ನೀರಜ್ ಚೋಪ್ರಾ ಕುಟುಂಬ: ನೀರಜ್ ಸಾಮಾನ್ಯ ಹರ್ಯಾನ್ವಿ ಕುಟುಂಬಕ್ಕೆ ಸೇರಿದವರಾಗಿದ್ದು, ಅವರ ಕುಟುಂಬದ ಹೆಚ್ಚಿನ ಸದಸ್ಯರು ಕೃಷಿಕರಾಗಿ ಜೀವನ ನಡೆಸುತ್ತಿದ್ದಾರೆ. ಚೋಪ್ರಾ ಅವರದ್ದು ಅವಿಭಕ್ತ ಕುಟುಂಬವಾಗಿದ್ದು, ಅವರ ತಂದೆಯ ಎಲ್ಲಾ ಸಹೋದರರು ಒಟ್ಟಿಗೆ ವಾಸಿಸುತ್ತಿದ್ದಾರೆ. ನೀರಜ್ ಅವರ ತಂದೆ ಸತೀಶ್ ಕುಮಾರ್ ಕೃಷಿಕರಾಗಿದ್ದರೆ, ತಾಯಿ ಸರೋಜ ದೇವಿ ಗೃಹಿಣಿಯಾಗಿದ್ದಾರೆ.