಕ್ಯಾಮೆರಾ, ಸ್ಪೀಕರ್ ಜೊತೆಗೆ ಜಿಯೋ ಲೋಗೋ ಅಳವಡಿಸಲಾಗಿದೆ. ಭಾರತದಲ್ಲಿ ಎಲ್ಲಿಗೆ ಬೇಕಾದರೂ ಅನಿಯಮಿತ ಕರೆ ಮಾಡುವ ಅವಕಾಶ ಕಲ್ಪಿಸಲಾಗಿದೆ.

ಜಿಯೋ ಭಾರತ್ 4ಜಿ ಫೋನ್ನಲ್ಲಿ ಜಿಯೋ ಪೇ ಮೂಲಕ ಯುಪಿಐ ವಹಿಪಾಟು ನಡೆಸಬಹುದು. ಜಿಯೋ ಸಿನಿಮಾ, ಜಿಯೋ ಸಾವನ್ ಮತ್ತು ಎಫ್ಎಮ್ ರೆಡಿಯೋ ಸಪೋರ್ಟ್ ಮಾಡುತ್ತದೆ. ಒಟ್ಟು ಒಂದು ಮಿಲಿಯನ್ ಜಿಯೋ ಭಾರತ್ ಫೋನ್ ಮಾರುಕಟ್ಟೆಗೆ ಬಂದಿದೆ.

ಜಿಯೋ ಭಾರತ್ ಫೋನ್ಗಳಿಗೆ ಬೇಸ್ ರೀಚಾರ್ಜ್ ಪ್ಲಾನ್ ಅನ್ನು ಕೂಡ ಘೋಷಣೆ ಮಾಡಲಾಗಿದೆ. ಈ ರೀಚಾರ್ಜ್ ಪ್ಲಾನ್ ಬೆಲೆ ಕೇವಲ 123 ರೂ. ಆಗಿರಲಿದ್ದು, ಅನಿಯಮಿತ ಧ್ವನಿ ಕರೆಗಳು ಮತ್ತು 14GB ಡೇಟಾ ಪ್ರಯೋಜನವನ್ನು ಪಡೆಯಬಹುದು. ಇದು ಒಂದು ತಿಂಗಳ ವ್ಯಾಲಿಡಿಟಿಯನ್ನು ಹೊಂದಿದೆ.

ಇದರ ಜೊತೆಗೆ 1234 ರೂ. ವಿನ ಒಂದು ವರ್ಷದ ಪ್ಲಾನ್ ಕೂಡ ಇದ್ದು, ಇದರಲ್ಲಿ 168GB ಡೇಟಾ ನೀಡಲಾಗಿದೆ. ಅನಿಯಮಿತ ಕರೆ ಅವಕಾಶ ಕೂಡ ಇದೆ.

ಇದರ ನಡುವೆ ಇಂದು ರಿಲಯನ್ಸ್ ಇಂಡಸ್ಟ್ರೀಸ್ ಲಿ ಸಂಸ್ಥೆಯ ವಾರ್ಷಿಕ ಮಹಾ ಸಭೆ ನಡೆಯುತ್ತಿದೆ. ತನ್ನ ಉತ್ಪನ್ನ ಮತ್ತು ಬೆಲೆಗಳ ಮೂಲಕ ಮಾರುಕಟ್ಟೆಯನ್ನು ಸೀಳಿ ಮುನ್ನುಗ್ಗುವ ಪ್ರವೃತ್ತಿಯ ರಿಲಾಯನ್ಸ್ ಸಂಸ್ಥೆಯ ಇವತ್ತಿನ ಸಭೆಯಲ್ಲಿ ಸಹಜವಾದ ನಿರೀಕ್ಷೆಗಳಿವೆ. ರಿಲಯನ್ಸ್ ಮುಖ್ಯಸ್ಥ ಮುಕೇಶ್ ಅಂಬಾನಿ ಅವರು ಎಜಿಎಂ ಉದ್ದೇಶಿಸಿ ವಿಡಿಯೋ ಕಾನ್ಫೆರೆನ್ಸ್ ಮೂಲಕ ಮಾತನಾಡಲಿದ್ದಾರೆ. ಇದು ರಿಲಾಯನ್ಸ್ ಇಂಡಸ್ಟ್ರೀಸ್ನ 46ನೇ ಎಜಿಎಂ ಸಭೆ ಆಗಿದೆ.

ಆರ್ಐಎಲ್ ಸಭೆಯಿಂದ ಬೆಟ್ಟದಷ್ಟು ನಿರೀಕ್ಷೆಗಳಿವೆ. ಹೊಸದಾಗಿ ರೂಪುಗೊಂಡ ಜಿಯೋ ಫೈನಾನ್ಷಿಯಲ್ ಸರ್ವಿಸಸ್ ಸಂಸ್ಥೆಯ ಬಗ್ಗೆ ಸ್ಪಷ್ಟತೆ ಸಿಗಬಹುದು. ರಿಲಯನ್ಸ್ ಜಿಯೋದ ಹೊಸ 5ಜಿ ಪ್ಯಾಕೇಜ್ಗಳನ್ನು ಪ್ರಕಟಿಸುವ ಸಾಧ್ಯತೆ ಇದೆ. ಅಂತೆಯೆ ರಿಲಯನ್ಸ್ ಜಿಯೋದಿಂದ ಜಿಯೋ ಏರ್ಫೈಬರ್ ಉತ್ಪನ್ನ ಬಿಡುಗಡೆ ಆಗಬಹುದು. ಇದು ಫಿಕ್ಸೆಡ್ ವೈರ್ಲೆಸ್ ಅಕ್ಸೆಸ್ ಸಾಧನವಾಗಿದ್ದು, ಮಾರುಕಟ್ಟೆಯಲ್ಲಿರುವ ಇತರ ಇಂಥ ಸಾಧನಗಳಿಗಿಂತ ಶೇ. 20ರಷ್ಟು ಕಡಿಮೆಬೆಲೆಗೆ ಬಿಡುಗಡೆ ಆಗುವ ನಿರೀಕ್ಷೆ ಇದೆ.

Tv9 ಕನ್ನಡ ಡಿಜಿಟಲ್‌ನಲ್ಲಿ 2021ರ ಜುಲೈನಿಂದ ಕ್ರೀಡಾ ಹಾಗೂ ತಂತ್ರಜ್ಞಾನ ಪತ್ರಕರ್ತನಾಗಿ ಕೆಲಸ ಮಾಡುತ್ತಿದ್ದೇನೆ. ಡಿಜಿಟಲ್ ವಿಭಾಗದಲ್ಲಿ 6 ವರ್ಷ ಅನುಭವ. ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನವ. ಕ್ರೀಡಾ ಸುದ್ದಿ, ಕ್ರೀಡಾ ಲೇಖನ, ಟೆಕ್ನಾಲಜಿ, ಸಿನಿಮಾ ಸುದ್ದಿ ಬರೆಯುವುದು ನನ್ನ ಆಸಕ್ತದಾಯಕ ವಿಷಯಗಳು.
Read More



