ಕೆಲವೇ ದಿನ ಕಾಯಿರಿ: ಸೆಪ್ಟೆಂಬರ್​ನಲ್ಲಿ ಭಾರತಕ್ಕೆ ಬರುತ್ತಿರುವ ಸ್ಮಾರ್ಟ್​ಫೋನ್​ಗಳ ಪಟ್ಟಿ ನೋಡಿ

Smartphones Launches in September 2023: ಸೆಪ್ಟೆಂಬರ್​ನಲ್ಲಿ ಆ್ಯಪಲ್ ಕಂಪನಿಯ ಬಹುನಿರೀಕ್ಷಿತ ಐಫೋನ್ 15 ಸರಣಿ ಅನಾವರಣಗೊಳ್ಳಲಿದೆ. ಇದರ ಜೊತೆಗೆ ಮೋಟೋರೊಲಾ, ಹಾನರ್, ಸ್ಯಾಮ್​ಸಂಗ್ ಕಂಪನಿಯ ಫೋನ್ ಕೂಡ ಬಿಡುಗಡೆ ಆಗಲಿದೆ. ಇಲ್ಲಿದೆ ನೋಡಿ ಸೆಪ್ಟೆಂಬರ್​ನಲ್ಲಿ ಭಾರತಕ್ಕೆ ಬರುತ್ತಿರುವ ಸ್ಮಾರ್ಟ್​ಫೋನ್​ಗಳ ಪಟ್ಟಿ.

ಕೆಲವೇ ದಿನ ಕಾಯಿರಿ: ಸೆಪ್ಟೆಂಬರ್​ನಲ್ಲಿ ಭಾರತಕ್ಕೆ ಬರುತ್ತಿರುವ ಸ್ಮಾರ್ಟ್​ಫೋನ್​ಗಳ ಪಟ್ಟಿ ನೋಡಿ
Upcoming Smartphones
Follow us
|

Updated on: Aug 28, 2023 | 1:58 PM

ಆಗಸ್ಟ್ ತಿಂಗಳಲ್ಲಿ ಮಾರುಕಟ್ಟೆಗೆ ಅನೇಕ ಸ್ಮಾರ್ಟ್​ಫೋನ್​ಗಳು ಲಗ್ಗೆಯಿಟ್ಟಿದೆ. ಇಂದುಕೂಡ ವಿವೋ ತನ್ನ ವಿ ಸರಣಿ ಅಡಿಯಲ್ಲಿ ವಿ29ಇ ಫೋನನ್ನು ಅನಾವರಣ ಮಾಡಿದೆ. ಇದೀಗ ಸೆಪ್ಟೆಂಬರ್ 2023 ರಲ್ಲಿ ಕೂಡ ಅನೇಕ ಮೊಬೈಲ್​ಗಳು ಮಾರುಕಟ್ಟೆಯನ್ನು ಪ್ರವೇಶಿಸಲಿದೆ. ಸೆಪ್ಟೆಂಬರ್ ತಿಂಗಳು ಸ್ಮಾರ್ಟ್​ಫೋನ್ ಪ್ರಿಯರಿಗೆ ವಿಶೇಷ ಎಂದೇ ಹೇಳಬಹುದು. ಯಾಕೆಂದರೆ ಸೆಪ್ಟೆಂಬರ್​ನಲ್ಲಿ ಆ್ಯಪಲ್ ಕಂಪನಿಯ ಬಹುನಿರೀಕ್ಷಿತ ಐಫೋನ್ 15 ಸರಣಿ (Apple iPhone 15 Series) ಅನಾವರಣಗೊಳ್ಳಲಿದೆ. ಇದರ ಜೊತೆಗೆ ಮೋಟೋರೊಲಾ, ಹಾನರ್, ಸ್ಯಾಮ್​ಸಂಗ್ ಕಂಪನಿಯ ಫೋನ್ ಕೂಡ ಬಿಡುಗಡೆ ಆಗಲಿದೆ. ಇಲ್ಲಿದೆ ನೋಡಿ ಸೆಪ್ಟೆಂಬರ್​ನಲ್ಲಿ ಭಾರತಕ್ಕೆ ಬರುತ್ತಿರುವ ಸ್ಮಾರ್ಟ್​ಫೋನ್​ಗಳ ಪಟ್ಟಿ.

ಐಫೋನ್ 15 ಸರಣಿ:

ಆ್ಯಪಲ್ ತನ್ನ ಇತ್ತೀಚಿನ ಐಫೋನ್ 15 ಸರಣಿಯನ್ನು ಅನಾವರಣಗೊಳಿಸಲು ತಯಾರಿ ನಡೆಸುತ್ತಿದೆ. ಸೆಪ್ಟೆಂಬರ್ 13 ರಂದು ಐಫೋನ್ 15, ಐಫೋನ್ 15 ಪ್ಲಸ್, ಐಫೋನ್ 15 ಪ್ರೊ ಮತ್ತು ಐಫೋನ್ 15 ಪ್ರೊ ಮ್ಯಾಕ್ಸ್ ರಿಲೀಸ್ ಆಗಲಿದೆ. ಸೋರಿಕೆ ಆಗಿರುವ ಮಾಹಿತಿಯ ಪ್ರಕಾರ ಈ ಬಾರಿಯ ಐಫೋನ್​ನಲ್ಲಿ USB-C ಟೈಪ್ ಚಾರ್ಜಿಂಗ್‌ ಫೋರ್ಟ್ ಇರಲಿದೆಯಂತೆ. 48MP ಮುಖ್ಯ ಕ್ಯಾಮೆರಾ ಸಂವೇದಕವನ್ನು ಒಳಗೊಂಡಂತೆ ಸುಧಾರಿತ ಕ್ಯಾಮೆರಾಗಳು ಮತ್ತು ಬಯೋನಿಕ್ A16 ಚಿಪ್‌ಸೆಟ್ ಇರುವ ಸಾಧ್ಯತೆ ಇದೆ.

ಹಾನರ್ 90:

ಮೂರು ವರ್ಷಗಳ ವಿರಾಮದ ನಂತರ, ಚೀನೀ ಬ್ರಾಂಡ್ ಹಾನರ್ ಭಾರತದಲ್ಲಿ ಹಾನರ್ 90 ನೊಂದಿಗೆ ಪುನರಾಗಮನವನ್ನು ಮಾಡಲು ಸಿದ್ಧವಾಗಿದೆ. ಈಗಾಗಲೇ ಚೀನಾದಲ್ಲಿ ಹಾನರ್ 90 ಮತ್ತು ಹಾನರ್ 90 ಪ್ರೊ ಬಿಡುಗಡೆ ಆಗಿದ್ದು, ಸೆಪ್ಟೆಂಬರ್‌ನಲ್ಲಿ ಭಾರತಕ್ಕೆ ಬರಲಿದೆ. ಈ ಫೋನ್​ನಲ್ಲಿ 200 ಮೆಗಾ ಪಿಕ್ಸೆಲ್ ಕ್ಯಾಮೆರಾ ಇರುವ ಸಾಧ್ಯತೆ ಇದೆ. ಇದರ ಬೆಲೆ ಅಂದಾಜಿ 30,000 ರೂ. ಎಂದು ಹೇಳಲಾಗಿದೆ.

ಇದನ್ನೂ ಓದಿ
Image
ಬಜೆಟ್ ಬೆಲೆಗೆ ಹುಬ್ಬೇರಿಸುವ ಫೀಚರ್ಸ್: ಭಾರತದಲ್ಲಿ ಬಹುನಿರೀಕ್ಷಿತ ವಿವೋ V29e ಫೋನ್ ಬಿಡುಗಡೆ
Image
ಭಾರತಕ್ಕೆ ದೊಡ್ಡದಾಗಿ ಕಮ್​ಬ್ಯಾಕ್ ಮಾಡುತ್ತಿದೆ ಹಾನರ್: 150 ಸರ್ವಿಸ್ ಸೆಂಟರ್ ಓಪನ್
Image
ಸ್ಮಾರ್ಟ್​ಫೋನ್ ಬ್ಯಾಟರಿ ಏಕೆ ಉಬ್ಬುತ್ತದೆ ಗೊತ್ತೇ?: ಕಾರಣ ತಿಳಿದರೆ ಶಾಕ್ ಆಗುತ್ತೀರಿ..
Image
ಬೆಲೆ ಇಳಿಕೆ: ಕಡಿಮೆ ಬೆಲೆಗೆ ಖರೀದಿಸಿ ಒನ್‌ಪ್ಲಸ್‌ ನಾರ್ಡ್‌ CE 2 ಲೈಟ್‌ 5G ಫೋನ್: ಆಫರ್ ಮಿಸ್ ಮಾಡ್ಬೇಡಿ

ತಕ್ಷಣವೇ ವಾಟ್ಸ್​ಆ್ಯಪ್ ಅಪ್ಡೇಟ್ ಮಾಡಿ: ಬಂದಿದೆ HD ವಿಡಿಯೋ ಫೀಚರ್

ಸ್ಯಾಮ್​ಸಂಗ್ ಗ್ಯಾಲಕ್ಸಿ S23 FE:

ಗ್ಯಾಲಕ್ಸಿ S23ಯ ಫ್ಯಾನ್ ಎಡಿಷನ್ ಸ್ಮಾರ್ಟ್​ಫೋನ್ ಸ್ಯಾಮ್​ಸಂಗ್ ಗ್ಯಾಲಕ್ಸಿ S23 FE ಆಗಿದೆ. ಈ ವರ್ಷದ ಆರಂಭದಿಂದಲೂ FE ಮಾದರಿ ಬಗ್ಗೆ ಒಂದೊಂದೆ ಮಾಹಿತಿ ಸೋರಿಕೆ ಆಗುತ್ತಿದ್ದವು. ಈ ಫೋನ್ ಸೆಪ್ಟೆಂಬರ್​ನಲ್ಲಿ ಬಿಡುಗಡೆ ಆಗಲಿದೆ. ಇದು ಕ್ವಾಲ್ಕಂ ಸ್ನಾಪ್​ಡ್ರಾಗನ್ 8 Gen 1 ಅಥವಾ ಎಕ್ಸಿನೊಸ್ 2200 ಪ್ರೊಸೆಸರ್​ನಿಂದ ಚಾಲಿತವಾಗುವ ನಿರೀಕ್ಷೆಯಿದೆ. ಆಂಡ್ರಾಯ್ಡ್ 13-ಆಧಾರಿತ OneUI 5.1 ನಲ್ಲಿ ಕಾರ್ಯನಿರ್ವಹಿಸುತ್ತದೆ, 25W ವೇಗದ ಚಾರ್ಜಿಂಗ್‌ನೊಂದಿಗೆ 4,500mAh ಬ್ಯಾಟರಿಯನ್ನು ಹೊಂದಿದೆ.

ಮೋಟೋ G84 5G:

ಮೋಟೋರೊಲಾ ಸೆಪ್ಟೆಂಬರ್ 1 ರಂದು ಈ ಸ್ಮಾರ್ಟ್​ಫೋನನ್ನು ಭಾರತದಲ್ಲಿ ಬಿಡುಗಡೆ ಮಾಡಲು ಸಿದ್ಧವಾಗಿದೆ. ಇದು ಮೋಟೋ G73 5G ಗಿಂತ ಅಪ್‌ಗ್ರೇಡ್ ಆಗುವ ನಿರೀಕ್ಷೆಯಿದೆ. ಕ್ವಾಲ್ಕಂ ಸ್ನಾಪ್​ಡ್ರಾಗನ್ 695 SoC ಅನ್ನು ಒಳಗೊಂಡಿರುತ್ತದೆ, ಜೊತೆಗೆ 12GB RAM ಮತ್ತು 256GB ಸಂಗ್ರಹಣೆಯನ್ನು ಹೊಂದಿರುತ್ತದೆ. ಇದು ಆಂಡ್ರಾಯ್ಡ್ 13 OS ನಲ್ಲಿ ಕಾರ್ಯನಿರ್ವಹಿಸುತ್ತದೆ. 50MP ಟ್ರಿಪಲ್ ಕ್ಯಾಮೆರಾ ರಚನೆಯನ್ನು ಹೊಂದಿದೆ. ಇದು 30W ವೇಗದ ಚಾರ್ಜಿಂಗ್‌ನೊಂದಿಗೆ 5,000mAh ಬ್ಯಾಟರಿಯನ್ನು ಸಹ ಒಳಗೊಂಡಿದೆ.

ಮೋಟೋ G54 5G:

ಮೋಟೋ G54 5G ಕೂಡ ಸೆಪ್ಟೆಂಬರ್​ನಲ್ಲಿ ಬಿಡುಗಡೆ ಆಗಲಿದೆ. ಇದು ಮೋಟೋ G53 5G ಯ ಅಪ್‌ಗ್ರೇಡ್ ವರ್ಷನ್ ಆಗಿದೆ. ಸೋರಿಕೆಯಾದ ಚಿತ್ರಗಳು ಮತ್ತು ವದಂತಿಗಳ ಪ್ರಕಾರ ಈ ಫೋನ್ ಫೋನ್ 120Hz ರಿಫ್ರೆಶ್ ದರದೊಂದಿಗೆ 6.5-ಇಂಚಿನ ಪೂರ್ಣ-HD+ ಡಿಸ್ ಪ್ಲೇ, 8GB RAM ಮತ್ತು 256GB ಸಂಗ್ರಹಣೆ, OIS ನೊಂದಿಗೆ 50-ಮೆಗಾಪಿಕ್ಸೆಲ್ ಪ್ರಾಥಮಿಕ ಸಂವೇದಕ ಮತ್ತು 16-ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಸಂವೇದಕವನ್ನು ಹೊಂದಿದೆ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ

ರಾಜಕಾಲುವೆ ಮುಚ್ಚಿರುವ ಕಾರಣ ಐದಾರು ಮನೆಗಳಿಗೆ ನುಗ್ಗಿದ ಮಳೆ ನೀರು
ರಾಜಕಾಲುವೆ ಮುಚ್ಚಿರುವ ಕಾರಣ ಐದಾರು ಮನೆಗಳಿಗೆ ನುಗ್ಗಿದ ಮಳೆ ನೀರು
‘ಬಿಗ್​ಬಾಸ್ ಅನ್ನು ಹಾಳು ಮಾಡಲು ನಿಮ್ಮಪ್ಪನಾಣೆ ಸಾಧ್ಯವಿಲ್ಲ‘
‘ಬಿಗ್​ಬಾಸ್ ಅನ್ನು ಹಾಳು ಮಾಡಲು ನಿಮ್ಮಪ್ಪನಾಣೆ ಸಾಧ್ಯವಿಲ್ಲ‘
ಸಿದ್ದರಾಮಯ್ಯ ಪಾರ್ವತಿ ಅವರನ್ನು ಮದುವೆ ಆಗಿದ್ದೇ ತಪ್ಪಾ? ಸಿಎಂ ಇಬ್ರಾಹಿಂ
ಸಿದ್ದರಾಮಯ್ಯ ಪಾರ್ವತಿ ಅವರನ್ನು ಮದುವೆ ಆಗಿದ್ದೇ ತಪ್ಪಾ? ಸಿಎಂ ಇಬ್ರಾಹಿಂ
ಮಹಾರಾಷ್ಟ್ರದ ದೇವಸ್ಥಾನದಲ್ಲಿ ಡೋಲು ಬಾರಿಸಿದ ಪ್ರಧಾನಿ ಮೋದಿ
ಮಹಾರಾಷ್ಟ್ರದ ದೇವಸ್ಥಾನದಲ್ಲಿ ಡೋಲು ಬಾರಿಸಿದ ಪ್ರಧಾನಿ ಮೋದಿ
ಮೈಸೂರು ದಸರಾದಲ್ಲಿ ಗಿಡ್ಡ ಕಾಲಿನ ಬಂಡೂರು ಕುರಿಯೇ ಆಕರ್ಷಣೆ
ಮೈಸೂರು ದಸರಾದಲ್ಲಿ ಗಿಡ್ಡ ಕಾಲಿನ ಬಂಡೂರು ಕುರಿಯೇ ಆಕರ್ಷಣೆ
ಲಾಯರ್ ಜಗದೀಶ್ ವಿಚಾರಣೆ ನಡೆಸುವ ಸುಳಿವು ಕೊಟ್ಟ ಕಿಚ್ಚ: ವಿಡಿಯೋ
ಲಾಯರ್ ಜಗದೀಶ್ ವಿಚಾರಣೆ ನಡೆಸುವ ಸುಳಿವು ಕೊಟ್ಟ ಕಿಚ್ಚ: ವಿಡಿಯೋ
ಪಿಡಿಒ, ಕಾರ್ಯದರ್ಶಿಗಳ ಹೋರಾಟಕ್ಕೆ ಬೆಂಬಲ ಘೋಷಿಸಿದ ಕುಮಾರಸ್ವಾಮಿ,ವಿಜಯೇಂದ್ರ
ಪಿಡಿಒ, ಕಾರ್ಯದರ್ಶಿಗಳ ಹೋರಾಟಕ್ಕೆ ಬೆಂಬಲ ಘೋಷಿಸಿದ ಕುಮಾರಸ್ವಾಮಿ,ವಿಜಯೇಂದ್ರ
ಶನಿವಾರ ಭಕ್ತರ ಪರಾಕಾಷ್ಠೆ-ತಿಮ್ಮಪ್ಪನ ದರ್ಶನಕ್ಕೆ ಕಾಯಬೇಕು 18 ಗಂಟೆ...
ಶನಿವಾರ ಭಕ್ತರ ಪರಾಕಾಷ್ಠೆ-ತಿಮ್ಮಪ್ಪನ ದರ್ಶನಕ್ಕೆ ಕಾಯಬೇಕು 18 ಗಂಟೆ...
ನಾಮಿನೇಷನ್ ತೂಗುಗತ್ತಿ ಜೊತೆ ಕುತೂಹಲ ಮೂಡಿಸಿದ ಕಿಚ್ಚನ ಪಂಚಾಯ್ತಿ
ನಾಮಿನೇಷನ್ ತೂಗುಗತ್ತಿ ಜೊತೆ ಕುತೂಹಲ ಮೂಡಿಸಿದ ಕಿಚ್ಚನ ಪಂಚಾಯ್ತಿ
Daily Devotional: ನವರಾತ್ರಿ ಮೂರನೇ ದಿನ ಚಂದ್ರಘಂಟಾ ದೇವಿ ಆರಾಧನೆ
Daily Devotional: ನವರಾತ್ರಿ ಮೂರನೇ ದಿನ ಚಂದ್ರಘಂಟಾ ದೇವಿ ಆರಾಧನೆ