AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬ್ಯಾಕ್ ಪ್ಯಾನೆಲ್​ನಲ್ಲಿ LED ಲೈಟ್: ಟೆಕ್ನೋ ಕಂಪನಿಯಿಂದ ಒಂದೇ ದಿನ ಎರಡು ಹೊಸ ​ಫೋನ್ ಲಾಂಚ್

Tecno Pova 5 Series Launch: ಟೆಕ್ನೋ ಪೊವಾ 5 ಸರಣಿಯಲ್ಲಿ ಅನಾವರಣಗೊಂಡಿರುವ ಟೆಕ್ನೋ ಪೊವಾ 5 ಮತ್ತು ಟೆಕ್ನೋ ಪೊವಾ 5 ಪ್ರೊ ಬೆಲೆ ಇನ್ನೂ ಬಹಿರಂಗವಾಗಿಲ್ಲ. ಆಗಸ್ಟ್ 14 ರಂದು ಇದರ ಬೆಲೆ ತಿಳಿಸುವುದಾಗಿ ಕಂಪನಿ ಹೇಳಿದೆ. ಈ ಸ್ಮಾರ್ಟ್‌ಫೋನ್‌ಗಳು ಇ ಕಾಮರ್ಸ್ ತಾಣವಾದ ಅಮೆಜಾನ್ ಮೂಲಕ ಖರೀದಿಗೆ ಲಭ್ಯವಿರುತ್ತವೆ.

ಬ್ಯಾಕ್ ಪ್ಯಾನೆಲ್​ನಲ್ಲಿ LED ಲೈಟ್: ಟೆಕ್ನೋ ಕಂಪನಿಯಿಂದ ಒಂದೇ ದಿನ ಎರಡು ಹೊಸ ​ಫೋನ್ ಲಾಂಚ್
tecno pova 5 series
Vinay Bhat
|

Updated on: Aug 12, 2023 | 2:04 PM

Share

ಪ್ರಸಿದ್ಧ ಟೆಕ್ನೋ ಕಂಪನಿ ತನ್ನ ವರ್ಲ್ಡ್ ಆಫ್ ಟೆಕ್ನಾಲಜಿ ಈವೆಂಟ್‌ನಲ್ಲಿ ಟೆಕ್ನೋ ಪೊವಾ 5 ಸರಣಿಯನ್ನು (Tecno Pova 5 Series) ಘೋಷಿಸಿದೆ. ಇದು ಟೆಕ್ನೋ ಪೊವಾ 5 ಮತ್ತು ಟೆಕ್ನೋ ಪೊವಾ 5 ಪ್ರೊ ಎಂಬ ಎರಡು ಸ್ಮಾರ್ಟ್​ಫೋನ್​ಗಳನ್ನು ಒಂಗೊಂಡಿದೆ. ಈ ಎರಡೂ ಸ್ಮಾರ್ಟ್‌ಫೋನ್​ಗಳು ಭಾರತದಲ್ಲಿ ಆಗಸ್ಟ್ 14 ರಂದು ಬಿಡುಗಡೆಯಾಗಲಿದೆ. ಈ ಸ್ಮಾರ್ಟ್‌ಫೋನ್‌ಗಳು ಆಕರ್ಷಕ ಫೀಚರ್​ಗಳಿಂದ ಆವೃತ್ತವಾಗಿದ್ದು, ಉತ್ತಮ ಡಿಸ್ ಪ್ಲೇ, ಕ್ಯಾಮೆರಾ, ಬ್ಯಾಟರಿ ಆಯ್ಕೆ ನೀಡಲಾಗಿದೆ. ಆಂಡ್ರಾಯ್ಡ್ 13-ಆಧಾರಿತ HiOS ಸ್ಕಿನ್ ಮೂಲಕ ರನ್ ಆಗುತ್ತದೆ. ಈ ಫೋನುಗಳ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.

ಟೆಕ್ನೋ ಪೊವಾ 5 ಮತ್ತು ಟೆಕ್ನೋ ಪೊವಾ 5 ಪ್ರೊ ಬೆಲೆ ಇನ್ನೂ ಬಹಿರಂಗವಾಗಿಲ್ಲ. ಆಗಸ್ಟ್ 14 ರಂದು ಇದರ ಬೆಲೆ ತಿಳಿಸುವುದಾಗಿ ಕಂಪನಿ ಹೇಳಿದೆ. ಈ ಸ್ಮಾರ್ಟ್‌ಫೋನ್‌ಗಳು ಇ ಕಾಮರ್ಸ್ ತಾಣವಾದ ಅಮೆಜಾನ್ ಮೂಲಕ ಖರೀದಿಗೆ ಲಭ್ಯವಿರುತ್ತವೆ. ಟೆಕ್ನೋ ಪೊವಾ 5 ಪ್ರೊ ಸ್ಮಾರ್ಟ್​ಫೋನ್ ಸಿಲ್ವರ್ ಫ್ಯಾಂಟಸಿ ಮತ್ತು ಡಾರ್ಕ್ ಇಲ್ಯೂಷನ್ ಬಣ್ಣಗಳಲ್ಲಿ ಸೇಲ್ ಕಾಣಲಿದೆ.

50MP ಕ್ಯಾಮೆರಾ, 5000mAh ಬ್ಯಾಟರಿ: ಬೆಲೆ ಕೇವಲ 7,999 ರೂ.: ಈ ​ಫೋನ್ ಮೇಲಿನ ಆಫರ್ ಮಿಸ್ ಮಾಡ್ಬೇಡಿ

ಇದನ್ನೂ ಓದಿ
Image
ಭಾರೀ ರಿಯಾಯಿತಿ: ಗೂಗಲ್ ಪಿಕ್ಸೆಲ್ 7 ಪ್ರೊ ಫೋನ್ ಮೇಲೆ ಇದುವರೆಗೆ ಕಾಣದ ಡಿಸ್ಕೌಂಟ್: ಆಫರ್ ಮಿಸ್ ಮಾಡ್ಬೇಡಿ
Image
ಇನ್ಫಿನಿಕ್ಸ್ ಜಿರೋ 30 5G ಸ್ಮಾರ್ಟ್​ಫೋನ್ ಬಿಡುಗಡೆಗೆ ಸಜ್ಜು: ಈ ಬಾರಿ ಏನು ವಿಶೇಷತೆ ಇದೆ?
Image
ಪಾಕಿಸ್ತಾನದಿಂದ ಹೊಸ ಆ್ಯಪ್ ಬಿಡುಗಡೆ, ವಾಟ್ಸ್​ಆ್ಯಪ್​ಗೇ ಸೆಡ್ಡು!
Image
ಇಂದಿನಿಂದ ಖರೀದಿಗೆ ಸಿಗಲಿದೆ 6,000mAh ಬ್ಯಾಟರಿಯ ಗ್ಯಾಲಕ್ಸಿ F34 5G ಸ್ಮಾರ್ಟ್​ಫೋನ್: ಬೆಲೆ ಎಷ್ಟು?

ಟೆಕ್ನೋ ಪೊವಾ 5 ಫೀಚರ್ಸ್:

ಟೆಕ್ನೋ ಪೊವಾ 5 ಫೋನ್ 120Hz ರಿಫ್ರೆಶ್ ದರ ಮತ್ತು 240Hz ಟಚ್ ಸ್ಯಾಂಪ್ಲಿಂಗ್ ರೇಟ್‌ಗೆ ಬೆಂಬಲದೊಂದಿಗೆ 6.78-ಇಂಚಿನ ಪೂರ್ಣ-HD+ ಡಿಸ್ ಪ್ಲೇಯನ್ನು ಹೊಂದಿದೆ. ಇದು 16GB RAM ಮತ್ತು 128GB UFS 2.2 ಆಂತರಿಕ ಸಂಗ್ರಹಣೆಯೊಂದಿಗೆ ಆಕ್ಟಾ-ಕೋರ್ ಮೀಡಿಯಾಟೆಕ್ ಹಿಲಿಯೊ G99 SoC ನಿಂದ ಚಾಲಿತವಾಗಿದೆ, ಇದನ್ನು ಮೈಕ್ರೊ SD ಕಾರ್ಡ್ ಬಳಸಿ 256GB ವರೆಗೆ ವಿಸ್ತರಿಸಬಹುದು.

ಕ್ಯಾಮೆರಾ ವಿಚಾರಕ್ಕೆ ಬಂದರೆ, ಟೆಕ್ನೋ ಪೊವಾ 5 ಫೋನ್ ಡ್ಯುಯಲ್ ಕ್ಯಾಮೆರಾ ಘಟಕವನ್ನು ಹೊಂದಿದೆ. ಇದು 50-ಮೆಗಾಪಿಕ್ಸೆಲ್ ಪ್ರಾಥಮಿಕ ಸಂವೇದಕ ಮತ್ತು AI ಲೆನ್ಸ್ ಜೊತೆಗೆ LED ಫ್ಲ್ಯಾಶ್ ಅನ್ನು ಹೊಂದಿದೆ. ಮುಂಭಾಗದಲ್ಲಿ, ಸೆಲ್ಫಿ ಮತ್ತು ವಿಡಿಯೋ ಕರೆಗಳಿಗಾಗಿ 8 ಮೆಗಾಪಿಕ್ಸೆಲ್ ಕ್ಯಾಮೆರಾವನ್ನು ಅಳವಡಿಸಲಾಗಿದೆ.

ಈ ಸ್ಮಾರ್ಟ್​ಫೋನ್ ಸೈಡ್-ಮೌಂಟೆಡ್ ಫಿಂಗರ್ಪ್ರಿಂಟ್ ಸಂವೇದಕವನ್ನು ಹೊಂದಿದೆ. ಸಂಪರ್ಕಕ್ಕಾಗಿ, ಇದು ಡ್ಯುಯಲ್ 4G VoLTE, ವೈಫೈ, ಬ್ಲೂಟೂತ್ 5.0, GPS, USB ಟೈಪ್-C, NFC ಮತ್ತು 3.5mm ಆಡಿಯೋ ಜ್ಯಾಕ್ ಅನ್ನು ನೀಡುತ್ತದೆ. ಟೆಕ್ನೋ ಪೊವಾ 5 45W ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ 6,000mAh ಬ್ಯಾಟರಿಯಿಂದ ಬೆಂಬಲಿತವಾಗಿದೆ.

ಟೆಕ್ನೋ ಪೊವಾ 5 ಪ್ರೊ ಫೀಚರ್ಸ್:

ಟೆಕ್ನೋ ಪೊವಾ 5 ಪ್ರೊ ಫೋನ್ ಹಿಂಭಾಗದಲ್ಲಿ ARC ಇಂಟರ್ಫೇಸ್‌ನೊಂದಿಗೆ ಬರುತ್ತದೆ, ಇದು ಕಂಪನಿಯಿಂದ ಮೊದಲ ಪ್ರಯತ್ನವಾಗಿದೆ. ನೋಟಿಫಿಕೇಶನ್ ಬಂದಾಗ ಇದು LED ಲೈಟ್ ಮೂಲಕ ತಿಳಿಸುತ್ತದೆ. G57 MC2 CPU ಜೊತೆಗೆ ಆಕ್ಟಾ-ಕೋರ್ ಡೈಮೆನ್ಸಿಟಿ 6080 SoC ನಿಂದ ಚಾಲಿತವಾಗಿದೆ. ಈ ಸ್ಮಾರ್ಟ್‌ಫೋನ್‌ನ ಮುಂಭಾಗದ ಕ್ಯಾಮೆರಾ 16 ಮೆಗಾಪಿಕ್ಸೆಲ್ ಸಂವೇದಕವನ್ನು ಹೊಂದಿದೆ. ದೀರ್ಘ ಸಮಯ ಬಾಳಕೆ ಬರುವ 5,000mAh ಬ್ಯಾಟರಿಯನ್ನು ಸಹ ಪ್ಯಾಕ್ ಮಾಡುತ್ತದೆ. ಇದು ವೇಗವಾದ 68W ಚಾರ್ಜಿಂಗ್ ಬೆಂಬಲ ಪಡೆದುಕೊಂಡಿದೆ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ

‘ಎಕ್ಕ’ ಸಿನಿಮಾಕ್ಕೂ ಅಪ್ಪುವಿನ ‘ಜಾಕಿ’ ಸಿನಿಮಾಕ್ಕೂ ಲಿಂಕ್ ಏನು?
‘ಎಕ್ಕ’ ಸಿನಿಮಾಕ್ಕೂ ಅಪ್ಪುವಿನ ‘ಜಾಕಿ’ ಸಿನಿಮಾಕ್ಕೂ ಲಿಂಕ್ ಏನು?
ಪುತ್ತೂರಿನಲ್ಲಿ ನೈತಿಕ ಪೊಲೀಸ್‌ಗಿರಿ: ಎಸ್​ಪಿ ಹೇಳಿದ್ದಿಷ್ಟು
ಪುತ್ತೂರಿನಲ್ಲಿ ನೈತಿಕ ಪೊಲೀಸ್‌ಗಿರಿ: ಎಸ್​ಪಿ ಹೇಳಿದ್ದಿಷ್ಟು
ಹುಬ್ಬಳ್ಳಿಯಲ್ಲಿ ವೇಶ್ಯಾವಾಟಿಕೆ ಜಾಲ: ಟಾಯ್ಲೆಟ್ ರೂಮ್​​ನಲ್ಲಿ ಸುರಂಗ ಮಾರ್ಗ
ಹುಬ್ಬಳ್ಳಿಯಲ್ಲಿ ವೇಶ್ಯಾವಾಟಿಕೆ ಜಾಲ: ಟಾಯ್ಲೆಟ್ ರೂಮ್​​ನಲ್ಲಿ ಸುರಂಗ ಮಾರ್ಗ
ನಾವು ಎಷ್ಟೇ ಬೆಳೆದರೂ ನಮ್ಮ ಕಾಲು ನೆಲದ ಮೇಲೆ ಇರಬೇಕು: ಹರ್ಷಿಕಾ ಪೂಣಚ್ಚ
ನಾವು ಎಷ್ಟೇ ಬೆಳೆದರೂ ನಮ್ಮ ಕಾಲು ನೆಲದ ಮೇಲೆ ಇರಬೇಕು: ಹರ್ಷಿಕಾ ಪೂಣಚ್ಚ
ಬೀಗರ ಗಲಾಟೆ: ಕಪಾಳಕ್ಕೆ ಬಾರಿಸಿದ ಶಾಸಕ ಪ್ರಭು ಚೌಹಾಣ್
ಬೀಗರ ಗಲಾಟೆ: ಕಪಾಳಕ್ಕೆ ಬಾರಿಸಿದ ಶಾಸಕ ಪ್ರಭು ಚೌಹಾಣ್
ಹೇಳದೇ ಒಬಿಸಿ ಸಮಿತಿಗೆ ನೇಮಕ: ಈ ಬಗ್ಗೆ ಸಿದ್ದರಾಮಯ್ಯ ಹೇಳಿದ್ದಿಷ್ಟು
ಹೇಳದೇ ಒಬಿಸಿ ಸಮಿತಿಗೆ ನೇಮಕ: ಈ ಬಗ್ಗೆ ಸಿದ್ದರಾಮಯ್ಯ ಹೇಳಿದ್ದಿಷ್ಟು
ತಮಿಳುನಾಡಿನ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ, ಓರ್ವ ಸಾವು, ನಾಲ್ವರಿಗೆ ಗಂಭೀರ
ತಮಿಳುನಾಡಿನ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ, ಓರ್ವ ಸಾವು, ನಾಲ್ವರಿಗೆ ಗಂಭೀರ
Video: ರೈಲ್ವೆ ಪ್ಲಾಟ್​ಫಾರ್ಮ್​ ಮೇಲೆ ಕಾರು ಚಲಾಯಿಸಿದ ವ್ಯಕ್ತಿ
Video: ರೈಲ್ವೆ ಪ್ಲಾಟ್​ಫಾರ್ಮ್​ ಮೇಲೆ ಕಾರು ಚಲಾಯಿಸಿದ ವ್ಯಕ್ತಿ
ಇಡೀ ಕುಟುಂಬವನ್ನು ಕಳೆದುಕೊಂಡು ಅನಾಥವಾದ 11ತಿಂಗಳ ಮಗು
ಇಡೀ ಕುಟುಂಬವನ್ನು ಕಳೆದುಕೊಂಡು ಅನಾಥವಾದ 11ತಿಂಗಳ ಮಗು
‘ಗೋಲಿ ಚಲ್ ಜಾವೇಗಿ’ ಹಾಡಿಗೆ ನೃತ್ಯ ಮಾಡುತ್ತಲೇ ಗುಂಡು ಹಾರಿಸಿದ ವ್ಯಕ್ತಿ
‘ಗೋಲಿ ಚಲ್ ಜಾವೇಗಿ’ ಹಾಡಿಗೆ ನೃತ್ಯ ಮಾಡುತ್ತಲೇ ಗುಂಡು ಹಾರಿಸಿದ ವ್ಯಕ್ತಿ