ಬಜೆಟ್ ಬೆಲೆಗೆ ಹುಬ್ಬೇರಿಸುವ ಫೀಚರ್ಸ್: ಭಾರತದಲ್ಲಿ ಬಹುನಿರೀಕ್ಷಿತ ವಿವೋ V29e ಫೋನ್ ಬಿಡುಗಡೆ

Vivo V29e launched in India: ಭಾರತದಲ್ಲಿ ಇಂದು ಮಧ್ಯಾಹ್ನ ಬಹುನಿರೀಕ್ಷಿತ ವಿವೋ V29e ಸ್ಮಾರ್ಟ್​ಫೋನ್ ಬಿಡುಗಡೆ ಆಗಿದೆ. ಇದನ್ನು ಬಜೆಟ್ ಪ್ರಿಯರಿಗಾಗಿ ಅನಾವರಣ ಮಾಡಲಾಗಿದೆ. ಹೀಗದಿದ್ದರೂ ಈ ಫೋನ್​ನಲ್ಲಿ ಬಲಿಷ್ಠ ಪ್ರೊಸೆಸರ್, 50 ಮೆಗಾ ಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಸೇರಿದಂತೆ, ಬಣ್ಣವನ್ನು ಬದಲಾಯಿಸುವ ತಂತ್ರಜ್ಞಾನ ಅಳವಡಿಸಲಾಗಿದೆ.

ಬಜೆಟ್ ಬೆಲೆಗೆ ಹುಬ್ಬೇರಿಸುವ ಫೀಚರ್ಸ್: ಭಾರತದಲ್ಲಿ ಬಹುನಿರೀಕ್ಷಿತ ವಿವೋ V29e ಫೋನ್ ಬಿಡುಗಡೆ
Vivo V29e
Follow us
|

Updated on: Aug 28, 2023 | 12:57 PM

ಕಳೆದ ಒಂದು ವಾರದಿಂದ ಭಾರತೀಯ ಟೆಕ್ ಮಾರುಕಟ್ಟೆಯಲ್ಲಿ ಸಾಕಷ್ಟು ರೋಚಕತೆ ಸೃಷ್ಟಿಸಿದ್ದ ವಿವೋ ಕಂಪನಿಯ ಹೊಸ ಸ್ಮಾರ್ಟ್​ಫೋನ್ ವಿವೋ ವಿ29ಇ (Vivo V29e) ಇದೀಗ ಬಿಡುಗಡೆ ಆಗಿದೆ. ಇಂದು ಮಧ್ಯಾಹ್ಹ 12 ಗಂಟೆಗೆ ವಿವೋ ತನ್ನ V-ಸರಣಿ ಅಡಿಯಲ್ಲಿ ಫೋಟೋ ಪ್ರಿಯರಿಗೆ ಹಾಗೂ ಬಜೆಟ್-ಕೇಂದ್ರಿತ ಗ್ರಾಹಕರಿಗಾಗಿ ಈ ನೂತನ ಫೋನನ್ನು ಅನಾವರಣ ಮಾಡಿದೆ. ಕಡಿಮೆ ಬೆಲೆಯಾಗಿದ್ದರೂ ಈ ಫೋನ್​ನಲ್ಲಿ ಹುಬ್ಬೇರಿಸುವಂತಹ ಫೀಚರ್​ಗಳು ಅಡಕವಾಗಿದೆ. ಹಾಗಾದರೆ ವಿವೋ V29e ಫೋನಿನ ಬೆಲೆ ಎಷ್ಟು?, ಏನೆಲ್ಲ ಫೀಚರ್ಸ್ ಇದೆ ಎಂಬುದನ್ನು ನೋಡೋಣ.

ಭಾರತದಲ್ಲಿ ವಿವೋ V29e ಬೆಲೆ:

ವಿವೋ V29e ಸ್ಮಾರ್ಟ್​ಫೋನ್ ದೇಶದಲ್ಲಿ ಎರಡು ಸ್ಟೋರೇಜ್ ಕಾನ್ಫಿಗರೇಶನ್‌ಗಳಲ್ಲಿ ರಿಲೀಸ್ ಆಗಿದೆ. ಇದರ 8GB RAM ಮತ್ತು 128GB ಸ್ಟೋರೇಜ್ ಆಯ್ಕೆಗೆ 26,999 ರೂ. ನಿಗದಿ ಮಾಡಲಾಗಿದೆ. ಅಂತೆಯೆ 8GB RAM ಮತ್ತು 256GB ಸ್ಟೋರೇಜ್ ರೂಪಾಂತರಕ್ಕೆ 28,999 ರೂ. ಇದೆ. ಈ ಫೋನ್ ಕೆಂಪು ಅಥವಾ ನೀಲಿ ಬಣ್ಣಗಳ ಆಯ್ಕೆಯಲ್ಲಿ ಬಂದಿದೆ. ವಿಶೇಷವಾಗಿ ಆರ್ಟಿಸ್ಟಿಕ್ ಕೆಂಪು ಆಯ್ಕೆಯ ಬಣ್ಣವನ್ನು ಬದಲಾಯಿಸುವ ತಂತ್ರಜ್ಞಾನ ಅಳವಡಿಸಲಾಗಿದೆ.

ಇದನ್ನೂ ಓದಿ
Image
ಭಾರತಕ್ಕೆ ದೊಡ್ಡದಾಗಿ ಕಮ್​ಬ್ಯಾಕ್ ಮಾಡುತ್ತಿದೆ ಹಾನರ್: 150 ಸರ್ವಿಸ್ ಸೆಂಟರ್ ಓಪನ್
Image
ಸ್ಮಾರ್ಟ್​ಫೋನ್ ಬ್ಯಾಟರಿ ಏಕೆ ಉಬ್ಬುತ್ತದೆ ಗೊತ್ತೇ?: ಕಾರಣ ತಿಳಿದರೆ ಶಾಕ್ ಆಗುತ್ತೀರಿ..
Image
ಬೆಲೆ ಇಳಿಕೆ: ಕಡಿಮೆ ಬೆಲೆಗೆ ಖರೀದಿಸಿ ಒನ್‌ಪ್ಲಸ್‌ ನಾರ್ಡ್‌ CE 2 ಲೈಟ್‌ 5G ಫೋನ್: ಆಫರ್ ಮಿಸ್ ಮಾಡ್ಬೇಡಿ
Image
ತಕ್ಷಣವೇ ವಾಟ್ಸ್​ಆ್ಯಪ್ ಅಪ್ಡೇಟ್ ಮಾಡಿ: ಬಂದಿದೆ HD ವಿಡಿಯೋ ಫೀಚರ್

ವಿವೋ V29e ಕುರಿತು ವಿವೋ ಮಾಡಿರುವ ಟ್ವೀಟ್:

ಹೊಸದಾಗಿ ಬಿಡುಗಡೆ ಮಾಡಲಾದ ಈ ಸ್ಮಾರ್ಟ್‌ಫೋನ್ ಮುಂಗಡ-ಆರ್ಡರ್‌ಗಳಿಗೆ ಲಭ್ಯವಿದೆ. ಸೆಪ್ಟೆಂಬರ್ 7 ರಿಂದ ಕಂಪನಿಯ ಅಧಿಕೃತ ವೆಬ್‌ಸೈಟ್ ಮತ್ತು ರಿಟೇಲ್ ಸ್ಟೋರ್‌ಗಳ ಜೊತೆಗೆ ಪ್ರಸಿದ್ಧ ಇ ಕಾಮರ್ಸ್ ತಾಣವಾದ ಫ್ಲಿಪ್‌ಕಾರ್ಟ್ ಮೂಲಕ ಖರೀದಿಗೆ ಸಿಗಲಿದೆ.

ಕಡಿಮೆ ಬೆಲೆಯ 5G ಫೋನ್​ಗಳು: ಇಲ್ಲಿದೆ 15,000 ರೂ. ಒಳಗಿನ ಬೆಸ್ಟ್ ಸ್ಮಾರ್ಟ್​ಫೋನ್ಸ್

ವಿವೋ V29e ಫೀಚರ್ಸ್:

ವಿವೋ V29e ಸ್ಮಾರ್ಟ್​ಫೋನ್ ರಿಯಲ್ ಮಿ, ಮೋಟೋರೊಲಾ, ಲಾವಾ ಬ್ರ್ಯಾಂಡ್‌ಗಳ ಫೋನ್​ನಲ್ಲಿರುವಂತೆ ನಯವಾದ ಫ್ರೇಮ್ ಮತ್ತು ಬಾಗಿದ ವಿನ್ಯಾಸ ಹೊಂದಿದೆ. ಇದರಲ್ಲಿ ಹೆಚ್ಚಿನ ರಿಫ್ರೆಶ್ ದರದೊಂದಿಗೆ ಪೂರ್ಣ-HD+ ರೆಸಲ್ಯೂಶನ್ (2400×1080 ಪಿಕ್ಸೆಲ್‌ಗಳು) ಜೊತೆಗೆ 6.73-ಇಂಚಿನ AMOLED ಡಿಸ್ ಪ್ಲೇ ಇದೆ. ಮುಂಭಾಗದ ಪಂಚ್ ಹೋಲ್ ಕಟೌಟ್ ಒಳಗೆ 50-ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾವನ್ನು ಒಳಗೊಂಡಿದೆ. ಇದು ಆಕರ್ಷಕವಾಗಿದ್ದು ಉತ್ತಮ ಫೋಕಸ್‌ಗಾಗಿ “ಐ ಆಟೋ ಫೋಕಸ್” ಆಯ್ಕೆ ನೀಡಲಾಗಿದೆ. ಇನ್ನು ಈ ಸ್ಮಾರ್ಟ್​ಫೋನ್​ನಲ್ಲಿ ಕ್ವಾಲ್ಕಮ್​ನ ಸ್ಮಾಪ್​ಡ್ರಾಗನ್ 695 SoC ಪ್ರೊಸೆಸರ್ ಅನ್ನು ಅಳವಡಿಸಲಾಗಿದೆ.

ಈ ಫೋನಿನ ಹಿಂಭಾಗ ಎರಡು ಕ್ಯಾಮೆರಾ ಸಂವೇದಕಗಳನ್ನು ಅಳವಡಿಸಲಾಗಿದೆ. ಇದು 64-ಮೆಗಾಪಿಕ್ಸೆಲ್ OIS ಕ್ಯಾಮೆರಾ ಮತ್ತು 8-ಮೆಗಾಪಿಕ್ಸೆಲ್ ವೈಡ್-ಆಂಗಲ್ ಕ್ಯಾಮೆರಾ ಆಗಿದೆ. ಪ್ರೀಮಿಯಂ ಲುಕ್‌ಗಾಗಿ ಹಿಂಭಾಗದಲ್ಲಿ ಗ್ಲಾಸ್ ಫಿನಿಶ್ ಕೂಡ ಇದೆ. ಕ್ಯಾಮೆರಾ ಅಪ್ಲಿಕೇಶನ್ ಪೋರ್ಟ್ರೇಟ್, ಮೈಕ್ರೋ ಮೂವಿ, ಹೈ-ರೆಸಲ್ಯೂಶನ್, ಪ್ಯಾನೋ, ಸ್ಲೋ-ಮೋ, ಡಬಲ್ ಎಕ್ಸ್‌ಪೋಸರ್, ಡ್ಯುಯಲ್ ವ್ಯೂ, ಸೂಪರ್‌ಮೂನ್ ಮತ್ತು ಲೈಟ್ ಎಫೆಕ್ಟ್‌ಗಳನ್ನು ಒಳಗೊಂಡಿದೆ.

5000mAh ಬ್ಯಾಟರಿ ಶಕ್ತಿ ನೀಡಲಾಗಿದ್ದು, 44W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಕಂಪನಿಯು ಬಾಕ್ಸ್‌ನಲ್ಲಿ ಚಾರ್ಜರ್ ಅನ್ನು ಸಹ ನೀಡುತ್ತದೆ. ಇತರ ಪ್ರಮುಖ ವೈಶಿಷ್ಟ್ಯಗಳೆಂದರೆ 5G ಸಪೋರ್ಟ್ ಮಾಡುತ್ತದೆ, ಟೈಪ್-C ಚಾರ್ಜಿಂಗ್ ಪೋರ್ಟ್, ಡ್ಯುಯಲ್-ಸಿಮ್ ಕಾರ್ಡ್ ಸ್ಲಾಟ್, ಆಂಡ್ರಾಯ್ಡ್ 13-ಆಧಾರಿತ Funtouch OS ಮತ್ತು ಇನ್-ಡಿಸ್ ಪ್ಲೇ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಆಯ್ಕೆಯನ್ನು ನೀಡಲಾಗಿದೆ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ

ರಾಜಕಾಲುವೆ ಮುಚ್ಚಿರುವ ಕಾರಣ ಐದಾರು ಮನೆಗಳಿಗೆ ನುಗ್ಗಿದ ಮಳೆ ನೀರು
ರಾಜಕಾಲುವೆ ಮುಚ್ಚಿರುವ ಕಾರಣ ಐದಾರು ಮನೆಗಳಿಗೆ ನುಗ್ಗಿದ ಮಳೆ ನೀರು
‘ಬಿಗ್​ಬಾಸ್ ಅನ್ನು ಹಾಳು ಮಾಡಲು ನಿಮ್ಮಪ್ಪನಾಣೆ ಸಾಧ್ಯವಿಲ್ಲ‘
‘ಬಿಗ್​ಬಾಸ್ ಅನ್ನು ಹಾಳು ಮಾಡಲು ನಿಮ್ಮಪ್ಪನಾಣೆ ಸಾಧ್ಯವಿಲ್ಲ‘
ಸಿದ್ದರಾಮಯ್ಯ ಪಾರ್ವತಿ ಅವರನ್ನು ಮದುವೆ ಆಗಿದ್ದೇ ತಪ್ಪಾ? ಸಿಎಂ ಇಬ್ರಾಹಿಂ
ಸಿದ್ದರಾಮಯ್ಯ ಪಾರ್ವತಿ ಅವರನ್ನು ಮದುವೆ ಆಗಿದ್ದೇ ತಪ್ಪಾ? ಸಿಎಂ ಇಬ್ರಾಹಿಂ
ಮಹಾರಾಷ್ಟ್ರದ ದೇವಸ್ಥಾನದಲ್ಲಿ ಡೋಲು ಬಾರಿಸಿದ ಪ್ರಧಾನಿ ಮೋದಿ
ಮಹಾರಾಷ್ಟ್ರದ ದೇವಸ್ಥಾನದಲ್ಲಿ ಡೋಲು ಬಾರಿಸಿದ ಪ್ರಧಾನಿ ಮೋದಿ
ಮೈಸೂರು ದಸರಾದಲ್ಲಿ ಗಿಡ್ಡ ಕಾಲಿನ ಬಂಡೂರು ಕುರಿಯೇ ಆಕರ್ಷಣೆ
ಮೈಸೂರು ದಸರಾದಲ್ಲಿ ಗಿಡ್ಡ ಕಾಲಿನ ಬಂಡೂರು ಕುರಿಯೇ ಆಕರ್ಷಣೆ
ಲಾಯರ್ ಜಗದೀಶ್ ವಿಚಾರಣೆ ನಡೆಸುವ ಸುಳಿವು ಕೊಟ್ಟ ಕಿಚ್ಚ: ವಿಡಿಯೋ
ಲಾಯರ್ ಜಗದೀಶ್ ವಿಚಾರಣೆ ನಡೆಸುವ ಸುಳಿವು ಕೊಟ್ಟ ಕಿಚ್ಚ: ವಿಡಿಯೋ
ಪಿಡಿಒ, ಕಾರ್ಯದರ್ಶಿಗಳ ಹೋರಾಟಕ್ಕೆ ಬೆಂಬಲ ಘೋಷಿಸಿದ ಕುಮಾರಸ್ವಾಮಿ,ವಿಜಯೇಂದ್ರ
ಪಿಡಿಒ, ಕಾರ್ಯದರ್ಶಿಗಳ ಹೋರಾಟಕ್ಕೆ ಬೆಂಬಲ ಘೋಷಿಸಿದ ಕುಮಾರಸ್ವಾಮಿ,ವಿಜಯೇಂದ್ರ
ಶನಿವಾರ ಭಕ್ತರ ಪರಾಕಾಷ್ಠೆ-ತಿಮ್ಮಪ್ಪನ ದರ್ಶನಕ್ಕೆ ಕಾಯಬೇಕು 18 ಗಂಟೆ...
ಶನಿವಾರ ಭಕ್ತರ ಪರಾಕಾಷ್ಠೆ-ತಿಮ್ಮಪ್ಪನ ದರ್ಶನಕ್ಕೆ ಕಾಯಬೇಕು 18 ಗಂಟೆ...
ನಾಮಿನೇಷನ್ ತೂಗುಗತ್ತಿ ಜೊತೆ ಕುತೂಹಲ ಮೂಡಿಸಿದ ಕಿಚ್ಚನ ಪಂಚಾಯ್ತಿ
ನಾಮಿನೇಷನ್ ತೂಗುಗತ್ತಿ ಜೊತೆ ಕುತೂಹಲ ಮೂಡಿಸಿದ ಕಿಚ್ಚನ ಪಂಚಾಯ್ತಿ
Daily Devotional: ನವರಾತ್ರಿ ಮೂರನೇ ದಿನ ಚಂದ್ರಘಂಟಾ ದೇವಿ ಆರಾಧನೆ
Daily Devotional: ನವರಾತ್ರಿ ಮೂರನೇ ದಿನ ಚಂದ್ರಘಂಟಾ ದೇವಿ ಆರಾಧನೆ