ಸ್ಮಾರ್ಟ್​ಫೋನ್ ಬ್ಯಾಟರಿ ಏಕೆ ಉಬ್ಬುತ್ತದೆ ಗೊತ್ತೇ?: ಕಾರಣ ತಿಳಿದರೆ ಶಾಕ್ ಆಗುತ್ತೀರಿ..

Smartphone Batteries: ಸ್ಮಾರ್ಟ್​ಫೋನ್ ಬ್ಯಾಟರಿಯು ಊದಿಕೊಳ್ಳಲು ಪ್ರಮುಖ ಕಾರಣ ಇದನ್ನು ಅತಿಯಾಗಿ ಅಥವಾ ತಪ್ಪಾಗಿ ಉಪಯೋಗಿಸುವುದು. ಉದಾಹರಣೆಗೆ, ದೀರ್ಘಕಾಲದವರೆಗೆ ವಿಡಿಯೋವನ್ನು ವೀಕ್ಷಿಸುವುದರಿಂದ ಬ್ಯಾಟರಿ ಬರಿದಾಗುತ್ತದೆ. ಹೀಗಾಗಿ ನಿಮ್ಮ ಸ್ಮಾರ್ಟ್‌ಫೋನ್ ಅನ್ನು ಸರಿಯಾದ ರೀತಿಯಲ್ಲಿ ಬಳಸಲು ಪ್ರಯತ್ನಿಸಿ.

ಸ್ಮಾರ್ಟ್​ಫೋನ್ ಬ್ಯಾಟರಿ ಏಕೆ ಉಬ್ಬುತ್ತದೆ ಗೊತ್ತೇ?: ಕಾರಣ ತಿಳಿದರೆ ಶಾಕ್ ಆಗುತ್ತೀರಿ..
smartphone battery swells
Follow us
|

Updated on: Aug 28, 2023 | 11:24 AM

ಕೆಲವೊಮ್ಮೆ ಸ್ಮಾರ್ಟ್‌ಫೋನ್‌ನಲ್ಲಿರುವ ಬ್ಯಾಟರಿ (Smartphone Battery) ಗಾತ್ರ ಬದಲಾಗಿರುವುದನ್ನು ನೀವು ನೋಡಿರಬಹುದು. ಆಗ ಇಡೀ ಬ್ಯಾಟರಿ ಊದಿಕೊಂಡಿರುತ್ತದೆ. ಆದರೆ, ಬ್ಯಾಟರಿ ಅಷ್ಟು ದೊಡ್ಡದಾಗಿ ಊದಿರಲು ಕಾರಣವೇನೆಂದು ಅನೇಕರಿಗೆ ತಿಳಿದಿಲ್ಲ. ಇದರ ಹಿಂದೆ ಹಲವು ಕಾರಣಗಳಿದ್ದರೂ, ಕೆಲವೊಮ್ಮೆ ಬಳಕೆದಾರ ಮಾಡುವ ಸಣ್ಣ, ಸಣ್ಣ ತಪ್ಪುಗಳಿಂದಲೇ ಇದು ಸಂಭವಿಸುತ್ತದೆ. ನಿಧಾನವಾಗಿ ಬ್ಯಾಟರಿ ಕ್ಷೀಣಿಸಲು ಪ್ರಾರಂಭವಾಗುತ್ತದೆ. ಅಂತಿಮವಾಗಿ ಅದು ಉಬ್ಬಿ ಸ್ಫೋಟಗೊಳ್ಳುತ್ತದೆ. ಇದಕ್ಕೆಲ್ಲ ಮುಂಚಿತವಾಗಿ ಬ್ಯಾಟರಿ ಉಬ್ಬುವಿಕೆಯನ್ನು ತಡೆಗಣ್ಣಬೇಕು. ಹಾಗಾದರೆ, ಸ್ಮಾರ್ಟ್​ಫೋನ್ ಬ್ಯಾಟರಿ ಉಬ್ಬದಿರಲು ಏನು ಮಾಡಬೇಕು?.

ಸ್ಮಾರ್ಟ್​ಫೋನ್ ಬ್ಯಾಟರಿಯು ಊದಿಕೊಳ್ಳಲು ಪ್ರಮುಖ ಕಾರಣ ಇದನ್ನು ಅತಿಯಾಗಿ ಅಥವಾ ತಪ್ಪಾಗಿ ಉಪಯೋಗಿಸುವುದು. ಉದಾಹರಣೆಗೆ, ದೀರ್ಘಕಾಲದವರೆಗೆ ವಿಡಿಯೋವನ್ನು ವೀಕ್ಷಿಸುವುದರಿಂದ ಬ್ಯಾಟರಿ ಬರಿದಾಗುತ್ತದೆ. ಹೀಗಾಗಿ ನಿಮ್ಮ ಸ್ಮಾರ್ಟ್‌ಫೋನ್ ಅನ್ನು ಸರಿಯಾದ ರೀತಿಯಲ್ಲಿ ಬಳಸಲು ಪ್ರಯತ್ನಿಸಿ.

ಅನಗತ್ಯ ಆ್ಯಪ್‌ಗಳನ್ನು ತೆಗೆದು ಹಾಕಿ:

ಕೆಲವರ ಸ್ಮಾರ್ಟ್​ಫೋನ್​ನಲ್ಲಿ ಲೆಕ್ಕವಿಲ್ಲದಷ್ಟು ಆ್ಯಪ್​ಗಳಿರುತ್ತದೆ. ಅದು ಅಗತ್ಯ ಕೂಡ ಇರುವುದಿಲ್ಲ. ಇವು ಹೆಚ್ಚು ಬ್ಯಾಟರಿಯನ್ನು ಬಳಸುತ್ತವೆ. ಅಷ್ಟೇ ಅಲ್ಲ, ಬ್ಯಾಟರಿಯನ್ನು ಬೇಗನೆ ಖಾಲಿ ಮಾಡುತ್ತದೆ. ಈಗಿರುವ ಹೆಚ್ಚಿನ ಆ್ಯಪ್​ಗಳು ಜಿಪಿಎಸ್, ಕ್ಯಾಮೆರಾ ಅಥವಾ ವಿಡಿಯೋ ಕರೆಗಳ ಆ್ಯಕ್ಸಸ್ ಕೇಳುತ್ತದೆ. ಇದು ಬ್ಯಾಟರಿ ಮೇಲೆ ಹೊಡೆತ ಬಿಳುತ್ತದೆ. ಹೀಗಾಗಿ ಅನಗತ್ಯ ಅಪ್ಲಿಕೇಶನ್‌ಗಳನ್ನು ಅನ್‌ಇನ್‌ಸ್ಟಾಲ್ ಮಾಡುವುದು ಒಳ್ಳೆಯದು.

ಇದನ್ನೂ ಓದಿ
Image
ಬೆಲೆ ಇಳಿಕೆ: ಕಡಿಮೆ ಬೆಲೆಗೆ ಖರೀದಿಸಿ ಒನ್‌ಪ್ಲಸ್‌ ನಾರ್ಡ್‌ CE 2 ಲೈಟ್‌ 5G ಫೋನ್: ಆಫರ್ ಮಿಸ್ ಮಾಡ್ಬೇಡಿ
Image
ತಕ್ಷಣವೇ ವಾಟ್ಸ್​ಆ್ಯಪ್ ಅಪ್ಡೇಟ್ ಮಾಡಿ: ಬಂದಿದೆ HD ವಿಡಿಯೋ ಫೀಚರ್
Image
ಕಡಿಮೆ ಬೆಲೆಯ 5G ಫೋನ್​ಗಳು: ಇಲ್ಲಿದೆ 15,000 ರೂ. ಒಳಗಿನ ಬೆಸ್ಟ್ ಸ್ಮಾರ್ಟ್​ಫೋನ್ಸ್
Image
ಬರುತ್ತಿದೆ ಮೊಟೊರೊಲಾ ಎಡ್ಜ್ 40 ಸ್ಮಾರ್ಟ್‌ಫೋನ್​ನ ನಿಯೋ ವರ್ಷನ್: ಧೂಳೆಬ್ಬಿಸುವುದು ಖಚಿತ

Aadhaar Card: ನಿಮ್ಮ ಆಧಾರ್ ಮೂಲಕ ಬೇರೆಯವರು ಸಿಮ್ ಖರೀದಿಸಿದ್ದಾರೆಯೇ? ಚೆಕ್ ಮಾಡಿ..

ಬ್ಯಾಕ್​ಗ್ರೌಂಡ್ ಆ್ಯಪ್:

ಬ್ಯಾಟರಿ ಬೇಗೆನ ಖಾಲಿ ಆಗಲು ಅಥವಾ ಇದಕ್ಕೆ ಒತ್ತಡ ಬೀಳಲು ಮತ್ತೊಂದು ಪ್ರಮುಖ ಕಾರಣ ಬ್ಯಾಕ್​ಗ್ರೌಂಡ್ ಆ್ಯಪ್. ಒಂದು ಆ್ಯಪ್ ಅನ್ನು ತೆರೆದು ಉಪಯೋಗಿಸಿದ ನಂತರ ಕೆಲವರು ಅದನ್ನು ಮಿನಿಮೈಸ್ ಮಾಡಿ ಇಟ್ಟುಕೊಳ್ಳುತ್ತಾರೆ. ಹೀಗೆ ಮಾಡಿದಾಗ ಬ್ಯಾಕ್​ಗ್ರೌಂಡ್​ನಲ್ಲಿ ಆ ಆ್ಯಪ್ ಕಾರ್ಯನಿರ್ವಹಿಸುತ್ತಲೇ ಇರುತ್ತದೆ. ಇದು ಬ್ಯಾಟರಿ ಮೇಲೆ ಒತ್ತಡ ಹೇರುತ್ತಿದೆ. ಹೀಗಾಗಿ ಯಾವಾಗಲೂ ಒಂದು ಅಪ್ಲಿಕೇಷನ್ ಅನ್ನು ಉಪಯೋಗಿಸಿದ ನಂತರ ಸಂಪೂರ್ಣವಾಗಿ ಕ್ಲೋಸ್ ಮಾಡಿ.

ಸೆಟ್ಟಿಂಗ್ಸ್​ನಲ್ಲಿ ಬದಲಾವಣೆ:

ನಿಮ್ಮ ಸ್ಮಾರ್ಟ್‌ಫೋನ್‌ನ ಕೆಲವು ಸೆಟ್ಟಿಂಗ್‌ಗಳು ನಿಮ್ಮ ಬ್ಯಾಟರಿ ಅವಧಿಯನ್ನು ವಿಸ್ತರಿಸಲು ಸಹಾಯ ಮಾಡುತ್ತದೆ. ಮುಖ್ಯವಾಗಿ ಡಿಸ್ ಪ್ಲೇ ಬ್ರೈಟ್​ನೆಸ್ ಅನ್ನು ಕಡಿಮೆ ಮಾಡುವ ಮೂಲಕ, ಬ್ಲೂಟೂತ್, ವೈ-ಫೈ ಆಫ್ ಮಾಡುವ ಮೂಲಕ ನೀವು ಬ್ಯಾಟರಿ ಅವಧಿಯನ್ನು ಹೆಚ್ಚಿಸಬಹುದು. ಅಗತ್ಯವಿದ್ದಾಗ ಮಾತ್ರ ನೀವು ಅವುಗಳನ್ನು ಬಳಸಬೇಕು.

ಇವುಗಳ ಬಗ್ಗೆಯೂ ಗಮನ ಹರಿಸಿ:

  • ನಿಮ್ಮ ಸ್ಮಾರ್ಟ್‌ಫೋನ್‌ನ ಬ್ರೈಟ್​ನೆಸ್ ಕಡಿಮೆ ಮಾಡಿ (ಬ್ಯಾಕ್‌ಲೈಟ್) ಅಥವಾ ಅಟೋ ಬ್ರೈಟ್​ನೆಸ್ ಸೆಟ್ಟಿಂಗ್ ಅನ್ನು ಸಕ್ರಿಯಗೊಳಿಸಿ. ಅತಿ ಹೆಚ್ಚು ಬ್ರೈಟ್​ನೆಸ್ ಇಡುವುದರಿಂದ ಬ್ಯಾಟರಿ ಬಿಸಿ ಆಗುತ್ತದೆ.
  • ಡಿಸ್ ಪ್ಲೇ ಟೈಮ್ ಸೆಟ್ ಮಾಡುವುದು ಕೂಡ ಮುಖ್ಯ. ಹೀಗೆ ಮಾಡಿದರೆ ಮೊಬೈಲ್ ಅಟೋಮೆಟಿಕ್ ಲಾಕ್ ಸ್ಕ್ರೀನ್ ಆಗುತ್ತದೆ. ಇದರಿಂದ ನೀವು ಆಕಸ್ಮಿಕವಾಗಿ ಫೋನ್ ಲಾಕ್ ಮಾಡಲು ಮರೆತರೆ ಅಟೋಮೆಟಿಕ್ ಆಗಿ ಲಾಕ್ ಆಗುತ್ತದೆ.
  • ಕೆಲವು ಅಪ್ಲಿಕೇಶನ್‌ಗಳು ಬ್ಯಾಟರಿಯನ್ನು ಬಳಸುವ ಹಿನ್ನೆಲೆಯಲ್ಲಿ ಡೇಟಾವನ್ನು ಸಿಂಕ್ ಮಾಡುತ್ತಲೇ ಇರುತ್ತವೆ. ಇಂತಹ ಆ್ಯಪ್​ಗಳನ್ನು ಮೊದಲು ಕ್ಲೋಸ್ ಮಾಡಿ.
  • ನಿಮಗೆ ಬ್ಲೂಟೂತ್, ವೈ-ಫೈ, ಜಿಪಿಎಸ್ ಅಗತ್ಯವಿಲ್ಲದಿದ್ದರೆ, ಅವುಗಳನ್ನು ಆಫ್ ಮಾಡಿ. ಇವೆಲ್ಲವೂ ಹೆಚ್ಚು ಬ್ಯಾಟರಿಯನ್ನು ಬಳಸುತ್ತವೆ. ಇದು ನಿಮ್ಮ ಫೋನ್‌ನ ಬ್ಯಾಟರಿ ಅವಧಿಯನ್ನು ಕಡಿಮೆ ಮಾಡಬಹುದು.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ

ರಾಜಕಾಲುವೆ ಮುಚ್ಚಿರುವ ಕಾರಣ ಐದಾರು ಮನೆಗಳಿಗೆ ನುಗ್ಗಿದ ಮಳೆ ನೀರು
ರಾಜಕಾಲುವೆ ಮುಚ್ಚಿರುವ ಕಾರಣ ಐದಾರು ಮನೆಗಳಿಗೆ ನುಗ್ಗಿದ ಮಳೆ ನೀರು
‘ಬಿಗ್​ಬಾಸ್ ಅನ್ನು ಹಾಳು ಮಾಡಲು ನಿಮ್ಮಪ್ಪನಾಣೆ ಸಾಧ್ಯವಿಲ್ಲ‘
‘ಬಿಗ್​ಬಾಸ್ ಅನ್ನು ಹಾಳು ಮಾಡಲು ನಿಮ್ಮಪ್ಪನಾಣೆ ಸಾಧ್ಯವಿಲ್ಲ‘
ಸಿದ್ದರಾಮಯ್ಯ ಪಾರ್ವತಿ ಅವರನ್ನು ಮದುವೆ ಆಗಿದ್ದೇ ತಪ್ಪಾ? ಸಿಎಂ ಇಬ್ರಾಹಿಂ
ಸಿದ್ದರಾಮಯ್ಯ ಪಾರ್ವತಿ ಅವರನ್ನು ಮದುವೆ ಆಗಿದ್ದೇ ತಪ್ಪಾ? ಸಿಎಂ ಇಬ್ರಾಹಿಂ
ಮಹಾರಾಷ್ಟ್ರದ ದೇವಸ್ಥಾನದಲ್ಲಿ ಡೋಲು ಬಾರಿಸಿದ ಪ್ರಧಾನಿ ಮೋದಿ
ಮಹಾರಾಷ್ಟ್ರದ ದೇವಸ್ಥಾನದಲ್ಲಿ ಡೋಲು ಬಾರಿಸಿದ ಪ್ರಧಾನಿ ಮೋದಿ
ಮೈಸೂರು ದಸರಾದಲ್ಲಿ ಗಿಡ್ಡ ಕಾಲಿನ ಬಂಡೂರು ಕುರಿಯೇ ಆಕರ್ಷಣೆ
ಮೈಸೂರು ದಸರಾದಲ್ಲಿ ಗಿಡ್ಡ ಕಾಲಿನ ಬಂಡೂರು ಕುರಿಯೇ ಆಕರ್ಷಣೆ
ಲಾಯರ್ ಜಗದೀಶ್ ವಿಚಾರಣೆ ನಡೆಸುವ ಸುಳಿವು ಕೊಟ್ಟ ಕಿಚ್ಚ: ವಿಡಿಯೋ
ಲಾಯರ್ ಜಗದೀಶ್ ವಿಚಾರಣೆ ನಡೆಸುವ ಸುಳಿವು ಕೊಟ್ಟ ಕಿಚ್ಚ: ವಿಡಿಯೋ
ಪಿಡಿಒ, ಕಾರ್ಯದರ್ಶಿಗಳ ಹೋರಾಟಕ್ಕೆ ಬೆಂಬಲ ಘೋಷಿಸಿದ ಕುಮಾರಸ್ವಾಮಿ,ವಿಜಯೇಂದ್ರ
ಪಿಡಿಒ, ಕಾರ್ಯದರ್ಶಿಗಳ ಹೋರಾಟಕ್ಕೆ ಬೆಂಬಲ ಘೋಷಿಸಿದ ಕುಮಾರಸ್ವಾಮಿ,ವಿಜಯೇಂದ್ರ
ಶನಿವಾರ ಭಕ್ತರ ಪರಾಕಾಷ್ಠೆ-ತಿಮ್ಮಪ್ಪನ ದರ್ಶನಕ್ಕೆ ಕಾಯಬೇಕು 18 ಗಂಟೆ...
ಶನಿವಾರ ಭಕ್ತರ ಪರಾಕಾಷ್ಠೆ-ತಿಮ್ಮಪ್ಪನ ದರ್ಶನಕ್ಕೆ ಕಾಯಬೇಕು 18 ಗಂಟೆ...
ನಾಮಿನೇಷನ್ ತೂಗುಗತ್ತಿ ಜೊತೆ ಕುತೂಹಲ ಮೂಡಿಸಿದ ಕಿಚ್ಚನ ಪಂಚಾಯ್ತಿ
ನಾಮಿನೇಷನ್ ತೂಗುಗತ್ತಿ ಜೊತೆ ಕುತೂಹಲ ಮೂಡಿಸಿದ ಕಿಚ್ಚನ ಪಂಚಾಯ್ತಿ
Daily Devotional: ನವರಾತ್ರಿ ಮೂರನೇ ದಿನ ಚಂದ್ರಘಂಟಾ ದೇವಿ ಆರಾಧನೆ
Daily Devotional: ನವರಾತ್ರಿ ಮೂರನೇ ದಿನ ಚಂದ್ರಘಂಟಾ ದೇವಿ ಆರಾಧನೆ