ಜಿಯೋ 7ನೇ ವಾರ್ಷಿಕೋತ್ಸವ: ಪ್ರಿಪೇಯ್ಡ್ ಬಳಕೆದಾರರಿಗೆ ಲೈವ್ ಆಗಿದೆ ಧಮಾಕ ಆಫರ್

Jio’s 7th anniversary offers: ಜಿಯೋದ 7ನೇ ವಾರ್ಷಿಕೋತ್ಸವ ಪ್ರಯುಕ್ತ ತನ್ನ ಪ್ರಿಪೇಯ್ಡ್ ಬಳಕೆದಾರರಿಗೆ ಬಂಪರ್ ಧಮಾಕ ಆಫರ್ ನೀಡುತ್ತಿದೆ. ಜಿಯೋದ 299 ರೂ., 749 ರೂ. ಮತ್ತು 2,999 ರೂ. ಸೇರಿದಂತೆ ಆಯ್ದ ಪ್ರಿಪೇಯ್ಡ್ ಯೋಜನೆಗಳಲ್ಲಿ ಹೆಚ್ಚುವರಿ ಡೇಟಾ ಪ್ರಯೋಜನ ಪಡೆಯಬಹುದು. ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.

ಜಿಯೋ 7ನೇ ವಾರ್ಷಿಕೋತ್ಸವ: ಪ್ರಿಪೇಯ್ಡ್ ಬಳಕೆದಾರರಿಗೆ ಲೈವ್ ಆಗಿದೆ ಧಮಾಕ ಆಫರ್
Reliance Jio
Follow us
Vinay Bhat
|

Updated on: Sep 10, 2023 | 11:47 AM

ಭಾರತದ ಅತಿದೊಡ್ಡ ಟೆಲಿಕಾಂ ನೆಟ್‌ವರ್ಕ್, ರಿಲಯನ್ಸ್ ಜಿಯೋ (Reliance Jio) ಭಾರತದಲ್ಲಿ 7 ನೇ ವರ್ಷಕ್ಕೆ ಕಾಲಿಟ್ಟಿದೆ. ಈ ವಿಶೇಷ ಘಳಿಗೆಯನ್ನು ಆಚರಿಸಲು ಕಂಪನಿಯು ಆಯ್ದ ರಿಚಾರ್ಜ್ ಪ್ಯಾಕ್‌ಗಳಲ್ಲಿ ಹೆಚ್ಚುವರಿ ಡೇಟಾ ಮತ್ತು ವಿಶೇಷ ವೋಚರ್‌ಗಳನ್ನು ನೀಡುತ್ತಿದೆ. ಈಗಾಗಲೇ ಈ ಧಮಾಕ ಆಫರ್​ಗಳು ಲೈವ್ ಆಗಿದ್ದು, ಈ ತಿಂಗಳ ಅಂತ್ಯದ ವರೆಗೆ ಅಂದರೆ ಸೆಪ್ಟೆಂಬರ್ 30 ರವರೆಗೆ ಮಾನ್ಯವಾಗಿರುತ್ತದೆ. ಜಿಯೋ 299 ರೂ., 749 ರೂ. ಮತ್ತು 2,999 ರೂ. ಸೇರಿದಂತೆ ಆಯ್ದ ಪ್ರಿಪೇಯ್ಡ್ ಯೋಜನೆಗಳಲ್ಲಿ ಹೆಚ್ಚುವರಿ ಡೇಟಾವನ್ನು ನೀಡುತ್ತಿದೆ. ಈ ವಿಶೇಷ ಡೇಟಾ ವೋಚರ್‌ಗಳು ನಿಯಮಿತ ಪ್ರಯೋಜನಗಳ ಮೇಲೆ ಇರುತ್ತವೆ. ಈ ಕುರಿತ ಸಂಪೂರ್ಣ ವಿವರಗಳನ್ನು ಇಲ್ಲಿ ಪರಿಶೀಲಿಸಿ.

ಜಿಯೋದ 7ನೇ ವಾರ್ಷಿಕೋತ್ಸವದ ಕೊಡುಗೆಗಳು:

ಜಿಯೋ 299 ರೂ. ಪ್ರಯೋಜನಗಳು:

  • ಜಿಯೋ 299 ರೂ. ಪ್ರಿಪೇಯ್ಡ್ ಪ್ಯಾಕ್​ನಲ್ಲಿ 7 ನೇ ವಾರ್ಷಿಕೋತ್ಸವದ ಕೊಡುಗೆಯ ಭಾಗವಾಗಿ 7GB ಹೆಚ್ಚುವರಿ ಡೇಟಾವನ್ನು ನೀಡಲಾಗುತ್ತದೆ.
  • ಇದು 2GB ದೈನಂದಿನ ಡೇಟಾ ಜೊತೆಗೆ ಸೇರಲಿದೆ. ಈ ಪ್ಯಾಕ್ ಅನಿಯಮಿತ ಧ್ವನಿ ಕರೆಗಳು, ದಿನಕ್ಕೆ 100 SMS ಮತ್ತು 28 ದಿನಗಳ ಮಾನ್ಯತೆಯನ್ನು ಪಡೆದಿದೆ.

ಜಿಯೋ 749 ರೂ. ಪ್ರಯೋಜನಗಳು:

ಇದನ್ನೂ ಓದಿ
Image
ಬಿಡುಗಡೆಗೂ ಮುನ್ನ ಧೂಳೆಬ್ಬಿಸುತ್ತಿದೆ ನೋಕಿಯಾ G42 5G ಸ್ಮಾರ್ಟ್​ಫೋನ್
Image
ಒಂದು ವಾಟ್ಸ್​ಆ್ಯಪ್ ಖಾತೆಯನ್ನು ಎಷ್ಟು ​ಫೋನ್​ಗಳಲ್ಲಿ ಉಪಯೋಗಿಸಬಹುದು?
Image
ನಥಿಂಗ್ ಫೋನ್ 2 ಸ್ಮಾರ್ಟ್​ಫೋನ್ ಮೇಲೆ ಬಂಪರ್ ಡಿಸ್ಕೌಂಟ್
Image
ಮಲಗುವಾಗ ಮೊಬೈಲ್ ಅನ್ನು ಎಷ್ಟು ದೂರ ಇಟ್ಟುಕೊಳ್ಳಬೇಕು?
  • ಜಿಯೋ 749 ರೂ. ಪ್ರಿಪೇಯ್ಡ್ ಪ್ಯಾಕ್ 7ನೇ ವಾರ್ಷಿಕ ಕೊಡುಗೆಯ ಪ್ರಯುಕ್ತ 14GB (2 X 7GB ಕೂಪನ್‌ಗಳು) ಹೆಚ್ಚುವರಿ ಡೇಟಾವನ್ನು ನೀಡುತ್ತದೆ.
  • ಇದರ ಜೊತೆಗೆ 2GB ದೈನಂದಿನ ಡೇಟಾ, ಅನಿಯಮಿತ ಧ್ವನಿ ಕರೆಗಳು, ದಿನಕ್ಕೆ 100 SMS ಮತ್ತು 90 ದಿನಗಳ ವ್ಯಾಲಿಡಿಟಿಯಿಂದ ಕೂಡಿದೆ.

ಮಾರುಕಟ್ಟೆಗೆ ಲಗ್ಗೆಯಿಟ್ಟ ಹೊಸ ಹುವೈ ಸ್ಮಾರ್ಟ್​ಫೋನ್: ಯಾವುದು?, ಬೆಲೆ ಎಷ್ಟು?

ಜಿಯೋ 2,999 ರೂ. ಪ್ರಯೋಜನಗಳು:

  • ಜಿಯೋದ 2,999 ರೂ. ಪ್ಯಾಕ್​ನಲ್ಲಿ 21GB (3 X 7GB ಕೂಪನ್‌ಗಳು) ಹೆಚ್ಚುವರಿ ಡೇಟಾವನ್ನು ನೀಡಲಾಗುತ್ತದೆ.
  • ಹೆಚ್ಚುವರಿಯಾಗಿ, ಗ್ರಾಹಕರು Ajio ಮೇಲೆ ರೂ 200 ರಿಯಾಯಿತಿ, Netmeds (ರೂ 2800 ವರೆಗೆ) ವೋಚರ್ 20 ಪ್ರತಿಶತ ರಿಯಾಯಿತಿ , Swiggy ಮೇಲೆ ರೂ 100 ರಿಯಾಯಿತಿ, ರೂ 2,149 ಮತ್ತು ಅದಕ್ಕಿಂತ ಹೆಚ್ಚಿನ ಖರೀದಿಗೆ ಉಚಿತ McDonald’s ಊಟ, ರಿಲಯನ್ಸ್ ಡಿಜಿಟಲ್ ಮೇಲೆ 10 ಪ್ರತಿಶತ ರಿಯಾಯಿತಿ, ಯಾತ್ರಾದೊಂದಿಗೆ ವಿಮಾನಗಳಲ್ಲಿ 1,500 ರೂ. ಮತ್ತು ಹೋಟೆಲ್‌ಗಳಲ್ಲಿ 15 ಪ್ರತಿಶತ ರಿಯಾಯಿತಿ ಆಫರ್ ಇದೆ.
  • 2,999 ರೂ. ಯೋಜನೆಯು ದಿನಕ್ಕೆ 2.5 GB ಡೇಟಾ, ಯಾವುದೇ ನೆಟ್‌ವರ್ಕ್‌ಗೆ ಅನಿಯಮಿತ ಧ್ವನಿ ಕರೆಗಳು ಮತ್ತು ಪ್ರತಿ ದಿನ 100 SMS ನೀಡುತ್ತದೆ. ಪ್ಯಾಕ್ 365 ದಿನಗಳ ವ್ಯಾಲಿಡಿಟಿಯನ್ನು ಹೊಂದಿದೆ.

ಮೇಲೆ ತಿಳಿಸಲಾದ ಪ್ರಯೋಜನಗಳನ್ನು ರೀಚಾರ್ಜ್ ಮಾಡಿದ ತಕ್ಷಣ ಅರ್ಹ ಗ್ರಾಹಕರ MyJio ಖಾತೆಗೆ ಕ್ರೆಡಿಟ್ ಮಾಡಲಾಗುತ್ತದೆ. MyJio ಅಪ್ಲಿಕೇಶನ್‌ನಲ್ಲಿ ಹೆಚ್ಚುವರಿ ಡೇಟಾವನ್ನು ಡೇಟಾ ವೋಚರ್ ಆಗಿ ಕ್ರೆಡಿಟ್ ಮಾಡಲಾಗುತ್ತದೆ ಮತ್ತು ಬಳಕೆದಾರರು ಅವುಗಳನ್ನು ರಿಡೀಮ್ ಮಾಡಬೇಕಾಗುತ್ತದೆ. ಗ್ರಾಹಕರು ಜಿಯೋ ವೆಬ್‌ಸೈಟ್, MyJio ಅಪ್ಲಿಕೇಶನ್ ಅಥವಾ ಥರ್ಡ್ ಪಾರ್ಟಿ ರೀಚಾರ್ಜ್ ಪ್ಲಾಟ್‌ಫಾರ್ಮ್‌ಗಳ ಮೂಲಕ ರೂ. 299, 749 ರೂ. ಮತ್ತು 2,999 ರೂ. ಯೋಜನೆಗಳನ್ನು ರೀಚಾರ್ಜ್ ಮಾಡಬಹುದು.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ