ತಕ್ಷಣವೇ ವಾಟ್ಸ್ಆ್ಯಪ್ ಅಪ್ಡೇಟ್ ಮಾಡಿ: ಬಂದಿದೆ HD ವಿಡಿಯೋ ಫೀಚರ್
WhatsApp New Feature: IANS ವರದಿಯ ಪ್ರಕಾರ, ವಾಟ್ಸ್ಆ್ಯಪ್ನ ಈ HD ವಿಡಿಯೋ ಹಂಚಿಕೆ ವೈಶಿಷ್ಟ್ಯವು ಕೆಲವು ಬಳಕೆದಾರರಿಗೆ ಮಾತ್ರ ಲಭ್ಯವಿದೆ. ಮುಂಬರುವ ವಾರಗಳಲ್ಲಿ, ಇದು ಎಲ್ಲಾ ಬಳಕೆದಾರರಿಗೆ ಲಭ್ಯವಿರುತ್ತದೆ. ಹೊಸ ವೈಶಿಷ್ಟ್ಯವು ಬಳಕೆದಾರರಿಗೆ 720p HD ಗುಣಮಟ್ಟದಲ್ಲಿ ವಿಡಿಯೋಗಳನ್ನು ಕಳುಹಿಸಲು ಅನುಮತಿಸುತ್ತದೆ.
Updated on: Aug 27, 2023 | 1:33 PM

ವಾಟ್ಸ್ಆ್ಯಪ್ನಲ್ಲಿ ಸಾಲು ಸಾಲು ಅಪ್ಡೇಟ್ಗಳು ಬರಲು ತಯಾರಾಗಿದೆ. ಹೀಗಿರುವಾಗ ಇದೀಗ ಮತ್ತೊಂದು ನೂತನ ಆಯ್ಕೆಯ ಬಗ್ಗೆ ಮಾಹಿತಿ ಹೊರಬಿದ್ದಿದೆ. ಸದ್ಯದಲ್ಲೇ ವಾಟ್ಸ್ಆ್ಯಪ್ನಲ್ಲಿ ಫಿಲ್ಟರ್ ಆಯ್ಕೆ ಬರಲಿದ್ದು, ಇದು ಚಾಟ್ ಲಿಸ್ಟ್ನಲ್ಲಿ ಮಹತ್ವದ ಬದಲಾವಣೆ ತರಲಿದೆ.

ವಾಟ್ಸ್ಆ್ಯಪ್ ಅಪ್‌ಡೇಟ್‌ಗಳ ಟ್ರ್ಯಾಕರ್, WabetaInfo ನ ವರದಿಯ ಪ್ರಕಾರ, ಮೆಟಾ-ಮಾಲೀಕತ್ವದ ಇನ್‌ಸ್ಟಂಟ್ ಮೆಸೇಜಿಂಗ್ ಅಪ್ಲಿಕೇಶನ್ ಬಳಕೆದಾರರಿಗೆ ಚಾಟ್ ಪಟ್ಟಿಯನ್ನು ಫಿಲ್ಟರ್ ಎಂಬ ಹೊಸ ವೈಶಿಷ್ಟ್ಯವನ್ನು ನೀಡಲು ಮುಂದಾಗಿದೆ. ಸದ್ಯ ಈ ಫೀಚರ್ ಅಭಿವೃದ್ದಿ ಹಂತದಲ್ಲಿದೆ ಎಂದು ಹೇಳಿದೆ.

ಮೆಟಾ ಒಡೆತನದ ಪ್ರಸಿದ್ಧ ಮೆಸೇಜಿಂಗ್ ಅಪ್ಲಿಕೇಷನ್ ವಾಟ್ಸ್ಆ್ಯಪ್ ಪ್ರತಿದಿನ ಒಂದಲ್ಲ ಒಂದು ವಿಚಾರದಲ್ಲಿ ಸುದ್ದಿಯಾಗುತ್ತಲೇ ಇರುತ್ತದೆ. ಮೊನ್ನೆಯಷ್ಟೆ ಭಾರತದಲ್ಲಿ ಕಿರುಕುಳ, ನಕಲಿ ಮಾಹಿತಿಯನ್ನು ಫಾರ್ವರ್ಡ್ ಮಾಡುವುದು, ಇತರ ಬಳಕೆದಾರರನ್ನು ವಂಚಿಸಿದಂತಹ 72 ಲಕ್ಷಕ್ಕೂ ಅಧಿಕ ಖಾತೆಯನ್ನು ನಿಷೇಧಿಸಿ ಸುದ್ದಿಯಾಗಿತ್ತು. ಇದರ ನಡುವೆ ಹೊಸ ಹೊಸ ಫೀಚರ್ಗಳನ್ನು ಕೂಡ ಘೋಷಣೆ ಮಾಡುತ್ತಿದೆ.

ವಾಟ್ಸ್ಆ್ಯಪ್ ಬೀಟಾ 2.23.14.17 ಅಪ್ಡೇಟ್ನಲ್ಲಿ ಇದು ಕಂಡುಬಂದಿದೆ. ಈ ಹೊಸ ಟೂಲ್ ಬಗ್ಗೆ ಸ್ಕ್ರೀನ್ ಶಾಟ್ ಕೂಡ ಹರಿದಾಡುತ್ತಿದೆ. ಈ ಆಯ್ಕೆಯ ಮೂಲಕ ಚಾಟ್ ಲಿಸ್ಟ್ ಅನ್ನು ಸುಲಭವಾಗಿ ನಿರ್ವಹಿಸಲು ಸಾಧ್ಯವಾಗುತ್ತದೆ.

ಈ ವೈಶಿಷ್ಟ್ಯದ ಮೂಲಕ ಬಳಕೆದಾರರು ಸೆಕೆಂಡುಗಳಲ್ಲಿ ಪ್ರಮುಖ ಚಾಟ್‌ಗಳನ್ನು ಪ್ರವೇಶಿಸಬಹುದು. ಆದರೆ, ಗ್ರೂಪ್ ಚಾಟ್ಗಳಿಗೆ ಇದು ಅನ್ವಯ ಆಗುವುದಿಲ್ಲ. ಇದಕ್ಕಾಗಿ ಯಾವುದೇ ಆಯ್ಕೆ ಕಂಡುಬಂದಿಲ್ಲ.

ನೀವು ವಾಟ್ಸ್ಆ್ಯಪ್ನಲ್ಲಿ ಹೈ ರೆಸಲ್ಯೂಷನ್ ವಿಡಿಯೋವನ್ನು ಕಳುಹಿಸಲು ಬಯಸಿದರೆ, ಆಂಡ್ರಾಯ್ಡ್ ಬಳಕೆದಾರರು ತಮ್ಮ ವಾಟ್ಸ್ಆ್ಯಪ್ ಅನ್ನು ಇತ್ತೀಚಿನ ಆವೃತ್ತಿಗೆ ಅಪ್ಡೇಟ್ ಮಾಡಬೇಕು. ಹಾಗೆಯೆ ಎಲ್ಲಾ ಬಳಕೆದಾರರಿಗೆ ಈ ವೈಶಿಷ್ಟ್ಯವು ಲಭ್ಯವಿಲ್ಲದಿರಬಹುದು ಎಂಬುದನ್ನು ನೆನಪಿನಲ್ಲಿಡಿ.

ವಾಟ್ಸ್ಆ್ಯಪ್ನಲ್ಲಿ HD ವಿಡಿಯೋಗಳನ್ನು ಕಳುಹಿಸಲು ಮೊದಲಿಗೆ ವಾಟ್ಸ್ಆ್ಯಪ್ನಲ್ಲಿ ಚಾಟ್ ತೆರೆಯಿರಿ ಮತ್ತು ಅಟ್ಯಾಚ್ಮೆಂಟ್ ಐಕಾನ್ > ಗ್ಯಾಲರಿ ಮೇಲೆ ಟ್ಯಾಪ್ ಮಾಡಿ. ನೀವು ಕಳುಹಿಸಲು ಬಯಸುವ ವಿಡಿಯೋವನ್ನು ಆಯ್ಕೆ ಮಾಡಿ ಮತ್ತು ಪ್ರಿವಿವ್ಯೂ ನೋಡಲು ಅದರ ಮೇಲೆ ಟ್ಯಾಪ್ ಮಾಡಿ.

ಈಗ ಪರದೆಯ ಮೇಲ್ಭಾಗದಲ್ಲಿ ಸ್ಟಿಕ್ಕರ್, ಪಠ್ಯ ಮತ್ತು ಡ್ರಾಯಿಂಗ್ ಐಕಾನ್‌ಗಳ ಎಡಭಾಗದಲ್ಲಿ HD ಐಕಾನ್ ಕಾಣಿಸುತ್ತದೆ. HD ಗುಣಮಟ್ಟವನ್ನು ಆಯ್ಕೆಮಾಡಿ ಮತ್ತು ಹೆಚ್ಚಿದ ಫೈಲ್ ಗಾತ್ರವನ್ನು ಗಮನಿಸಿ, ನಂತರ ಡನ್ ಟ್ಯಾಪ್ ಮಾಡಿ. ವಿಡಿಯೋದಲ್ಲಿ ಏನಾದರು ಬದಲಾವಣೆಗಳು ಅಥವಾ ಎಡಿಟ್ ಮಾಡಿದ ನಂತರ, ಕೆಳಗಿನ ಬಲ ಮೂಲೆಯಲ್ಲಿರುವ ಸೆಂಡ್ ಬಟನ್ ಅನ್ನು ಟ್ಯಾಪ್ ಮಾಡಿ.
























