ಕಡಿಮೆ ಬೆಲೆಯ 5G ಫೋನ್​ಗಳು: ಇಲ್ಲಿದೆ 15,000 ರೂ. ಒಳಗಿನ ಬೆಸ್ಟ್ ಸ್ಮಾರ್ಟ್​ಫೋನ್ಸ್

Best 5G phones Under Rs 15,000 in India: ಪ್ರಸಿದ್ಧ ಸ್ಮಾರ್ಟ್ ಫೋನ್ ಬ್ರ್ಯಾಂಡ್‌ಗಳಾದ ಶವೋಮಿ, ಟೆಕ್ನೋ, ವಿವೋ ಮತ್ತು ಪೋಕೋ ದಂತಹ ಉನ್ನತ ದರ್ಜೆಯ 5ಜಿ ಫೋನ್‌ಗಳು 15,000 ರೂ. ಒಳಗಡೆ ಲಭ್ಯವಿದೆ. ಅವುಗಳು ಯಾವುದು ಎಂಬುದನ್ನು ನೋಡೋಣ.

ಕಡಿಮೆ ಬೆಲೆಯ 5G ಫೋನ್​ಗಳು: ಇಲ್ಲಿದೆ 15,000 ರೂ. ಒಳಗಿನ ಬೆಸ್ಟ್ ಸ್ಮಾರ್ಟ್​ಫೋನ್ಸ್
Smartphones
Follow us
|

Updated on: Aug 27, 2023 | 12:34 PM

ಭಾರತದಲ್ಲಿ 5ಜಿ ಯುಗ ಆರಂಭವಾದ ಬಳಿಕ ಬಜೆಟ್ ಬೆಲೆಗೆ 5G ಬೆಂಬಲವಿರುವ ಸ್ಮಾರ್ಟ್​ಫೋನ್​ಗಳು (5G Smartphones) ಅನಾವರಣಗೊಳ್ಳುತ್ತಿದೆ. ಅದುಕೂಡ ಅತ್ಯುತ್ತಮ ಬ್ರಾಂಡ್‌ಗಳಿಂದ ಬಂದ ಫೋನ್​ಗಳೇ ಆಗಿದೆ. ಈ ಫೋನ್‌ಗಳು ಆಕರ್ಷಕ ಫೀಚರ್ಸ್ ಮತ್ತು ವಿನ್ಯಾಸದ ಮೂಲಕ ಬಳಕೆದಾರರನ್ನು ಆಕರ್ಷಿಸುತ್ತಿದೆ. ಡಿಸ್ ಪ್ಲೇ, ಪ್ರೊಸೆಸರ್, RAM, ಕ್ಯಾಮೆರಾ ಗುಣಮಟ್ಟ ಮತ್ತು ಹೆಚ್ಚಿನ ಬ್ಯಾಟರಿ ಬಾಳಿಕೆ ಎಲ್ಲವೂ ಇದರಲ್ಲಿದೆ. ಪ್ರಸಿದ್ಧ ಸ್ಮಾರ್ಟ್ ಫೋನ್ ಬ್ರ್ಯಾಂಡ್‌ಗಳಾದ ಶವೋಮಿ, ಟೆಕ್ನೋ, ವಿವೋ ಮತ್ತು ಪೋಕೋ ದಂತಹ ಉನ್ನತ ದರ್ಜೆಯ 5ಜಿ ಫೋನ್‌ಗಳು 15,000 ರೂ. ಒಳಗಡೆ ಲಭ್ಯವಿದೆ. ಅವುಗಳು ಯಾವುದು ಎಂಬುದನ್ನು ನೋಡೋಣ.

ರೆಡ್ಮಿ 12 5G: ಇದು 6.79-ಇಂಚಿನ ಪೂರ್ಣ HD ಪ್ಲಸ್ ಡಿಸ್ಪ್ಲೇಯನ್ನು ಹೊಂದಿದೆ. 90Hz ರಿಫ್ರೆಶ್ ದರದೊಂದಿಗೆ ಬರುತ್ತದೆ. ಬಲಿಷ್ಠವಾದ ಕ್ವಾಲ್ಕಮ್ ಸ್ನಾಪ್​ಡ್ರಾಗನ್ 4 Gen 2 ಪ್ರೊಸೆಸರ್ ಹೊಂದಿದೆ. 50MP ಮುಖ್ಯ ಕ್ಯಾಮೆರಾದೊಂದಿಗೆ ಹಿಂಭಾಗದಲ್ಲಿ ಡ್ಯುಯಲ್ ಕ್ಯಾಮೆರಾ ಸೆಟಪ್ ಇದೆ. ಮುಂಭಾಗದಲ್ಲಿ 8MP ಕ್ಯಾಮೆರಾ ಇದೆ. 18W ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ 5,000mAh ಬ್ಯಾಟರಿ ಇದೆ. ಇದು ಆಂಡ್ರಾಯ್ಡ್ 13 OS ಅನ್ನು ಆಧರಿಸಿ ಕಾರ್ಯನಿರ್ವಹಿಸುತ್ತದೆ. ಇದರ ಬೆಲೆ 4GB+128GB ರೂಪಾಂತರಕ್ಕೆ ರೂ. 10,999, 6GB+128GB ರೂಪಾಂತರಕ್ಕೆ ರೂ. 12,499 ಮತ್ತು 8GB+256GB ಮಾದರಿಗೆ ರೂ. 14,499 ಆಗಿದೆ.

ಟೆಕ್ನೋ ಪೋವಾ 5 ಪ್ರೊ: ಈ ಫೋನ್ 6.78-ಇಂಚಿನ ಪೂರ್ಣ HD ಪ್ಲಸ್ ಡಿಸ್ಪ್ಲೇ, 120Hz ರಿಫ್ರೆಶ್ ದರದೊಂದಿಗೆ ಬರುತ್ತದೆ. ಮೀಡಿಯಾ ಟೆಕ್ ಡೈಮೆನ್ಸಿಟಿ 6080 ಚಿಪ್‌ಸೆಟ್ ಇದೆ. ಹಿಂಭಾಗದಲ್ಲಿ 50MP ಮುಖ್ಯ ಕ್ಯಾಮೆರಾದೊಂದಿಗೆ ಡ್ಯುಯಲ್ ಕ್ಯಾಮೆರಾ ಸೆಟಪ್ ಇದೆ. ಮುಂಭಾಗದಲ್ಲಿ 16MP ಸೆಲ್ಫಿ ಕ್ಯಾಮೆರಾ ಇದೆ. 68W ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ 5,000mAh ಬ್ಯಾಟರಿ ಇದೆ. ಇದು ಆಂಡ್ರಾಯ್ಡ್ 13 ಮೂಲಕ ಕಾರ್ಯನಿರ್ವಹಿಸುತ್ತದೆ. ಇದರ ಬೆಲೆ 8GB+128GB ವೇರಿಯಂಟ್‌ಗೆ 14,999 ಮತ್ತು 8GB+256GB ಮಾದರಿಗೆ 15,999 ರೂ.

ಇದನ್ನೂ ಓದಿ
Image
ಬರುತ್ತಿದೆ ಮೊಟೊರೊಲಾ ಎಡ್ಜ್ 40 ಸ್ಮಾರ್ಟ್‌ಫೋನ್​ನ ನಿಯೋ ವರ್ಷನ್: ಧೂಳೆಬ್ಬಿಸುವುದು ಖಚಿತ
Image
Aadhaar Card: ನಿಮ್ಮ ಆಧಾರ್ ಮೂಲಕ ಬೇರೆಯವರು ಸಿಮ್ ಖರೀದಿಸಿದ್ದಾರೆಯೇ? ಚೆಕ್ ಮಾಡಿ..
Image
ಒಂದೇ ದಿನ ಬಾಕಿ: ನಾಳೆ ಭಾರತದಲ್ಲಿ ರೋಚಕತೆ ಸೃಷ್ಟಿಸಿರುವ ವಿವೋ V29e ಸ್ಮಾರ್ಟ್​ಫೋನ್ ಬಿಡುಗಡೆ
Image
ಬಜೆಟ್ ಪ್ರಿಯರು ಸಿದ್ಧರಾಗಿ: ಭಾರತಕ್ಕೆ ಬರುತ್ತಿದೆ ರಿಯಲ್ ಮಿಯ ಅತಿ ಕಡಿಮೆ ಬೆಲೆಯ ಸ್ಮಾರ್ಟ್​ಫೋನ್

ಕುತೂಹಲ ಕೆರಳಿಸಿದ ಒನ್​ಪ್ಲಸ್ 12 5G ಸ್ಮಾರ್ಟ್​ಫೋನ್: ಬಿಡುಗಡೆ ಯಾವಾಗ?, ಏನಿದೆ ಫೀಚರ್ಸ್?

ವಿವೋ Y27: ಈ ಫೋನ್ 6.64 ಇಂಚಿನ IPS LCD ಪೂರ್ಣ HD ಪ್ಲಸ್ ಡಿಸ್ಪ್ಲೇಯೊಂದಿಗೆ ಬರುತ್ತದೆ. ಮೀಡಿಯಾಟೆಕ್ ಹಿಲಿಯೊ G85 ಚಿಪ್ ಸೆಟ್ ನೀಡಲಾಗಿದೆ. ಹಿಂಭಾಗದಲ್ಲಿ 50MP ಮತ್ತು 2MP ಡ್ಯುಯಲ್ ಕ್ಯಾಮೆರಾ ಸೆಟಪ್ ಇದೆ. ಮುಂಭಾಗದಲ್ಲಿ 8MP ಸೆಲ್ಫಿ ಕ್ಯಾಮೆರಾ ಇದೆ. 44W ಫಾಸ್ಟ್ ಚಾರ್ಜಿಂಗ್ ವೈಶಿಷ್ಟ್ಯದೊಂದಿಗೆ 5000mAh ಬ್ಯಾಟರಿ ಇದೆ. ಇದು ಆಂಡ್ರಾಯ್ಡ್ 13 ಅನ್ನು ಆಧರಿಸಿ ಕಾರ್ಯನಿರ್ವಹಿಸುತ್ತದೆ. ಇದು 6GB RAM, 128GB ಸ್ಟೋರೇಜ್ ರೂಪಾಂತರದ ಬೆಲೆ 14,999ರೂ. ಆಗಿದೆ.

ಪೋಕೋ M6 ಪ್ರೊ 5G: ಈ ಫೋನ್ 6.79 ಇಂಚಿನ ಪೂರ್ಣ HD ಪ್ಲಸ್, 90 Hz ರಿಫ್ರೆಶ್ ದರದೊಂದಿಗೆ ಬರುತ್ತದೆ. ಇದು ಕ್ವಾಲ್ಕಮ್ ಸ್ನಾಪ್​ಡ್ರಾಗನ್ 4Gen2 ಚಿಪ್‌ಸೆಟ್ ಅನ್ನು ಹೊಂದಿದೆ. ಹಿಂಭಾಗದಲ್ಲಿ 50MP ಮತ್ತು 2MP ಕ್ಯಾಮೆರಾಗಳು ಮತ್ತು ಮುಂಭಾಗದಲ್ಲಿ 8MP ಸೆಲ್ಫಿ ಕ್ಯಾಮೆರಾ ಸೆಟಪ್ ಇದೆ. 18W ಫಾಸ್ಟ್ ಚಾರ್ಜಿಂಗ್ ವೈಶಿಷ್ಟ್ಯದೊಂದಿಗೆ 5000mAh ಬ್ಯಾಟರಿ ಇದೆ. ಇದು ಆಂಡ್ರಾಯ್ಡ್ 13 ಅನ್ನು ಆಧರಿಸಿ ಕಾರ್ಯನಿರ್ವಹಿಸುತ್ತದೆ. 4GB+64GB ರೂಪಾಂತರದ ಬೆಲೆ ರೂ. 10,999, 6GB+128GB ಬೆಲೆ ರೂ. 12,999 ಆಗಿದೆ.

ಒಪ್ಪೋ A58 4ಜಿ: ಇದು 6.72-ಇಂಚಿನ ಪೂರ್ಣ HD ಪ್ಲಸ್ LCD ಡಿಸ್ಪ್ಲೇ ಹೊಂದಿದೆ. ಮೀಡಿಯಾಟೆಕ್ ಹಿಲಿಯೊ G85 ಚಿಪ್ ಸೆಟ್‌ನೊಂದಿಗೆ ಬರುತ್ತದೆ. ಹಿಂಭಾಗದಲ್ಲಿ 50MP, 2MP ಮತ್ತು 8MP ಸೆಲ್ಫಿ ಕ್ಯಾಮೆರಾಗಳಿವೆ. 33W ಫಾಸ್ಟ್ ಚಾರ್ಜಿಂಗ್ ತಂತ್ರಜ್ಞಾನದೊಂದಿಗೆ 500mAh ಬ್ಯಾಟರಿ ಇದೆ. ಇದು ಆಂಡ್ರಾಯ್ಡ್ 13 OS ಅನ್ನು ಆಧರಿಸಿ ಕಾರ್ಯನಿರ್ವಹಿಸುತ್ತದೆ. 6GB RAM, 128GB ಸ್ಟೋರೇಜ್ ರೂಪಾಂತರದ ಬೆಲೆ 14,999 ರೂ..

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ

ರಾಜಕಾಲುವೆ ಮುಚ್ಚಿರುವ ಕಾರಣ ಐದಾರು ಮನೆಗಳಿಗೆ ನುಗ್ಗಿದ ಮಳೆ ನೀರು
ರಾಜಕಾಲುವೆ ಮುಚ್ಚಿರುವ ಕಾರಣ ಐದಾರು ಮನೆಗಳಿಗೆ ನುಗ್ಗಿದ ಮಳೆ ನೀರು
‘ಬಿಗ್​ಬಾಸ್ ಅನ್ನು ಹಾಳು ಮಾಡಲು ನಿಮ್ಮಪ್ಪನಾಣೆ ಸಾಧ್ಯವಿಲ್ಲ‘
‘ಬಿಗ್​ಬಾಸ್ ಅನ್ನು ಹಾಳು ಮಾಡಲು ನಿಮ್ಮಪ್ಪನಾಣೆ ಸಾಧ್ಯವಿಲ್ಲ‘
ಸಿದ್ದರಾಮಯ್ಯ ಪಾರ್ವತಿ ಅವರನ್ನು ಮದುವೆ ಆಗಿದ್ದೇ ತಪ್ಪಾ? ಸಿಎಂ ಇಬ್ರಾಹಿಂ
ಸಿದ್ದರಾಮಯ್ಯ ಪಾರ್ವತಿ ಅವರನ್ನು ಮದುವೆ ಆಗಿದ್ದೇ ತಪ್ಪಾ? ಸಿಎಂ ಇಬ್ರಾಹಿಂ
ಮಹಾರಾಷ್ಟ್ರದ ದೇವಸ್ಥಾನದಲ್ಲಿ ಡೋಲು ಬಾರಿಸಿದ ಪ್ರಧಾನಿ ಮೋದಿ
ಮಹಾರಾಷ್ಟ್ರದ ದೇವಸ್ಥಾನದಲ್ಲಿ ಡೋಲು ಬಾರಿಸಿದ ಪ್ರಧಾನಿ ಮೋದಿ
ಮೈಸೂರು ದಸರಾದಲ್ಲಿ ಗಿಡ್ಡ ಕಾಲಿನ ಬಂಡೂರು ಕುರಿಯೇ ಆಕರ್ಷಣೆ
ಮೈಸೂರು ದಸರಾದಲ್ಲಿ ಗಿಡ್ಡ ಕಾಲಿನ ಬಂಡೂರು ಕುರಿಯೇ ಆಕರ್ಷಣೆ
ಲಾಯರ್ ಜಗದೀಶ್ ವಿಚಾರಣೆ ನಡೆಸುವ ಸುಳಿವು ಕೊಟ್ಟ ಕಿಚ್ಚ: ವಿಡಿಯೋ
ಲಾಯರ್ ಜಗದೀಶ್ ವಿಚಾರಣೆ ನಡೆಸುವ ಸುಳಿವು ಕೊಟ್ಟ ಕಿಚ್ಚ: ವಿಡಿಯೋ
ಪಿಡಿಒ, ಕಾರ್ಯದರ್ಶಿಗಳ ಹೋರಾಟಕ್ಕೆ ಬೆಂಬಲ ಘೋಷಿಸಿದ ಕುಮಾರಸ್ವಾಮಿ,ವಿಜಯೇಂದ್ರ
ಪಿಡಿಒ, ಕಾರ್ಯದರ್ಶಿಗಳ ಹೋರಾಟಕ್ಕೆ ಬೆಂಬಲ ಘೋಷಿಸಿದ ಕುಮಾರಸ್ವಾಮಿ,ವಿಜಯೇಂದ್ರ
ಶನಿವಾರ ಭಕ್ತರ ಪರಾಕಾಷ್ಠೆ-ತಿಮ್ಮಪ್ಪನ ದರ್ಶನಕ್ಕೆ ಕಾಯಬೇಕು 18 ಗಂಟೆ...
ಶನಿವಾರ ಭಕ್ತರ ಪರಾಕಾಷ್ಠೆ-ತಿಮ್ಮಪ್ಪನ ದರ್ಶನಕ್ಕೆ ಕಾಯಬೇಕು 18 ಗಂಟೆ...
ನಾಮಿನೇಷನ್ ತೂಗುಗತ್ತಿ ಜೊತೆ ಕುತೂಹಲ ಮೂಡಿಸಿದ ಕಿಚ್ಚನ ಪಂಚಾಯ್ತಿ
ನಾಮಿನೇಷನ್ ತೂಗುಗತ್ತಿ ಜೊತೆ ಕುತೂಹಲ ಮೂಡಿಸಿದ ಕಿಚ್ಚನ ಪಂಚಾಯ್ತಿ
Daily Devotional: ನವರಾತ್ರಿ ಮೂರನೇ ದಿನ ಚಂದ್ರಘಂಟಾ ದೇವಿ ಆರಾಧನೆ
Daily Devotional: ನವರಾತ್ರಿ ಮೂರನೇ ದಿನ ಚಂದ್ರಘಂಟಾ ದೇವಿ ಆರಾಧನೆ